ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ವಿಮಾನದ ಟಾಯ್ಲೆಟ್‍ನಲ್ಲಿ ಬೆತ್ತಲೆಯಾಗಿ ಕುಣಿದ ಕ್ಯಾಬಿನ್ ಸಿಬ್ಬಂದಿ; ಪ್ರಯಾಣಿಕರು ಶಾಕ್‌

ಸ್ಯಾನ್ ಫ್ರಾನ್ಸಿಸ್ಕೋದಿಂದ ಲಂಡನ್ ಹೀಥ್ರೂಗೆ ಪ್ರಯಾಣಿಸುತ್ತಿದ್ದ ಬ್ರಿಟಿಷ್ ವಿಮಾನದ ಬ್ಯುಸಿನೆಸ್ ಕ್ಲಾಸ್ ಟಾಯ್ಲೆಟ್‍ನಲ್ಲಿ ಸ್ಟೀವರ್ಡ್ ಎಂಬ ಕ್ಯಾಬಿನ್ ಸಿಬ್ಬಂದಿ ಬೆತ್ತಲೆಯಾಗಿ ನೃತ್ಯ ಮಾಡಿದ್ದು, ಆತನನ್ನು ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. ಇದೀಗ ತನಿಖೆ ನಡೆಯುತ್ತಿರುವಾಗಲೇ ಕ್ಯಾಬಿನ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ವಿಮಾನದ ಟಾಯ್ಲೆಟ್‍ನಲ್ಲಿ ಬೆತ್ತಲೆಯಾಗಿ ಕುಣಿದ ಕ್ಯಾಬಿನ್ ಸಿಬ್ಬಂದಿ

Profile pavithra May 31, 2025 6:01 PM

ಲಂಡನ್‌: ಇತ್ತೀಚೆಗೆ ಸ್ಯಾನ್‌ಫ್ರಾನ್ಸಿಸ್ಕೋದಿಂದ ಲಂಡನ್ ಹೀಥ್ರೂಗೆ ಪ್ರಯಾಣಿಸುತ್ತಿದ್ದ ಬ್ರಿಟಿಷ್ ಏರ್‌ವೇಸ್‌ (British Airways) ವಿಮಾನದ ಬ್ಯುಸಿನೆಸ್ ಕ್ಲಾಸ್ ಟಾಯ್ಲೆಟ್‍ನಲ್ಲಿ ಬೆತ್ತಲೆಯಾಗಿ ನೃತ್ಯ ಮಾಡುತ್ತಿದ್ದ ಕ್ಯಾಬಿನ್ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಸ್ಟೀವರ್ಡ್ ಎಂಬಾತ ಕರ್ತವ್ಯಕ್ಕೆ ಹಾಜರಾಗಲಿಲ್ಲ. ಅದು ಅಲ್ಲದೇ, ಪ್ರಯಾಣಿಕರಿಗೆ ಆತ ಸಮಯಕ್ಕೆ ಸರಿಯಾಗಿ ಊಟ ಮತ್ತು ಪಾನೀಯಗಳನ್ನು ನೀಡಲಿಲ್ಲ ಎಂದು ಸಹೋದ್ಯೋಗಿಗಳು ವಿಮಾನದಲ್ಲಿ ಅವನನ್ನು ಹುಡುಕಾಡಲು ಶುರುಮಾಡಿದ್ದಾರೆ. ಆದರೆ ಆ ವೇಳೆ ಆತ ಬೆತ್ತಲೆಯಾಗಿ ಕ್ಯಾಬಿನ್ ಬಾತ್‍ರೂಂನಲ್ಲಿ ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ. ಈತನ ವರಸೆ ನೋಡಿ ಎಲ್ಲರೂ ಶಾಕ್‌ ಆಗಿದ್ದಾರೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral News) ಆಗಿದೆ.

ವಿಮಾನವು ಅಟ್ಲಾಂಟಿಕ್ ಮೇಲೆ 37,000 ಅಡಿ ಎತ್ತರದಲ್ಲಿ ಪ್ರಯಾಣಿಸುತ್ತಿತ್ತು. ಆ ವೇಳೆ ಆತನ ಸ್ಥಿತಿಯನ್ನು ಕಂಡು ಇತರ ಸಿಬ್ಬಂದಿ ಸದಸ್ಯರು ಶಾಕ್ ಆಗಿದ್ದಾರೆ. ಆತ ಮಾದಕದ್ರವ್ಯ ಸೇವಿಸಿ ಇಂತಹ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಸಹದ್ಯೋಗಿಗಳು ಹೇಳಿದ್ದಾರೆ. ನಂತರ ಅವರು ಬೆತ್ತಲಾಗಿದ್ದ ಸಿಬ್ಬಂದಿಗೆ ಪೈಜಾಮಾಗಳನ್ನು ತೊಡಿಸಿ ನಂತರ ಅವನನ್ನು ಫಸ್ಟ್ ಕ್ಲಾಸ್‍ ಕ್ಯಾಬಿನ್‌ಗೆ ಕರೆದುಕೊಂಡು ಬರಲಾಯಿತು. ಹತ್ತುವರೆ ಗಂಟೆಗಳ ಪ್ರಯಾಣದಲ್ಲಿ ಉಳಿದ ಸಮಯವನ್ನು ಆತ ಅಲ್ಲೇ ಕಳೆದ.

ವಿಮಾನ ಲ್ಯಾಂಡ್ ಆದ ನಂತರ ಅವನನ್ನು ವ್ಹೀಲ್‌ಚೇರ್‌ನಲ್ಲಿ ವಿಮಾನದಿಂದ ಕೆಳಗೆ ಇಳಿಸಿ ನಂತರ ವೈದ್ಯಕೀಯ ಚಿಕಿತ್ಸೆ ನೀಡಲಾಯಿತು. ಆನಂತರ ವಿಮಾನ ನಿಲ್ದಾಣದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಆಂತರಿಕ ತನಿಖೆ ನಡೆಯುತ್ತಿರುವಾಗಲೇ ಕ್ಯಾಬಿನ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ ಎನ್ನಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಬೀದಿಗೆ ಕಸ ಎಸೆದ ಕಿಡಿಗೇಡಿಗಳ ಗ್ರಹಚಾರ ಬಿಡಿಸಿದ ವಿದೇಶಿ ಪ್ರವಾಸಿ; ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ವಿಡಿಯೊ

ಬ್ರಿಟಿಷ್ ಮಾಜಿ ವಿಮಾನ ಸಿಬ್ಬಂದಿಯೊಬ್ಬಳ ವಿಮಾನಯಾನಕ್ಕೆ ಸಂಬಂಧಿತ ವಿವಾದದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ದಕ್ಷಿಣ ಲಂಡನ್‌ನ ಕೌಲ್ಸ್‌ಡನ್‌ನ 21 ವರ್ಷದ ಷಾರ್ಲೆಟ್ ಮೇ ಲೀ ಶ್ರೀಲಂಕಾಕ್ಕೆ £1.2 ಮಿಲಿಯನ್ ಮೌಲ್ಯದ ಗಾಂಜಾವನ್ನು ಕಳ್ಳ ಸಾಗಣೆ ಮಾಡಿದ ಆರೋಪದ ಮೇಲೆ ಆಕೆಯನ್ನು ಕೊಲಂಬೊ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಮೇ 11ರಂದು ಬ್ಯಾಂಕಾಕ್‌ನಿಂದ ಬಂದ ನಂತರ ಲೀಯನ್ನು ಬಂಧಿಸಲಾಯಿತು. ಶ್ರೀಲಂಕಾದ ಪೊಲೀಸರು ಆಕೆಯ ಸೂಟ್‌ಕೇಸ್‌ನಲ್ಲಿ 46 ಕೆಜಿ 'ಕುಶ್' ಎಂಬ ಗಾಂಜಾವನ್ನು ಪತ್ತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.