ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijayapura (Indi) news: ಕರ್ನಾಟಕ ರಾಜ್ಯದ ಪಡನೂರ, ಮಹಾರಾಷ್ಟ್ರ ರಾಜ್ಯದ ಅಂಕಲಗಿ ನಡುವೆ ಭೀಮಾನದಿಗೆ ಸೇತುವೆ: 65.40 ಕೋಟಿ ರೂ ಅನುದಾನ

ಜನರ ಸೇವೆಯೇ ಜನಾರ್ಧನ ಸೇವೆ ಎಂದು ಇಂಡಿ ಸಾಕಷ್ಟು ಹಿಂದುಳಿದ ಭಾಗ ಭೀಮಾತೀರದ ಭಾಗದಲ್ಲಿ ಅನಧಿಕೃತ ಚಟುವಟಿಕೆಗಳು ಭೀಮೆಯಲ್ಲಿ ಯಥೇಚವಾಗಿ ನಡೆಯುತ್ತಿದ್ದವು ಇಂತಹ ವುಗಳಿಗೆ ಕಡಿವಾಣ ಹಾಕಿ ಶಾಂತಿ,ಸಮಾಧಾನ ಹೃದಯ ಬಂಧುತ್ವದ ಮನಸ್ಸುಗಳನ್ನು ಕಟ್ಟುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲರು ಮಾತ್ರ

Profile Ashok Nayak Mar 30, 2025 10:46 PM

ಶರಣಬಸಪ್ಪಾ.ಎನ್ ಕೆ.

ಇಂಡಿ: ಮನಸ್ಸು ಮಾಡಿದರೆ ಏನೆಲ್ಲಾ ಮಾಡಲು ಸಾಧ್ಯ ಎಂದು ಸದ್ದಿಲ್ಲದೆ ಕೆಲಸ ಕಾರ್ಯ ಗಳನ್ನು ಮಾಡುತ್ತಾ ಸಾರ್ವಜನಿಕ ಮನಸ್ಸಿನಲ್ಲಿ ಸದಾ ಸ್ಮರಿಸುವ ಹಾಗೆ ಗಡಿ ಭಾಗ ನಂಜುಂಡಪ್ಪ ವರದಿ ಯಂತೆ ಅಭಿವೃದ್ದಿಯಿಂದ ವಂಚಿತವಾದ ಈ ಭಾಗ ಸರ್ವವಿಧದಲ್ಲಿ ಸುಧಾರಣೆ ಮಾಡುವ ಮೂಲಕ ನಡೆ, ನುಡಿಯಲ್ಲಿ ಸರಳ ಜೀವನ ಸಾಗಿಸುತ್ತಾ ಸಾರ್ಥಕ ಬದುಕು ಕಟ್ಟಿಕೊಳ್ಳುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲ ಶ್ರೀಸಿದ್ದಲಿಂಗನ ಗುಡಿಯಿಂದ ಜನದೇಗುಲದ ಪೀಠದೆಡೆಗೆ ನಮ್ಮ ಭಾಗದ ಜಪ್ರತಿನಿಧಿಯೋಬ್ಬರು ಮೊನ್ನೆ ನಡೆದ ಅಧಿವೇಶನದ ಸಭಾಪತಿ ಹುದ್ದೆ ಅಲಂಕರಿಸಿ ರುವುದು ಮತ್ತಷ್ಟು ಮತಕ್ಷೇತ್ರದ ಜನರಲ್ಲಿ ಹರ್ಷ ಮನೆ ಮಾಡಿದೆ.

ಜನರ ಸೇವೆಯೇ ಜನಾರ್ಧನ ಸೇವೆ ಎಂದು ಇಂಡಿ ಸಾಕಷ್ಟು ಹಿಂದುಳಿದ ಭಾಗ ಭೀಮಾತೀರದ ಭಾಗದಲ್ಲಿ ಅನಧಿಕೃತ ಚಟುವಟಿಕೆಗಳು ಭೀಮೆಯಲ್ಲಿ ಯಥೇಚವಾಗಿ ನಡೆಯುತ್ತಿದ್ದವು ಇಂತಹ ವುಗಳಿಗೆ ಕಡಿವಾಣ ಹಾಕಿ ಶಾಂತಿ,ಸಮಾಧಾನ ಹೃದಯ ಬಂಧುತ್ವದ ಮನಸ್ಸುಗಳನ್ನು ಕಟ್ಟುತ್ತಿರುವ ಶಾಸಕ ಯಶವಂತರಾಯಗೌಡ ಪಾಟೀಲರು ಮಾತ್ರ. ಇಂದು ತಾಲೂಕಿನಲ್ಲಿ 40 ದಶಕಗಳಿಂದ ಆಗದೆ ಇರುವ ಶ್ರೀ ಭೀಮಾಶಂಕರ ಸಹಕಾರಿ ಕಾರ್ಖಾನೆ, ಲಿಂಬೆ ಅಭಿವೃದ್ದಿ ಮಂಡ ಳಿ.ಕೆವ್ಹಿ.ಕೆ , ಹೇಲಿಪ್ಯಾಡ್ , ಮಿನಿವಿಧಾನಸೌಧಾ, ಅನೇಕ ಶಿಕ್ಷಣ ಸಂಸ್ಥೆಗಳನ್ನು ತಂದು ಶಿಕ್ಷಣಕಾಶಿ ಮಾಡುವದರ ಜೊತೆ ರಸ್ತೆಗಳು ಸುಧಾರಣೆ ಮಾಡಿದ್ದಾರೆ.

ಮಹಾರಾಷ್ಟ್ರ ಕರ್ನಾಟಕ ಮಧ್ಯ ಸೇತುವೆ ಸದನದಲ್ಲಿ ಪ್ರತಿಧ್ವನಿ

ಕರ್ನಾಟಕ ಮಹಾರಾಷ್ಟ್ರ ಎರಡು ರಾಜ್ಯಗಳು ಅತ್ಯೆಂತ ಸಮೀಪವಿರುವ ಗಡಿ ಭಾಗ ಪ್ರತಿನಿತ್ಯ ಕರ್ನಾಟಕ ಮಹಾರಾಷ್ಟ್ರ ಜನತೆ ಹೃದಯಗಳ ಜೋಡಿಸುವ ಕೊಂಡಿ ಇದ್ದಂತೆ ಹೀಗಾಗಿ ಅನೇಕ ದಶಕಗಳಿಂದ ನೆೆಗುದಿಗೆ ಬಿದ್ದ ಇಂಡಿ ತಾಲೂಕಿನ ಪಡನೂರ ಮತ್ತು ಮಹಾರಾಷ್ಟ್ರದ ಅಂಕಲಗಿ ಗ್ರಾಮದ ಮಧ್ಯ ಬರುವ ಭೀಮಾನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡುವದರಿಂದ್ದ ೨ ರಾಜ್ಯಗಳ ಸಾರ್ವಜನಿಕ ಸಂಪರ್ಕಕ್ಕಾಗಿ ಸುತ್ತಿ ಬಳಸಿ ಸಂಚರಿಸುವ ಹೆಚ್ಚಿನ ಸಮಯ ಹಾಗೂ ಇಂಧನ ಉಳಿತಾಯ ಆಗುವುದಲ್ಲದೆ ಸುತ್ತಮುತ್ತಲಿನ ಬಹುತೇಕ ೨ ಲಕ್ಷ ಅಧಿಕ ಜನಸಂಖ್ಯೆಗೆ ಅನುಕೂಲವಾಗುತ್ತದೆ. ಪ್ರಮುಖ ನಗರ ಪಟ್ಟಣಗಳಿಗೆ ದೈನಿಂದಿನ ವ್ಯಾಪಾರ, ವಹಿವಾಟು ಕೃಷಿ ಉತ್ಪನ ಸಾಗಾಟ, ಪುರಾತನ ಪ್ರಸಿದ್ದ ದೇವಸ್ಥಾನಗಳು, ಧಾರ್ಮಿಕ ಕ್ಷೇತ್ರಗಳು ಅಧ್ಯಾತ್ಮಿಕ ಸ್ಥಳಗಳು ತುರ್ತುವೈದ್ಯಕೀಯ ಚಿಕಿತ್ಸೆ ಪಡೆಯಲು ಇಂಡಿ ತಾಲೂಕಿನ ಪಡನೂರಿನಲ್ಲಿ ಭೀಮಾನದಿ ಸೇತುವೆಗೆ ರಾಜ್ಯ ಸರ್ಕಾರದಿಂದ ೬೫.೪೦ ಕೋಟಿ ರೂ .ಅನುಧಾನ ಅನುಧಾನ ಒದಗಿಸುವಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲ ಯಶಸ್ವಿಯಾಗಿದ್ದಾರೆ.

*

ಇದು ಬಹುದಶಕಗಳಿಂದ ಬೇಡಿಕೆ ಇತ್ತು ಕರ್ನಾಟಕ ,ಮಹಾರಾಷ್ಟ್ರ ಎರಡು ರಾಜ್ಯಗಳ ನಡುವೆ ಅವಿನಾಭಾವ ಸಂಬಂದಗಳಿವೆ. ಮಹಾರಾಷ್ಟ್ರ ಸೋಲಾಪೂರ, ಅಕ್ಕಲಕೋಟ ಇತರೆ ಮಹಾ ರಾಷ್ಟ್ರದ ಗ್ರಾಮಗಳಿಗೆ ಸಂಚರಿಸಬೇಕಾದರೆ ಸುತ್ತಾಡುವ ಪರಸ್ಥಿತಿ ಇತ್ತು ಸಮಯ ವ್ಯರ್ಥ ಇಂಧನ ಹಾಳು ಪ್ರತಿ ಕ್ಷಣ ,ನಿಮಿಷ್ಯದ ಬಗ್ಗೆ ಪರಿಜ್ಞಾನ ಇರಬೇಕು. ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ, ಅಧ್ಯಾತ್ಮಿಕ , ಪುಣ್ಯಕ್ಷೇತ್ರಗಳು ಇರುವದರಿಂದ ಮಹಾರಾಷ್ಟ್ರ ರಾಜ್ಯದ ಜನರು ಸುತ್ತಾಡುವ ಪರಸ್ಥಿತಿ ಇತ್ತು. ನಮ್ಮ ಭಾಗದ ಜನರು ಕೂಡಾ ತುರ್ತು ಚಿಕಿತ್ಸೆಗೆ ಅಲೆದಾಡುವದು ಕಷ್ಟವಾಗಿತ್ತು ಇಂದು ಸರಕಾರ ಬಹುದಿನಗಳ ಬೇಡಿಕೆ ಇಡೇರಿಸಿರುವದರಿಂದ ಎರಡೂ ಭಾಗದ ಜನರ ಪರವಾಗಿ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

ಶಾಸಕ ಯಶವಂತರಾಯಗೌಡ ಪಾಟೀಲ