ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಬೀಚ್‌ವೇರ್‌ ಕ್ರೊಶೆಟ್‌ ಕೋ ಆರ್ಡ್ ಸೆಟ್‌ನಲ್ಲಿ ನಟಿ ಪಲಕ್‌ ತಿವಾರಿಯ ಹಾಟ್‌ ಲುಕ್‌!

Star Fashion 2025: ಗ್ಲಾಮರಸ್‌ ಲುಕ್‌ ನೀಡುವ ಉಲ್ಲನ್‌ನಲ್ಲಿ ಹೆಣೆದಂತಿರುವ, ಟು ಪೀಸ್‌ ಬೀಚ್‌ವೇರ್ ಕ್ರೊಶೆಟ್‌ ಕೋ ಆರ್ಡ್ ಸೆಟ್‌ನಲ್ಲಿ ಬಾಲಿವುಡ್‌ ತಾರೆ ಪಲಕ್‌ ತಿವಾರಿ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಸೆಲೆಬ್ರೆಟಿಗಳ ಹಾಟ್‌ ಫೇವರೆಟ್‌ ಲಿಸ್ಟ್‌ನಲ್ಲಿರುವ ಈ ಕ್ರೊಶೆಟ್‌ ಡ್ರೆಸ್‌ ಕುರಿತಂತೆ ಇಲ್ಲಿದೆ ಇಲ್ಲಿದೆ ವಿವರ.

ಬೀಚ್‌ವೇರ್‌ ಕ್ರೊಶೆಟ್‌ ಕೋ ಆರ್ಡ್ ಸೆಟ್‌ನಲ್ಲಿ ನಟಿ ಪಲಕ್‌ ತಿವಾರಿ

ಚಿತ್ರಗಳು: ಪಲಕ್‌ ತಿವಾರಿ, ಬಾಲಿವುಡ್‌ ನಟಿ

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಪಲಕ್‌ ತಿವಾರಿಯ ಕ್ರೊಶೆಟ್‌ ಕೋ ಆರ್ಡ್ ಸೆಟ್‌ ಇದೀಗ ಬೀಚ್‌ವೇರ್‌ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಹೌದು, ತೀರಾ ಗ್ಲಾಮರಸ್‌ ಆಗಿ ಕಾಣಿಸುವ ಉಲ್ಲನ್‌ನಲ್ಲಿ ಹೆಣೆದಂತಿರುವ ಈ ಟು ಪೀಸ್‌ ಕ್ರೊಶೆಟ್‌ ಕೋ ಆರ್ಡ್ ಬೀಚ್‌ವೇರ್‌ ಸೆಟ್‌ನಲ್ಲಿ ಬಾಲಿವುಡ್‌ ತಾರೆ ಪಲಕ್‌ ತಿವಾರಿ (Star Fashion 2025), ಮಾರಿಷಸ್‌ನ ಸಮುದ್ರ ತೀರದಲ್ಲಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಪಲಕ್‌ ತಿವಾರಿ, ಸಾಕಷ್ಟು ಜಾಹೀರಾತುಗಳಲ್ಲೂ ನಟಿಸಿದ್ದಾರೆ. ಜೆನ್‌ ಜಿ ಜನರೇಷನ್‌ ನಟಿ ಎಂದೇ ಗುರುತಿಸಿಕೊಂಡಿದ್ದಾರೆ.

Star Fashion 2025 7

ಏನಿದು ಕ್ರೊಶೆಟ್ ಕೋ ಆರ್ಡ್ ಬೀಚ್‌ವೇರ್‌?

ಉಲ್ಲನ್‌ನಲ್ಲಿ ಹೆಣೆದಂತಿರುವ ಕ್ರೊಶೆಟ್ ಬೀಚ್‌ವೇರ್‌ ಹ್ಯಾಂಡ್‌ ಮೇಡ್‌ ಎನ್ನಬಹುದು. ಇದನ್ನು ಹೆಣೆದು ವಿನ್ಯಾಸಗೊಳಿಸಲಾಗಿರುತ್ತದೆ. ರೆಡ್‌ ಅಥವಾ ಸ್ಕಾರ್ಲೆಟ್‌ ಕಲರ್‌ನಲ್ಲಿರುವ ಈ ಕ್ರೊಶೆಟ್‌ ಕೋ ಆರ್ಡ್ ಸೆಟ್‌ ಬೀಚ್‌ವೇರ್‌ಗಳು ಇತ್ತೀಚೆಗೆ ಬಾಲಿವುಡ್‌ ಸೆಲೆಬ್ರೆಟಿಗಳ ಮುಖಾಂತರ ಟ್ರೆಂಡಿಯಾಗಿದೆ. ಬಿಕಿನಿ ಮೇಲೆ ಧರಿಸುವ ಈ ಟ್ರಾನ್ಸಪರೆಂಟ್‌ ವಿನ್ಯಾಸದ ಕ್ರೊಶೆಟ್‌ ಔಟ್‌ಫಿಟ್‌ ಸದ್ಯ ಅಲ್ಟ್ರಾ ಮಾಡರ್ನ್‌ ಹುಡುಗಿಯರನ್ನೂ ಕೂಡ ಸವಾರಿ ಮಾಡತೊಡಗಿದೆ ಎನ್ನುತ್ತಾರೆ ಫ್ಯಾಷನಿಸ್ಟಾ ಧವನ್‌.

Star Fashion 2025 6

ಬೀಚ್‌ವೇರ್‌ ಟ್ರೆಂಡ್‌ನಲ್ಲಿ ಚಾಲ್ತಿಯಲ್ಲಿರುವ ಕ್ರೊಶೆಟ್‌ವೇರ್‌ಗಳಿವು

ಕ್ರೊಶೆಟ್‌ನಲ್ಲಿ ಮಿನಿ ಸ್ಕರ್ಟ್, ಪ್ಯಾಂಟ್‌, ಶಾರ್ಟ್ಸ್, ಬಿಕಿನಿ ಸೆಟ್‌, ಕ್ರಾಪ್‌ ಟಾಪ್‌ ಸೇರಿದಂತೆ ನಾನಾ ಬಗೆಯವು ಬೀಚ್‌ವೇರ್‌ನ ಹೈ ಫ್ಯಾಷನ್‌ ಲಿಸ್ಟ್‌ನಲ್ಲಿವೆ. ಪರ್ಫೆಕ್ಟ್ ಬಾಡಿ ಮಾಸ್‌ ಇಂಡೆಕ್ಸ್ ಹೊಂದಿರುವ ಸೆಲೆಬ್ರೆಟಿಗಳು ಹಾಗೂ ಸ್ಟೈಲಿಶ್‌ ಆಗಿ ಕಾಣಬಯಸುವ ಹುಡುಗಿಯರು ಇವನ್ನು ಹೆಚ್ಚಾಗಿ ಪ್ರಿಫರ್‌ ಮಾಡುತ್ತಾರೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

ಈ ಸುದ್ದಿಯನ್ನೂ ಓದಿ | Dupatta Fashion 2025: ಹುಡುಗಿಯರ ಆಕರ್ಷಕ ಲುಕ್‌ಗಾಗಿ ಶೀರ್ ದುಪಟ್ಟಾ ಫ್ಯಾಷನ್

(ಲೇಖಕಿ:‌ ಫ್ಯಾಷನ್‌ ಪತ್ರಕರ್ತೆ)