Bollywood Actors: ಒಂದು ಕಾಲದಲ್ಲಿ ಸೂಪರ್ ಸ್ಟಾರ್ ಸೆಲೆಬ್ರಿಟಿಗಳು; ನಂತರ ಸಿನಿಮಾ ರಂಗಕ್ಕೆ ಗುಡ್ ಬೈ... ಇವರೇ ನೋಡಿ ಆ ನಟರು?
ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಕೆಲವು ನಟ ನಟಿಯರಿಗೆ ಸೆಲೆಬ್ರಿಟಿ ಪಟ್ಟ ತಂದುಕೊಟ್ಟರೆ ಇನ್ನು ಕೆಲವೊಬ್ಬರು ದುರದೃಷ್ಟ ಅನುಭವಿಸುವುದು ಇದೆ. ಸಿನಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದರೂ ಬಳಿಕ ಅವಕಾಶ ಸಿಗದೆ ಪೋಷಕ ನಟರಾಗಿ ಮಿಂಚಿದ್ದ ಅನೇಕ ನಟ- ನಟಿಯರನ್ನು ಕಂಡಿದ್ದೇವೆ. ಅಂತೆಯೇ ಒಂದು ಕಾಲದಲ್ಲಿ ಪ್ರಸಿದ್ಧ ನಟರಾದವರೂ ಸಿನಿ ಜರ್ನಿಯಲ್ಲಿ ದೂರ ಉಳಿದ ನಟರೂ ಇದ್ದಾರೆ..

Popular Actors


ಖ್ಯಾತ ನಟ ವಿವೇಕ್ ಮುಶ್ರನ್ ಅವರು ಸೌದಾಗರ್ ಎಂಬ ಸಿನಿಮಾ ಮೂಲಕ ಬಾಲಿವುಡ್ ಚಲನಚಿತ್ರೋದ್ಯಮಕ್ಕೆ ಪಾದಾರ್ಪಣೆ ಮಾಡಿ ಈ ಸಿನಿಮಾ ಹಿಟ್ ಲಿಸ್ಟ್ ಸೇರಿತ್ತು. ಬಳಿಕ ಫಸ್ಟ್ ಲವ್ ಲೆಟರ್ ಎಂಬ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಆದರೆ ಈ ಚಿತ್ರವು ಅಷ್ಟು ಹಿಟ್ ಆಗಲಿಲ್ಲ. 1992ರಲ್ಲಿ ಅವರು ಬೇವಾಫಾ ಸೆ ವಫಾದಲ್ಲಿ ಕಾಣಿಸಿಕೊಂಡು ಈ ಸಿನಿಮಾ ಕೂಡ ಫ್ಲಾಪ್ ಆಯಿತು. ಬಳಿಕ ಅಷ್ಟು ಸಿನಿಮಾ ಆಫರ್ ಸಿಗದೆ ಬಳಿಕ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಉಲ್ಬಾನ್, ಕಿಸ್ನಾ, ತಮಾಶಾ, ಬೇಗಂ ಜಾನ್ , ವೀರೆ ದಿ ವೆಡ್ಡಿಂಗ್ ಸೇರಿದಂತೆ ಅನೇಕ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.

90ರ ದಶಕದಲ್ಲಿ ನಟನೆ ಮೂಲಕ ಗುರುತಿಸಿಕೊಂಡಿದ್ದ ನಟ ಸೂಪರ್ಸ್ಟಾರ್ ಗೋವಿಂದ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಏಕಕಾಲದಲ್ಲಿ 10-12 ಚಲನಚಿತ್ರಗಳನ್ನು ನಿರ್ವಹಿಸಿ ಸೈ ಎನಿಸಿಕೊಂಡಿದ್ದರು. 90ರ ದಶಕದ ಎಲ್ಲ ಪ್ರಮುಖ ನಟಿಯರೊಂದಿಗೆ ಕೆಲಸ ಮಾಡಿದ್ದರು. 2000ದ ದಶಕದ ಆರಂಭದಲ್ಲಿ ಗೋವಿಂದ ಅವರ ಚಿತ್ರಗಳು ಸಾಧಾ ರಣ ಯಶಸ್ಸು ಕಂಡವು. 2019 ರಲ್ಲಿ ಅವರು ಅಲ್ಬೇಲಾ, ದಿಲ್ ನೆ ಫಿರ್ ಯಾದ್ ಕಿಯಾ, ಸ್ಯಾಂಡ್ ವಿಚ್, ಫ್ರೈಡೇ, ಹೇ ಬ್ರೋ, ಆ ಗಯಾ ಹೀರೋ, ರಂಗೀಲಾ ರಾಜಾ ಇತ್ಯಾದಿ ಸಿನಿಮಾಗಳು ಸಾಲು ಸಾಲು ಸೋಲನ್ನು ಕಂಡಿತು. ಬಳಿಕ ಅವರಿಗೆ ಅವಕಾಶ ಸಿಗಲೇ ಇಲ್ಲ. ಹೀಗಾಗಿ ಕೆಲವು ಟೆಲಿವಿಷನ್ ರಿಯಾಲಿಟಿ ಶೋನಲ್ಲಿ ಭಾಗಿಯಾದರು.

ಯಶ್ ಚೋಪ್ರಾ ಅವರ ಕಿರಿಯ ಮಗ ಮತ್ತು ಆದಿತ್ಯ ಚೋಪ್ರಾ ಅವರ ಸಹೋದರ ಉದಯ್ ಚೋಪ್ರಾ ಅವರು ಕೂಡ ಸಿನಿಮಾ ಇಂಡಸ್ಟ್ರಿಗೆ ಅನೇಕ ಕನಸು ಹೊತ್ತು ಬಂದಿದ್ದರು. ಇವರ ಅಭಿ ನಯದ ಮೊಹಬ್ಬತೇನ್ ಮತ್ತು ಧೂಮ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಪ್ಯಾರ್ ಇಂಪಾಸಿಬಲ್ ಚಿತ್ರ ಫ್ಲಾಪ್ ಆಗಿತ್ತು. ಬಳಿಕ ಅನೇಕ ಸಿನಿಮಾ ಅಂದು ಕೊಂಡ ಮಟ್ಟಕ್ಕೆ ಯಶಸ್ಸು ನೀಡಲಿಲ್ಲ. ಕೊನೆಗೆ 2013ರಲ್ಲಿ ಧೂಮ್ 3 ಸಿನಿಮಾದಲ್ಲಿ ಕೊನೆದಾಗಿ ಕಾಣಿಸಿಕೊಂಡಿದ್ದು ಈ ಸಿನಿಮಾ ಕೂಡ ಫ್ಲಾಪ್ ಆಗಿದೆ.

ಶೈನಿ ಅಹುಜಾ ಅವರು ಕೂಡ ಸಿನಿಮಾ ಇಂಡಸ್ಟ್ರಿಯಲ್ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ಅವರು ಹಜಾರೋನ್ ಖ್ವಾಯಿ ಶೇನ್ ಐಸಿ ಸಿನಿಮಾದಲ್ಲಿ ಅಭಿನಯಿಸಿದ್ದು ಈ ಸಿನಿಮಾದ ಅಭಿನಯಕ್ಕೆ ಅವರಿಗೆ ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಸಹ ದೊರಕಿತ್ತು. ಬಳಿಕ ಭೂಲ್ ಭುಲೈಯಾ ಸಿನಿಮಾ ಮೂಲಕವು ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇವರ ಅಭಿನಯದ ಗ್ಯಾಂಗ್ ಸ್ಟಾರ್, ಓ ಲಮ್ಹೆ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಆದರೆ 2009ರಲ್ಲಿ ಮನೆ ಕೆಲಸದವಳ ಮೇಲೆ ಲೈಂಗಿಕ ದೌರ್ಜನ್ಯ ಎಸೆದ ಆರೋಪದ ಬಳಿಕ ಇವರ ಫೇಮ್ ಕಣ್ಮರೆಯಾಗಿದೆ. ಬಳಿಕ 2017ರಲ್ಲಿ ಖೋಯಾ ಖೋಯಾ, ಹೈಜಾಕ್, ಧೀಮ್ ಧೀಮ್ , ಘೋಸ್ಟ್ ಇತರ ಎಲ್ಲ ಸಿನಿಮಾ ಫ್ಲಾಪ್ ಲಿಸ್ಟ್ ಸೇರಿದೆ.ಹೀಗಾಗಿ ಸಿನಿಮಾ ಅವಕಾಶ ಕಮ್ಮಿಯಾಗುತ್ತಾ ಹೋಗಿದೆ.

ಬಾಲಿವುಡ್ ಪ್ರತಿಭಾನ್ವಿತ ನಟರಲ್ಲಿ ಹರೀಶ್ ಕುಮಾರ್ ಕೂಡ ಒಬ್ಬರು. ಅವರು ಪ್ರೇಮ್ ಖೈದಿ ಸಿನಿಮಾದಲ್ಲಿ ಕರಿಷ್ಮಾ ಕಪೂರ್ ಜೊತೆ ಅಭಿನಯಿಸಿ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ಅವರು ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಅಭಿನಯಿಸಿದ್ದು ಕೆಲವು ಸಿನಿಮಾ ಹಿಟ್ ಆಗಿದ್ದು ಇನ್ನು ಕೆಲವು ಫ್ಲಾಪ್ ಆಗಿದೆ. ಬಳಿಕ 2018 ರಲ್ಲಿ ಹೀರೋ ಚಿತ್ರದಲ್ಲಿ ಕಾಣಿಸಿಕೊಂಡು ಅದು ಕೂಡ ಅಷ್ಟಾಗಿ ಯಶಸ್ಸು ಕಾಣದೆ ಸಿನಿಮಾ ದಿಂದ ದೂರ ಉಳಿದರು.