ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025 Prize money: ಚಾಂಪಿಯನ್‌ ಆರ್‌ಸಿಬಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?

ಈ ಬಾರಿಯ ಟೂರ್ನಿಯಲ್ಲಿ ಆರ್‌ಸಿಬಿಯು ಅತ್ಯಂತ ಶಿಸ್ತಿನ ಆಟವಾಡಿತು. ಲೀಗ್ ಹಂತದ 14 ಪಂದ್ಯಗಳಲ್ಲಿ 9ರಲ್ಲಿ ಜಯಿಸಿದ್ದ ತಂಡವು 4ರಲ್ಲಿ ಸೋತಿತ್ತು. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಪಾಯಿಂಟ್‌ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದು ಕ್ವಾಲಿಫೈಯರ್‌ ಪ್ರವೇಶಿಸಿತ್ತು. ಮೊದಲ ಕ್ವಾಲಿಫೈಯರ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನೇ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಫೈನಲ್‌ನಲ್ಲಿಯೂ ಉತ್ತಮ ಆಟವಾಡಿ ಚೊಚ್ಚಕ ಕಪ್‌ ಗೆದ್ದು ಸಂಭ್ರಮಿಸಿತು.

ಚಾಂಪಿಯನ್‌ ಆರ್‌ಸಿಬಿಗೆ ಸಿಕ್ಕ ಬಹುಮಾನ ಮೊತ್ತವೆಷ್ಟು?

Profile Abhilash BC Jun 4, 2025 6:41 AM

ಅಹಮದಾಬಾದ್‌: ಮಂಗಳವಾರ ನಡೆದಿದ್ದ 18ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL Final 2025) ಫೈನಲ್‌ ಪಂದ್ಯದಲ್ಲಿ 6 ರನ್‌ ಅಂತರದಿಂದ ಪಂಜಾಬ್‌ ಕಿಂಗ್ಸ್‌(RCB vs PBKS Final) ವಿರುದ್ಧ ರೋಚಕ ಗೆಲುವು ಸಾಧಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದು ಸಂಭ್ರಮಿಸಿತು. ಇದೀಗ ಚಾಂಪಿಯನ್‌ ಆರ್‌ಸಿಬಿ, ರನ್ನರ್‌ ಅಪ್‌ ಪಂಜಾಬ್‌ಗೆ ಸಿಕ್ಕ ಬಹುಮಾನ(IPL 2025 Prize money) ಮೊತ್ತದ ವಿವರ ಇಲ್ಲಿದೆ.

ಬಹುಮಾನ ಪಟ್ಟಿ

ಚಾಂಪಿಯನ್‌: ಆರ್‌ಸಿಬಿ; 20 ಕೋಟಿ ರೂ.

ರನ್ನರ್‌ ಅಪ್‌: ಪಂಜಾಬ್‌ ಕಿಂಗ್ಸ್‌; 13 ಕೋಟಿ ರೂ.

ಕ್ವಾಲಿಫೈಯರ್‌(ಮೂರನೇ ಸ್ಥಾನ): ಮುಂಬೈ; 7 ಕೋಟಿ ರೂ.

ಎಲಿಮಿನೇಟರ್‌(ನಾಲ್ಕನೇ ಸ್ಥಾನ): ಗುಜರಾತ್‌; 6.5 ಕೋಟಿ ರೂ.

ಆರೆಂಜ್‌ ಕ್ಯಾಪ್‌: ಸಾಯಿ ಸುದರ್ಶನ್‌; 10 ಲಕ್ಷ ರೂ.

ಪರ್ಪಲ್‌ ಕ್ಯಾಪ್‌: ಪ್ರಸಿದ್ಧ್‌ ಕೃಷ್ಣ; 10 ಲಕ್ಷ ರೂ.

ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ನಡೆಸಿದ್ದ ಆರ್‌ಸಿಬಿ 9 ವಿಕೆಟ್‌ಕೆ 190 ರನ್‌ ಗಳಿಸಿತ್ತು. ಜವಾಬಿತ್ತ ಪಂಜಾಬ್‌ ಕಿಂಗ್ಸ್‌ ಉತ್ತಮ ಆರಂಭದ ಹೊರತಾಗಿಯೂ ಆ ಬಳಿಕ ನಾಟಕೀಯ ಕುಸಿತ ಕಂಡು 7 ವಿಕೆಟ್‌ಗೆ 184 ರನ್‌ ಗಳಿಸಲಷ್ಟೇ ಶಕ್ತವಾಗಿ 6 ರನ್‌ ಅಂತರದಿಂದ ಸೋಲೊಪ್ಪಿಕೊಂಡಿತು.

ಹದಿನೆಂಟು ವರ್ಷಗಳಿಂದ ಆರ್‌ಸಿಬಿ ಕಪ್‌ ಗೆಲುವಿಗೆ ಕಾದಿದ್ದ ಲಕ್ಷಾಂತರ ಅಭಿಮಾನಿಳು ಬೀದಿಗಿಳಿದು ಸಂಭ್ರಮಿಸಿದರು. ಕುಣಿದರು, ಸಿಹಿ ಹಂಚಿದರು. ಬೆಳಗಿನ ಜಾವದವರೆಗೂ ‘ಆರ್‌ಸಿಬಿ..ಆರ್‌ಸಿಬಿ..‘ ಎಂಬ ಕೂಗುಗಳು ಪ್ರತಿಧ್ವನಿಸಿದವು. ಈ ಹಿಂದೆ ಆರ್‌ಸಿಬಿಯಲ್ಲಿ ಆಡಿದ್ದ ದಿಗ್ಗಜರಾದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್ ಆರ್‌ಸಿಬಿ ಆಟಗಾರರೊಂದಿಗೆ ಮೈದಾನದಲ್ಲಿ ಸಂಭ್ರಮಾಚರಣೆ ನಡೆಸಿದರು.

ಇದನ್ನೂ ಓದಿ IPL 2025: 18 ವರ್ಷಗಳ ಬಳಿಕ ಚೊಚ್ಚಲ ಕಪ್‌ ಗೆದ್ದು ಕಣ್ಣೀರಿಟ್ಟ ವಿರಾಟ್‌ ಕೊಹ್ಲಿ!