ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BrahMos missile: ಆಪರೇಷನ್‌ ಸಿಂದೂರ್‌ನಲ್ಲಿ ಪರಾಕ್ರಮ ಮೆರೆದಿದ್ದ ಬ್ರಹ್ಮೋಸ್‌ ಖರೀದಿಗೆ ಕ್ಯೂನಲ್ಲಿವೆ ಘಟಾನುಘಟಿ ದೇಶಗಳು!

BrahMos supersonic cruise missile:ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPO ಮಶಿನೋಸ್ಟ್ರೋಯೆನಿಯಾ ನಡುವಿನ ಜಂಟಿ ಉದ್ಯಮದ ಮೂಲಕ ಅಭಿವೃದ್ಧಿಪಡಿಸಲಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. 'ಬ್ರಹ್ಮೋಸ್' ಎಂಬ ಹೆಸರು ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಸಂಯೋಜಿತ ರೂಪವಾಗಿದ್ದು, ಈ ಪಾಲುದಾರಿಕೆಯನ್ನು ಸಂಕೇತಿಸುತ್ತದೆ.

ಬ್ರಹ್ಮೋಸ್‌ ಖರೀದಿಗೆ ಕ್ಯೂನಲ್ಲಿವೆ ಘಟಾನುಘಟಿ ದೇಶಗಳು!

Profile Rakshita Karkera May 13, 2025 6:55 PM

ನವದೆಹಲಿ: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು(BrahMos supersonic cruise missile) ಪ್ರಯೋಗಿಸಲಾಗಿದೆ ಎಂಬ ವಿಚಾರ ವರದಿಯಾಗಿದೆ. ರಫೀಕಿ (ಶೋರ್ಕೋಟ್, ಜಾಂಗ್), ಮುರಿದ್ (ಚಕ್ವಾಲ್), ನೂರ್ ಖಾನ್ (ಚಕ್ಲಾಲಾ, ರಾವಲ್ಪಿಂಡಿ) ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ (ಕಸುರ್) ನಲ್ಲಿರುವ ಪಾಕಿಸ್ತಾನಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿತ್ತು . ದಾಳಿಯಲ್ಲಿ, ಸ್ಕಾರ್ಡು, ಭೋಲಾರಿ, ಜಕೋಬಾಬಾದ್ ಮತ್ತು ಸರ್ಗೋಧಾದಲ್ಲಿನ ವಾಯು ನೆಲೆಗಳು ಧ್ವಂಸಗೊಂಡಿದ್ದವು. ಇದೀಗ ಈ ಸೂಪರ್‌ ಸಾನಿಕ್‌ ಕ್ರೂಸ್‌ ಕ್ಷಿಪಣಿ ಖರೀದಿಗೆ ಘಟನಾನುಘಟಿ ದೇಶಗಳು ಮುಂದಾಗಿವೆ. ಹಾಗಾದರೆ ಕ್ಷಿಪಣಿ ಖರೀದಿಗೆ ಸರತಿ ಸಾಲಿನಲ್ಲಿರುವ ದೇಶಗಳಾವುವು? ಇಲ್ಲಿದೆ ಡಿಟೇಲ್ಸ್‌

ಬ್ರಹ್ಮೋಸ್ ಕ್ಷಿಪಣಿ ಎಂದರೇನು?

ಬ್ರಹ್ಮೋಸ್ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ರಷ್ಯಾದ NPO ಮಶಿನೋಸ್ಟ್ರೋಯೆನಿಯಾ ನಡುವಿನ ಜಂಟಿ ಉದ್ಯಮದ ಮೂಲಕ ಅಭಿವೃದ್ಧಿಪಡಿಸಲಾದ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯಾಗಿದೆ. 'ಬ್ರಹ್ಮೋಸ್' ಎಂಬ ಹೆಸರು ಭಾರತದ ಬ್ರಹ್ಮಪುತ್ರ ನದಿ ಮತ್ತು ರಷ್ಯಾದ ಮಾಸ್ಕ್ವಾ ನದಿಯ ಸಂಯೋಜಿತ ರೂಪವಾಗಿದ್ದು, ಈ ಪಾಲುದಾರಿಕೆಯನ್ನು ಸಂಕೇತಿಸುತ್ತದೆ. ಜನವರಿ 2022 ರಲ್ಲಿ ಮೂರು ಕರಾವಳಿ ರಕ್ಷಣಾ ಬ್ಯಾಟರಿಗಳಿಗಾಗಿ 32,000 ಕೋಟಿ ಒಪ್ಪಂದಕ್ಕೆ ಸಹಿ ಹಾಕಿರುವ ಫಿಲಿಪೈನ್ಸ್ ಪ್ರಸ್ತುತ ಬ್ರಹ್ಮೋಸ್‌ಗಾಗಿ ದೃಢೀಕೃತ ಒಪ್ಪಂದವನ್ನು ಹೊಂದಿರುವ ಏಕೈಕ ದೇಶವಾಗಿದೆ. ಮೊದಲ ಬ್ಯಾಟರಿಯನ್ನು ಏಪ್ರಿಲ್ 2024 ರಲ್ಲಿ ವಿತರಿಸಲಾಯಿತು. ಎರಡನೆಯ ಬ್ಯಾಟರಿ ವಿತರಣೆ ಈ ವರ್ಷ ನಡೆಯುವ ಸಾಧ್ಯತೆ ಇದೆ. ಇದರ ಹೊರತಾಗಿ ಬ್ರಹ್ಮೋಸ್‌ ಖರೀದಿಗೆ ಒಂದು ಡಜನ್‌ಗಿಂತಲೂ ಹೆಚ್ಚು ದೇಶಗಳು ಆಸಕ್ತಿ ತೋರಿವೆ.

ಇಂಡೋನೇಷ್ಯಾ: ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಖರೀದಿಸಲು ಇಂಡೋನೇಷ್ಯಾ 21,000ಕೋಟಿ ರೂ-29,000ಕೋಟಿ ರೂ. ಮೊತ್ತದ ಒಪ್ಪಂದದ ಬಗ್ಗೆ ಮಾತುಕತೆ ನಡೆಸುತ್ತಿದೆ.

ವಿಯೆಟ್ನಾಂ: ವಿಯೆಟ್ನಾಂ ತನ್ನ ಸೈನ್ಯ ಮತ್ತು ನೌಕಾಪಡೆ ಎರಡಕ್ಕೂ ಕ್ಷಿಪಣಿಗಳ ಪೂರೈಕೆಯನ್ನು ಒಳಗೊಂಡ ಸುಮಾರು 59,000ಕೋಟಿ ರೂ. ಮೊತ್ತದ ಒಪ್ಪಂದವನ್ನು ಯೋಜಿಸುತ್ತಿದೆ.

ಮಲೇಷ್ಯಾ: ಮಲೇಷ್ಯಾ ತನ್ನ ಸುಖೋಯ್ Su-30MKM ಫೈಟರ್ ಜೆಟ್‌ಗಳು ಮತ್ತು ಕೇದಾ-ವರ್ಗದ ಯುದ್ಧನೌಕೆಗಳಿಗೆ ಬ್ರಹ್ಮೋಸ್ ಕ್ಷಿಪಣಿಗಳ ಖರೀದಿಗೆ ಮುಂದಾಗಿದೆ.

ಥೈಲ್ಯಾಂಡ್, ಸಿಂಗಾಪುರ್, ಬ್ರೂನಿ: ಈ ಆಗ್ನೇಯ ಏಷ್ಯಾದ ದೇಶಗಳು ಬ್ರಹ್ಮೋಸ್‌ ಖರೀದಿಯಲ್ಲಿ ಅತ್ಯಂತ ಹೆಚ್ಚಾಗಿದ ಆಸಕ್ತಿ ತೋರಿಸಿವೆ ಮತ್ತು ಮಾತುಕತೆಯ ವಿವಿಧ ಹಂತಗಳಲ್ಲಿವೆ.

ಬ್ರೆಜಿಲ್, ಚಿಲಿ, ಅರ್ಜೆಂಟೀನಾ, ವೆನೆಜುವೆಲಾ: ಈ ಲ್ಯಾಟಿನ್ ಅಮೆರಿಕನ್‌ ದೇಶಗಳು ಕೂಡ ಬ್ರಹ್ಮೋಸ್‌ ಖರೀದಿ ಮೂಲಕ ತಮ್ಮ ರಕ್ಷಣಾ ಬಲವನ್ನುಹೆಚ್ಚಿಸಲು ಮುಂದಾಗಿವೆ.

ಈಜಿಪ್ಟ್, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕತಾರ್, ಓಮನ್: ಈ ಮಧ್ಯಪ್ರಾಚ್ಯ ದೇಶಗಳು ಸಹ ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಆಸಕ್ತಿ ತೋರಿವೆ. ಅವುಗಳಲ್ಲಿ ಕೆಲವು ದೇಶಗಳೊಂದಿಗೆ ಮಾತುಕತೆ ಮುಂದುವರಿದ ಹಂತಗಳಲ್ಲಿವೆ.

ದಕ್ಷಿಣ ಆಫ್ರಿಕಾ, ಬಲ್ಗೇರಿಯಾ: ದಕ್ಷಿಣ ಆಫ್ರಿಕಾ ಮತ್ತು ಬಲ್ಗೇರಿಯಾ ಸಂಭಾವ್ಯ ಖರೀದಿಗಾಗಿ ಮಾತುಕತೆಯ ವಿವಿಧ ಹಂತಗಳಲ್ಲಿವೆ.

ಈ ಸುದ್ದಿಯನ್ನೂ ಓದಿ: Operation Sindoor: ನೂರ್‌ ಖಾನ್‌ ವಾಯುನೆಲೆಯನ್ನು ನುಜ್ಜುಗುಜ್ಜು ಮಾಡಿದ ಬ್ರಹ್ಮೋಸ್‌; ಸ್ಯಾಟ್‌ಲೈಟ್‌ ಫೋಟೋ ರಿಲೀಸ್‌

ಬ್ರಹ್ಮೋಸ್ ಕ್ಷಿಪಣಿಯ ವ್ಯಾಪ್ತಿ ಏನು?

ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಆಡಳಿತ (MTCR) ಕ್ಕೆ ಅನುಗುಣವಾಗಿ ಆರಂಭದಲ್ಲಿ 290 ಕಿ.ಮೀ.ಗೆ ಸೀಮಿತಗೊಳಿಸಲಾಗಿತ್ತು, ಆದರೆ ಭಾರತ 2016 ರಲ್ಲಿ MTCR ಗೆ ಸೇರಿದ ನಂತರ ಭೂಮಿ ಮತ್ತು ಹಡಗು ಆಧಾರಿತ ಆವೃತ್ತಿಗಳಿಗೆ ಬ್ರಹ್ಮೋಸ್‌ನ ವ್ಯಾಪ್ತಿಯನ್ನು 800-900 ಕಿ.ಮೀ.ಗೆ ವಿಸ್ತರಿಸಲಾಗಿದೆ. ವಾಯು-ಉಡಾವಣಾ ಆವೃತ್ತಿಗಳು 450-500 ಕಿ.ಮೀ. ವ್ಯಾಪ್ತಿಯನ್ನು ಹೊಂದಿವೆ

ಬ್ರಹ್ಮೋಸ್ ಸಾಮರ್ಥ್ಯ ಏನು?

ಬ್ರಹ್ಮೋಸ್ ಒಂದು ಬಹುಮುಖ ಕ್ಷಿಪಣಿಯಾಗಿದ್ದು, ಇದು ಭೂಮಿ, ಸಮುದ್ರ ಮತ್ತು ವಾಯು-ಆಧಾರಿತ ಗುರಿಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಭೂ-ಆಧಾರಿತ ಟ್ರಾನ್ಸ್‌ಪೋರ್ಟರ್ ಎರೆಕ್ಟರ್ ಲಾಂಚರ್‌ಗಳು (TEL), ಹಡಗುಗಳು (ಲಂಬ ಮತ್ತು ಇಳಿಜಾರಾದ ಲಾಂಚರ್‌ಗಳು ಎರಡೂ), ಜಲಾಂತರ್ಗಾಮಿ ನೌಕೆಗಳು (ಮುಳುಗಿದ ಉಡಾವಣೆ) ಮತ್ತು ಯುದ್ಧ ವಿಮಾನಗಳಿಂದ (Su-30MKI ನಂತಹ) ಉಡಾಯಿಸಬಹುದು.