Physical Abuse: ಶಾಲಾ ಕಚೇರಿಯಲ್ಲಿ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ; ಶಿಕ್ಷೆ ವಿಧಿಸುತ್ತಲೇ ಕಣ್ಣೀರು ಹಾಕಿದ ನಿರ್ದೇಶಕಿ
ಒಹಾಯೋದ ಸಿನ್ಸಿನಾಟಿಯಲ್ಲಿರುವ ಸೇಂಟ್ ಕ್ಸೇವಿಯರ್ ಶಾಲೆಯ ಮಾಜಿ ಕೌನ್ಸಿಲರ್ ಎಮಿಟಿ ನಟ್ಲಿ, ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಾಸಿಕ್ಯೂಟರ್ಗಳ ಪ್ರಕಾರ ಎಮಿಟಿ ನಟ್ಲಿ ಶಾಲೆಯಲ್ಲಿಯೇ ಹಲವು ಬಾರಿ ವಿದ್ಯಾರ್ಥಿಗಳ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದರು.


ವಾಷಿಂಗ್ಟನ್: ಒಹಾಯೋದ ಸಿನ್ಸಿನಾಟಿಯಲ್ಲಿರುವ ಸೇಂಟ್ ಕ್ಸೇವಿಯರ್ ಶಾಲೆಯ ಮಾಜಿ ಕೌನ್ಸಿಲರ್ ಎಮಿಟಿ ನಟ್ಲಿ, ವಿದ್ಯಾರ್ಥಿಗಳೊಂದಿಗೆ ಲೈಂಗಿಕ (Physical Abuse) ಸಂಪರ್ಕ ಹೊಂದಿದ್ದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. 43 ವರ್ಷಗಳ ಎಮಿಟಿ ನಟ್ಲಿ ಈ ಹಿಂದೆ ಹುಡುಗರ ಶಾಲೆಯಲ್ಲಿ ಅಕಾಡಮಿಕ್ ಸರ್ವೀಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಅವರಿಗೆ ಜೈಲು ಶಿಕ್ಷೆಯಾಗಿದೆ. ಸದ್ಯ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಅವರು ಕಣ್ಣೀರಿಟ್ಟಿದ್ದಾರೆ.
ಪ್ರಾಸಿಕ್ಯೂಟರ್ಗಳ ಪ್ರಕಾರ ಎಮಿಟಿ ನಟ್ಲಿ ಶಾಲೆಯಲ್ಲಿಯೇ ಹಲವು ಬಾರಿ ವಿದ್ಯಾರ್ಥಿಗಳ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದರು. ವಿದ್ಯಾರ್ಥಿಗೆ ಆಕೆ ಬೆದರಿಕೆಯನ್ನು ಹಾಕಿದ್ದಳು ಎಂದು ಆರೋಪಿಸಲಾಗಿತ್ತು. ವಿದ್ಯಾರ್ಥಿ ದೂರು ನೀಡಲು ಮುಂದಾಗಿದ್ದನು ಆದರೆ ಈಕೆಯ ಬೆದರಿಕೆಯಿಂದಾಗಿ ಆತ ಸುಮ್ಮನಿದ್ದ ಎಂದು ತಿಳಿದು ಬಂದಿದೆ. ಇದೀಗ ನ್ಯಾಯಾಲಯ ಮೂರು ವರ್ಷಗಳ ಶಿಕ್ಷೆಯನ್ನು ವಿಧಿಸಿದೆ. ಆಕೆಯನ್ನು ರಾಜ್ಯ ಕಾರಾಗೃಹದಲ್ಲಿ ಇರಿಸಲು ಸೂಚನೆ ನೀಡಲಾಗಿದೆ.
ಎರಡು ವರ್ಷಗಳ ಹಿಂದೆ 2022 ರಲ್ಲಿ ಅಮೆರಿಕದಲ್ಲಿ ಮಾರ್ಗದರ್ಶನ ಸಲಹೆಗಾರ್ತಿಯೊಬ್ಬಳು 14 ವರ್ಷದ ವಿದ್ಯಾರ್ಥಿಯನ್ನು ಅತ್ಯಾಚಾರ ಮಾಡಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರ ಆಕೆಯ ಮೇಲಿದ್ದ ಆರೋಪ ಸಾಬೀತಾಗಿತ್ತು. ಜುಲೈನಲ್ಲಿ ಮಾಧ್ಯಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕೌನ್ಸೆಲರ್ ಕುಟುಂಬದ ಸದಸ್ಯರು ಆಕೆಯ ಮನೆಯೊಳಗೆ ಇಬ್ಬರು ಚುಂಬಿಸುತ್ತಿರುವುದನ್ನು ನೋಡಿದಾಗ ಪೆನ್ಸಿಲ್ವೇನಿಯಾ ಪೊಲೀಸರಿಗೆ ಈ ದೌರ್ಜನ್ಯದ ಬಗ್ಗೆ ಮೊದಲು ಮಾಹಿತಿ ನೀಡಲಾಯಿತು.
ಈ ಸುದ್ದಿಯನ್ನೂ ಓದಿ: Viral Video: ರೈಲಿನಲ್ಲಿ ಮರ್ಮಾಂಗ ತೋರಿಸಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಇಬ್ರಾಹಿಂ ಅರೆಸ್ಟ್
ಹುಡುಗನ ತಾಯಿಗೆ ಈ ವಿಷಯ ತಿಳಿಯುತ್ತಿದ್ದಂತೆ ಆಕೆ ದೂರು ನೀಡಿದ್ದಾಳೆ. ವಿದ್ಯಾರ್ಥಿಯು ಜುಲೈನಲ್ಲಿ ತನಿಖಾಧಿಕಾರಿಗಳನ್ನು ಭೇಟಿಯಾದಾಗ, 2022 ರಲ್ಲಿ ತರಗತಿ ಪ್ರವಾಸದಿಂದ ಹಿಂತಿರುಗುವಾಗ ಶಾಲಾ ಬಸ್ನಲ್ಲಿ ತನ್ನ ಸಲಹೆಗಾರನ ಪಕ್ಕದಲ್ಲಿ ಕುಳಿತಿದ್ದಾಗಿ ಹೇಳಿದ್ದಾನೆ ಎನ್ನಲಾಗಿದೆ. ಅಲ್ಲಿಂದ ಆಕೆ ಆತನ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾಳೆ ಎಂದು ಹೇಳಲಾಗಿದೆ.