ZIM vs SA: ಜಿಂಬಾಬ್ವೆ ವಿರುದ್ಧ 328 ರನ್ ಅಂತರದ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ
ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಆಲ್‌ರೌಂಡರ್ ಪ್ರದರ್ಶನ ತೋರಿದ ಕಾರ್ಬಿನ್ ಬಾಷ್, ಮೊದಲ ಇನಿಂಗ್ಸ್‌ನಲ್ಲಿ ಅಜೇಯ 100 ರನ್ ಗಳಿಸಿದ್ದರು. ಒಂದೇ ಪಂದ್ಯದಲ್ಲಿ ಶತಕ ಮತ್ತು ಐದು ವಿಕೆಟ್ ಕಬಳಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಆಟಗಾರ ಎಂಬ ದಾಖಲೆಯನ್ನು ಕೂಡ ಅವರು ಬರೆದಿದ್ದಾರೆ.


ಬುಲವಾಯೊ: ಕಾರ್ಬಿನ್ ಬಾಷ್ (43ಕ್ಕೆ 5) ಅವರ ಅಮೋಘ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ, ಜಿಂಬಾಬ್ವೆ(ZIM vs SA) ವಿರುದ್ದದ ಮೊದಲ ಟೆಸ್ಟ್(ZIM vs SA 1st Test) ಪಂದ್ಯದಲ್ಲಿ 328 ರನ್‌ಗಳ ಭಾರಿ ಗೆಲುವು ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ಜಿಂಬಾಬ್ವೆಗೆ(Zimbabwe) ಗೆಲ್ಲಲು 537 ರನ್‌ಗಳ ಬೃಹತ್ ಗುರಿ ನೀಡಿದ್ದ ಪ್ರವಾಸಿ ತಂಡ, ನಾಲ್ಕನೇ ದಿನದ ಚಹಾಕ್ಕೂ ಮುನ್ನ ಪಂದ್ಯವನ್ನು ಮುಕ್ತಾಯಗೊಳಿಸಿತು. ಆತಿಥೇಯ ತಂಡವನ್ನು 208 ರನ್‌ಗಳಿಗೆ ಆಲೌಟ್ ಮಾಡಿತು. ಪಾರ್ಟ್ ಟೈಮ್ ಲೆಗ್-ಸ್ಪಿನ್ನರ್ ಡೆವಾಲ್ಡ್ ಬ್ರೆವಿಸ್ ಕೊನೆಯ ವಿಕೆಟ್ ಪಡೆದು ಜಿಂಬಾಬ್ವೆ ವಿರುದ್ಧ ದಕ್ಷಿಣ ಆಫ್ರಿಕಾದ ಅತಿದೊಡ್ಡ ಟೆಸ್ಟ್ ಗೆಲುವನ್ನು ದಾಖಲಿಸಿದರು.
1 ವಿಕೆಟ್‌ಗೆ 32 ರನ್‌ಗಳೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಜಿಂಬಾಬ್ವೆ ತಂಡವು ತಕ್ಷಣವೇ ಒತ್ತಡಕ್ಕೆ ಒಳಗಾಯಿತು. ಬೆಳಿಗ್ಗೆಯ ಮೊದಲ ಎಸೆತದಲ್ಲೇ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಇತೀಚೆಗೆ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಗೆದ್ದ ತಂಡದಿಂದ ಕೇವಲ ನಾಲ್ವರು ಆಟಗಾರರು ಮಾತ್ರ ಈ ಪಂದ್ಯದಲ್ಲಿ ಭಾಗವಹಿಸಿದ್ದರು. ಆದರೂ ಹರಿಣ ಪಡೆ ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆಯಿತು.
ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಆಲ್‌ರೌಂಡರ್ ಪ್ರದರ್ಶನ ತೋರಿದ ಕಾರ್ಬಿನ್ ಬಾಷ್, ಮೊದಲ ಇನಿಂಗ್ಸ್‌ನಲ್ಲಿ ಅಜೇಯ 100 ರನ್ ಗಳಿಸಿದ್ದರು. ಒಂದೇ ಪಂದ್ಯದಲ್ಲಿ ಶತಕ ಮತ್ತು ಐದು ವಿಕೆಟ್ ಕಬಳಿಸಿದ ದಕ್ಷಿಣ ಆಫ್ರಿಕಾದ ನಾಲ್ಕನೇ ಆಟಗಾರ ಎಂಬ ದಾಖಲೆಯನ್ನು ಕೂಡ ಅವರು ಬರೆದಿದ್ದಾರೆ. ಪದಾರ್ಪ ಪಂದ್ಯಲ್ಲಿ 153 ರನ್ ಹೊಡೆದ ಲುಹಾನ್‌ಡ್ರೆ ಪ್ರಿಟೋರಿಯಸ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
60 overs have been bowled as we're into the second session of Day 4 🌟.
— Proteas Men (@ProteasMenCSA) July 1, 2025
The Proteas Men edge closer with just 1 wicket to victory! 💪🔥
Zimbabwe are under pressure at 181/9, as the bowlers continue to dominate. 🇿🇦🏏 #WozaNawe pic.twitter.com/5XtLNohqtR
ಇದನ್ನೂ ಓದಿ IND vs ENG 2nd Test: ಹೇಗಿರಬಹುದು ದ್ವಿತೀಯ ಟೆಸ್ಟ್‌ಗೆ ಭಾರತ ಆಡುವ ಬಳಗ?
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ, ಮೊದಲ ಇನಿಂಗ್ಸ್; 9ಕ್ಕೆ418 ಡಿಕ್ಲೇರ್ಡ್. ಜಿಂಬಾಬ್ವೆ, ಮೊದಲ ಇನಿಂಗ್ಸ್ 251. ದಕ್ಷಿಣ ಆಫ್ರಿಕಾ, ಎರಡನೇ ಇನಿಂಗ್ಸ್: 369; ಜಿಂಬಾಬ್ವೆ: 66.2 ಓವರುಗಳಲ್ಲಿ 208 ಆಲೌಟ್