Vastu Tips: ಮನೆಯಲ್ಲಿ ಗಡಿಯಾರವನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ? ಇಲ್ಲಿದೆ ಮಾಹಿತಿ
Vastu tips: ನಿಮ್ಮ ಮನೆಯ ಗೋಡೆಯ ಮೇಲೆ ಗಡಿಯಾರವನ್ನು ಹಾಕುವ ಮೊದಲು ಅದರ ಸರಿಯಾದ ದಿಕ್ಕು ತಿಳಿದುಕೊಳ್ಳಬೇಕು. ಸರಿಯಾದ ದಿಕ್ಕಿನಲ್ಲಿ ಹಾಕದಿದ್ದರೆ ಜೀವನದಲ್ಲಿ ಸಮಸ್ಯೆಗಳು ಎದುರಾಗಲಿದೆ. ಹಾಗಾದ್ರೆ ಮನೆಯಲ್ಲಿ ಗಡಿಯಾರವನ್ನು ಹಾಕುವಾಗ ಯಾವ ದಿಕ್ಕನ್ನು ಆಯ್ಕೆ ಮಾಡಬೇಕು? ಇಲ್ಲಿದೆ ನೋಡಿ ಮಾಹಿತಿ.

ಗಡಿಯಾರ

ಬೆಂಗಳೂರು: ಮನೆ ಕಟ್ಟುವಾಗ ಹೇಗೆ ವಾಸ್ತು ಬೇಕೇ ಬೇಕೊ ಹಾಗೂ ಮನೆ ನಿರ್ವಹಣೆಯ ವಿಷಯದಲ್ಲೂ ವಾಸ್ತು ಅಗತ್ಯವಾಗುತ್ತದೆ. ಮನೆಯಲ್ಲಿ ಗಡಿಯಾರ ಬೇಕೆ ಬೇಕು. ಅದಿಲ್ಲದಿದ್ದರೆ ಸಮಯ ಹೇಗೆ ಕಳೆಯುತ್ತದೆ ಎಂಬುದೇ ತಿಳಿಯುವುದಿಲ್ಲ. ಹೀಗಿರುವ ಮನೆಯಲ್ಲಿ ಗಡಿಯಾರ ಯಾವ ದಿಕ್ಕಿನಲ್ಲಿರಬೇಕು? ಗಡಿಯಾರದ ಬಗ್ಗೆ ಇತರೆ ಮಾಹಿತಿ ಇಲ್ಲಿವೆ. ವಾಸ್ತು ಶಾಸ್ತ್ರ(Vastu Shastra)ಗಳ ಪ್ರಕಾರ ಗೋಡೆ ಗಡಿಯಾರ(Clock)ವನ್ನು ಸರಿಯಾಗಿ ಇಡಬೇಕು. ನಿಮ್ಮ ಗಡಿಯಾರದ ದಿಕ್ಕ(Direction)ನ್ನು ಒಮ್ಮೆ ಪರಿಶೀಲಿಸಿ ಅದರ ದಿಕ್ಕನ್ನು ಒಮ್ಮೆ ಬದಲಾಯಿಸಿ ನೋಡಿ. ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಆದರೆ, ನೀವು ಗೋಡೆ ಗಡಿಯಾರಗಳನ್ನು ತಪ್ಪಾದ ದಿಕ್ಕಿನಲ್ಲಿ ಇರಿಸಿದರೆ, ನಕಾರಾತ್ಮಕ ಫಲಗಳು ನಿಮ್ಮನ್ನು ಕಾಡಲಿದೆ.
ಈ ದಿಕ್ಕು ಸೂಕ್ತ
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಗಡಿಯಾರವನ್ನು ಇರಿಸುವಾಗ ಸರಿಯಾದ ದಿಕ್ಕನ್ನು ತಿಳಿದುಕೊಳ್ಳುವುದು ಮುಖ್ಯ. ಮನೆಯಲ್ಲಿ ಪೂರ್ವ ದಿಕ್ಕಿನಲ್ಲಿ ಗಡಿಯಾರವನ್ನು ಇಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಇದು ನಿಮ್ಮ ಮನೆಯಲ್ಲಿ ಸಂತೋಷವನ್ನು ಹೆಚ್ಚಿಸುತ್ತದೆ. ಇದರ ಹೊರತಾಗಿ ಗಡಿಯಾರವನ್ನು ಉತ್ತರ ದಿಕ್ಕಿನಲ್ಲಿ ನೇತುಹಾಕುವುದು ಶುಭಕರ ಆಗಿದ್ದು, ಇದು ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ..
ಈ ದಿಕ್ಕು ಅಶುಭ
ವಾಸ್ತು ಪ್ರಕಾರ, ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿ ಗೋಡೆಯ ಗಡಿಯಾರವನ್ನು ಇಡಬಾರದು. ಅದು ಅಶುಭ ಎಂದು ಪರಿಗಣಿಸಲಾಗಿದೆ. ಗೋಡೆ ಗಡಿಯಾರವನ್ನು ಬಾಗಿಲಿನ ಮೇಲೆ ಇಡಬೇಡಿ.
ಈ ವಿಷಯ ನೆನಪಿರಲಿ
- ಮಲಗುವಾಗ ಕೈಯಲ್ಲಿ ಧರಿಸುವ ಕೈ ಗಡಿಯಾರವನ್ನು ದಿಂಬಿನ ಕೆಳಗೆ ಇಡುತ್ತಾರೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ದಿಂಬಿನ ಕೆಳಗೆ ಗಡಿಯಾರವನ್ನು ಇಟ್ಟುಕೊಂಡು ಎಂದಿಗೂ ಮಲಗಬಾರದು.
- ಮನೆಯಲ್ಲಿನ ಎಲ್ಲಾ ಗಡಿಯಾರಗಳು ಚಾಲ್ತಿಯಲ್ಲಿರುವಂತೆ ನೋಡಿಕೊಳ್ಳಿ. ಅದು ಸರಿಯಾದ ಸಮಯ ಅಥವಾ ಮುಂದೆ ಇದ್ದರೆ ಒಳ್ಳೆಯದು. ಸರಿಯಾದ ಸಮಯಕ್ಕಿಂತ ಹಿಂದೆ ಇರಬಾರದು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.
ಈ ಸುದ್ದಿಯನ್ನು ಓದಿ: Vastu Tips: ಯಾವ ದಿಕ್ಕಿಗೆ ತಲೆ ಇಟ್ಟು ಮಲಗಿದ್ದರೆ ಶುಭ.. ಯಾವ ದಿಕ್ಕಿಗೆ ಮಲಗಿದ್ದರೆ ಅಶುಭ? ಇಲ್ಲಿದೆ ಉತ್ತರ
- ಮನೆಯಲ್ಲಿ ಗಾಜಿನ ಗಡಿಯಾರವಿದ್ದಲ್ಲಿ ಹುಷಾರಾಗಿ ನೋಡಿಕೊಳ್ಳಬೇಕು. ಆ ಗಾಜಿನ ಮೇಲೆ ಯಾವುದೇ ಬಿರುಕು ಇರಬಾರದು ಅಥವಾ ಒಡೆದಿರಬಾರದು.
- ಗಡಿಯಾರವನ್ನು ಪ್ರತೀ ದಿನ ಸ್ವಚ್ಛಗೊಳಿಸಬೇಕು. ಅದರ ಮೇಲೆ ಯಾವುದೇ ಕೊಳೆ, ಧೂಳು ಇರದಂತೆ ನೋಡಿಕೊಳ್ಳಬೇಕು.
- ಗಡಿಯಾರ ಕೊಂಡುಕೊಳ್ಳುವಾಗ ನಕಾರಾತ್ಮಕ ಶಕ್ತಿ ಅಥವಾ ಒಂಟಿತನವನ್ನು ಬಿಂಬಿಸುವವ ಗಡಿಯಾರ ಖರೀದಿಸಬೇಡಿ. ಹಾಗೆ ಮಾಡಿದಲ್ಲಿ ಮನೆ ಮನಸ್ಸುಗಳ ಮೇಲೆ ಅದೇ ರೀತಿಯ ಪರಿಣಾಮ ಬೀರುತ್ತದೆ.