ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sitaare Zameen Par: ಆಮೀರ್‌ ಖಾನ್‌ ಸಿನಿಮಾ ನೋಡಿ ಸಲ್ಮಾನ್ ಖಾನ್ ರಿಯಾಕ್ಷನ್‌ ಹೇಗಿತ್ತು?

ಸಿತಾರೆ ಜಮೀನ್ ಪರ್ ಸಿನಿಮಾ ಬಿಡುಗಡೆ ಮಾಡುವ ಮುನ್ನ ಪ್ರೀಮಿಯರ್‌ ಶೋವನ್ನು ಆಯೋಜಿಸಲಾಗಿದೆ. ಈ ಪ್ರಿಮಿಯರ್ ಶೋಗಾಗಿ ಖ್ಯಾತ ನಟ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಪ್ರೀಮಿಯರ್‌ ಶೋನಲ್ಲಿ ನಟ ಸಲ್ಮಾನ್ ಖಾನ್ ಅವರು ಆಮಿರ್ ಹೊಸ ಸಿನಿಮಾದ ಬಗ್ಗೆ ಕೆಲ ವಿಚಾರವನ್ನು ಹಂಚಿಕೊಂಡಿದ್ದಾರೆ.

ಆಮೀರ್‌ ಖಾನ್‌ ಸಿನಿಮಾ ನೋಡಿ ಸಲ್ಮಾನ್ ಖಾನ್ ರಿಯಾಕ್ಷನ್‌ ಹೇಗಿತ್ತು?

Salman Khan and Aamir Khan

Profile Pushpa Kumari Jun 20, 2025 9:50 PM

ನವದೆಹಲಿ: ಬಾಲಿವುಡ್​​ ನಟ ಅಮೀರ್ ಖಾನ್‌ (Aamir Khan) ಅವರು ಸಾಕಷ್ಟು ಹಿಟ್ ಸಿನಿಮಾ ನೀಡಿ ಪ್ರೇಕ್ಷಕರ ಮನ ಗೆದ್ದ ನಟ ರಲ್ಲಿ ಇವರು ಒಬ್ಬರಾಗಿದ್ದಾರೆ. ಆದರೆ ಇತ್ತೀಚಿನ ಕೆಲ ವರ್ಷದಲ್ಲಿ ಇವರ ಸಿನಿಮಾ ಅಂದುಕೊಂಡ ಮಟ್ಟಕ್ಕೆ ಯಶಸ್ಸು ನೀಡಲಿಲ್ಲ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಥಗ್ಸ್ ಆಫ್ ಹಿಂದೂಸ್ತಾನ್ ಹಾಗೂ ಲಾಲ್ ಸಿಂಗ್ ಚಡ್ಡ ಸಿನಿಮಾ ಫ್ಲಾಪ್ ಆಗಿತ್ತು‌. ಇದೀಗ ಇವರ ನಟನೆಯ ಬಹುನಿರೀಕ್ಷಿತ ಸಿತಾರೆ ಜಮೀನ್ ಜೂನ್ 20ರಂದು ತೆರೆ ಕಂಡಿದೆ. ಈ ಸಿನಿಮಾವನ್ನು ಅವರೇ ಸ್ವತಃ ನಿರ್ಮಾಣ ಮಾಡುವುದರ ಜೊತೆಗೆ ಮುಖ್ಯಪಾತ್ರದಲ್ಲಿ ಅಮೀರ್ ಖಾನ್‌ ನಟಿಸಿದ್ದಾರೆ. ಹೀಗಾಗಿ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಕೂಡ ವ್ಯಕ್ತವಾಗುತ್ತಿದೆ. ಇದೀಗ ಈ ಸಿನಿಮಾ ಬಗ್ಗೆ ನಟ ಸಲ್ಮಾನ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ಸಿತಾರೆ ಜಮೀನ್ ಪರ್ ಸಿನಿಮಾ ಬಿಡುಗಡೆ ಮಾಡುವ ಮುನ್ನ ಪ್ರೀಮಿಯರ್ ಶೋವನ್ನು ಆಯೋಜಿಸಲಾಗಿದೆ. ಈ ಪ್ರೀಮಿಯರ್ ಶೋಗಾಗಿ ಖ್ಯಾತ ನಟ ಶಾರುಖ್ ಖಾನ್ ಹಾಗೂ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಈ ಮೂಲಕ ಅಮೀರ್ ಖಾನ್‌ ಅವರ ಹೊಸ ಸಿನಿಮಾ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದಾರೆ.

ಪ್ರೀಮಿಯರ್‌ ಶೋ ನಲ್ಲಿ ನಟ ಸಲ್ಮಾನ್ ಖಾನ್ ಅವರು ಅಮೀರ್ ಖಾನ್‌ ಹೊಸ ಸಿನಿಮಾದ ಬಗ್ಗೆ ಕೆಲ ವಿಚಾರವನ್ನು ಹಂಚಿ ಕೊಂಡಿದ್ದಾರೆ. ಸಿತಾರೆ ಜಮೀನ್ ಪರ್ ಸಿನಿಮಾ ಮಾಡುವ ಮೊದಲೇ ಅಮೀರ್ ಖಾನ್‌ ಅವರು ಈ ಕಥೆಯ ಬಗ್ಗೆ ತಿಳಿಸಲು ನನ್ನನ್ನು ಆಹ್ವಾನಿಸಿದ್ದರು. ಈ ಕಥೆ ಕೇಳಿ ನಿಜವಾಗಿಯೂ ಮನಸಾರೆ ಇಷ್ಟಪಟ್ಟೆ.. ನಾನು ಈ ಕಥೆಯನ್ನು ಸಿನಿಮಾ ಮಾಡ ಬೇಕೆಂದು ನಿರ್ಧರಿಸುವಾಗಲೇ ‌ಅಮೀರ್ ಖಾನ್‌ ತಾನು ಇದೇ ಕಥೆಯನ್ನು ಸಿನಿಮಾ ಮಾಡುವುದಾಗಿ ಮೊದಲೇ ಹೇಳಿ ಬಿಟ್ಟರು ಎಂದು ನಟ ಸಲ್ಮಾನ್ ಖಾನ್ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: Shivanna-Daali Movie: ಮತ್ತೆ ಅಬ್ಬರಿಸೋಕೆ ರೆಡಿ ಆಗ್ತಿದೆ ʼಟಗರುʼ ಜೋಡಿ; ಈ ಬಾರಿ ಶಿವಣ್ಣ-ಡಾಲಿ ಕಾಂಬಿನೇಶನ್‌ ಹವಾ ಹೇಗಿರುತ್ತೆ?

ಸಲ್ಮಾನ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದ ವಿಡಿಯೊ‌ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಇದಕ್ಕೆ ನಟ ಆಮಿರ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಅವರು ಈ ಸಿನಿಮಾ ಮಾಡುವುದಾಗಿ ತಿಳಿಸಿದ್ದರೆ ನಾನು ಇದಕ್ಕೆ ಒಪ್ಪುತ್ತಿದ್ದೆ. ಬಳಿಕ ಈ ಸಿನಿಮಾದಲ್ಲಿ ಸಣ್ಣ ಪಾತ್ರವಾದರೂ ಮಾಡುತ್ತಿದ್ದೆ ಎಂದು ಹೇಳಿದರು. ಪ್ರೀಮಿಯರ್‌ ಶೋ ನಲ್ಲಿ ನಟ ಸಲ್ಮಾನ್ ಖಾನ್ ಬ್ಲ್ಯಾಕ್ ಕಲರ್ ಔಟ್ ಫಿಟ್ ನಲ್ಲಿ ಫ್ಯಾಶನೇಬಲ್ ಆಗಿ ಕಂಡರೆ ಇನ್ನು ನಟ ಆಮೀರ್ ಖಾನ್‌ ವೈಟ್ ಜುಬ್ಬದಲ್ಲಿ ಕಾಣಿಸಿಕೊಂಡರು.

2007 ರ ತಾರೆ ಜಮೀನ್ ಪರ್ ಸಿನಿಮಾ ಹಿಟ್ ಫೇಮ್ ಬಳಿಕ ಸಿತಾರೆ ಜಮೀನ್ ಪರ್ ಸಿನಿಮಾ ಕೂಡ ಅಷ್ಟೇ ಮಟ್ಟಕ್ಕೆ ಜನರಿಗೆ ರೀಚ್ ಆಗುತ್ತದೆ ಎಂದು ನಿರೀಕ್ಷಿಸಲಾಗಿದೆ. ಸಿತಾರೆ ಜಮೀನ್ ಪರ್ ಸಿನಿಮಾವು ಸ್ಪ್ಯಾನಿಷ್ ಚಲನಚಿತ್ರ ಚಾಂಪಿಯನ್ಸ್ ಸಿನಿಮಾದ ರಿಮೇಕ್ ಆಗಿದ್ದು ಬ್ಯಾಸ್ಕೆಟ್‌ಬಾಲ್ ತರಬೇತುದಾರನ ಕಥೆಯನ್ನು ಇಲ್ಲಿ ತಿಳಿಸಲಾಗಿದೆ. ಈ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗುತ್ತಾ ಎಂದು ಕಾದು ನೋಡಬೇಕು.