Viral News: ಈ ಯೂನಿವರ್ಸಿಟಿಯ ಕ್ಯಾಂಟೀನ್ ಮ್ಯಾನೇಜರ್ ಹುದ್ದೆಗೆ ಪಿಎಚ್‌ಡಿ ಪಡೆದಿರಬೇಕು!
ಜಿಯಾಂಗ್ಸು ಪ್ರಾಂತ್ಯದ ನಾನ್‌ಜಿಂಗ್‌ನಲ್ಲಿರುವ ಪ್ರತಿಷ್ಠಿತ ಸಂಸ್ಥೆಯಾದ ಸೌತ್ ಈಸ್ಟ್ ಯೂನಿವರ್ಸಿಟಿ ಕ್ಯಾಂಟೀನ್ ಆಫೀಸ್ ಮ್ಯಾನೇಜರ್ ಹುದ್ದೆಗೆ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದೆ. ಈ ಹುದ್ದೆಗೆ ಡಾಕ್ಟರೇಟ್ ಪದವಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ. ಈ ಸುದ್ದಿ ಈಗ ವೈರಲ್ ಆಗಿದೆ.


ಬೀಜಿಂಗ್: ದೊಡ್ಡ ದೊಡ್ಡ ಹುದ್ದೆಗಳಿಗೆ ಡಾಕ್ಟರೇಟ್ ಪದವಿ ಬೇಕು ಎನ್ನುವುದು ಸಾಮಾನ್ಯ. ಆದರೆ ಚೀನಾದ ಒಂದು ಟಾಪ್ ಯುನಿವರ್ಸಿಟಿಯೊಂದು ಕ್ಯಾಂಟೀನ್ ಆಫೀಸ್ ಮ್ಯಾನೇಜರ್ ಹುದ್ದೆಗೆ ಡಾಕ್ಟರೇಟ್ ಪದವಿ ಪಡೆದವರೇ ಬೇಕು ಎಂದು ಷರತ್ತು ವಿಧಿಸಿದೆ. ಹೌದು, ಈ ಹುದ್ದೆಗೆ ಡಾಕ್ಟರೇಟ್ ಪದವಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದೆ. ಜಿಯಾಂಗ್ಸು ಪ್ರಾಂತ್ಯದ ನಾನ್‌ಜಿಂಗ್‌ನಲ್ಲಿರುವ ಪ್ರತಿಷ್ಠಿತ ಸಂಸ್ಥೆಯಾದ ಸೌತ್ ಈಸ್ಟ್ ಯೂನಿವರ್ಸಿಟಿ ಇತ್ತೀಚೆಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಉದ್ಯೋಗಾವಕಾಶದ ಕುರಿತು ಪೋಸ್ಟ್ ಮಾಡಿದೆ. ಇದು ಯೂನಿವರ್ಸಿಟಿಗೆ ಫುಡ್ ಸಫ್ಲೈ ಮಾಡುವ ಕೆಲಸವಾಗಿದ್ದು, ಇದಕ್ಕೆ ಪಿಎಚ್‍ಡಿ ಬೇಕೆಂಬುದನ್ನು ತಿಳಿದು ಜನರು ಶಾಕ್ ಆಗಿದ್ದಾರೆ. ಈ ಸುದ್ದಿ ಈಗ ವೈರಲ್(Viral News) ಆಗಿದೆ.
ಒಂದು ಪೇಪರ್ ಮೇಲೆ, ಸಂಸ್ಥೆಗೆ ಫುಡ್ ಸಪ್ಲೈ ಮಾಡುವ ಮ್ಯಾನೇಜರ್ ಜವಾಬ್ದಾರಿಗಳು ಏನೆಂಬುದನ್ನು ತಿಳಿಸಲಾಗಿದೆ. ಭಕ್ಷ್ಯಗಳನ್ನು ತಯಾರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು, ಕ್ಯಾಂಟೀನ್ ಗುತ್ತಿಗೆದಾರರನ್ನು ನಿರ್ವಹಿಸುವುದು, ಆಹಾರ ಸುರಕ್ಷತೆಯನ್ನು ಖಚಿತಪಡಿಸುವುದು ಮತ್ತು ದಿನನಿತ್ಯದ ದಾಖಲೆಗಳನ್ನು ನಿರ್ವಹಿಸುವುದು ಆಗಿದೆ. ಆದರೆ ಅರ್ಹತೆಗಳು ಆ ಕೆಲಸಕ್ಕೆ ಬೇಕಾಗಿರುವ ಶಿಕ್ಷಣಕ್ಕಿಂತ ಹೆಚ್ಚಿನದನ್ನು ಹೊಂದಿದೆ ಎನ್ನಲಾಗಿದೆ. ಅರ್ಜಿದಾರರು ಪಿಎಚ್‌ಡಿ ಪದವಿ ಹೊಂದಿರಬೇಕು, ಇಂಗ್ಲಿಷ್ ಮತ್ತು ಕಚೇರಿ ಸಾಫ್ಟ್‌ವೇರ್‌ನಲ್ಲಿ ಪ್ರಾವೀಣ್ಯತೆಯನ್ನು ಹೊಂದಿರಬೇಕು ಮತ್ತು ಈ ಕೆಲಸದ ಬಗ್ಗೆ ಮೊದಲೇ ಅನುಭವವನ್ನು ಹೊಂದಿರಬೇಕು. ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿರುವ ಅಭ್ಯರ್ಥಿಗಳಿಗೂ ಆದ್ಯತೆ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೌತ್ ಈಸ್ಟ್ ಯೂನಿವರ್ಸಿಟಿ ಚೀನಾದ ಗಣ್ಯ "985" ಮತ್ತು "211" ಯೂನಿವರ್ಸಿಟಿಗಳಲ್ಲಿ ಒಂದಾಗಿದೆ. ಇದು ತ್ಸಿಂಗುವಾ ಮತ್ತು ಪೀಕಿಂಗ್ ಯೂನಿವರ್ಸಿಟಿಗಳಂತಹ ಪ್ರಸಿದ್ಧ ಯೂನಿವರ್ಸಿಟಿಗಳ ಜತೆಗೆ ದೇಶದ ಅಗ್ರ 39 ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ.
ಇತ್ತೀಚಿನ ವರ್ಷಗಳಲ್ಲಿ, ಚೀನಾದಾದ್ಯಂತ ಉದ್ಯೋಗ ನೇಮಕಾತಿಗಳಿಗೆ ಹಿಂದೆ ಬೇಕಾಗಿದ್ದ ಅರ್ಹತೆಗಳಿಗಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆಗಳು ಬೇಕಾಗುತ್ತಿವೆ. ಒಂದು ಕಾಲದಲ್ಲಿ ಸ್ನಾತಕೋತ್ತರ ಪದವಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿತ್ತು. ಆದರೆ ಈಗ ಸ್ನಾತಕೋತ್ತರ ಪದವಿ ಜತೆಗೆ ಪಿಎಚ್‌ಡಿ ಪದವಿ ಕೂಡ ಬೇಕಾಗುತ್ತಿದೆ.
ಈ ಸುದ್ದಿಯನ್ನೂ ಓದಿ:Viral Video: ಮದುಮಗ ಧರಿಸಿದ್ದ ದಿರಿಸನ್ನು ಕಂಡು ಈ ಅಜ್ಜಿಯ ರಿಯಾಕ್ಷನ್ ನೋಡಿ- ವಿಡಿಯೊ ಇದೆ
ಚೀನಾದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನರು ಪದವಿ ಪಡೆಯುತ್ತಿದ್ದಾರೆ. ಅವರಲ್ಲಿ ಹಲವರು ಸ್ನಾತಕೋತ್ತರ ಪದವಿ ಪಡೆದಿದ್ದಾರೆ, ಆದರೆ ಹಣದುಬ್ಬರ ಸಮಸ್ಯೆಯಿಂದಾಗಿ ಅವರಿಗೆ ಉನ್ನತ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸುತ್ತಿಲ್ಲ ಎನ್ನಲಾಗಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯ ಯುವ ವೃತ್ತಿಪರರು ಅರ್ಹತೆ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಅವರು ತಮ್ಮ ಶೈಕ್ಷಣಿಕ ಸಾಮರ್ಥ್ಯಕ್ಕಿಂತ ಕಡಿಮೆ ಸಂಬಳ ಪಡೆಯುವ ಅಥವಾ ತಮ್ಮ ಅಹರ್ತೆಗೆ ಸೂಕ್ತವಲ್ಲದ ಉದ್ಯೋಗಗಳಿಗೆ ಆಯ್ಕೆಯಾಗುತ್ತಿದ್ದಾರೆ.