ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Temba Bavuma: ಟೆಸ್ಟ್‌ನಲ್ಲಿ ತೆಂಬಾ ಬವುಮಾ ಸೋಲಿಲ್ಲದ ಸರದಾರ

ಶನಿವಾರ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಕೊನೆಗೊಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ ಗೆಲುವು ಸಾಧಿಸಿತು. 282 ರನ್‌ಗಳ ದೊಡ್ಡ ಗುರಿ ಪಡೆದಿದ್ದ ಬುವುಮಾ ಪಡೆ ಅಭೂತಪೂರ್ವ ಬ್ಯಾಟಿಂಗ್‌ ಹೋರಾಟ ಪ್ರದರ್ಶಿಸಿ ಇನ್ನೊಂದು ದಿನ ಬಾಕಿ ಇರುವಂತೆಯೇ ಟ್ರೋಫಿ ಮುಡಿಗೇರಿಸಿಕೊಂಡಿತು.

ಟೆಸ್ಟ್‌ನಲ್ಲಿ ತೆಂಬಾ ಬವುಮಾ ಸೋಲಿಲ್ಲದ ಸರದಾರ

Profile Abhilash BC Jun 15, 2025 8:44 AM

ಲಂಡನ್‌: ದಕ್ಷಿಣ ಆಫ್ರಿಕಾ ತಂಡ(Australia vs South Africa) ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ(WTC Final 2025) ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಕೊನೆಗೂ ತನ್ನ ಚೋಕರ್ಸ್‌ ಹಣೆಪಟ್ಟಿ ಕಳಚಿಕೊಂಡಿದೆ. ಐಸಿಸಿ ಟೂರ್ನಿಗಳ ಫೈನಲ್‌, ಸೆಮಿಫೈನಲ್‌ಗಳಲ್ಲಿ ಎಡವಿ ಟ್ರೋಫಿ ತಪ್ಪಿಸಿಕೊಳ್ಳುತ್ತಿದ್ದ ಹರಿಣ ಪಡೆ ಈ ಬಾರಿ ಟ್ರೋಫಿ ಗೆದ್ದು ಬೀಗಿದೆ. ತಂಡದ ಈ ಗೆಲುವಿನಲ್ಲಿ ನಾಯಕ ತೆಂಬಾ ಬವುಮಾ(Temba Bavuma) ಪಾತ್ರ ಪ್ರಧಾನವಾಗಿದೆ. ಹೌದು ಬವುಮಾ ಟೆಸ್ಟ್‌ ನಾಯಕನಾದ ಬಳಿಕ ದಕ್ಷಿಣ ಆಫ್ರಿಕಾ ಒಂದೇ ಒಂದು ಟೆಸ್ಟ್‌ ಸೋಲು ಕಂಡಿಲ್ಲ. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ಪಾಲಿನ ಲಕ್ಕಿ ಕ್ಯಾಪ್ಟನ್‌ ಎನ್ನಬಹುದು.

ಹೌದು, 2023ರಲ್ಲಿ ಡೀನ್‌ ಎಲ್ಗರ್‌ರಿಂದ ತೆರವಾದ ಟೆಸ್ಟ್‌ ತಂಡದ ನಾಯಕನ ಸ್ಥಾನಕ್ಕೆ ತೆಂಬಾ ಬವುಮಾ ಆಯ್ಕೆಯಾಗಿದ್ದರು. ಆ ಬಳಿಕ ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಒಂದೂ ಟೆಸ್ಟ್‌ನಲ್ಲಿ ಸೋತಿಲ್ಲ ಎಂಬುದು ಗಮನಾರ್ಹ. ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ 10 ಟೆಸ್ಟ್‌ ಆಡಿದೆ. 9ರಲ್ಲಿ ಗೆದ್ದಿದ್ದರೆ, 1 ಪಂದ್ಯ ಡ್ರಾಗೊಂಡಿದೆ.



ತೆಂಬ ಎಂದರೆ ನಂಬಿಕೆ

ತೆಂಬ ಹೆಸರಿನ ಅರ್ಥ ಭರವಸೆ. ಒಂದು ಸಮುದಾಯದ ಭರವಸೆ. ದೇಶದ ಭರವಸೆ. ಒಂದು ಬಲಿಷ್ಠ ತಂಡವನ್ನು ಎದುರಿಸುವಾಗ ಬೇಕಿರುವುದೇ ಭರವಸೆ. ಆ ಭರವಸೆಯೇ ಟೆಂಬ. ಇನ್ನು ಬವುಮಾ ಎಂಬುದು ಉಪನಾಮ. ಈ ಹೆಸರನ್ನು ನನ್ನ ಅಜ್ಜಿ ಇಟ್ಟದ್ದಾಗಿ ಬವುಮಾ ಫೈನಲ್‌ ಪಂದ್ಯಕ್ಕೂ ಮುನ್ನ ಹೇಳಿದ್ದರು. ಇದೀಗ ಅವರ ಹೆಸರಿನ ಅರ್ಥದಂತೆ ಅವರು ದಕ್ಷಿಣ ಆಫ್ರಿಕಾಗೆ ಚೊಚ್ಚಲ ವಿಶ್ವಕಪ್‌ ಟ್ರೋಫಿಯೊಂದನ್ನು ಗೆಲ್ಲಿಸಿಕೊಟ್ಟಿದ್ದಾರೆ.

ಶನಿವಾರ ಲಾರ್ಡ್ಸ್‌ ಕ್ರೀಡಾಂಗಣದಲ್ಲಿ ಕೊನೆಗೊಂಡ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ 5 ವಿಕೆಟ್‌ ಗೆಲುವು ಸಾಧಿಸಿತು. 282 ರನ್‌ಗಳ ದೊಡ್ಡ ಗುರಿ ಪಡೆದಿದ್ದ ಬುವುಮಾ ಪಡೆ ಅಭೂತಪೂರ್ವ ಬ್ಯಾಟಿಂಗ್‌ ಹೋರಾಟ ಪ್ರದರ್ಶಿಸಿ ಇನ್ನೊಂದು ದಿನ ಬಾಕಿ ಇರುವಂತೆಯೇ ಟ್ರೋಫಿ ಮುಡಿಗೇರಿಸಿಕೊಂಡಿತು.

ಸ್ಕೋರ್‌ ವಿವರ

ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ 212/10 ಮತ್ತು 2ನೇ ಇನ್ನಿಂಗ್ಸ್‌ 207/10, ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ 138/10 ಮತ್ತು 2ನೇ ಇನ್ನಿಂಗ್ಸ್‌ 282/5 (ಮಾರ್ಕ್‌ರಮ್‌ 136, ಬವುಮಾ 66, ಬೆಡಿಂಗ್‌ಹ್ಯಾಮ್‌ 21, ಸ್ಟಾರ್ಕ್‌ 3-66).

ಇದನ್ನೂ ಓದಿ WTC Final: ಭಾರತ ತಂಡದ 14 ವರ್ಷಗಳ ಹಳೆಯ ವಿಶ್ವ ದಾಖಲೆಯನ್ನು ಮುರಿದ ದಕ್ಷಿಣ ಆಫ್ರಿಕಾ!