ಆಲ್ಟ್ ನೇಟಿವ್ಸ್ ಜತೆ ಉದ್ಯಮಿಯಾಗಿ ಗುರುತಿಸಿಕೊಂಡ ಕವಿತಾ ಕಾಮರಾಜ್
ಈ ವಿಮೆನ್ ಸ್ಟಾರ್ಟಪ್ ಪ್ರೋಗ್ರಾಮ್ 26,089 ಮಹಿಳೆಯರಿಗೆ ಉದ್ಯಮಶೀಲತೆ ಮತ್ತು ನಿರ್ವಹಣೆ ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗಿದೆ. ಈ ಕಾರ್ಯಕ್ರಮದ ಉದ್ಯಮಿಗಳು 20 ವಲಯ ಗಳಲ್ಲಿದ್ದು ಅದರಲ್ಲಿ ತಂತ್ರಜ್ಞಾನ, ಸಾಮಾಜಿಕ ಪರಿಣಾಮ, ಕೃಷಿ, ರೀಟೇಲ್, ಆರೋಗ್ಯ ಸೇವೆ, ಶಕ್ತಿ ಮತ್ತು ಪರಿಸರ, ವಸ್ತ್ರ, ಉಡುಪು ಮತ್ತಿತರ ಕ್ಷೇತ್ರಗಳಿವೆ.


ಆಲ್ಟ್ ನೇಟಿವ್ಸ್ ಜೊತೆಯಲ್ಲಿ ಕವಿತಾ ಕಾಮರಾಜ್ ಅವರ ಪ್ರಯಾಣವು ಆರೋಗ್ಯಕರ ಆಹಾರ ಸೇವನೆಯು ಅನುಕೂಲದ ವೆಚ್ಚದಲ್ಲಿ ಬರುತ್ತದೆ ಎಂಬ ಅತ್ಯಂತ ಸರಳ ಅರಿವಿನಿಂದ ಪ್ರಾರಂಭ ವಾಯಿತು. ಆಕೆ ಮತ್ತು ಆಕೆಯ ಪತಿ ಆರೋಗ್ಯಕರ ಆಹಾರ ಸೇವನೆ ಮಾಡುವ ಧ್ಯೇಯ ಹೊಂದಿದ್ದು ಪಾಲಿಷ್ ಮಾಡಲಾದ ಬಿಳಿ ಅಕ್ಕಿಯ ಪೌಷ್ಠಿಕತೆಯ ಮಿತಿಗಳನ್ನು ಕಂಡುಕೊಂಡರು. ಇದರಿಂದ ಅವರಿಗೆ ಪ್ರಾರಂಭದಲ್ಲಿ ಸ್ವಂತ ಬಳಕೆಗೆಂದು ತಮ್ಮ ಆರು ಎಕರೆ ತೋಟದಲ್ಲಿ ಕೆಂಪು ಅಕ್ಕಿ ಮತ್ತು ಸಿರಿಧಾನ್ಯಗಳೊಂದಿಗೆ ಪ್ರಯೋಗ ನಡೆಸಲು ಅವಕಾಶ ಕಲ್ಪಿಸಿತು.
ಸಾಂಕ್ರಾಮಿಕದ ಸಂದರ್ಭದಲ್ಲಿ ಬಾಯಿ ಮಾತಿನ ಮೂಲಕ ಪ್ರಚಾರ ಪಡೆದಾಗ ಬೇಡಿಕೆ ಹೆಚ್ಚಾಗಿ ದ್ದರಿಂದ ಅವರು ಆರೋಗ್ಯಕರ, ಅಡುಗೆಗೆ ಸಿದ್ಧ ಭೋಜನವನ್ನು ಪೂರೈಸುವುದರಲ್ಲಿ ಅವಕಾಶ ಕಂಡರು. ಈ ಉದ್ಯಮಕ್ಕೆ `ಫ್ರೆಶ್ ಬಾಕ್ಸ್’ ಎಂದು ಕರೆದರು. ವಿಮೆನ್ ಸ್ಟಾರ್ಟಪ್ ಪ್ರೋಗ್ರಾಮ್ (ಡಬ್ಲ್ಯೂ.ಎಸ್.ಪಿ.) ಇನ್ ಕ್ಯುಬೇಷನ್ ನಲ್ಲಿ ಅದು ಆಲ್ಟ್ ನೇಟಿವ್ಸ್ ಆಗಿ ಬದಲಾಗಿ ತನ್ನ ಸ್ಥಾನವನ್ನು ಪೌಷ್ಠಿಕತೆಯನ್ನು ಅನುಕೂಲದೊಂದಿಗೆ ಸಮತೋಲನಗೊಳಿಸುವ ಡಿ2ಸಿ ಆಹಾರದ ಬ್ರಾಂಡ್ ಆಗಿ ರೂಪ ಪಡೆಯಿತು.
ಐದು ಗ್ರಾಹಕರಿಂದ 500ಕ್ಕೂ ಹೆಚ್ಚು ವಿಸ್ತರಿಸಿರುವ ಈ ಬ್ರಾಂಡ್ ಈಗ ಪಥ್ಯ ತಜ್ಞರು ಮತ್ತು ಬಾಣಸಿಗರೊಂದಿಗೆ ಸಹಯೋಗದಲ್ಲಿ 20+ ಎಸ್.ಕೆಯು.ಗಳನ್ನು ನೀಡುತ್ತಿದ್ದು ಸ್ಮಾರ್ಟ್ ಆಹಾರದ ಆಯ್ಕೆಗಳನ್ನು ಪೂರೈಸುತ್ತಿದೆ.
ಇದನ್ನೂ ಓದಿ: Gururaj Gantihole Column: ಸಿಕ್ಕಿಂಗೆ 50ರ ಸಂಭ್ರಮ: Act ಈಸ್ಟ್ ನಿಂದ Act ಫಾಸ್ಟ್ ನತ್ತ
ಉದ್ಯಮಶೀಲತೆಯು ತನ್ನದೇ ಆದ ಸವಾಲುಗಳೊಂದಿಗೆ ಬರುತ್ತದೆ, ಆದರೆ ಡಬ್ಲ್ಯೂ.ಎಸ್.ಪಿ. ಯೊಂದಿಗೆ ಕವಿತಾ ತಮ್ಮ ಉದ್ಯಮದ ಮುನ್ಸೂಚನೆ, ಯೋಜನೆ ಮತ್ತು ವಿಸ್ತರಣೆಗೆ ರಚನಾತ್ಮಕ ವಿಧಾನ ಕಂಡುಕೊಂಡರು. ಈ ಕಾರ್ಯಕ್ರಮವು ಅವರಿಗೆ ಗೃಹಿಣಿಯ ಮನಸ್ತತ್ವದಿಂದ ಉದ್ಯಮ ಶೀಲ ಮನಸ್ಥಿತಿಗೆ ಬದಲಾಗಲು ನೆರವಾಯಿತು, ಅವರು ಅದಕ್ಕೆ ಆಕ್ಯುಬೇಟ್ ನ ಮಾರ್ಗದರ್ಶನ, ಮೈಲಿಗಲ್ಲು ಗುರುತಿಸುವುದು ಮತ್ತು ವರ್ಕ್ ಬುಕ್ ಸಾಧನಗಳ ಮೂಲಕ ತಮ್ಮ ಉದ್ಯಮವನ್ನು ಗುರಿ ಪ್ರೇರಿತ ಮತ್ತು ಫಲಿತಾಂಶಗಳ ಕೇಂದ್ರಿತವಾಗಿಸಿದರು.

ಈಗ ಆಲ್ಟ್ ನೇಟಿವ್ಸ್ 2026-27ರ ವೇಳೆಗೆ 10 ಪಟ್ಟು ಪ್ರಗತಿಗೆ ಸಜ್ಜಾಗಿದ್ದು ಏರುತ್ತಿರುವ ಬೇಡಿಕೆಗೆ ಅನುಗುಣವಾಗಿ ತನ್ನ ಉತ್ಪನ್ನ ಸರಣಿ ಹಾಗೂ ಉತ್ಪಾದನಾ ಸಾಮರ್ಥ್ಯ ವಿಸ್ತರಿಸುವ ಯೋಜನೆ ಹೊಂದಿದ್ದಾರೆ. ಅದರ ಕೇಂದ್ರದಲ್ಲಿ ಈ ಉದ್ಯಮವು ಕುಟುಂಬಗಳಿಗೆ ಅನುಕೂಲದೊಂದಿಗೆ ರಾಜಿಯಾಗದೆ ಆರೋಗ್ಯಕರ ಆಹಾರದ ಆಯ್ಕೆಗಳನ್ನು ಹೊಂದಲು ಅವಕಾಶ ಕಲ್ಪಿಸುತ್ತದೆ.
ಕೊಟಕ್ ಮಹಿಂದ್ರಾ ಲಿಮಿಟೆಡ್ ಮತ್ತು ಎನ್.ಎಸ್.ಆರ್.ಸಿ.ಇ.ಎಲ್-ಐಐಎಂ ಬೆಂಗಳೂರು ತಮ್ಮ ಕೊಟಕ್ ಮಹಿಂದ್ರಾ ಬ್ಯಾಂಕ್ ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯ ಬದ್ಧತೆಯ ಅಡಿ ಯಲ್ಲಿ ವಿಮೆನ್ ಸ್ಟಾರ್ಟಪ್ ಪ್ರೋಗ್ರಾಮ್ ಪ್ರಾರಂಭಿಸಿದ್ದು ದೇಶಾದ್ಯಂತ ಉದ್ಯಮಿಗಳಾಗಲು ಬಯಸುವ ಮಹಿಳೆಯರಿಗೆ ಸಬಲೀಕರಿಸುವ ಗುರಿ ಹೊಂದಿದೆ. ಈ ಉಪಕ್ರಮವನ್ನು ಕೆಎಂಬಿಎಲ್ ನ ಶಿಕ್ಷಣ ಮತ್ತು ಜೀವನೋಪಾಯದ ಬದ್ಧತೆಯ ಸಿ.ಎಸ್.ಆರ್. ಅಡಿಯಲ್ಲಿ ಪ್ರಾರಂಭಿಸಲಾಗಿದ್ದು ಅದು ಮಹತ್ವಾಕಾಂಕ್ಷೆಯ ಮತ್ತು ಆವಿಷ್ಕಾರಕ ಮಹಿಳೆಯರಿಗೆ ವಿಸ್ತರಿಸಬಲ್ಲ ಉದ್ಯಮಗಳನ್ನು ನಿರ್ಮಿಸಲು ನೆರವಾಗುತ್ತದೆ.
ಈ ವಿಮೆನ್ ಸ್ಟಾರ್ಟಪ್ ಪ್ರೋಗ್ರಾಮ್ 26,089 ಮಹಿಳೆಯರಿಗೆ ಉದ್ಯಮಶೀಲತೆ ಮತ್ತು ನಿರ್ವಹಣೆ ಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗಿದೆ. ಈ ಕಾರ್ಯಕ್ರಮದ ಉದ್ಯಮಿಗಳು 20 ವಲಯಗಳಲ್ಲಿದ್ದು ಅದರಲ್ಲಿ ತಂತ್ರಜ್ಞಾನ, ಸಾಮಾಜಿಕ ಪರಿಣಾಮ, ಕೃಷಿ, ರೀಟೇಲ್, ಆರೋಗ್ಯ ಸೇವೆ, ಶಕ್ತಿ ಮತ್ತು ಪರಿಸರ, ವಸ್ತ್ರ, ಉಡುಪು ಮತ್ತಿತರ ಕ್ಷೇತ್ರಗಳಿವೆ. ಅವರು ಭಾರತದ 24 ರಾಜ್ಯ ಗಳನ್ನು ಪ್ರತಿನಿಧಿಸುತ್ತಾರೆ. ಇಲ್ಲಿಯವರೆಗೆ ಈ ಕಾರ್ಯಕ್ರಮವು 658 ಉದ್ಯಮಗಳಿಗೆ ಬೆಂಬಲಿಸಿದೆ ಮತ್ತು 2593 ಉದ್ಯೋಗಗಳ ಸೃಷ್ಟಿಗೆ ಅನುಕೂಲ ಕಲ್ಪಿಸಿದೆ.