ಮುಚ್ಚಿ ಹೋಗಿರುವ ಪುರಾತನ ಕಲ್ಯಾಣಿ ಮರುಜೀವಕ್ಕೆ ಯತ್ನ
ಚಿಕ್ಕಬಳ್ಳಾಪುರ ನಗರಸಭೆ ವ್ಯಾಪ್ತಿಗೆ ಒಳಪಡುವ ಕಂದವಾರ ಗ್ರಾಮದ ಸರ್ವೆನಂಬರ್ ೪೨/೨ರಲ್ಲಿ ರುವ ಒಂದು ಕಲ್ಯಾಣಿ, ೪೩/೧ರ ೭ ಗುಂಟೆಯಲ್ಲಿರುವ ಒಂದು ಮಂಟಪ ಮತ್ತು ಛತ್ರ,ಮಾವಿನ ತೋಪು, ೪೩/೩ರಲ್ಲಿ ೮ ಗುಂಟೆಯಲ್ಲಿ ಭೂಮಿ ಇವಿಷ್ಟೂ ಆಸ್ತಿಯನ್ನು ಸಬ್ ರಿಜಿಸ್ಟ್ರಾರ್ ಕಛೇರಿ ಯಲ್ಲಿ ೧೯೦೨ರಲ್ಲಿ ನೋಂದಣಿ ಮಾಡಿಸಿ ಇನ್ನು ಮುಂದೆ ಇದರ ಮೇಲೆ ನಮಗಾಗಲಿ, ನಮ್ಮ ರಕ್ತ ಸಂಬಂಧಿಕರಿಗಾಗಲಿ ಯಾವ ಹಕ್ಕು ಇರುವುದಿಲ್ಲ.