ಅಣ್ಣ-ತಂಗಿ, ಲವ್ ಬರ್ಡ್ಸ್ ಎರಡೂ ಪಾತ್ರದಲ್ಲೂ ಮಿಂಚಿದ್ದ ಸೆಲೆಬ್ರಿಟಿಗಳು ಇವರೇ ನೋಡಿ!
ಕಥೆಗಳನ್ನು ಆಧರಿಸಿ ನಟ-ನಟಿಯರಿಗೆ ಸಿನಿಮಾದಲ್ಲಿ ವಿವಿಧ ರೀತಿಯ ಪಾತ್ರಗಳು ಸಿಗುವುದು ಸಾಮಾನ್ಯ. ಅಂತೆಯೆ ಕೆಲವು ಸಿನಿಮಾಗಳಲ್ಲಿ ಅಣ್ಣ-ತಂಗಿಯಾಗಿ ಅಭಿನಯಿಸಿ ಬಳಿಕ ಅದೇ ಜೋಡಿ ತೆರೆ ಮೇಲೆ ಹೀರೋ-ಹಿರೋಯಿನ್ ಆಗಿ ಮಿಂಚಿದ್ದೂ ಇದೆ. ಅಣ್ಣ-ತಂಗಿಯ ನಡುವಿನ ಬಾಂಧವ್ಯಕ್ಕೂ ಪ್ರೇಮಿಗಳ ನಡುವಿನ ಪ್ರೀತಿ ಅಭಿವ್ಯಕ್ತಿಗೂ ಸಾಕಷ್ಟು ವ್ಯತ್ಯಾಸವಿದೆ. ಹಾಗಿದ್ದರೂ ತೆರೆ ಮೇಲೆ ಕೆಲವು ಸೆಲೆಬ್ರಿಟಿಗಳು ಎರಡು ತರಹದ ಪಾತ್ರಕ್ಕೂ ಸೈ ಎಂದಿದ್ದು, ಅಂತಹ ಕೆಲವು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿವೆ. ಹಾಗಾದರೆ ಆ ಸಿನಿಮಾ ಯಾವುವು ಎನ್ನುವ ಮಾಹಿತಿ ಇಲ್ಲಿದೆ.

Lovers And Siblings In Films


ನಟ ಶಾರುಖ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ಬಚ್ಚನ್ ಬಾಲಿವುಡ್ನಲ್ಲಿ ಬಹಳ ಜನಪ್ರಿಯ ಜೋಡಿ. 2000ರಲ್ಲಿ ತೆರೆಕಂಡ ʼಜೋಶ್ʼ ಹಿಂದಿ ಚಿತ್ರದಲ್ಲಿ ಇವರು ಅವಳಿಗಳ ಪಾತ್ರದಲ್ಲಿ ನಟಿಸಿದ್ದರು. ಇದಾದ ನಂತರ ʼಮೊಹಬ್ಬತೇನ್ʼ ಮತ್ತು ʼದೇವದಾಸ್ʼ ಚಿತ್ರದಲ್ಲಿ ಪ್ರೇಮಿಗಳ ಪಾತ್ರದಲ್ಲಿ ಅಭಿನಯಿಸಿದ್ದರು. ಈ ಎಲ್ಲ ಚಿತ್ರಗಳು ಪ್ರೇಕ್ಷಕರ ಮನಗೆದ್ದಿದ್ದವು.

ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮತ್ತು ರಣವೀರ್ ಸಿಂಗ್ ʼಗುಂಡೇʼ ಚಿತ್ರದಲ್ಲಿ ಲವರ್ಸ್ ಪಾತ್ರದಲ್ಲಿ ಅಭಿನಯಿಸಿದ್ದರು. ಅದಾದ ಅನಂತರ ʼದಿಲ್ ಧಡಕ್ನೆ ದೋʼ ಚಿತ್ರದಲ್ಲಿ ಅಣ್ಣ-ತಂಗಿಯರಾಗಿ ಕಾಣಿಸಿಕೊಂಡಿದ್ದರು. ಬಳಿಕ 2018ರಲ್ಲಿ ʼಬಾಜಿರಾವ್ ಮಸ್ತಾನಿʼ ಬಾಲಿವುಡ್ ಚಿತ್ರದಲ್ಲಿ ಮತ್ತೆ ಗಂಡ-ಹೆಂಡತಿಯ ಪಾತ್ರದಲ್ಲಿ ನಟಿಸಿದ್ದರು. ಈ ಮೂಲಕ ಮೂರು ಸಿನಿಮಾಗಳು ಪ್ರೇಕ್ಷಕರಿಗೆ ಬಹಳ ಇಷ್ಟವಾಗಿ ಹಿಟ್ ಲಿಸ್ಟ್ ಸೇರಿತು.

ಜಾನ್ ಅಬ್ರಹಾಂ ಮತ್ತು ದೀಪಿಕಾ ಪಡುಕೋಣೆ ಕೂಡ ವಿಭಿನ್ನ ಪಾತ್ರಗಳಲ್ಲಿ ಸಿನಿಮಾ ಮಾಡಿ ಗಮನ ಸೆಳೆದಿದ್ದಾರೆ. ಇವರಿಬ್ಬರು ʼದೇಸಿ ಬಾಯ್ಸ್; ಹಿಂದಿ ಚಿತ್ರದಲ್ಲಿ ಮುದ್ದಾದ ಜೋಡಿಯಾಗಿ ನಟಿಸಿದ್ದರು. ಅನಂತರ ʼರೇಸ್ 2ʼ ಸಿನಿಮಾದಲ್ಲಿ ಕಸಿನ್ಸ್ ಆಗಿ ಅಭಿನಯಿಸಿದ್ದರು. ʼರೇಸ್ 2ʼ ಬಾಕ್ಸ್ ಆಫೀಸ್ ಭರ್ಜರಿ ಕಲೆಕ್ಷನ್ ಮಾಡಿತ್ತು.

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ಅರ್ಜುನ್ ರಾಂಪಾಲ್ ಕೂಡ ಎರಡು ವಿಭಿನ್ನ ಜಾನರ್ ಸಿನಿಮಾದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ʼಓಂ ಶಾಂತಿ ಓಂʼ ಚಿತ್ರದಲ್ಲಿ ಇವರು ಜೋಡಿಯಾಗಿ ನಟಿಸಿದ್ದರು. ಅನಂತರ ತೆರೆಕಂಡ ʼಹೌಸ್ಫುಲ್ʼ ಚಿತ್ರದಲ್ಲಿ ಅಣ್ಣ-ತಂಗಿ ಪಾತ್ರದಲ್ಲಿ ಕಾನಿಸಿಕೊಂಡಿದ್ದರು. ಈ ಎರಡು ಸಿನಿಮಾಗಳು ಹಿಟ್ ಆಗಿವೆ.

ʼಮುಜೆ ಕುಚ್ ಕೆಹನಾ ಹೈʼ ಸಿನಿಮಾದಲ್ಲಿ ನಟ ತುಷಾರ್ ಕಪೂರ್ ಮತ್ತು ಕರೀನಾ ಕಪೂರ್ ಲವರ್ಸ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟಿಗೆ ಯಶಸ್ಸು ಕಂಡಿತು. ಬಳಿಕ 2003ರಲ್ಲಿ ತೆರೆಕಂಡ ʼಗೋಲ್ಮಾಲ್ 3ʼ ಸಿನಿಮಾದಲ್ಲಿ ಮತ್ತೆ ಇದೇ ಜೋಡಿ ಅಣ್ಣ-ಅತ್ತಿಗೆಯ ಪಾತ್ರವನ್ನು ನಿರ್ವಹಿಸಿತು. ಈ ಸಿನಿಮಾ 147 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಜೂಹಿ ಚಾವ್ಲಾ ʼಮಿಸ್ಟರ್ & ಮಿಸೆಸ್ ಖಿಲಾಡಿʼ ಚಿತ್ರದಲ್ಲಿ ಜೋಡಿಯಾಗಿ ನಟಿಸಿ ಜನ ಮನಗೆದ್ದರು. ಬಳಿಕ ಅವರು ʼಏಕ್ ರಿಶ್ತಾ: ದಿ ಬಾಂಡ್ ಆಫ್ ಲವ್ʼ ಸಿನಿಮಾದಲ್ಲಿ ಒಡಹುಟ್ಟಿದವರ ಪಾತ್ರದಲ್ಲಿ ಕಾಣಿಸಿಕೊಂಡರು.