ಅಂಜನಾದ್ರಿ ಬೆಟ್ಟಕ್ಕೆ ಕ್ರಿಕೆಟಿಗ ಇಶಾಂತ್ ಶರ್ಮಾ ಭೇಟಿ
ಗೆಳೆಯನ ಜೊತೆಗೆ ಬಂದಿದ್ದ ಇಶಾಂತ್ ಶರ್ಮಾ ಅವರು 575 ಮೆಟ್ಟಿಲುಗಳನ್ನು ಏರುವ ಮೂಲಕ ಹನುಮನ ದರ್ಶನ ಪಡೆದುಕೊಂಡು ವಿಶೇಷ ಪೂಜೆಯನ್ನು ಸಲ್ಲಿಸಿದರು. ನಂತರ ಬೆಟ್ಟದ ಮೇಲಿಂದ ಹಂಪಿಯ ಸೌಂದರ್ಯ ಹಾಗೂ ಬೆಟ್ಟಗಳ ಸಾಲುಗಳ ಪರಿಸರವನ್ನು ಕಣ್ತುಂಬಿಕೊಂಡು ಫೋಟೋ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳು ಸಹ ಇಶಾಂತ್ ಶರ್ಮಾ ಅವರ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು.