Self Harming: ಹಲ್ಲು ಕಳೆದುಕೊಂಡು ನೊಂದ ವಿದ್ಯಾರ್ಥಿ ಆತ್ಮಹತ್ಯೆ
ಅಪಘಾತದಲ್ಲಿ 17 ಹಲ್ಲುಗಳನ್ನು ಈತ ಕಳೆದುಕೊಂಡಿದ್ದ. ಸದಾ ಆಸ್ಪತ್ರೆಗೆ ಹೋಗಿ ಬರುವುದರಿಂದ ಮನನೊಂದಿದ್ದ ಈ ಯುವಕ, ಜೀವನದಲ್ಲಿ ಉಂಟಾದ ಶಾರೀರಿಕ ಮತ್ತು ಮಾನಸಿಕ ಸಂಕಷ್ಟವನ್ನು ಎದುರಿಸಲಾಗದೆ ಆತ್ಮಹತ್ಯೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.


ಚಿಕ್ಕಮಗಳೂರು: ಅಪಘಾತದಲ್ಲಿ ಹಲ್ಲುಗಳನ್ನು (teeth) ಕಳೆದುಕೊಂಡಿದ್ದ ಯುವಕ ಈ ಬಗ್ಗೆ ಚಿಂತಿಸಿ ನೊಂದು ಆತ್ಮಹತ್ಯೆ (Self harming) ಮಾಡಿಕೊಂಡ ಘಟನೆ ಚಿಕ್ಕಮಗಳೂರಿನ (chikkamagaluru news) ಕೊಪ್ಪದಿಂದ ವರದಿಯಾಗಿದೆ. ಕೊಪ್ಪ ಪಟ್ಟಣದ ಐಟಿಐ ಕಾಲೇಜಿನಲ್ಲಿ ಮೊದಲ ವರ್ಷದ ತರಗತಿಯಲ್ಲಿ ವ್ಯಾಸಂಗ (Student) ಮಾಡುತ್ತಿದ್ದ ವಿಘ್ನೇಶ್ ಮೃತಪಟ್ಟ ಯುವಕ. ಈತ ಕಳೆದ ನಾಲ್ಕು ವರ್ಷಗಳ ಹಿಂದೆ ಒಂದು ಅಪಘಾತದಲ್ಲಿ ತನ್ನ 17 ಹಲ್ಲುಗಳನ್ನು ಕಳೆದುಕೊಂಡಿದ್ದ. ಅಂದಿನಿಂದ ಈ ಬಗ್ಗೆ ಕೊರಗುತ್ತಿದ್ದ ಎನ್ನಲಾಗಿದೆ.
ಅಪಘಾತದ ನಂತರ ಆಗಾಗ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದ ವಿಘ್ನೇಶ್, ಸತತ ಆರೋಗ್ಯ ಸಮಸ್ಯೆಗಳಿಂದ ಬೇಸತ್ತು ಈ ಕಠಿಣ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿದುಬಂದಿದೆ. ಸದಾ ಆಸ್ಪತ್ರೆಗೆ ಹೋಗಿ ಬರುವುದರಿಂದ ಮನನೊಂದಿದ್ದ ಈ ಯುವಕ, ಜೀವನದಲ್ಲಿ ಉಂಟಾದ ಶಾರೀರಿಕ ಮತ್ತು ಮಾನಸಿಕ ಸಂಕಷ್ಟವನ್ನು ಎದುರಿಸಲಾಗದೆ ಆತ್ಮಹತ್ಯೆಯ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆಯ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವಿಘ್ನೇಶ್ ಈ ಕೃತ್ಯ ಎಸಗಿದ್ದಾನೆ. ಮನೆಗೆ ಮರಳಿದ ಕುಟುಂಬಸ್ಥರು ಈ ದುರಂತವನ್ನು ಕಂಡು ಆಕ್ರಂದಿಸಿದ್ದಾರೆ. ಸ್ಥಳೀಯ ಜಯಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಆತ್ಮಹತ್ಯೆಗೆ ನಿಖರ ಕಾರಣವನ್ನು ತಿಳಿಯಲು ತನಿಖೆ ಆರಂಭಿಸಿದ್ದಾರೆ. ವಿಘ್ನೇಶ್‌ನ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯಿಂದ ಭುವನಕೋಟೆ ಗ್ರಾಮದಲ್ಲಿ ಶೋಕದ ವಾತಾವರಣ ಮನೆ ಮಾಡಿದೆ. 17 ವರ್ಷದ ಬಾಲಕನ ಈ ಅಕಾಲಿಕ ಮರಣ ಕುಟುಂಬದವರಿಗೆ ತಾಳಲಾರದ ನೋವನ್ನು ಉಂಟುಮಾಡಿದೆ.
ಪ್ರಿಯತಮೆಯ ಕಣ್ಣ ಮುಂದೆಯೇ ರೌಡಿಶೀಟರ್‌ನ ಬರ್ಬರ ಕೊಲೆ
ಕೋಲಾರ: ಕೋಲಾರದಲ್ಲಿ ರೌಡಿಶೀಟರ್ ಒಬ್ಬನ ಭೀಕರವಾದ ಕೊಲೆ ನಡೆದಿದ್ದು, ಪ್ರಿಯತಮೆಯ ಕಣ್ಣ ಮುಂದೆಯೇ ಆತನನ್ನು ನೆಲಕ್ಕೆ ಕೆಡವಿಕೊಂಡು ಕೊಚ್ಚಿ ಕಲೆ ಮಾಡಲಾಗಿದೆ. ರೌಡಿಶೀಟರ್ ಶಿವಕುಮಾರ್ ಅಲಿಯಾಸ್ ತೇನ್ ಕೊಲೆಯಾದ ವ್ಯಕ್ತಿ. ತನ್ನ ಪ್ರಿಯತಮೆ ಜೊತೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಬೀಳಿಸಿ ಮಾರಕಾಸ್ತ್ರಗಳಿಂದ ಸಿಕ್ಕ ಸಿಕ್ಕಲ್ಲಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾರೆ. ಈ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನಲ್ಲಿ ನಡೆದಿದೆ.
ಮಾರಿಕೊಪ್ಪಂನ ರಿವೀಟರ್ಸ್ ಲೈನ್ ನಿವಾಸಿ ಶಿವಕುಮಾರ್‌ನನ್ನು ಬೈಕ್‌ಗಳಲ್ಲಿ ಬಂದಿದ್ದ ನಾಲ್ವರು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪ್ರಿಯತಮೆ ಜೊತೆ ಕಾಮಸಮುದ್ರಕ್ಕೆ ಹೋಗುತ್ತಿರುವಾಗ ದುಷ್ಕರ್ಮಿಗಳು ಅಡ್ಡಗಟ್ಟಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಕುರಿತು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೌಡಿಶೀಟರ್ ಜೊತೆಗಿದ್ದ ಪ್ರಿಯತಮೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಕೊಲೆಯಾದ ಶಿವಕುಮಾರ್ ಆಂಡರ್ಸನ್ ಪೇಟೆ ಠಾಣೆಯ ರೌಡಿಶೀಟರ್ ಎಂದು ತಿಳಿದುಬಂದಿದೆ. ಶಿವಕುಮಾರ್ ವಿರುದ್ಧ 3 ಕೊಲೆ ಮತ್ತು ಹಲ್ಲೆ ಪ್ರಕರಣಗಳು ಇದ್ದವು.
ಇದನ್ನೂ ಓದಿ: Murder Case: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ, ಕೊಲೆ ಹಿಂದೆ ಲವ್ ಸ್ಟೋರಿ