June Month Special Days: ಸೆಕ್ಸ್ ಡೇ... ಪ್ಯಾನಿಕ್ ಡೇ... ಈ ತಿಂಗಳು ಪೂರ್ತಿ ಇಂತಹದ್ದೇ ಕ್ರೇಜಿ ಡೇಗಳ ಸೆಲೆಬ್ರೇಶನ್
ಜೂನ್ ತಿಂಗಳು ಈಗಾಗಲೇ ಆರಂಭವಾಗಿದೆ. ಈ ತಿಂಗಳ ಅಂತ್ಯದ ವರೆಗೂ ಅದೆಷ್ಟೋ ಸ್ಪೆಷಲ್ ಡೇಗಳಿವೆ. ಅಂತೆಯೇ ಜೂನ್ ನಲ್ಲಿ ಆಚರಿಸುವ ಕೆಲವೊಂದು ಸ್ಪೆಷಲ್ ಡೇ ಮನೋರಂಜನೆಯಿಂದ ಕೂಡಿದ್ದು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ನಿವಾರಿಸಲಿದೆ. ಕಚೇರಿ ಕೆಲಸದ ಸಹೋದ್ಯೋಗಿಗಳ ಜೊತೆಗೆ ಅಥವಾ ನಿಮ್ಮ ಸ್ನೇಹಿತರೊಂದಿಗೆ ಈ ವಿಶೇಷ ದಿನ ಆಚರಿಸಬಹುದಾಗಿದೆ. ಹಾಗಾದರೆ ಯಾವೆಲ್ಲ ಸ್ಪೆಷಲ್ ಡೇ ಜೂನ್ ತಿಂಗಳಿನಲ್ಲಿದೆ?

Celebrate June’s quirkiest moments


ಜೂನ್ 2: ಕಚೇರಿಯ ಕೆಲಸದ ಅವಧಿ ಕಡಿಮೆಗೊಳಿಸುವ ದಿನ
ಪ್ರತೀ ವರ್ಷ ಜೂನ್ 2ರಂದು ಅಮೆರಿಕದಲ್ಲಿ ಆಫೀಸ್ ಕೆಲಸದ ಅವಧಿಯನ್ನು ಕಡಿಮೆ ಮಾಡುವ ಮೂಲಕ ಈ ದಿನ ಆಚರಿಸ ಲಾಗುತ್ತಿದೆ. ಉದ್ಯೋಗಿಗಳು ಬೇಗನೆ ತಮ್ಮ ಕೆಲಸದಿಂದ ಹೊರ ಹೋಗಿ ತಮ್ಮ ವೈಯಕ್ತಿಕ ಸಮಯವನ್ನು ಕಳೆಯಲು ಪ್ರೋತ್ಸಾಹಿಸುವ ಮೂಲಕ ಈ ದಿನವನ್ನು ಆಚರಣೆ ಮಾಡಲಾಗುತ್ತದೆ. ಈ ಮೂಲಕ ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವ ಉದ್ದೇಶ ಈ ದಿನ ಹೊಂದಿದೆ.

ಜೂನ್ 4– ಬೆಕ್ಕನ್ನು ಅಪ್ಪಿಕೊಳ್ಳುವ ದಿನ (ಕ್ಯಾಟ್ ಹಗ್ ಡೇ)
ಪ್ರತೀ ವರ್ಷ ಜೂನ್ 4ಕ್ಕೆ ಈ ದಿನವನ್ನು ಜಾಗತಿಕ ಮಟ್ಟದಲ್ಲಿ ಆಚರಿಸಲಾಗುತ್ತಿದೆ. ಈ ಮೂಲಕ ಮನೆಯ ಸಾಕು ಪ್ರಾಣಿ ಗಳಲ್ಲಿ ಮುದ್ದಾಗಿ ಇಷ್ಟಪಡುವ ಬೆಕ್ಕನ್ನು ಅಪ್ಪಿಕೊಂಡು ಮಾತಾಡಿ ಅದರೊಂದಿಗೆ ಸಮಯ ಕಳೆಯಲು ಪ್ರೋತ್ಸಾಹಿಸುವುದು ಈ ದಿನದ ಉದ್ದೇಶವಾಗಿದೆ. ಬೆಕ್ಕಿನೊಂದಿಗೆ ಸಮಯ ಕಳೆಯುವ ಮೂಲಕ ಒತ್ತಡ ನಿವಾರಿಸುವುದರೊಂದಿಗೆ ಈ ದಿನ ಆಚರಣೆ ಮಾಡಲಾಗುತ್ತದೆ.

ಜೂನ್ 6- ರಾಷ್ಟ್ರೀಯ ಯೋ-ಯೋ ದಿನ
ಪ್ರತೀ ವರ್ಷ ಜೂನ್ 6ರಂದು ರಾಷ್ಟ್ರೀಯ ಯೋ-ಯೋ ದಿನವನ್ನು ಹೆಚ್ಚಾಗಿ ಯುಎಸ್ಎ ನಲ್ಲಿ ಆಚರಿಸಲಾಗುತ್ತದೆ. ಈ ದಿನದಂದು ಕೆಲವೊಂದು ಮನೋರಂಜನಾತ್ಮಕ ಸಾಂಪ್ರದಾಯಿಕ ಕ್ರೀಡೆ, ಕೌಶಲ್ಯವನ್ನು ಗೌರವಿಸುವ ಮೂಲಕ ಅಮೇರಿ ಕನ್ನರು ಆಚರಿಸುತ್ತಾರೆ. ಈ ಮೂಲಕ ಒತ್ತಡ ನಿವಾರಿಸಿ ಮನಸ್ಸಿನ ನೆಮ್ಮದಿ ತರುವ ವಿಚಾರಗಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಈ ದಿನದ ಉದ್ದೇಶವಾಗಿದೆ.

ಜೂನ್ 9 - ರಾಷ್ಟ್ರೀಯ ಲೈಂಗಿಕ ದಿನ
ಪ್ರತೀ ವರ್ಷ ಜೂನ್ 9ರಂದು ರಾಷ್ಟ್ರೀಯ ಲೈಂಗಿಕ ದಿನವಾಗಿ ಅಮೆರಿಕದಲ್ಲಿ ಆಚರಿಸಲಾಗುತ್ತಿದೆ. ಲೈಂಗಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಈ ದಿನ ಆಚರಿಸಲಾಗುತ್ತದೆ. ಲೈಂಗಿಕ ಆಸಕ್ತಿಯ ಬಗ್ಗೆ ಇರುವ ತಪ್ಪು ಕಲ್ಪನೆ ತಪ್ಪು ಅಭಿಪ್ರಾಯಗಳಿಂದ ಸಂಗಾತಿಯನ್ನು ಹೊರತರಲು ಈ ದಿನದ ಆಚರಣೆ ಮಹತ್ವ ಪೂರ್ಣವೆನಿಸಿದೆ.

ಜೂನ್ 13– ಅಂತಾರಾಷ್ಟ್ರೀಯ ಆ್ಯಕ್ಸ್ (ಕೊಡಲಿ) ಎಸೆಯುವ ದಿನ:
ಕೆನಡಾ, ಅಮೆರಿಕ ಮತ್ತು ಇತರ ದೇಶದಲ್ಲಿ ಅಂತಾರಾಷ್ಟ್ರೀಯ ಕೊಡಲಿ (ಆ್ಯಕ್ಸ್) ಎಸೆಯುವ ದಿನವನ್ನು ಪ್ರತೀ ವರ್ಷ ಜೂನ್ 13ರಂದು ಆಚರಿಸಲಾಗುತ್ತದೆ.ಈ ದಿನವು ಕೊಡಲಿ ಎಸೆಯುವಿಕೆಯ ಮೂಲಕ ರೋಮಾಂಚನಕಾರಿ ಅನುಭವ ಪಡೆಯಲು ಜನರನ್ನು ಉತ್ತೇಜಿಸಲಾಗುತ್ತದೆ. ಇದೊಂದು ಮನೋರಂಜನಾತ್ಮಕ ಕ್ರೀಡೆಯಾಗಿದ್ದು ಕ್ರೀಡಾ ಮನೋಭಾವದಿಂದ ಇದನ್ನು ಆಚರಿಸಲಾಗುತ್ತದೆ.

ಜೂನ್ 18ಅಂತಾರಾಷ್ಟ್ರೀಯ ಪ್ಯಾನಿಕ್ ದಿನ:
ಪ್ರತೀ ವರ್ಷ ಜೂನ್ 18ರಂದು ಅಂತಾರಾಷ್ಟ್ರೀಯ ಪ್ಯಾನಿಕ್ ದಿನವೆಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ಮಾನಸಿಕ ಆರೋಗ್ಯ ಜಾಗೃತಿಯನ್ನು ಮನದಟ್ಟು ಮಾಡಿ ಒತ್ತಡವನ್ನು ಹೊರಹಾಕುವ ಉದ್ದೇಶದಿಂದ ಈ ದಿನದ ಆಚರಣೆ ಬಹಳ ಮಹತ್ವ ಪೂರ್ಣವೆನಿಸಿದೆ.

ಜೂನ್ 21- ವಿಶ್ವ ಜಿರಾಫೆ ದಿನ:
ಪ್ರತೀ ವರ್ಷ ಜೂನ್ 21ರಂದು ವಿಶ್ವ ಜಿರಾಫೆ ದಿನ ಆಚರಿಸಲಾಗುತ್ತದೆ. ಈ ದಿನವು ವಿಶ್ವದ ಅತಿ ಎತ್ತರದ ಪ್ರಾಣಿಯಾದ ಜಿರಾಫೆಯ ಆರೈಕೆ ಮಾಡುವುದು, ಜಿರಾಫೆಯ ಜೊತೆಗೆ ಸಮಯ ಕಳೆಯುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ. ಜಿರಾಫೆಯ ಸಂತತಿ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನ ಬಹಳ ಮಹತ್ವಪೂರ್ಣ ಎನಿಸಿದೆ.

ಜೂನ್ 23 – ರಾಷ್ಟ್ರೀಯ ಗುಲಾಬಿ ದಿನ
ಪ್ರತೀ ವರ್ಷ ಜೂನ್ 23ರಂದು ಅಮೇರಿಕಾದಲ್ಲಿ ವರ್ಲ್ಡ್ ಪಿಂಕ್ ಡೇ ಆಚರಿಸಲಾಗುತ್ತದೆ. ಈ ಮೂಲಕ ಪಿಂಕ್ ಬಣ್ಣದ ವಸ್ತುಗಳನ್ನು ಬಳಸಿ ಸಕಾರಾತ್ಮಕತೆ ಮನೋಭಾವನೆ ಮೂಡಿಸುವ ನಿಟ್ಟಿನಲ್ಲಿ ಈ ದಿನದ ಆಚರಣೆ ಅರ್ಥಪೂರ್ಣವಾಗಿದೆ. ಇದು ಅಮೇರಿಕಾದಲ್ಲಿ ಒಂದು ಮೋಜಿನ ಆಚರಣೆಯಾಗಿದ್ದು ಹೆಚ್ಚಾಗಿ ಈ ದಿನ ಗುಲಾಬಿ ಬಣ್ಣದ ಬಟ್ಟೆ ಧರಿಸುವುದು, ಗುಲಾಬಿ ಬಣ್ಣದ ಆಹಾರ ಖಾದ್ಯ ಸವಿಯುವ ಮೂಲಕ ಆಚರಿಸಲಾಗುತ್ತದೆ.

ಜೂನ್ 27 – ನಾಯಿಯನ್ನು ಆಫೀಸಿಗೆ ಕರೆದುಕೊಂಡು ಹೋಗುವ ದಿನ
ಪ್ರತೀ ವರ್ಷ ಜೂನ್ ಕೊನೆಯ ಶುಕ್ರವಾರದಂದು ನಾಯಿಯನ್ನು ಆಫೀಸಿಗೆ ತೆಗೆದುಕೊಂಡು ಹೋಗುವ ದಿನವನ್ನು ಅಮೇರಿಕಾದಲ್ಲಿ ಆಚರಿಸಲಾಗುತ್ತಿದೆ. ಈ ಬಾರಿ ಜೂನ್ 27ಕ್ಕೆ ಈ ದಿನ ಬರಲಿದೆ. ಮಾನವರು ಮತ್ತು ನಾಯಿ ಮರಿಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ಉದ್ದೇಶದಿಂದ ಈ ದಿನದ ಆಚರಣೆ ಬಹಳ ಮಹತ್ವಪೂರ್ಣವಾಗಿದೆ.

ಜೂನ್ 28 – CAPS LOCK DAY (ಕ್ಯಾಪ್ಸ್ ಲಾಕ್ ಡೇ)
ಕಚೇರಿಯಲ್ಲಿ ಕೆಲಸ ಮಾಡುವ ಸಿಬಂದಿಗಳಿಗೆ ಮನೋರಂಜನೆ ಸಿಗುವ ಉದ್ದೇಶದಿಂದ ಪ್ರತೀ ವರ್ಷ ಜೂನ್ 28 ರಂದು ಕ್ಯಾಪ್ಸ್ ಲಾಕ್ ಡೇ ಆಚರಿಸಲಾಗುತ್ತದೆ. ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ನಲ್ಲಿ ಎಲ್ಲವನ್ನೂ CAPS ನಲ್ಲಿ ಟೈಪ್ ಮಾಡುವ ಮೂಲಕ ಈ ದಿನ ಆಚರಿಸಲಾಗುತ್ತದೆ.