ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Karunya Ram: ಭಕ್ತರು ತಿಂದು ಬಿಟ್ಟಿದ್ದ ತಟ್ಟೆ ಎತ್ತುತ್ತಿರುವ ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ: ಏನಾಯಿತು?

ಅನೇಕ ಸೆಲೆಬ್ರಿಟಿಗಳು ಈಗಾಗಲೇ ಮಹಾಕುಂಭಕ್ಕೆ ಬಂದು ಪುಣ್ಯ ಸ್ನಾನ ಮಾಡಿದ್ದಾರೆ. ಇತ್ತೀಚೆಗಷ್ಟೆ ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಅನುಷಾ ರೈ ಕೂಡ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ ಭಾಗವಹಿಸಿದ್ದ ಕಾರುಣ್ಯಾ ರಾಮ್ ಕೂಡ ಪ್ರಯಾಗ್ ರಾಜ್ಗೆ ತೆರಳು ಪವಿತ್ರ ಸ್ನಾನ ಮಾಡಿದ್ದಾರೆ.

ಭಕ್ತರು ತಿಂದು ಬಿಟ್ಟಿದ್ದ ತಟ್ಟೆ ಎತ್ತುತ್ತಿರುವ ಬಿಗ್ ಬಾಸ್ ಕನ್ನಡ ಸ್ಪರ್ಧಿ

Karunya Ram

Profile Vinay Bhat Feb 22, 2025 3:52 PM

ಉತ್ತರ ಪ್ರದೇಶದ ಪ್ರಯಾಗ್ ರಾಜ್​ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕನ್ನಡದ ಅನೇಕ ತಾರೆಯರು ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಕಳೆದ ಒಂದು ತಿಂಗಳಿನಿಂದ ಉತ್ತರಪ್ರದೇಶದ ಪ್ರಯಾಗ್ ರಾಜ್​ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇದು ಕೊನೆಗೊಳ್ಳಲಿದ್ದು. ಹೀಗಾಗಿ ದೇಶ, ವಿದೇಶದಿಂದ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗಲು ಜನ ಪ್ರಯಾಗ್ ರಾಜ್​ಗೆ ಆಗಮಿಸುತ್ತಿದ್ದಾರೆ.

ಅನೇಕ ಸೆಲೆಬ್ರಿಟಿಗಳು ಸಹ ಈಗಾಗಲೇ ಮಹಾಕುಂಭಕ್ಕೆ ಬಂದು ಪುಣ್ಯ ಸ್ನಾನ ಮಾಡಿದ್ದಾರೆ. ಈ ಹಿಂದೆ ಕನ್ನಡದ ನಟಿ, ನಿರೂಪಕಿ ಅನುಶ್ರೀ, ರಾಜ್ ಬಿ ಶೆಟ್ಟಿ, ಕಿರಣ್ ರಾಜ್, ಶ್ರೀನಿಧಿ ಶೆಟ್ಟಿ, ಜಗ್ಗೇಶ್, ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಅನುಷಾ ರೈ ಸೇರಿ ಕನ್ನಡದ ಹಲವು ನಟ ನಟಿಯರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದರು. ಇದೀಗ ಕನ್ನಡ ಬಿಗ್ ಬಾಸ್ ಸೀಸನ್ 5 ರಲ್ಲಿ ಭಾಗವಹಿಸಿದ್ದ ಕಾರುಣ್ಯಾ ರಾಮ್ ಕೂಡ ಪ್ರಯಾಗ್ ರಾಜ್​ಗೆ ತೆರಳು ಪವಿತ್ರ ಸ್ನಾನ ಮಾಡಿದ್ದಾರೆ.

ಕಾರುಣ್ಯಾ ರಾಮ್ ಕನ್ನಡ ಚಲನಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಮೇಲುಕೋಟೆಯಲ್ಲಿ ಜನಿಸಿರುವ ಇವರು ವಜ್ರಕಾಯ ಮತ್ತು ಕಿರಿಗೂರಿನ ಗಯ್ಯಾಳಿಗಳು ಚಿತ್ರಗಳಲ್ಲಿನ ನಟನೆಯಿಂದ ಪರಿಚಿತರು. ಇವರೀಗ ತಮ್ಮ ಆಪ್ತರ ಜೊತೆ ಪ್ರಯಾಗ್‌ರಾಜ್‌ ಕಡೆ ಪ್ರಯಾಣ ಮಾಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಾರುಣ್ಯ ಫೋಟೋ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ಒಂದು ವಿಡಿಯೋ ಕೂಡ ಹಂಚಿಕೊಂಡಿದ್ದಾರೆ.

ಕಾರುಣ್ಯ ಅವರು ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಅವರು ದೇವಸ್ತಾನದಲ್ಲಿ ಭಕ್ತರು ಊಟ ಮಾಡಿದ ತಟ್ಟೆಯನ್ನು ಎತ್ತುತ್ತಿರುವುದನ್ನು ಕಾಣಬಹುದು. ಕಾರುಣ್ಯ ರಾಮ್ ಕಾಶಿಯಲ್ಲಿ ಪುಣ್ಯಸ್ನಾನ ಮಾಡಿ ಸೇವೆಯಲ್ಲಿ ಭಾಗಿಯಾಗಿದ್ದಾರೆ. ಕಾರುಣ್ಯ ಅವರಿಗೆ ದೇವರ ಮೇಲೆ ಅಪಾರ ಭಕ್ತಿ ಇದೆ. ಹೀಗಾಗಿ ಆಗಾಗ ಪುಣ್ಯಕ್ಷೇತ್ರಗಳಿಗೆ ತೆರಳಿ ಪ್ರಾರ್ಥನೆ ಮಾಡುತ್ತಾ ಇರುತ್ತಾರೆ. ಶಿವನಿಗೆ ಸಮರ್ಪಿತವಾದ ಶ್ರೀ ಕಾಶಿ ವಿಶ್ವನಾಥ ದೇವಾಲಯಕ್ಕೆ ನಟಿ ತೆರಳಿದ್ದು ಮಾತ್ರವಲ್ಲದೆ ಕಾಶಿಯಲ್ಲಿ ಪುಣ್ಯಸ್ನಾನ ಮಾಡಿ, ಭಕ್ತರು ಊಟ ಮಾಡಿದ ತಟ್ಟೆಯನ್ನು ಎತ್ತುವ ಮೂಲಕ ಸೇವೆಯಲ್ಲಿ ಭಾಗಿಯಾಗಿದ್ದಾರೆ.

ಇದೇ ವಿಡಿಯೋವನ್ನು ಕಾರುಣ್ಯ ತಮ್ಮ ಇನ್​ಸ್ಟಾಗ್ರಾಮ್ ​ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಕಾಶಿಯಲ್ಲಿ ಗಂಗಾ ಪುಣ್ಯ ಸ್ನಾನ ಮಾಡಿ, ಸೇವೆ ಮಾಡುವ ಭಾಗ್ಯ ಪಡೆದ ನಾನೇ ಪುಣ್ಯವಂತೆ.. ಹರ ಹರ ಮಹಾದೇವ’ ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ಸೋಷಿಯಲ್ ​ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ​ಆಗಿದ್ದು, ಧನ್ಯೋಸ್ಮಿ ಹರ ಹರ ಮಹಾದೇವ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

Bhagya Lakshmi Serial: ಭಾಗ್ಯ ಮಹಾ ನಿರ್ಧಾರ: ತಾಳಿ ತೆಗೆದು ತಾಂಡವ್ ಕೈಗೆ ಕೊಟ್ಟ ಭಾಗ್ಯ