ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಹೋಮ್‌ ಮಿನಿಸ್ಟರ್‌ ಅಂದರೆ ವಸತಿ ಸಚಿವರಾ ?

ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಇತ್ತೀಚೆಗೆ ಕೆಲವು ಚಿತ್ರಗಳು, ಥಿಯೇಟರ್‌ನಲ್ಲಿ ಬಿಡುಗಡೆ ಆದ ತಿಂಗಳಿಗೇ ಬಿಡುಗಡೆ ಯಾಗುತ್ತವೆ. ಆದರೆ ಅದು ‘ರೆಂಟ್ ಬೇಸಿಸ್’ ಮೇಲೆ. ಅದಕ್ಕೆ ನಮ್ಮ ಸಿನಿಪ್ರಿ ಯರು, “ವಾರ್ಷಿಕ ಚಂದಾದಾರರಾದ ಮೇಲೂ ಮತ್ತೆ

Hari Paraak Column: ಹೋಮ್‌ ಮಿನಿಸ್ಟರ್‌ ಅಂದರೆ ವಸತಿ ಸಚಿವರಾ ?

ಹರಿ ಪರಾಕ್‌ ಹರಿ ಪರಾಕ್‌ Jan 5, 2025 9:09 AM

ತುಂಟರಗಾಳಿ

ಸಿನಿಗನ್ನಡ

ಅಮೆಜಾನ್ ಪ್ರೈಮ್ ವಿಡಿಯೋ ಒಟಿಟಿಯಲ್ಲಿ ಇತ್ತೀಚೆಗೆ ಕೆಲವು ಚಿತ್ರಗಳು, ಥಿಯೇಟರ್‌ನಲ್ಲಿ ಬಿಡುಗಡೆ ಆದ ತಿಂಗಳಿಗೇ ಬಿಡುಗಡೆ ಯಾಗುತ್ತವೆ. ಆದರೆ ಅದು ‘ರೆಂಟ್ ಬೇಸಿಸ್’ ಮೇಲೆ. ಅದಕ್ಕೆ ನಮ್ಮ ಸಿನಿಪ್ರಿಯರು, “ವಾರ್ಷಿಕ ಚಂದಾದಾರರಾದ ಮೇಲೂ ಮತ್ತೆ ದುಡ್ಡು ಕೊಟ್ಟು ನೋಡ ಬೇಕಾ?" ಅಂತ ವರಾತ ತೆಗೆಯುತ್ತಾರೆ. ಅದು ಸಹಜ ಕೂಡಾ. ಆದರೆ ಕೆಲವೇ ದಿನಗಳಲ್ಲಿ, ರೆಂಟ್ ಬೇಸಿಸ್‌ನಲ್ಲಿ ಇದ್ದ ಚಿತ್ರಗಳು ನಂತರ ಉಚಿತ ವೀಕ್ಷಣೆಗೆ ಲಭ್ಯವಾಗುತ್ತವೆ.

ಇಲ್ಲಿ ಅಮೆಜಾನ್ ಅವರ ಪಾಲಿಸಿ ಮತ್ತು ಆಲೋಚನೆ ಹೇಗಿದೆ ಅನ್ನೋದನ್ನ ಅರ್ಥಮಾಡಿ ಕೊಳ್ಳೋದೇ ಕಷ್ಟ. ಹೀಗೆ ಮೂರು ದಿನಕ್ಕೆ ಇವರು ತಮ್ಮ ಪ್ಲ್ಯಾನ್ ಚೇಂಜ್ ಮಾಡಿದರೆ ಯಾವ ಗ್ರಾಹಕರು ತಾನೆ ರೆಂಟ್ ಕೊಟ್ಟು ಇವರು ಹಾಕುವ ಸಿನಿಮಾಗಳನ್ನು ನೋಡುತ್ತಾರೆ? ಚಿತ್ರವೊಂದು ಥಿಯೇಟರ್‌ನಲ್ಲಿ ಸದ್ದು ಮಾಡುತ್ತಿದ್ದರೂ, “ಅಯ್ಯೋ, ಒಟಿಟಿಯಲ್ಲಿ ಬಂದಾಗ ನೋಡೋಣ ಬಿಡಿ"ಅಂತ ತಿಂಗಳುಗಟ್ಟಲೆ ಕಾಯುವ ನಮ್ಮ ಮಂದಿ, ಒಂದು ವಾರ ಕಾಯದೇ, ಇವರಿಗೆ ರೆಂಟ್ ಕೊಟ್ಟು ಸಿನಿಮಾ ನೋಡುತ್ತಾರಾ? ಯಾವುದೋ ಕೆಲವು ದೊಡ್ಡ ಬಜೆಟ್‌ನ, ಅತಿಯಾದ ನಿರೀಕ್ಷೆ ಇದ್ದ ಚಿತ್ರಗಳು ಅನ್ನೋ ಕಾರಣಕ್ಕೆ ಹಾಗೆ ಮಾಡಿರಬಹುದು ಅಂದುಕೊಂಡರೆ ಅದು ತಪ್ಪು. ಯಾಕಂದ್ರೆ ಇವರು ಮಾಮೂಲಿ ಸ್ಟಾರ್ ಇಲ್ಲದೆ ಲೋ ಬಜೆಟ್ ಚಿತ್ರಗಳನ್ನೂ ಬಾಡಿಗೆಗೆ ಕೊಡು ತ್ತಾರೆ. ಅವೇನೂ ದೊಡ್ಡ ಸಿನಿಮಾ ಆಗಿರೊಲ್ಲ, ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಚಿತ್ರಗಳೂ ಅಲ್ಲ.

ಅಲ್ಲದೆ, ಅದು ಕೂಡಾ ಇನ್ನೊಂದು ಮೂರು ದಿನದಲ್ಲಿ ಫ್ರೀ ಆಗಿ ಸಿಗುತ್ತೆ ಅಂತ ಗೊತ್ತಿರೋ ಗ್ರಾಹ ಕರು ಈಗಲೇ ರೆಂಟ್ ಕೊಟ್ಟುನೋಡ್ತಾರೆ ಅಂತ ಪ್ರೈಮ್ ವಿಡಿಯೋದವರಿಗೆ ಅದೇನು ನಂಬಿಕೆಯೋ ಗೊತ್ತಿಲ್ಲ. ಈ ನಡುವೆ ಇನ್ನೂ ಕೆಲವು ಒಟಿಟಿಯವರದ್ದು ಇನ್ನೊಂದು ಅಧ್ವಾನ. ನೀವು ಪೂರ್ತಿ ದುಡ್ಡು ಕೊಟ್ಟು ವಾರ್ಷಿಕ ಚಂದಾದಾರರಾದರೂ ನಿಮಗೆ ಸಿನಿಮಾಗಳನ್ನು ಕೇವಲ ‘480 ಪಿ’ ರೆಸಲ್ಯೂಷನ್‌ನಲ್ಲಿ ನೋಡಲು ಸಾಧ್ಯ. ಅಲ್ಲದೆ ನಾವು ಕೇವಲ ಸೆಲೆಕ್ಟೆಡ್ ಚಂದಾದಾರರಿಗೆ ಮಾತ್ರ ‘ಫುಲ್ ಎಚ್‌ಡಿ’ ಸೌಲಭ್ಯ ಕೊಡ್ತೀವಿ ಅನ್ನೋ ಲಾಜಿಕ್ ಇಲ್ಲದ ಅಧಿಕಪ್ರಸಂಗ ಬೇರೆ. ಈ ಒಟಿಟಿಗಳ ಅಧ್ವಾನಗಳು ಇನ್ನೂ ಎಲ್ಲಿಗೆ ಹೋಗಿ ಮುಟ್ಟುತ್ತವೋ ಏನೋ?

ಲೂಸ್‌ ಟಾಕ್‌ -ಜಸ್ ಪ್ರೀತ್‌ ಬೂಮ್ರಾ

ಏನ್ ಬುಮ್ರಾ ಅವ್ರೇ, ಹೆಂಗಿದೆ ನಮ್ ಇಂಡಿಯಾ‌ ಟೀಮ್ ಪರಿಸ್ಥಿತಿ?

ಏನ್ ಟೀಮೋ ಏನೋ. ನಮ್ ಟೀಮ್ ಒಂಥರಾ ‘ಬೆಂಕಿಯಲ್ಲಿ ಅರಳಿದ ಹೂವು’ ಸಿನಿಮಾದ ಸುಹಾ ಸಿನಿ ಫ್ಯಾಮಿಲಿ ಥರಾ ಆಗೋಗಿದೆ.ದುಡಿಯೋನು ನಾನೊಬ್ನೇ, ತಿನ್ನೋರು ಮಾತ್ರ ಹನ್ನೊಂದ್ ಜನ.

ಸರಿ ಹೋಯ್ತು. ಹೋಗ್ಲಿ, ಕೊನೆ ಟೆಸ್ಟ್ ಆದ್ರೂ‌ ಗೆಲ್ತೀರಾ?

ಹಂಗೆ ‘ಗ್ಯಾರಂಟಿ’ ಕೊಡೋಕೆ ನಮ್ಮದು ಸರಕಾರ ಅಲ್ಲ ಕಣ್ರೀ.

ಅದೂ ಕರೆಕ್ಟೇ ಬಿಡಿ. ಅಂದಂಗೆ, ಆಸ್ಟ್ರೇಲಿಯಾದ ಆ ಹೊಸ ಹುಡುಗ ಕೊನ್ಸ್ಟಾಸ್, ಆಡೋ ಅಂದ್ರೆ ಬರೀ ಎಗರಾಡ್ತಾ ಇರ್ತಾನಲ್ಲ?

ಅಯ್ಯೋ, ಅವತ್ತು ಯಾವತ್ತೋ ಒಂದ್ ಐವತ್ತು ಹೊಡೆದಿದ್ದಕ್ಕೆ ಇವತ್ತಿನವರೆಗೂ ಹಾರಾಡ್ತಾ ಇದ್ದಾನೆ. ಹಾಲ್ ಕುಡಿದಿರೋ ತುಟಿ ಇನ್ನೂಆರದೇ ಇರೋ ಟೈಮ್ ನಮ್ಮ ಬೋಲರ್ಸ್ ಬಾಲ್‌ಗೆ‌ ಬ್ಯಾಟಿಂಗ್ ಆಡೋಕೆ ಬಂದ್ರೆ ಹಿಂಗೇ ಆಗೋದು.

ಆ ಹೆಡ್ಡು ಮೊದ್ಲು ಭಾರಿ ತಲೆನೋವಾಗಿದ್ದ. ಈಗೀಗ ಬೇಗ ಔಟ್ ಆಗ್ತಾ ಇದ್ದಾನೆ ಅಲ್ವಾ?

ಯಾವಾಗ್ಲೂ ಹೆಡ್ಡೇ ಬೀಳುತ್ತಾ, ಟೈಲೂ ಬೀಳುತ್ತೆ ತಾನೇ. ಇದೂ ಹಂಗೇ. ಹೆಡ್ ಗಟ್ಟಿ ಇದೆ ಅಂತ ಬಂಡೆಗೆ ಚಚ್ಚಿಕೊಂಡ್ರೆ ಟೈಲ್ಮುದುರಿಕೊಂಡು ಹೋಗಬೇಕಾಗುತ್ತೆ.

ಹೌದು, ಕೊನೇ ಟೆಸ್ಟ್‌ ಗೆ ರೋಹಿತ್ ಶರ್ಮಾ ಬದ್ಲು ನಿಮ್ಮನ್ನ ಕ್ಯಾಪ್ಟನ್ ಮಾಡಿದ್ರಲ್ಲ. ಯಾಕಿರ ಬಹುದು?

ಮೋಸ್ಟ್ಲೀ, ರೋಹಿತ್‌ಗಿಂತ ನಾನು ಚೆನ್ನಾಗಿ ಬ್ಯಾಟಿಂಗ್ ಮಾಡ್ತೀನಿ ಅಂತ ಇರಬೇಕು

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್ಖೇಮು ಮತ್ತು ಖೇಮುಶ್ರೀ ಮದುವೆ ಆಗಿ 5 ವರ್ಷ ಆಗಿದ್ರೂ ಅವರಿಗೆ ಮಕ್ಕಳಾಗಿರಲಿಲ್ಲ. ಈ ವಿಷಯಕ್ಕೆ ಇಬ್ಬರೂ ತುಂಬಾ ಬೇಸರದಲ್ಲಿದ್ದರು. ಇಬ್ಬರೂ ತಮಗೆ ಗೊತ್ತಿರೋ ಎಲ್ಲಾ ಡಾಕ್ಟರ್‌ ಗಳು, ಎಲ್ಲಾ ದೇವರುಗಳನ್ನೂ ಸಂಪರ್ಕ ಮಾಡಿದ್ದರು. ಆದರೆ ಮಕ್ಕಳು ಮಾತ್ರ ಆಗಲೇ ಇಲ್ಲ. ಹೀಗೆ ಒಂದು ದಿನ ಇಬ್ಬರೂ ಮಾರ್ಕೆಟ್‌ನಲ್ಲಿ ಹೋಗುತ್ತಿರುವಾಗ ಅಲ್ಲಿ ಖೇಮುಶ್ರೀಯತವರುಮನೆಗೆ ಬರುತ್ತಿದ್ದ ಪೂಜಾರಿಯೊಬ್ಬರು ಆಕೆಯನ್ನು ಗುರುತು ಹಿಡಿದು ಮಾತನಾಡಿಸಿದರು. “ಎಲ್ಲಾ ಸೌಖ್ಯ ನೇನಮ್ಮ?" ಎಂದು ಅವರು ಕೇಳಿದಾಗ ಖೇಮುಶ್ರೀ, “ಜೀವನದಲ್ಲಿ ಎಲ್ಲವೂ ಸರಿ ಇದೆ, ಆದ್ರೆ ಇನ್ನೂ ಮಕ್ಕಳಾಗಿಲ್ಲ" ಎಂಬ ಕೊರಗನ್ನು ಹೇಳಿಕೊಂಡಳು. ಅದಕ್ಕೆ ಪೂಜಾರಿ, “ಯೋಚನೆ ಮಾಡಬೇ ಡಮ್ಮ, ನಾನು ಕಾಶಿಗೆ ಹೋಗ್ತಾ ಇದ್ದೀನಿ, ಅಲ್ಲಿ ದೇವರ ಸನ್ನಿಧಿಯಲ್ಲಿನಿನ್ನ ಹೆಸರಲ್ಲಿ ಒಂದು ದೀಪ ಹಚ್ತೀನಿ. ಎಲ್ಲ ಸರಿ ಹೋಗುತ್ತೆ" ಅಂದ್ರು. ಅದಾಗಿ 5 ವರ್ಷ ಆಯ್ತು. ಒಂದು ದಿನ ಆ ಪೂಜಾರಿಯ ಮನೆ ಬಾಗಿಲು ಯಾರೋ ಬಡಿದಂತಾಯ್ತು. ಪೂಜಾರಿ ಎದ್ದು ಹೋಗಿ ಬಾಗಿಲು ತೆರೆದರೆ ಖೇಮು ನಿಂತಿದ್ದ. ಗುರುತು ಹಿಡಿದ ಪೂಜಾರಿ ಒಳಗೆ ಕರೆದು ಮಾತನಾಡಿಸಿದರು.

“ಮಕ್ಕಳಾದ್ವಾ?" ಅಂತ ಪೂಜಾರ್ರು ಕೇಳಿದ ತಕ್ಷಣ ಖೇಮು ಅವರ ಕೈಯಲ್ಲಿ 25 ಸಾವಿರ ಹಣ ಇಟ್ಟು, “ದಯವಿಟ್ಟು ಇನ್ನೊಮ್ಮೆ ಕಾಶಿಗೆ ಹೋಗಿ ಬನ್ನಿ ಪೂಜಾರ್ರೇ" ಅಂದ. “ಯಾಕಪ್ಪಾ ಇನ್ನೂ ಮಕ್ಕಳಾಗಲಿಲ್ವಾ?" ಅಂತ ಕೇಳಿದ್ದಕ್ಕೆ ಖೇಮು ಹೇಳಿದ“ನೀವೇನೋ ಕಾಶಿಗೆ ಹೋಗಿ ದೀಪ ಹಚ್ಚಿ ಬಂದ್ರಿ, ಆದ್ರೆ ಯಾವನೋ ಬಡ್ಡೀಮಗ ಇನ್ನೂ ಅದಕ್ಕೆ ಡೈಲಿ ಎಣ್ಣೆ ಹಾಕ್ತಾ ಇzನೆ ಅನ್ಸುತ್ತೆ. ಖೇಮುಶ್ರೀ ಈಗಾಗ್ಲೇ 3 ಸಲ ಅವಳಿ-ಜವಳಿ ಮಕ್ಕಳನ್ನ ಹೆತ್ತಿzಳೆ. ಇನ್ನು ನನ್ನ ಕೈಲಿ ತಡ್ಕೊಳ್ಳೋ ಕಾಗಲ್ಲ. ಮೊದ್ಲು, ಹೋಗಿ ಆ ದೀಪ ಆರಿಸಿ ಬನ್ನಿ".

ಲೈನ್ ಮ್ಯಾನ್ಯಾರನ್ನಾದ್ರೂ ಪರೀಕ್ಷೆ ಮಾಡಬೇಕು ಅಂತ ಅವರಿಗೆ ಸಚಿವ ಸ್ಥಾನ ಕೊಟ್ರೆ ಅದು

ಸಂ‘ಪುಟಕ್ಕಿಟ್ಟ ಚಿನ್ನ’

ಹೋಮ್ ಮಿನಿಸ್ಟರ್‌ನ ಕನ್ನಡದಲ್ಲಿ ‘ಗೃಹಮಂತ್ರಿ’ ಅಂತಾರೆ

ಆಕ್ಚುವಲಿ, ಅದು ‘ವಸತಿ ಸಚಿವ’ ಆಗಬೇಕಲ್ವಾ?

ಮಿರರ್ ಮಾರುವವನಿಗೆ ಒಂದು ಹೆಸರು

‘ಕನ್ನಡಿ’ಗ

ಮಿತಿಮೀರಿದ ಆಭಾಸ

ನಿದ್ದೆ ಮಾಡುವಾಗ ಕನಸಲ್ಲೂ ನಿದ್ದೆ ಮಾಡೋ ಥರ ಕನಸು ಬೀಳೋದು.

Heights of curiosity

ಸೆಲೆಬ್ರಿಟಿ ಶೋ ಮುಗಿದ ಮೇಲೆ ಸಿನಿಮಾ ನೋಡಿದ ಸೆಲೆಬ್ರಿಟಿಗಳು ಆ ಸಿನಿಮಾ ಬಗ್ಗೆ ಏನ್ ಹೇಳ್ತಾರೆ ಅಂತ ಕುತೂಹಲಇಟ್ಕೊಳ್ಳೋದು.

ಭೂಗೋಳ ರಹಸ್ಯ

ಭೂಮಿ ‘ಗುಂಡು’ ಗುಂಡಾಗಿದೆಯಂತೆ… ಅದಕ್ಕೇ ಬಡ್ಡಿಮಗಂದು ಟೈಟ್ ಆಗಿ ‘ತಿರುಗುತ್ತೆ’.

ನಶೆದಾತರಿಗೆ ತೋರಿಸೋ ತಾರತಮ್ಯ

ಎಣ್ಣೆನ ‘ಪರಮಾತ್ಮ’ ಅಂತ ಗೌರವದಿಂದ ಕರೀತೀವಿ. ಆದ್ರೆ ಸಿಗರೇಟ್‌ನ ಮಾತ್ರ ಸೇದಿದ ಮೇಲೆ ಕಾಲಲ್ಲಿ ಹೊಸಕಿಹಾಕ್ತೀವಿ.

ಕುಡುಕರ ಸ್ವಗತ

ಕುಡುಕರಿಗೆ ಒಂದು ಸಪರೇಟ್ ಧರ್ಮ ಬೇಕು.. ‘ಪ್ರಜ್ಞಾವಂತ’ರ ಲೋಕ ನಮಗೆ ಪರಮ ಬೋರು.

ಮನೆ ಕೆಲಸದವಳು ಪಕ್ಕದ ಮನೆಯವರ ಬಗ್ಗೆ ‘ಕಿವಿ’ ಊದಿದರೂ ಅದು..

‘ಬಾಯಿ’ ಮಾತು

ಬ್ರೇಕ್ ಅಪ್, ಡೈವೋರ್ಸ್ ಆಗಿ ಬಿಟ್ಟು ಹೋಗುವಾಗ ಒಬ್ಬರ ಮೇಲೆ ಒಬ್ಬರು ಸಿಟ್ಟಿನಿಂದ ಆಡುವ ಮಾತುಗಳು

Byeಗುಳ

ಇದನ್ನೂ ಓದಿ: Hari Paraak Column: ಹೆಂಗಸರು ವಟವಟ ಅನ್ನೋ ಜಾಗ -ವಠಾರ