ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KL Rahul: ಭಾರತ 'ಎ' ತಂಡದ ಪರ ಆಡಲು ರಾಹುಲ್‌ ದಿಢೀರ್‌ ನಿರ್ಧಾರ

ಅಸಲಿಗೆ ರಾಹುಲ್‌ ಜೂ.6 ರಂದು ಭಾರತ ತಂಡದ ಇತರ ಆಟಗಾರರೊಂದಿಗೆ ರಾಹುಲ್‌ ಇಂಗ್ಲೆಂಡ್‌ಗೆ ತೆರಳಬೇಕಿತ್ತು. ಆದರೆ ಇಂಗ್ಲೆಂಡ್‌ನ ಪೆರಿಸ್ಥಿತಿಗೆ ಒಗ್ಗಿಕೊಳ್ಳುವ ಸಲುವಾಗಿ ಅವರು ಮುಂಚಿವಾಗಿಯೇ ಇಂಗ್ಲೆಂಡ್‌ಗೆ ತೆರಳಿ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಆಡುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಭಾರತ 'ಎ' ತಂಡದ ಪರ ಆಡಲು ರಾಹುಲ್‌ ದಿಢೀರ್‌ ನಿರ್ಧಾರ

Profile Abhilash BC May 31, 2025 9:52 AM

ನವದೆಹಲಿ: ಜೂನ್‌ 20 ರಿಂದ ಆರಂಭವಾಗಲಿರುವ ಇಂಗ್ಲೆಂಡ್‌ ಟೆಸ್ಟ್‌(England Test series) ಸರಣಿಗೆ ಪೂರ್ವ ಸಿದ್ಧತೆಯ ಭಾಗವಾಗಿ ಕನ್ನಡಿಗ ಕೆ.ಎಲ್‌ ರಾಹುಲ್‌(KL Rahul) ಸೋಮವಾರ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲದೆ ಭಾರತ ಎ(india a) ತಂಡದ ಪರ ಇಂಗ್ಲೆಂಡ್‌ ಲಯನ್ಸ್‌ ನಡುವಿನ ಎರಡನೇ ಚತುರ್ದಿನ ಪಂದ್ಯವನ್ನು ಆಡಲಿದ್ದಾರೆ ಎಂದು ತಿಳಿದುಬಂದಿದೆ.

ಅಸಲಿಗೆ ರಾಹುಲ್‌ ಜೂ.6 ರಂದು ಭಾರತ ತಂಡದ ಇತರ ಆಟಗಾರರೊಂದಿಗೆ ರಾಹುಲ್‌ ಇಂಗ್ಲೆಂಡ್‌ಗೆ ತೆರಳಬೇಕಿತ್ತು. ಆದರೆ ಇಂಗ್ಲೆಂಡ್‌ನ ಪೆರಿಸ್ಥಿತಿಗೆ ಒಗ್ಗಿಕೊಳ್ಳುವ ಸಲುವಾಗಿ ಅವರು ಮುಂಚಿವಾಗಿಯೇ ಇಂಗ್ಲೆಂಡ್‌ಗೆ ತೆರಳಿ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಆಡುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ ಎನ್ನಲಾಗಿದೆ. ಬಿಸಿಸಿಐ ಕೂಡ ಇದಕ್ಕೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.

ಇತ್ತೀಚೆಗೆ ಸ್ಕೈ ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ, ರಾಹುಲ್, ದೀರ್ಘ ಸ್ವರೂಪದ ಆಟ ನನಗೆ ಇಷ್ಟ ಎಂದು ಹೇಳಿದ್ದರು. "ನನಗೆ ರೆಡ್ ಬಾಲ್ ಕ್ರಿಕೆಟ್ ಎಂದರೆ ತುಂಬಾ ಇಷ್ಟ. ಭಾರತೀಯ ತಂಡದಲ್ಲಿ ನಾನು ಮಾತನಾಡಿರುವ ಪ್ರತಿಯೊಬ್ಬರೂ, ಟೆಸ್ಟ್ ಕ್ರಿಕೆಟ್ ವಿಷಯದಲ್ಲಿ ನಾವೆಲ್ಲರೂ ಒಂದೇ ಪುಟದಲ್ಲಿದ್ದೇವೆ. ನಾವು ಟೆಸ್ಟ್ ಕ್ರಿಕೆಟ್ ಆಡಲು ಇಷ್ಟಪಡುತ್ತೇವೆ " ಎಂದು ರಾಹುಲ್ ಹೇಳಿದ್ದರು.

ಇದನ್ನೂ ಓದಿ IPL 2025: ಸಿಕ್ಸರ್‌ ದಾಖಲೆ ಬರೆದ ಹಿಟ್‌ಮ್ಯಾನ್‌ ರೋಹಿತ್‌

"ನಾನು ಟೆಸ್ಟ್ ಕ್ರಿಕೆಟ್ ನೋಡುತ್ತಾ ಬೆಳೆದೆ. ನಾನು ಬೆಳಿಗ್ಗೆ ಐದು ಗಂಟೆಗೆ ಎದ್ದು ನನ್ನ ತಂದೆಯೊಂದಿಗೆ ಆಸ್ಟ್ರೇಲಿಯಾದಲ್ಲಿ ನಡೆಯತ್ತಿದ್ದ ಟೆಸ್ಟ್ ಕ್ರಿಕೆಟ್ ನೋಡುತ್ತಿದ್ದೆ. ಅವರಿಗೂ ಕ್ರಿಕೆಟ್ ನೋಡುವುದು ತುಂಬಾ ಇಷ್ಟ" ಎಂದು ರಾಹುಲ್‌ ಹೇಳಿದ್ದರು.

ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ನಡೆಯುತ್ತಿರುವ ಮೊದಲ ಅನಧಿಕೃತ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ಎ ತಂಡದ ಬ್ಯಾಟ್ಸ್‌ಮನ್‌ ಕರುಣ್‌ ನಾಯರ್‌ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿ ಶತಕ ಬಾರಿಸಿ ಮಿಂಚಿದ್ದಾರೆ. ದಿನದಾಟದ ಅಂತ್ಯಕ್ಕೆ 246 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 24 ಬೌಂಡರಿಗಳೊಂದಿಗೆ ಅಜೇಯ 186 ರನ್‌ಗಳನ್ನು ಬಾರಿಸಿದ್ದಾರೆ.