rcb victory parade: ಇಂದು ಮಧ್ಯಾಹ್ನ ಬೆಂಗಳೂರಿನಲ್ಲಿ ಆರ್‌ಸಿಬಿ ತಂಡದ ವಿಜಯಯಾತ್ರೆ
ಮಂಗಳವಾರದಂದೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ. ಮಕ್ಕಳು, ಯುವಕರು, ಗೃಹಿಣಿಯರು, ಮಧ್ಯವಯಸ್ಕರು, ಇಳಿ ವಯಸ್ಸಿನ ಅಭಿಮಾನಿಗಳೂ ಮನೆಯಿಂದ ಹೊರಗೆ ಬಂದು ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಲಕ್ಷಾಂತರ ಅಭಿಮಾನಿಗಳು ಒಮ್ಮೆಗೇ ರಸ್ತೆಗೆ ಇಳಿದಿದ್ದರಿಂದ ನಗರದ ಹಲವಡೆ ಮಧ್ಯರಾತ್ರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.


ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ(IPL Final 2025) ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs PBKS Final) ತಂಡವು ಕೊನೆಗೂ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಯಶಸ್ವಿಯಾಗಿದೆ. ಮಂಗಳವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಎದುರು 6 ರನ್‌ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಟ್ರೋಫಿ ಗೆದ್ದು ಬೀಗಿತ್ತು. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಇಂದು(ಬುಧವಾರ) ಆರ್‌ಸಿಬಿ ವಿಜಯಯಾತ್ರೆ(rcb victory parade) ನಡೆಯಲಿದೆ. ಟ್ರೋಫಿ ಜತೆ ತಂಡದ ಆಟಗಾರರು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ.
ಇಂದು ಮಧ್ಯಾಹ್ನ 3.30ಕ್ಕೆ ಬೆಂಗಳೂರು ತಂಡದ ವಿಜಯಯಾತ್ರೆ ನಡೆಯಲಿದ್ದು, ವಿಧಾನಸೌಧದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ವಿಜಯಯಾತ್ರೆ ನಡೆಯಲಿದೆ. ಈ ವಿಜಯಯಾತ್ರೆಯಲ್ಲಿ ಭಾರೀ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ.
ಮಂಗಳವಾರದಂದೇ ಆರ್‌ಸಿಬಿ ಅಭಿಮಾನಿಗಳ ಸಂಭ್ರಮಕ್ಕೆ ಎಲ್ಲೆಯೇ ಇರಲಿಲ್ಲ. ಮಕ್ಕಳು, ಯುವಕರು, ಗೃಹಿಣಿಯರು, ಮಧ್ಯವಯಸ್ಕರು, ಇಳಿ ವಯಸ್ಸಿನ ಅಭಿಮಾನಿಗಳೂ ಮನೆಯಿಂದ ಹೊರಗೆ ಬಂದು ಆರ್‌ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಿದ್ದರು. ಲಕ್ಷಾಂತರ ಅಭಿಮಾನಿಗಳು ಒಮ್ಮೆಗೇ ರಸ್ತೆಗೆ ಇಳಿದಿದ್ದರಿಂದ ನಗರದ ಹಲವಡೆ ಮಧ್ಯರಾತ್ರಿಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
🚨 RCB Victory Parade in Bengaluru ‼️
— Royal Challengers Bengaluru (@RCBTweets) June 4, 2025
This one’s for you, 12th Man Army.
For every cheer, every tear, every year.
𝐋𝐨𝐲𝐚𝐥𝐭𝐲 𝐢𝐬 𝐑𝐨𝐲𝐚𝐥𝐭𝐲 𝐚𝐧𝐝 𝐭𝐨𝐝𝐚𝐲, 𝐭𝐡𝐞 𝐜𝐫𝐨𝐰𝐧 𝐢𝐬 𝐲𝐨𝐮𝐫𝐬.🏆
More details soon… pic.twitter.com/fMWuCGkVWX
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 184 ರನ್ ಗಳಿಸಲಷ್ಟೇ ಶಕ್ತವಾಗಿ 6 ರನ್ ಅಂತರದಿಂದ ಸೋಲೊಪ್ಪಿಕೊಂಡಿತು. ಕೊನೆಯವರೆಗೂ ಹೋರಾಡಿದ ಶಶಾಂಕ್ ಸಿಂಗ್ ಅಜೇಯ 61 ರನ್ ಗಳಿಸಿದರು.