ಬಡತನ, ಕಿರಾಣಿ ಅಂಗಡಿ ಕೆಲಸ, ಲಂಚ ಮುಟ್ಟದ ಶಪಥ: ಇದು ಮಹಾಂತೇಶ ಬೀಳಗಿ ಲೈಫ್
IAS officer Mahantesh Bilagi : ಬಡತನದಲ್ಲಿ ಬೆಳೆದ ಮಹಾಂತೇಶ್ ಬೀಳಗಿ, ಕಷ್ಟದ ದಿನಗಳಲ್ಲೇ ಉತ್ತಮ ವಿದ್ಯಾಭ್ಯಾಸ ಪಡೆದು ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಅವರ ಬಾಲ್ಯದಲ್ಲಿ ಎರಡು ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದರು. ಅವರ ತಾಯಿ ವಿಧವಾ ವೇತನಕ್ಕಾಗಿ ಮನವಿ ಮಾಡಿದಾಗ ಲಂಚಕ್ಕಾಗಿ ಬೇಡಿಕೆಯಿಟ್ಟ ಸರಕಾರಿ ಅಧಿಕಾರಿಯ ದುಷ್ಟತನವನ್ನು ಕಂಡು, ಮುಂದೆ ಎಂದಿಗೂ ಲಂಚ ತೆಗೆದುಕೊಳ್ಳದೆ ಕೆಲಸ ಮಾಡಬೇಕು ಎಂದು ಶಪಥ ಮಾಡಿದ್ದರು.