Janhvi Kapoor: ಶ್ರೀದೇವಿ ಪುತ್ರಿಯರ ಲಂಡನ್ ಪ್ರವಾಸ; ಮಸ್ತ್ ಮಸ್ತ್ ಫೋಟೋಸ್ಗೆ ಪೋಸ್ ಕೊಟ್ಟ ಸಿಸ್ಟರ್ಸ್
ಬಾಲಿವುಡ್ ನ ಬಹುಬೇಡಿಕೆಯ ನಟಿಯರಲ್ಲಿ ಜಾನ್ವಿ ಕಪೂರ್ ಕೂಡ ಒಬ್ಬರು. ಖ್ಯಾತ ಹಿರಿಯ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಅವರು ಸಿನಿಮಾ ಮತ್ತು ಫ್ಯಾಷನ್ ವಿಚಾರದಿಂದ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇವರು ಕೆಲಸಕ್ಕೆ ಬ್ರೇಕ್ ನೀಡಿ ಸದ್ಯ ಫಾರಿನ್ ಟ್ರಿಪ್ ಕೈಗೊಂಡಿದ್ದಾರೆ. ನಟಿ ತಮ್ಮ ಸಹೋದರಿ ಖುಷಿ ಕಪೂರ್ ಮತ್ತು ಶಿಖರ್ ಪಹಾರಿಯಾ ಜೊತೆ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಲಂಡನ್ ನಲ್ಲಿ ಖುಷಿಯ ಕ್ಷಣ ಕಳೆದ ಇವರ ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Janhvi Kapoor


ವೈರಲ್ ಆದ ಮತ್ತೊಂದು ಫೋಟೊದಲ್ಲಿ ನಟಿ ಜಾನ್ವಿ ಕಪೂರ್ ಅವರು ಲಂಡನ್ ನ ಉದ್ಯಾನವನದಲ್ಲಿ ಮಸ್ತ್ ಎಂಜಾಯ್ ಮಾಡಿದ್ದಾರೆ. ಜಾನ್ವಿ ಕಪೂರ್ ಬ್ಲ್ಯಾಕ್ ಕಲರ್ ಶೋಲ್ಡರ್ ಲೆಸ್ ಟಾಪ್ ಮತ್ತು ಡೇನಿಮ್ ಪ್ಯಾಂಟ್ ಧರಿಸಿದ್ದಾರೆ. ಇವರ ಬೋಲ್ಡ್ ಲುಕ್ ಪಡ್ಡೆಹುಡುಗರ ನಿದ್ದೆ ಕದಿಯುವಂತಿದೆ.

ನಟಿ ತನ್ನ ಸಹೋದರಿ ಖುಷಿ ಜೊತೆಗೆ ಫೋಟೊಗೆ ಪೋಸ್ ನೀಡಿದ್ದಾರೆ. ಲಂಡನ್ ನ ಬ್ರಿಡ್ಜ್ ಒಂದರ ಮೇಲೆ ಇವರಿಬ್ಬರು ಜೊತೆಯಾಗಿ ನಿಂತ ಫೋಟೊ ನೆಟ್ಟಿಗರ ಗಮನ ಸೆಳೆಯುವಂತೆ ಮಾಡಿದೆ. ಪಿಕ್ ನಿಕ್ ಸ್ಪಾಟ್ಗಳಲ್ಲಿ ಸುಂದರ ಕ್ಷಣಗಳನ್ನು ಕಳೆಯುತ್ತಾ ನಟಿ ಜಾನ್ವಿ ಮತ್ತು ಅವರ ಸಹೋದರಿ ಖುಷಿ ಎಂಜಾಯ್ ಮಾಡಿದ್ದಾರೆ.

ಜಾನ್ವಿ ಕಪೂರ್ ಅವರು ಲಂಡನ್ ನ ಪ್ರಖ್ಯಾತ ಪಿಕ್ ನಿಕ್ ಸ್ಪಾಟ್ಗೆ ಕೂಡ ಭೇಟಿ ನೀಡಿದ್ದು ಅಲ್ಲಿ ಸುಂದರ ಕ್ಷಣ ಕಳೆದಿದ್ದಾರೆ. ಸ್ಟ್ರಾಬೆರಿ, ದ್ರಾಕ್ಷಿ, ಚೆರಿ ಫ್ರೂಟ್, ಬಾಯ್ಲ್ಡ್ ಎಗ್ ವೈಟ್, ಕಿವಿ ಹಣ್ಣು, ಫ್ರೂಟ್ ಜ್ಯೂಸ್, ಕೇಕ್, ಪೇಸ್ಟ್ರೀ ಸೇರಿದಂತೆ ಅನೇಕ ತರತರದ ಸ್ಥಳೀಯ ಖಾದ್ಯಗಳನ್ನು ಸಹ ಸವಿದಿದ್ದಾರೆ. ಇವರು ಆಹಾದ ಖಾದ್ಯದ ಫೋಟೊ ಕೂಡ ಹಂಚಿಕೊಂಡಿದ್ದಾರೆ.

ವೈರಲ್ ಆದ ಇನ್ನೊಂದು ಫೋಟೊದಲ್ಲಿ ನಟಿ ಜಾನ್ವಿ ಕಪೂರ್ ಅವರು ಹಾರ್ಸ್ ರೈಡ್ (ಕುದುರೆ ಸವಾರಿ) ಮಾಡುತ್ತಿರುವುದು ಕಾಣಬಹುದು. ಸಾಮಾನ್ಯವಾಗಿ ನಟ ನಟಿಯರಿಗೆ ಕುದುರೆ ಸವಾರಿ ಬಲು ಇಷ್ಟವಾಗಲಿದ್ದು ನಟಿ ಜಾನ್ವಿ ಅವರು ಕೂಡ ಈ ರೈಡ್ ಅನ್ನು ಮನಸಾರೆ ಎಂಜಾಯ್ ಮಾಡಿದ್ದಾರೆ.

ಬಾಲಿವುಡ್ ಬ್ಯೂಟಿ ಕ್ವೀನ್ ನಟಿ ಜಾನ್ವಿ ಕಪೂರ್ ಅವರು ತಮ್ಮ ಸಹೋದರಿ ಖುಷಿ ಕಪೂರ್ ಜೊತೆ ಲಂಡನ್ ನಲ್ಲಿ ನೈಟ್ ಪಾರ್ಟಿ ಇವೆಂಟ್ಗೆ ತೆರಳಿದ್ದಾರೆ. ಇಬ್ಬರು ಸಹೋದರಿಯರು ಲಂಡನ್ ಪಬ್ಗೆ ಭೇಟಿ ನೀಡಿದ್ದು ಪಾರ್ಟಿ ಔಟ್ ಫಿಟ್ ನಲ್ಲಿ ಇಬ್ಬರು ಕೂಡ ಪ್ರಿಟಿಯಾಗಿ ಕಂಡಿದ್ದಾರೆ. ಸಿಂಪಲ್ಮೇಕಪ್ ಫ್ರೀ ಹೇರ್ ಸ್ಟೈಲ್ ನಲ್ಲಿ ನಟಿ ಜಾನ್ವಿ ಕಪೂರ್ ಅವರು ಹೆಚ್ಚು ಗ್ಲಾಮರಸ್ ಆಗಿ ಕಂಡಿದ್ದಾರೆ.

ಬಾಲಿವುಡ್ ನಟಿ ಜಾನ್ವಿ ಕಪೂರ್ ಸದಾ ತಮ್ಮ ಫ್ಯಾಶನ್ನಿಂದ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ತಮ್ಮ ಗೆಳೆಯ ಹಾಗೂ ಸಹೋದರಿ ಜೊತೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಜಾನ್ವಿ ಕಪೂರ್ ತನ್ನ ಗೆಳೆಯ ಶಿಖರ್ ಜೊತೆಗೆ ಕಳೆದ ಅವಿಸ್ಮರಣೀಯ ಕ್ಷಣಗಳ ಫೋಟೊ ಕೂಡ ವೈರಲ್ ಆಗಿದೆ. ಶಿಖರ್ ಪಹರಿಯಾ ಹಾಗೂ ಜಾನ್ವಿ ಒಟ್ಟಿಗೆ ಆಹಾರ ಖಾದ್ಯ ಸವಿಯುವ ದೃಶ್ಯ ಫೋಟೋದಲ್ಲಿ ಕಾಣಬಹುದು. ಈ ಮೂಲಕ ಇಬರಿ ಬ್ಬರು ಲವರ್ಸ್ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ. ಆದರೆ ಈ ಬಗ್ಗೆ ನಟಿ ಜಾನ್ಚಿ ಕಪೂರ್ ಯಾವುದೇ ಸ್ಪಷ್ಟನೆ ನೀಡಿಲ್ಲ.