MP Dr Sudhakar: ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕ ಕ್ರಮಬದ್ಧವಾಗಿ ಆಗಿಲ್ಲ : ಪುನರ್ ಪರಿಶೀಲಿಸಿ ಸಂಸದ ಸುಧಾಕರ್ ಬೆಂಬಲಿಗರ ಒಕ್ಕೊರಲ ಆಗ್ರಹ
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕವನ್ನು ನಮ್ಮ ನಾಯಕ ಸುಧಾಕರ್ ಅವರ ಗಮನಕ್ಕೆ ತರದೆ ಮಾಡಿ ರುವುದು ಬೇಸರ ಮೂಡಿಸಿದೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಭಾವುಟ ಹಾರಿಸಿದ ಏಕೈಕ ನಮ್ಮ ನಾಯಕ ಡಾ. ಸುಧಾಕರ್.ಕಾಂಗ್ರೆಸ್ ತೊರೆದು ಬಿಜೆಪಿ ಬಾವುಟ ಹಾರಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲುತ್ತದೆ


ಚಿಕ್ಕಬಳ್ಳಾಪುರ : ಸಂಸದ ಡಾ.ಕೆ. ಸುಧಾಕರ್ ಅವರನ್ನು ಕಡೆಗಣಿಸಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕ ಮಾಡಿರುವ ಬಿಜೆಪಿ ಹೈಕಮಾಂಡ್ ತೀರ್ಮಾನ ಸರಿ ಇಲ್ಲ.ಸುಧಾಕರ್ ಅವರನ್ನು ವಿಶ್ವಾಸ ಕ್ಕೆ ತೆಗೆದುಕೊಂಡೇ ಜಿಲ್ಲಾಧ್ಯಕ್ಷರ ಆಯ್ಕೆಯನ್ನು ಮಾಡಬೇಕು. ಈಗ ಮಾಡಿರುವ ನೇಮಕಾದೇಶ ವನ್ನು ಪುನರ್ ಪರಿಶೀಲನೆ ಮಾಡಲೇಬೇಕು ಎಂದು ಬೆಂಬಲಿಗರು ಒಕ್ಕೊರಲ ಆಗ್ರಹ ಮಾಡಿದರು.
ನಗರದಲ್ಲಿರುವ ಸಂಸದ ಡಾ.ಕೆ. ಸುಧಾಕರ್ ಗೃಹಕಚೇರಿಯಲ್ಲಿ ಗುರುವಾರ ದಿಢೀರ್ ಸುದ್ದಿಗೋಷ್ಠಿ ನಡೆಸಿದ ಸುಧಾಕರ್ ಬೆಂಬಲಿಗರು, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್, ಮಾಜಿ ಶಾಸಕ ಪ್ರೀತಂಗೌಡ ವಿರುದ್ದ ಕಿಡಿಕಾರಿದರು.
ಮರಳು ಕುಂಟೆ ಕೃಷ್ಣಮೂರ್ತಿ ಮಾತನಾಡಿ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕವನ್ನು ನಮ್ಮ ನಾಯಕ ಸುಧಾಕರ್ ಅವರ ಗಮನಕ್ಕೆ ತರದೆ ಮಾಡಿರುವುದು ಬೇಸರ ಮೂಡಿಸಿದೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಭಾವುಟ ಹಾರಿಸಿದ ಏಕೈಕ ನಮ್ಮ ನಾಯಕ ಡಾ. ಸುಧಾಕರ್.ಕಾಂಗ್ರೆಸ್ ತೊರೆದು ಬಿಜೆಪಿ ಬಾವುಟ ಹಾರಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲುತ್ತದೆ. ಕೋಲಾರ ಚಿಕ್ಕಬಳ್ಳಾ ಪುರ ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಪಕ್ಷಕ್ಕೆ ಸುಧಾಕರ್ ಕೊಡುಗೆ ಅಪಾರವಾಗಿದೆ. ಜಿಲ್ಲಾಧ್ಯಕ್ಷರ ವಿಚಾರವಾಗಿ ನಾಲ್ಕು ಮಂದಿ ಆಕಾಂಕ್ಷಿಗಳು ಇದ್ದೆವು.ನಾವೆಲ್ಲಾ ಕೂಡಿಯೇ ಸಂಸದರ ಸಹಮತ ಇರುವವವರಿಗೆ ಅಧ್ಯಕ್ಷ ಸ್ಥಾನ ಕೊಡಿ ಅಂತ ಹೇಳಿದ್ದೆವು.ಆದರೆ ಎಂಪಿ ಅವರ ಗಮನಕ್ಕೆ ತರದೆ ಜಿಲ್ಲಾಧ್ಯಕ್ಷರ ನೇಮಕ ಮಾಡೋದು ಸರೀನಾ. ಎಂದು ಪ್ರಶ್ನಿಸಿದರು.
ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ ನೇಮಕಕ್ಕೆ ನಮ್ಮ ವಿರೋಧ ಇದೆ. ಎದೆ ಮುಟ್ಟಿಕೊಂಡು ವಿಜಯೇಂದ್ರ ಮಾತನಾಡಲಿ.ನೀವು ನಿಮ್ಮ ಹಿಂಬಾಲಕರಿಗೆ ಮಾತ್ರ ಅಧ್ಯಕ್ಷ ಸ್ಥಾನ ಕೊಟ್ಟಿಲ್ವಾ..? ರಾಜ್ಯದಲ್ಲಿ ವಿಜ ಯೇಂದ್ರ ಅವರನ್ನು ಅರ್ಧ ಬಿಜೆಪಿ ಮುಖಂಡರೇ ಟೀಕೆ ಮಾಡ್ತಿದ್ದಾರೆ. ಬಿಜೆಪಿಯ ರಾಜ್ಯ ನಾಯಕ ರು ಅಸಮಾಧಾನ ಹೊಂದಿದ್ದಾರೆ. ಜಿಲ್ಲಾಧ್ಯಕ್ಷರ ಆಯ್ಕೆ ಮಾಡೋದು ದೊಡ್ಡ ಕೆಲಸ ಅಲ್ಲ, ಸುಧಾ ಕರ್ ವಿಶ್ವಾಸ ತೆಗೆದುಕೊಂಡು ಮಾಡಬೇಕಿತ್ತು. ಅವರ ಗಮನಕ್ಕೆ ತರದೆ ಮಾಡಿದ್ರೆ ಪಕ್ಷದ ಸಂಘಟನೆ ಹೇಗೆ ಮಾಡಲು ಸಾಧ್ಯ. ಈಗಲೂ ಸಮಯ ಮೀರಿಲ್ಲ ಬದಲಾವಣೆ ಮಾಡಿ ಎಂದು ಆಗ್ರಹಿಸಿದರು.
ಎಸ್.ಆರ್.ವಿಶ್ವನಾಥ್ ಅವರೇ ಹಿಂದು ಮುಂದು ನೋಡಿ ಮಾತನಾಡಿ.ಸುಧಾಕರ್ ಬಿಜೆಪಿಗೆ ಬಂದಿದ್ದರಿAದಲೇ ಯಡಿಯೂರಪ್ಪ ಅವರ ಸರ್ಕಾರ ಬಂದಿತು.ವಿಶ್ವನಾಥ್ ಅವರೇ ನೀವೂ ಕೂಡ ಬಿಡಿಎ ಚೇರ್ಮನ್ ಆದಿರಿ ಎಂದ ಅವರು ಈ ಭಾಗದಲ್ಲಿ ಬಿಜೆಪಿ ಕೆಡಿಸಲು ವಿಶ್ವನಾಥ್ ಅವರೇ ನೀವೇ ಕಾರಣ. ಇತಂಹವರನ್ನು ನಂಬಿಕೊAಡು ಪಕ್ಷ ನಾಶ ಮಾಡುವ ಕೆಲಸವನ್ನು ವಿಜಯೇಂದ್ರ ಮಾಡಬಾರದು.ನಮ್ಮ ನಾಯಕರು ದೆಹಲಿಗೆ ಹೋಗಿದ್ದಾರೆ.ಅವರು ವಾಪಸ್ಸು ಬಂದ ನಂತರ ನಾವೆಲ್ಲಾ ಸಭೆ ಸೇರಿ ಮುಂದೆ ಏನು ಮಾಡಬೇಕು ಎಂಬ ತೀರ್ಮಾಣ ತೆಗೆದುಕೊಳ್ಳುತ್ತೇವೆ ಎಂದು ಗುಡುಗಿದರು.
ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ ಜಿಲ್ಲಾಧ್ಯಕ್ಷರ ನೇಮಕಕ್ಕೆ ನಮ್ಮ ವಿರೋಧವಿದೆ. ಬಿಜೆಪಿ ಮುಂದೆ ಅಧಿಕಾರಕ್ಕೆ ಬರಬೇಕಾದರೆ ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಬಿಡಬೇಕು. ಹಿಂಬಾಲಕರ ಸಲಹೆಯಂತೆ ಹೋದರೆ ಪಕ್ಷ ಕಟ್ಟಲು ಆಗುವುದಿಲ್ಲ. ಈಗಿಂದೀಗಲೇ ನೇಮಕಾತಿ ಆದೇಶ ಪುನರ್ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ೨೦೧೮ ರ ಮುಂಚೆ ಎಲ್ಲಿತ್ತು ಎಂಬುದನ್ನು ಬಲ್ಲವರು ಹೇಳಬೇಕು. 2018ರ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಪಡೆದ ಮತಗಳು ೫೩೦೦ ಮಾತ್ರ. ೨೦೨೪ ರ ಸಂಸದರ ಚುನಾ ವಣೆಯಲ್ಲಿ ಬಿಜೆಪಿ ಪಡೆದ ಮತ ಬರೋಬ್ಬರಿ ೯೧೦೦೦. ಐದು ಸಾವಿರದಿಂದ ೯೦೦೦೦ ಕ್ಕೆ ಏರಲು ಯಾರ ಶ್ರಮವಿದೆ. ಯಾರಿಂದ ಇವೆಲ್ಲಾ ಸಾಧ್ಯ ಆಯ್ತು..? ಇದಕ್ಕಿಂತ ದೊಡ್ಡ ಉದಾಹರಣೆ ಮತ್ತೊಂದು ಬೇಕಾ..? ಜಿಲ್ಲಾಧ್ಯಕ್ಷರ ನೇಮಕ ಯಾವ ರೀತಿ ಸರಿ ಇದೆ.ಜಿಲ್ಲಾಧ್ಯಕ್ಷರ ಘೋಷಣೆ ಸಭೆಗೆ ನಮಗೆ ಯಾಕೆ ಆಹ್ವಾನ ಕೊಡಲಿಲ್ಲ..? ತರಾತುರಿಯಲ್ಲಿ ಆದೇಶ ಪಾಲಿಸಲು ಬೇಕೆಂತಲೇ ನಮ್ಮನ್ನು ಬಿಟ್ಟು ಘೋಷಣೆ ಮಾಡಿದ್ದಾರೆ ಎಂದು ಗುಡುಗಿದರು.
ನಾವು ಸಭೆಯಲ್ಲಿದ್ದರೆ ಡಾ.ಕೆ ಸುಧಾಕರ್ ಅವರ ಪರವಾಗಿ ಮಾತಾಡ್ತೀವಿ ಎಂಬ ಭಯದಿಂದ ನಮ್ಮನ್ನು ಅಧ್ಯಕ್ಷರ ಆಯ್ಕೆಯ ಸಭೆಗೆ ಕರೆದಿಲ್ಲ.ನಾನು ರಾಜ್ಯಾಧ್ಯಕ್ಷರನ್ನು ಕೇಳುತ್ತೇನೆ. ಜಿಲ್ಲಾಧ್ಯಕ್ಷರ ನೇಮಕ ಸರಿಯಾಗಿ ಮಾಡಿದ್ದೀರಾ..? ಚುನಾವಣೆ ನಡೆಸಿ ಅದರಲ್ಲಿ ಗೆದ್ದವರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿ ದ್ದಿದ್ದರೆ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ.ಗುಟ್ಟಾಗಿ ನೇಮಕ ಮಾಡುವಾಗಲಾದರೂ ನಾಯಕರ ಸಹಮತ ಪಡೆಯಬೇಕಲ್ಲವೇ..? ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಬಲವರ್ಧನೆಗೆ ಸುಧಾಕರ್ ಕಾರಣ. ವಿಜಯೇಂದ್ರ ಅವರೇ ಆಗಿರುವ ತಪ್ಪು ಸರಿ ಮಾಡಿ ಎಂದು ಆಗ್ರಹಿಸಿದ ಅವರು ವಿಜಯೇಂದ್ರ ಅವರೇ ನನ್ನ ಗಮನಕ್ಕೆ ಬಾರದೆ ಅಧ್ಯಕ್ಷರ ನೇಮಕ ಆಗಿದೆ ಅಂತಿದ್ದೀರಿ.ಈಗಾಲಾದ್ರೂ ನಮ್ಮ ನಾಯಕರ ಜೊತೆ ಮಾತನಾಡಿ ಅಧ್ಯಕ್ಷರ ಆಯ್ಕೆ ಮಾಡಿ ಎಂದು ಒತ್ತಾಯಿಸಿದರು.
ಖಾದಿ ಮತ್ತು ಗ್ರಾಮೋಧ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ ನಾಗರಾಜ್ ಮಾತನಾಡಿ ಜಿಲ್ಲೆಯಲ್ಲಿ ೬೦ ಸಾವಿರ ಸದಸ್ಯತ್ವ ನೋಂಧಣಿ ಮಾಡಿಸುವ ಮೂಲಕ ಸುಧಾಕರ್ ಯಶಸ್ವಿಯಾದರು. ಆದ್ರೆ ಅವರ ಗಮನಕ್ಕೆ ಬಾರದೆ ಜಿಲ್ಲಾಧ್ಯಕ್ಷರ ನೇಮಕ ದುರಂತ. ಸುಧಾಕರ್ ಸಲಹೆ ಸೂಚನೆ ತೆಗೆದು ಕೊಂಡು ಜಿಲ್ಲಾಧ್ಯಕ್ಷರ ನೇಮಕ ಆಗಬೇಕಿತ್ತು. ಸುಧಾಕರ್ ಅವರ ಮೇಲೆ ಹೈಕಮಾಂಡ್ ನಾಯಕರಿಗೆ ವಿಶ್ವಾಸ ಇದೆ. ಹೋದರೆ ಕಾಂಗ್ರೆಸ್‌ಗೆ ಹೋಗಿ ಎಂದು ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ. ಅವರನ್ನು ನೋಡಿ ನಾವು ಕಲಿಯಬೇಕಿಲ್ಲ, ಲೋಕಸಭಾ ಚುನಾವಣಾ ಸಮಯದಲ್ಲಿ ಎಸ್.ಆರ್.ವಿಶ್ವನಾಥ್ ಏನು ಮಾಡಿದರು ಎಂಬುದು ಗೊತ್ತಿದೆ. ಅವರಿಂದ ಪಾಠ ಕಲಿಯಬೇಕಿಲ್ಲ ಎಂದು ಸುಧಾಕರ್ ಬೆಂಬಲಿಗರು ಆಗ್ರಹಿಸಿದ್ದಾರೆ. ಇನ್ನೂ ಇದೇ ವೇಳೆ ವಿಜಯೇಂದ್ರ ವಿರುದ್ದ ಕಿಡಿಕಾರಿದ ಸುಧಾಕರ್ ವಿರುದ್ದ ಎಸ್ ಆರ್ ವಿಶ್ವನಾಥ್ ಹೇಳಿಕೆಗಳಿಗೂ ಸಂಸದ ಸುಧಾಕರ್ ಬೆಂಬಲಿಗರು ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರಾಗಿ ಸಂದೀಪ್ ರೆಡ್ಡಿ ಆಯ್ಕೆಯ ಬೆನ್ನಲ್ಲೇ ಜಿಲ್ಲೆಯಲ್ಲಿಯ ಉಂಟಾಗಿ ರುವ ಸುಧಾಕರ್ ಬೆಂಬಲಿಗರ ಒಳಬೇಗುದಿ ಆರುವ ಲಕ್ಷಣ ಕಾಣಿಸುತ್ತಿಲ್ಲ. ಇದು ಮುಂದೆ ಎಲ್ಲಿಗೆ ಹೋಗಿ ಮುಟ್ಟುತ್ತದೆಯೋ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಸಭೆಯಲ್ಲಿ ಎಸ್‌ಆರ್‌ಎಸ್ ದೇವರಾಜ್,ಪಿ.ಎನ್.ಚನ್ನಕೇಶವರೆಡ್ಡಿ,ನಗರಸಭೆ ಅಧ್ಯಕ್ಷ ಗಜೇಂದ್ರ, ಅರುಣ್, ಜಯ್‌ಕುಮಾರ್, ನಾಗೇಶ್,ನಾರಾಯಣಸ್ವಾಮಿ ಮತ್ತಿತರರು ಇದ್ದರು.