ತೆರಿಗೆ ಮಿತಿಯನ್ನು 12 ಲಕ್ಷಕ್ಕೆ ಏರಿಸಿರುವುದೇ ಕೇಂದ್ರ ಬಜೆಟ್ ಹೆಗ್ಗಳಿಕೆ : ಡಾ.ಎಂ.ಸಿ.ಸುಧಾಕರ್ ವ್ಯಂಗ್ಯ
ಬಿಜೆಪಿ ನಾಯಕರು ನಮ್ಮದು 50 ಲಕ್ಷಕೋಟಿಯ ಬೃಹತ್ ಬಜೆಟ್ ಎಂದು ದೊಡ್ಡದಾಗಿ ಹೇಳಿ ಕೊಳ್ಳು ತ್ತಿದ್ದಾರೆ. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ ಎಂದು ತಿವಿದ ಸಚವರು ತೆರಿಗೆ ಕಡಿತ ದಿಂದ ಎಷ್ಟು ಜನಕ್ಕೆ ಇದರ ಅನುಕೂಲ, ಆಗುತ್ತದೆ ಎಂಬುದು ಜನಕ್ಕೆ ಗೊತ್ತಿಲ್ಲ. 140 ಕೋಟಿ ಜನಸಂಖ್ಯೆ ಯಲ್ಲಿ ಕೇವಲ 3.90ಕೋಟಿ ಮಂದಿ ಮಾತ್ರ ತೆರಿಗೆ ವ್ಯಾಪ್ತಿಗೆ ಬರುತ್ತಾರೆ
ಚಿಕ್ಕಬಳ್ಳಾಪುರ : ಕೇಂದ್ರ ಸರಕಾರ 2025ರ ಬಜೆಟ್‌ನಲ್ಲಿ ಆದಾಯ ತೆರಿಗೆ ಮಿತಿಯನ್ನು 12ಲಕ್ಷಕ್ಕೆ ಏರಿಸಿರುವುದೇ ದೊಡ್ಡ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆ. 140 ಕೋಟಿ ಜನಸಂಖ್ಯೆಯಲ್ಲಿ ಎಷ್ಟು ಪರ್ಸೆಂಟ್ ಜನಕ್ಕೆ ಇದರಿಂದ ಅನುಕೂಲವಾಗಿದೆ ಎಂಬುದನ್ನು ಜನತೆಗೆ ತಿಳಿಸಬೇಕು. ಕೂಲಿ ಕಾರ್ಮಿಕರು ಬಡವರಿಗೆ ಇದರಿಂದ ಏನೇನೂ ಲಾಭವಾಗಿಲ್ಲ ಎಂದು ವ್ಯಂಗ್ಯವಾಡಿದರು.
ಗೌರಿಬಿದನೂರಿನಲ್ಲಿ ನಡೆದ ಹೆಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮ ದಲ್ಲಿ ಭಾಗಿಯಾದ ನಂತರ ಮಾಧ್ಮದವರೊಂದಿಗೆ ಮಾತನಾಡಿದರು.
ಬಿಜೆಪಿ ನಾಯಕರು ನಮ್ಮದು 50 ಲಕ್ಷಕೋಟಿಯ ಬೃಹತ್ ಬಜೆಟ್ ಎಂದು ದೊಡ್ಡದಾಗಿ ಹೇಳಿ ಕೊಳ್ಳುತ್ತಿದ್ದಾರೆ. ರಾಜ್ಯಕ್ಕೆ ಏನು ಕೊಟ್ಟಿದ್ದಾರೆ ಎಂಬುದನ್ನು ಹೇಳಲಿ ಎಂದು ತಿವಿದ ಸಚವರು ತೆರಿಗೆ ಕಡಿತದಿಂದ ಎಷ್ಟು ಜನಕ್ಕೆ ಇದರ ಅನುಕೂಲ, ಆಗುತ್ತದೆ ಎಂಬುದು ಜನಕ್ಕೆ ಗೊತ್ತಿಲ್ಲ. 140 ಕೋಟಿ ಜನಸಂಖ್ಯೆಯಲ್ಲಿ ಕೇವಲ 3.90ಕೋಟಿ ಮಂದಿ ಮಾತ್ರ ತೆರಿಗೆ ವ್ಯಾಪ್ತಿಗೆ ಬರುತ್ತಾರೆ.ಉಳಿದವರ ಪಾಡೇನು? ಇವರಿಗೆ ಬಡವರ ಬಗ್ಗೆ ಕಾಳಜಿ ಇದ್ದಿದ್ದೇ ಆದಲ್ಲಿ ಅವರು ಬೆಳೆಸುವ ವಸ್ತುಗಳ ಮೇಲಿನ ಜಿಎಸ್ಟಿ ಕಡಿಮೆ ಮಾಡಿದ್ದರೆ ಮಹದುಪಕಾರ, ಅನುಕೂಲ ಆಗುತ್ತಿತ್ತು ಎಂದು ಬಿಜೆಪಿ ನಾಯಕರ ಕಾಲೆಳೆದರು.
ರಾಜ್ಯದ ಬಿಜೆಪಿ ಸಂಸದರನ್ನು ಕೇಳುತ್ತೇನೆ. ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕ ರಾಜ್ಯಕ್ಕೆ ಕೇಂದ್ರದ ಕೊಡುಗೆಯೇನು?.
ಕಳೆದ ವರ್ಷದ ಬಜೆಟ್‌ನಲ್ಲಿ ಮಹಾದಾಯಿ ಯೋಜನೆಗೆ, ಮೇಕೆದಾಟಿಗೆ ೫ಸಾವಿರ ಕೋಟಿ ನೀಡು ವುದಾಗಿ ಹೇಳಿದ್ದರು. ಈಗ ಅದರ ಪ್ರಸ್ತಾಪವಿಲ್ಲ.ಫ್ರೀ ಬಜೆಟ್ ಸಭೆಯಲ್ಲಿ ಕೃಷ್ಣ ಬೈರೇಗೌಡ ಹೋಗಿ ದ್ದರು. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ನ್ಯಾಯ ಕೇಳಿದಾರೆ.ಮತ್ತದೇ ಮಲತಾಯಿ ಧೋರಣೆ ಪ್ರಕಟಿಸಿದ್ದಾರೆ. ತಾವೇ ಬುದ್ದಿವಂತರು ಎಂದು ತೋರಿಸಲು ಭಾರೀ ಕಸರತ್ತು ನಡೆಸಿದ್ದಾರೆ. ನನ್ನ ಪ್ರಕಾರ ಇದೊಂದು ನಿರಾಶಾದಾಯಕ ಬಜೆಟ್.ಬಿಹಾರ್ ಮತ್ತು ಆಂದ್ರ ರಾಜ್ಯದ ಬೆಂಬಲದ ಮೇಲೆ ಕೇಂದ್ರ ಸರ್ಕಾರ ನಿಂತಿದೆ.ಇವರಿಗೆ ನಮ್ಮ ತೆರಿಗೆ ಮಾತ್ರ ಬೇಕು. ರಾಜ್ಯದ ಅಭಿವೃದ್ಧಿಗೆ ಹಣ ಕೊಡಬಾ ರದಾ ಎಂದು ಪ್ರಶ್ನಿಸಿದರು.
ರಾಜಕಾರಣದಲ್ಲಿ ಹಲವಾರು ಸಂದರ್ಭಗಳಲ್ಲಿ ರಾಜಕಾರಣಿಗಳು ಪ್ರಮುಖ ತೀರ್ಮಾನ ತೆಗೆದು ಕೊಳ್ಳುತ್ತಾರೆ. ಸಂಸದ ಡಾ.ಕೆ.ಸುಧಾಕರ್ ಸೇರಿ ಬಿಜೆಪಿಯಲ್ಲಿ ಪಕ್ಷದಲ್ಲಿ ಆಂತರಿಕ ಸಮಸ್ಯೆ ಬಹಳವೇ ಉಲ್ಬಣಗೊಂಡಿದೆ.ಅಭಿಪ್ರಾಯಬೇಧ ಸಾಕಷ್ಟಿದೆ.ಹಿಂದೆ ಸುಧಾಕರ್ ಅವರು ಕಾಂಗ್ರೆಸ್‌ನಲ್ಲಿದ್ದಾಗ ಅಧಿಕಾರದ ಆಸೆಗೆ ಬಿದ್ದು ಪಕ್ಷ ಬಿಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಸಲಹೆ ನೀಡಿದ್ದಾರೆ.ಅಧಿಕಾರದಾಸೆಯಿಂದ ಅವರ ಮಾತು ಧಿಕ್ಕರಿಸಿ ಬಿಜೆಪಿ ಸೇರಿದ್ದಾರೆ.
ಈಗ ಅಲ್ಲಿ ಅವರಿಗಾದ ಹಿನ್ನಡೆಯಲ್ಲಿ ಹೀಗೆ ಮಾತಾಡುತ್ತಿದ್ದಾರೆ.ಅಧಿಕಾರ ಬಯಸಿ ಹೋಗಿರುವ ಇವರಿಗೆ ಪಕ್ಷದ ಬೆಳವಣಿಗೆಗಳು ಬೇಸರ ತರಿಸಿರಬಹುದು ಅಷ್ಟೆ.ಅವರು ಕಾಂಗ್ರೆಸ್‌ಗೆ ಬರುತ್ತಾರೆ ಎಂಬುದೆಲ್ಲಾ ಸುಳ್ಳು.ಅಧಿಕಾರ ಬಿಟ್ಟು ಬರುವ ರಾಜಕಾರಣಿಗಳು ಇವತ್ತು ಬಹಳವೇ ವಿರಳ.ಸಂಸದ ಸುಧಾಕರ್ ಅವರದ್ದು ಕೇವಲ ತಂತ್ರಗಾರಿಕೆ ಅಷ್ಟೆ. ಪಕ್ಷದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಈರೀತಿಯ ತಂತ್ರಗಾರಿಕೆ ಮಾಡುತ್ತಾರೆ.ಅವರು ಕಾಂಗ್ರೆಸ್ ಸೇರುವ ಮಾತೇ ಇಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದರು.