ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Mahantesh Bilagi: ಬಡತನ, ಕಿರಾಣಿ ಅಂಗಡಿಯಲ್ಲಿ ಕೆಲಸ, ಲಂಚ ಮುಟ್ಟದ ಶಪಥ: ಹೀಗಿತ್ತು ಮಹಾಂತೇಶ ಬೀಳಗಿ ಬದುಕು

ಬಡತನ, ಕಿರಾಣಿ ಅಂಗಡಿ ಕೆಲಸ, ಲಂಚ ಮುಟ್ಟದ ಶಪಥ: ಇದು ಮಹಾಂತೇಶ ಬೀಳಗಿ ಲೈಫ್

IAS officer Mahantesh Bilagi : ಬಡತನದಲ್ಲಿ ಬೆಳೆದ ಮಹಾಂತೇಶ್ ಬೀಳಗಿ, ಕಷ್ಟದ ದಿನಗಳಲ್ಲೇ ಉತ್ತಮ ವಿದ್ಯಾಭ್ಯಾಸ ಪಡೆದು ದಕ್ಷ ಅಧಿಕಾರಿಯಾಗಿ ಹೆಸರು ಮಾಡಿದ್ದರು. ಅವರ ಬಾಲ್ಯದಲ್ಲಿ ಎರಡು ಹೊತ್ತು ಊಟಕ್ಕೂ ಕಷ್ಟಪಡುತ್ತಿದ್ದರು. ಅವರ ತಾಯಿ ವಿಧವಾ ವೇತನಕ್ಕಾಗಿ ಮನವಿ ಮಾಡಿದಾಗ ಲಂಚಕ್ಕಾಗಿ ಬೇಡಿಕೆಯಿಟ್ಟ ಸರಕಾರಿ ಅಧಿಕಾರಿಯ ದುಷ್ಟತನವನ್ನು ಕಂಡು, ಮುಂದೆ ಎಂದಿಗೂ ಲಂಚ ತೆಗೆದುಕೊಳ್ಳದೆ ಕೆಲಸ ಮಾಡಬೇಕು ಎಂದು ಶಪಥ ಮಾಡಿದ್ದರು.

₹200 ಶುಲ್ಕ ಕಟ್ಟಿಲ್ಲವೆಂದು ಶಾಂತ್‌ಕುಮಾರ್‌ ನಾಮಪತ್ರ ತಿರಸ್ಕೃತ!

ನಾಮಪತ್ರ ತಿರಸ್ಕೃತ; ಹೈಕೋರ್ಟ್‌ ಮೆಟ್ಟಿಲೇರಿದ ಶಾಂತ್‌ಕುಮಾರ್‌

KSCA polls: ಶುಲ್ಕ ಪಾವತಿ ಬಾಕಿ ಇರುವ ಬಗ್ಗೆ ಕೆಎಸ್‌ಸಿಎ ನೋಟಿಸ್‌ ಸಹ ನೀಡಿಲ್ಲ. ವಾರ್ಷಿಕ ಸಭೆಗೂ ಮುನ್ನ ಬಾಕಿ ಪಾವತಿಸಬೇಕು ಎನ್ನುವುದು ನಿಯಮ. ನ.30ಕ್ಕೆ ವಾರ್ಷಿಕ ಸಭೆ ಇದ್ದು, ಅದಕ್ಕೆ ಮುನ್ನ ಬಾಕಿ ಪಾವತಿಸಲು ಅವಕಾಶವಿದೆ. ಹೀಗಾಗಿ, ನಾಮಪತ್ರ ತಿರಸ್ಕೃತಗೊಳಿಸಿದ್ದು ಸರಿಯಾದ ಕ್ರಮವಲ್ಲ ಎಂದು ಶಾಂತ್‌ಕುಮಾರ್‌ ಬಣದ ಸದಸ್ಯರೊಬ್ಬರು ಹೇಳಿದ್ದಾರೆ.

Self Harming: ಗಂಡನ ಮನೆಯಲ್ಲಿ ಕಿರುಕುಳ, ಮದುವೆಯಾದ ಆರು ತಿಂಗಳಲ್ಲೇ ಮಹಿಳೆ ನಾಲೆಗೆ ಹಾರಿ ಆತ್ಮಹತ್ಯೆ

ಗಂಡನ ಮನೆಯಲ್ಲಿ ಕಿರುಕುಳ, ಮದುವೆಯಾದ ಆರು ತಿಂಗಳಲ್ಲೇ ಮಹಿಳೆ ಆತ್ಮಹತ್ಯೆ

Shivamogga news: ಆತ್ಮಹತ್ಯೆಗೆ ಶರಣಾದ ನವವಿವಾಹಿತೆಯನ್ನು ಲತಾ (25) ಎಂದು ಗುರುತಿಸಲಾಗಿದೆ. ಭದ್ರಾವತಿಯ ಹಂಚಿನ ಸಿದ್ದಾಪುರದ ನಿವಾಸಿಯಾಗಿರುವ ಲತಾ ಬಿಎಸ್‌ಸಿ ಮತ್ತು ಬಿಎಡ್ ಪದವೀಧರೆ ಆಗಿದ್ದರು. 2025ರ ಏಪ್ರಿಲ್ 14ರಂದು ಶಿಕಾರಿಪುರದ ಗುರುರಾಜ್ ಜೊತೆಗೆ ಲತಾ ವಿವಾಹವಾಗಿತ್ತು. ಆರು ತಿಂಗಳ ಹಿಂದೆಯಷ್ಟೇ ಲತಾ ಗುರುರಾಜ್ ನನ್ನು ಮದುವೆಯಾಗಿದ್ದರು.

Gold Price Today on 26th November 2025: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold and Silver Rate: ಸ್ವರ್ಣಪ್ರಿಯರಿಗೆ ಶಾಕ್‌ ಮೇಲೆ ಶಾಕ್‌ ಎದುರಾಗಿದೆ. ಚಿನ್ನದ ದರದಲ್ಲಿ ನಿರಂತರ ಏರಿಕೆ ಕಂಡುಬಂದಿದೆ. ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 80 ರೂ. ಏರಿಕೆ ಆಗಿದ್ದು, 11,725 ರೂ. ಇದ್ದರೆ, 24 ಕ್ಯಾರಟ್‌ ಚಿನ್ನದ 1 ಗ್ರಾಂ ಚಿನ್ನದ ಬೆಲೆಯಲ್ಲಿ 87 ಏರಿಕೆ ಆಗಿದ್ದು ಇಂದು 12,791 ರೂ. ಇದೆ.

ಗಗನಕ್ಕೇರಿದ ಟೊಮೆಟೋ ಬೆಲೆ

ಗಗನಕ್ಕೇರಿದ ಟೊಮೆಟೋ ಬೆಲೆ

ಏಷ್ಯಾದಲ್ಲೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯನ್ನು ಹೊಂದಿರುವುದು ಕೋಲಾರ. ಜೂನ್‌ನಿಂದ ಸೆಪ್ಟೆಂಬರ್ ವರೆಗೆ ಇಡೀ ದೇಶಕ್ಕೆ ಟೊಮೆಟೊ ಪೂರೈಕೆಯ ಪ್ರಮುಖ ಮಾರುಕಟ್ಟೆ ಕೋಲಾರ ಆಗಿದೆ. ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಂಪಿಎಂಸಿ)ಗೆ ಈ ವರ್ಷ ಟೊಮೆಟೊ ಪೂರೈಕೆ ಶೇ, 50 ರಷ್ಟು ಕುಸಿತವಾಗಿದೆ ಎಂದು ಟೊಮ್ಯಾಟೋ ವರ್ತಕರು ಹೇಳುತ್ತಾರೆ.

ಸಬಲೀಕರಣ ಮತ್ತು ವೃತ್ತಿ ಬೆಳವಣಿಗೆ ಪಾಠ: ಅಮಿಶಿ ಕೌಶಿಕ್ʼರಿಂದ ವಿದ್ಯಾರ್ಥಿಗಳಿಗೆ ಸ್ಫೂರ್ತಿ

ಅಮಿಶಿ ಕೌಶಿಕ್ʼರಿಂದ ಸಬಲೀಕರಣ ಮತ್ತು ವೃತ್ತಿ ಬೆಳವಣಿಗೆ ಪಾಠ

ಸಂವಾದದ ಸಮಯದಲ್ಲಿ, ಅಮಿಶಿ ತನ್ನ ಸ್ಪೂರ್ತಿದಾಯಕ ಪ್ರಯಾಣವನ್ನು ಹಂಚಿ ಕೊಂಡರು - ವಿನಮ್ರ ಆರಂಭ ಮತ್ತು ಆರಂಭಿಕ ಹೋರಾಟಗಳಿಂದ ರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ಗಳಿಸುವವರೆಗೆ. ಒಬ್ಬರ ವೃತ್ತಿಜೀವನವನ್ನು ರೂಪಿಸುವಲ್ಲಿ ಆತ್ಮ ವಿಶ್ವಾಸ, ಶಿಸ್ತು ಮತ್ತು ನಿರಂತರ ಕಲಿಕೆಯ ಮಹತ್ವವನ್ನು ಒತ್ತಿ ಹೇಳಿದರು.

ಎಐ-ಚಾಲಿತ ಗ್ರಾಮೀಣಾಭಿವೃದ್ಧಿ ಮತ್ತು ಬಿಎಫ್ಎಸ್ಐ ಆವಿಷ್ಕಾರ ಉದ್ದೇಶದಿಂದ ಜಾಗತಿಕ ಪಾಲುದಾರಿಕೆ ಘೋಷಿಸಿದ ಕೆಡಿಇಎಂ

ಆವಿಷ್ಕಾರ ಉದ್ದೇಶದಿಂದ ಜಾಗತಿಕ ಪಾಲುದಾರಿಕೆ ಘೋಷಿಸಿದ ಕೆಡಿಇಎಂ

ರಾಜ್ಯದಾದ್ಯಂತ ಸಮುದಾಯಗಳು, ಉದ್ಯಮಗಳು ಮತ್ತು ಹೊಸ ನಾವೀನ್ಯತಾ ಕ್ಲಸ್ಟರ್‌ ಗಳಿಗೆ ಅತ್ಯುತ್ತಮ ಫಲಿತಾಂಶ ಒದಗಿ ಸುವ ತಂತ್ರಜ್ಞಾನ ಕರೂಪಿಸುವ ಜಾಗತಿಕ ಸಂಪರ್ಕ ಹೊಂದಿ ರುವ, ಉದ್ಯಮ-ನೇತೃತ್ವದ ಡಿಜಿಟಲ್ ಪರಿಸರ ವ್ಯವಸ್ಥೆಗಳನ್ನು ಕಟ್ಟುವ ಕರ್ನಾಟಕದ ಗುರಿ ಯಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ.

Tomato Price Hike: ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಹೆಚ್ಚಳ, ಗ್ರಾಹಕ ಕಂಗಾಲು

ಟೊಮೆಟೊ ಬೆಲೆ ಗಗನಕ್ಕೆ, ತರಕಾರಿ ಬೆಲೆಯೂ ಹೆಚ್ಚಳ, ಗ್ರಾಹಕ ಕಂಗಾಲು

Vegetables Price hike: ಬೇಡಿಕೆಗೆ ತಕ್ಕಂತೆ ಟೊಮೆಟೋ ವಿತರಣೆಯಾಗದ ಹಿನ್ನೆಲೆ ಈ ಬಿಕ್ಕಟ್ಟು ಉದ್ಭವವಾಗಿದೆ ಎಂದು ಕೆಲವು ವ್ಯಾಪಾರಿಗಳು ಹೇಳಿದ್ದಾರೆ. ನಮ್ಮ ಬೇಡಿಕೆಗೆ ತಕ್ಕಷ್ಟು ಟೊಮೆಟೋ ಪೂರೈಕೆ ಆಗುತ್ತಿಲ್ಲ. ಇದರಿಂದ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ವ್ಯಾಪಾರಿ ಅಹಮದ್ ಎಂಬವರು ತಿಳಿಸಿದ್ದಾರೆ. ನಿಲ್ಲದ ಮಳೆಯಂದಾಗಿ ಟೊಮೆಟೊ ಬೆಳೆಯಲ್ಲಿ ಏರುಪೇರಾಗಿದೆ. ಸಾಕಷ್ಟು ಪೂರೈಕೆಯಾಗಿಲ್ಲ. ದಾಸ್ತಾನು ವ್ಯವಸ್ಥೆ ಕೂಡ ಆಗಿಲ್ಲ. ಹೀಗಾಗಿ ಬೆಲೆ ಹೆಚ್ಚಳವಾಗಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಮೃತ ವಯಸ್ಕ ದಾನಿಯ ರೋಬೋಟ್ ಸಹಾಯಿತ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ

ಶಸ್ತ್ರಚಿಕಿತ್ಸಾ ಸಿದ್ಧತೆ ಮತ್ತು ನಿಖರತೆ ಜೀವ ಉಳಿಸಿದ ಐತಿಹಾಸಿಕ ಸಾಧನೆ

ಮೂತ್ರಪಿಂಡ ಕಸಿ ಶಸ್ತ್ರ ಚಿಕಿತ್ಸೆ ಯಲ್ಲಿ ದಾನಿಯ ಅಂಗ ಲಭ್ಯವಾದಾಗ ಪ್ರತಿನಿಮಿಷವೂ ಬಹುಮುಖ್ಯ. ಮೃತ ದಾನಿಯ ಸಂದರ್ಭದಲ್ಲಿ ರೋಬೋಟಿಕ್ ಕಸಿ ನಡೆಸಲು ಅತ್ಯುತ್ತಮ ಸಮನ್ವಯ ಮತ್ತು ಕ್ಲಿನಿಕಲ್ ಧೈರ್ಯ ಅಗತ್ಯ. ಈ ಸಾಧನೆ ತಂತ್ರಜ್ಞಾನ, ತಂಡದ ಕೆಲಸ ಮತ್ತು ಸಮಯೋಚಿತ ನಿರ್ಧಾರಗಳು ಟ್ರಾನ್ಸ್‌ಪ್ಲಾಂಟ್ ವೈದ್ಯಕೀಯದ ಗಡಿಗಳನ್ನು ಹೇಗೆ ವಿಸ್ತರಿಸ ಬಹುದು ಎಂಬುದನ್ನು ತೋರಿಸಿದೆ.

Murugha math Sri: ಮುರುಘಾ ಮಠದ ಶರಣರ ವಿರುದ್ಧದ ಪೋಕ್ಸೋ ಕೇಸ್‌ ತೀರ್ಪು ಇಂದು

ಮುರುಘಾ ಮಠದ ಶರಣರ ವಿರುದ್ಧದ ಪೋಕ್ಸೋ ಕೇಸ್‌ ತೀರ್ಪು ಇಂದು

ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ (POCSO case) ಆರೋಪ ಎದುರಿಸುತ್ತಿರುವ ಮುರುಘಾ ಶರಣರ ಪ್ರಕರಣದ ವಾದ-ಪ್ರತಿವಾದ ಪೂರ್ಣಗೊಂಡಿದೆ. ಶರಣರ ವಿರುದ್ಧದ ಎರಡು ಪೋಕ್ಸೊ ಪ್ರಕರಣಗಳ ಪೈಕಿ ಮೊದಲ ಪ್ರಕರಣದ ಸುದೀರ್ಘ ವಿಚಾರಣೆ ನಡೆದಿದ್ದು, ವಾದ ಆಲಿಸಿದ ನ್ಯಾಯಾಲಯ ಇಂದು ಪ್ರಕರಣದ ತೀರ್ಪನ್ನು ಪ್ರಕಟಿಸುವುದಾಗಿ ತಿಳಿಸಿದೆ.

Mahantesh Bilagi: ಪ್ರಾಮಾಣಿಕ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಬದುಕಿನ ಹೃದಯಸ್ಪರ್ಶಿ ಕತೆ

ಪ್ರಾಮಾಣಿಕ ಐಎಎಸ್‌ ಅಧಿಕಾರಿ ಮಹಾಂತೇಶ್‌ ಬೀಳಗಿ ಬದುಕಿನ ಹೃದಯಸ್ಪರ್ಶಿ ಕತೆ

Kalaburagi news: ಮಹಾಂತೇಶ್‌ ಬೀಳಗಿ ಒಂದೇ ಒಂದು ರೂಪಾಯಿ ಲಂಚ ಪಡೆಯದ ಪ್ರಾಮಾಣಿಕ ಐಎಎಸ್‌ ಅಧಿಕಾರಿ ಆಗಿದ್ದರು ಎಂದು ಅವರ ಅಭಿಮಾನಿಗಳು, ಜಿಲ್ಲೆಯ ನಿವಾಸಿಗಳು ನೆನಪಿಸಿಕೊಳ್ಳುತ್ತಾರೆ. ಅವರ ಹಿನ್ನೆಲೆಯೂ ಹೃದಯಸ್ಪರ್ಶಿಯಾಗಿದೆ. ಗಣ್ಯರು ಅವರ ಕುಟುಂಬಕ್ಕೆ ಸಾಂತ್ವನ ತಿಳಿಸಿದ್ದು, ಅವರ ಅಂತ್ಯಕ್ರಿಯೆ ಎಂದು ರಾಮದುರ್ಗದಲ್ಲಿ ನಡೆಯಲಿದೆ.

priyank Khrage: ರಾಹುಲ್‌ ಗಾಂಧಿ ಭೇಟಿಯಾಗಿ ಬಂದ ಪ್ರಿಯಾಂಕ್‌ ಖರ್ಗೆ, ʼ50:50' ಒಪ್ಪಂದ ಆಗಿಲ್ಲ ಎಂದ ಕೆಜೆ ಜಾರ್ಜ್

ರಾಹುಲ್‌ ಭೇಟಿಯಾಗಿ ಬಂದ ಪ್ರಿಯಾಂಕ್‌, ʼ50:50' ಒಪ್ಪಂದ ಆಗಿಲ್ಲ ಎಂದ ಜಾರ್ಜ್

ಒಂದೆಡೆ ಹೈಕಮಾಂಡ್ ರಾಹುಲ್‌ ಗಾಂಧಿ (‌Rahul gandhi) ಅವರನ್ನು ಭೇಟಿಯಾಗಿ ಬಂದಿರುವ ಸಚಿವ ಪ್ರಿಯಾಂಕ್‌ ಖರ್ಗೆ, ಸಿಎಂ ಹಾಗೂ ಡಿಸಿಎಂ ಇಬ್ಬರನ್ನೂ ಭೇಟಿಯಾಗಿರುವ ಕುತೂಹ ಕೆರಳಿಸಿದೆ. ಇನ್ನೊಂದೆಡೆ ಸಚಿವ ಕೆಜೆ ಜಾರ್ಜ್‌ ಅವರು, ಸಿಎಂ ಸ್ಥಾನಾವಧಿ ಹಂಚಿಕೆ ಕುರಿತು ಯಾವುದೇ ಒಪ್ಪಂದ ಆಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ವ ದಾರ್ಶನಿಕರ ಜಯಂತಿ : ಅಂಬೇಡ್ಕರ್-ಗಾಂಧಿ ಪುತ್ಥಳಿ ಅನಾವರಣದೊಂದಿಗೆ ಹೊಸ ಇತಿಹಾಸಕ್ಕೆ ಭಾಷ್ಯ ಬರೆದ ಶಾಸಕ ಸಿ.ಬಿ.ಸುರೇಶಬಾಬು

ಅಂಬೇಡ್ಕರ್-ಗಾಂಧಿ ಪುತ್ಥಳಿ ಅನಾವರಣ

ಸರ್ವ ದಾರ್ಶನಿಕರ ಜಯಂತಿ ಕಾರ್ಯಕ್ರಮವು ಯಾವುದೇ ಒಂದು ನಿರ್ದಿಷ್ಟ ಸಮುದಾಯಕ್ಕೆ ಸೀಮಿತವಾಗದೆ, ಸಮಸ್ತ ದಾರ್ಶನಿಕರು, ಸಮಾಜ ಸುಧಾರಕರು ಮತ್ತು ಮಹಾತ್ಮರ ಜಯಂತಿ ಗಳನ್ನು ಒಟ್ಟಾಗಿ ಆಚರಿಸುವ ಒಂದು ವೇದಿಕೆಯಾಗಿದೆ. ಬುದ್ದ, ದೇವರ ದಾಸಿಮಯ್ಯ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್, ಮಹರ್ಷಿ ವಾಲ್ಮಿಕಿ, ಕನಕದಾಸರು ಸೇರಿದಂತೆ ಹಲವು ಮಹನೀಯರ ಆದರ್ಶ ಮತ್ತು ಸಂದೇಶಗಳನ್ನು ಈ ಸಂದರ್ಭದಲ್ಲಿ ಸ್ಮರಿಸಲಾಗುವುದು.

ಹುಚ್ಚಣ್ಣ ಕಟ್ಟೆ ಕೆರೆ ಹಸ್ತಾಂತರ: "ಧರ್ಮಸ್ಥಳದ ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿ": ಶ್ರೀ ಅಭಿನವ ಮಲ್ಲಿಕಾರ್ಜುನ ಸ್ವಾಮೀಜಿ

"ಧರ್ಮಸ್ಥಳದ ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿ"

ಡಾ. ಅಭಿನವ ಮಲ್ಲಿಕಾರ್ಜುನ ದೇಶಿ ಕೇಂದ್ರ ಮಹಾ ಸ್ವಾಮೀಜಿಯವರು ಮಾತನಾಡಿ, "ಶ್ರೀ ಕ್ಷೇತ್ರ ಧರ್ಮಸ್ಥಳದ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿದ್ದು, ಸ್ವಾವಲಂಬಿ ಬದುಕಿಗೆ ದಾರಿ ದೀಪವಾಗಿದೆ. ಪೂಜ್ಯರು ನಮ್ಮೆಲ್ಲರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ಸಮುದಾಯ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳು ಸರ್ಕಾರಕ್ಕೆ ಮಾದರಿಯಾಗಿದೆ," ಎಂದು ಬಣ್ಣಿಸಿದರು.

Chalavadi Narayanaswamy: ಶಾಸಕರ ಖರೀದಿ ಆರೋಪ: ಛಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು ದಾಖಲು

ಛಲವಾದಿ ನಾರಾಯಣಸ್ವಾಮಿ ವಿರುದ್ಧ ದೂರು ದಾಖಲು

ಕಾಂಗ್ರೆಸ್ ಪಕ್ಷದ ಯಂಗ್ ಬ್ರಿಗೇಡ್‌ ಸೇವಾದಳ ಅಧ್ಯಕ್ಷ ಜುನೈದ್ ಪಿ.ಕೆ. ನೇತೃತ್ವದಲ್ಲಿ ವಕೀಲರ ತಂಡ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳು ವಂತೆ ಆಗ್ರಹಿಸಿದ್ದಾರೆ.

ವಿದ್ಯಾರ್ಥಿ ಮೇಲೆ ಹಲ್ಲೆ: ಶಾಲೆಯ ವಿರುದ್ಧ ಪೊಲೀಸ್, ಮಕ್ಕಳ ಆಯೋಗಕ್ಕೆ ದೂರು

ವಿದ್ಯಾರ್ಥಿ ಮೇಲೆ ಹಲ್ಲೆ: ಶಾಲೆಯ ವಿರುದ್ಧ ಪೊಲೀಸ್, ಮಕ್ಕಳ ಆಯೋಗಕ್ಕೆ ದೂರು

ದ್ಯಾರ್ಥಿಯೊಬ್ಬರ ತಲೆಗೆ ಗಂಭೀರ ಗಾಯವಾಗಿದ್ದು, ಆತನಿಗೆ ಚಕಿತ್ಸೆ ಕೊಡಿಸದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಶಾಲಾ ಆಡಳಿತ ಮಂಡಳಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಶಾಲಾ ಆಡಳಿತ ಮಂಡಳಿಯ ದಿವ್ಯ ನಿರ್ಲಕ್ಷ್ಯದ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೂ ದೂರು ಸಲ್ಲಿಸಲಾಗಿದೆ

Karnataka CM Race: 2028ರಲ್ಲಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ನಮಗೆ ಮುಖ್ಯ : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

2028ರಲ್ಲಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ತರುವುದೇ ಗುರಿ: ಹೆಬ್ಬಾಳ್ಕರ್

Laxmi Hebbalkar: ಕರ್ನಾಟಕದಲ್ಲಿನ ರಾಜಕೀಯ ಬೆಳವಣಿಗೆಗಳ ಕುರಿತು ಡಿಸಿಎಂ ಹೇಳಿಕೆ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಪ್ರತಿಕ್ರಿಯಿಸಿದ್ದಾರೆ. ಅಧಿಕಾರ ಹಂಚಿಕೆ ಕುರಿತ ನಿರ್ಧಾರವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ನಮ್ಮೆಲ್ಲರ ಉದ್ದೇಶ ಒಂದೇ, ಅದು 2028ರ ಚುನಾವಣೆಯಲ್ಲಿ ಪುನಃ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಕೆಲಸ ಮಾಡುವುದು ಎಂದು ತಿಳಿಸಿದ್ದಾರೆ.

JDS Protest: ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ರೆ ತುಂಗಭದ್ರಾ ಡ್ಯಾಂಗೆ ಮುತ್ತಿಗೆ: ನಿಖಿಲ್‌ ಕುಮಾರಸ್ವಾಮಿ ಎಚ್ಚರಿಕೆ

ರೈತರ ಬೇಡಿಕೆಗಳಿಗೆ ಸ್ಪಂದಿಸದಿದ್ರೆ ಟಿಬಿ ಡ್ಯಾಂಗೆ ಮುತ್ತಿಗೆ: ನಿಖಿಲ್‌

ರೈತರಿಗೆ ಬೇಕಿರುವುದು ನೀರು, ಗ್ಯಾರಂಟಿಗಳಲ್ಲ. ನೀರು ಕೊಟ್ಟರೆ ಅವರೇ ನಿಮಗೆ ಗ್ಯಾರಂಟಿಗೆ ಹಣ ಕೊಡ್ತಾರೆ. ಈ ಸರ್ಕಾರಕ್ಕೆ ಮಾನ, ಮರ್ಯಾದೆ ಏನು ಇಲ್ಲ. ಇದು ದಪ್ಪ ಚರ್ಮದ ಸರ್ಕಾರ ಎಂದು ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Mahantesh Bilagi Death: ಜೇವರ್ಗಿ ಬಳಿ ಭೀಕರ ಕಾರು ಅಪಘಾತ; ಹಿರಿಯ ಐಎಎಸ್‌ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರ ಸಾವು

ಕಾರು ಅಪಘಾತದಲ್ಲಿ ಐಎಎಸ್‌ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರ ಸಾವು

Kalaburagi Car Accident: ವಿಜಯಪುರದಿಂದ ಕಲಬುರಗಿಗೆ ತೆರಳುತ್ತಿದ್ದ ವೇಳೆ ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್​​ ಬಳಿ ಮಂಗಳವಾರ ಕಾರು ಅಪಘಾತಕ್ಕೀಡಾಗಿದೆ. ಈ ಹಿಂದೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಅವರನ್ನು ಜನವರಿಯಲ್ಲಿ ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮ ಎಂಡಿಯಾಗಿ ವರ್ಗಾವಣೆ ಮಾಡಲಾಗಿತ್ತು.

Karnataka Politics: ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ಹೋಗಿದ್ದೇಕೆ?; ಆ ಗುಟ್ಟು ಬಹಿರಂಗ ಮಾಡಲ್ಲ ಎಂದ ಡಿ.ಕೆ.ಶಿವಕುಮಾರ್‌

ಖರ್ಗೆ ದೆಹಲಿಗೆ ಹೋಗಿದ್ದೇಕೆ?; ಆ ಗುಟ್ಟು ಬಹಿರಂಗ ಮಾಡಲ್ಲ ಎಂದ ಡಿಕೆಶಿ

DK Shivakumar: ಕೆಲ ಶಾಸಕರು ದೆಹಲಿಗೆ ತೆರಳಿದ್ದು, ನಿಮ್ಮನ್ನು ಸಿಎಂ ಮಾಡಲು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್‌ ಅವರು, “ಸಚಿವ ಸ್ಥಾನದ ಆಕಾಂಕ್ಷೆ ಇರುವವರು ಹೋಗಿದ್ದಾರೆ, ನನ್ನನ್ನು ಸಿಎಂ ಮಾಡುವ ಪ್ರಯತ್ನದ ಬಗ್ಗೆ ನನಗೆ ಗೊತ್ತಿಲ್ಲ. ನಾನು ಅವರಿಗೆ ಕರೆ ಮಾಡಿಲ್ಲ, ಅವರನ್ನು ಕಳುಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Belagavi News: 4ನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ಕತ್ತು ಹಿಸುಕಿ ಕೊಂದ ತಾಯಿ!

4ನೇ ಮಗು ಕೂಡ ಹೆಣ್ಣಾಗಿದ್ದಕ್ಕೆ ಕತ್ತು ಹಿಸುಕಿ ಕೊಂದ ತಾಯಿ!

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮಲಂಗಿ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ. ಹೆಣ್ಣು ಮಗಳನ್ನು ಕೊಂದ ಬಳಿಕ ತಾಯಿ ಡ್ರಾಮಾ ಮಾಡಿದ್ದು, ಮಗುವಿಗೆ ಉಸಿರಾಡುತ್ತಿಲ್ಲ ಎಂದು ಮನೆಯವರಿಗೆ ಹೇಳಿದ್ದಾಳೆ. ಇದರಿಂದ ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಮಗುವನ್ನು ತೆಗೆದುಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ.

Bengaluru Power Cut: ನ.27ರಂದು ಬೆಂಗಳೂರಿನ ವಿಲ್ಸನ್ ಗಾರ್ಡನ್, ಶಾಂತಿನಗರ ಸೇರಿ ಹಲವೆಡೆ ವಿದ್ಯುತ್ ವ್ಯತ್ಯಯ

Bengaluru Power Cut: ನ.27ರಂದು ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ

66/11ಕೆವಿ ಬಿ.ಎಂ.ಟಿ.ಸಿ ಉಪಕೇಂದ್ರ ವ್ಯಾಪ್ತಿಯಲ್ಲಿ ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವ ಹಿನ್ನೆಲೆಯಲ್ಲಿ ನವೆಂಬರ್‌ 27ರಂದು ಬೆಳಗ್ಗೆ 10ಯಿಂದ ಸಂಜೆ 05:00 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

GTTCs in Karnataka: ಜಿಟಿಟಿಸಿ ಕೇಂದ್ರಗಳ ಕಾಮಗಾರಿ ಶೀಘ್ರ ಪ್ರಾರಂಭಿಸಿ: ಸಿಎಂ ಸೂಚನೆ

ಜಿಟಿಟಿಸಿ ಕೇಂದ್ರಗಳ ಕಾಮಗಾರಿ ಶೀಘ್ರ ಪ್ರಾರಂಭಿಸಿ: ಸಿಎಂ ಸೂಚನೆ

ನೂತನ ಜಿಟಿಟಿಸಿ ಕೇಂದ್ರಗಳ ಸ್ಥಾಪನೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಜಿಟಿಟಿಸಿ ಮೂಲಕ ಗ್ರಾಮೀಣ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗ ಕಲ್ಪಿಸಲು ಸಾಧ್ಯವಾಗಿದೆ. ಈ ಸಾಲಿನ ಬಜೆಟ್‌ನಲ್ಲಿ ಹೊಸ 7 ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸುವ ಘೋಷಣೆ ಮಾಡಲಾಗಿದ್ದು, ಈ ಕೇಂದ್ರಗಳ ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Karnataka CM Race: ಡಿಕೆಶಿ 50 ಶಾಸಕರ ಸಂಖ್ಯಾಬಲ ತೋರಿಸಿದ್ರೆ ಇವತ್ತೇ ಸಿಎಂ ಮಾಡ್ತೇವೆ: ರಮೇಶ್‌ ಜಾರಕಿಹೊಳಿ

ಡಿಕೆಶಿ 50 ಶಾಸಕರ ಸಂಖ್ಯಾಬಲ ತೋರಿಸಿದ್ರೆ ಇವತ್ತೇ ಸಿಎಂ ಮಾಡ್ತೇವೆ

Ramesh Jarkiholi: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಕ್ಕೆ ಸಿದ್ದರಾಮಯ್ಯ ಕಾರಣ ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಹೇಳಿಕೆಗೆ ಶಾಸಕ ರಮೇಶ್‌ ಜಾರಕಿಹೊಳಿ ಅವರು ಪ್ರತಿಕ್ರಿಯಿಸಿದ್ದು, ದೇವೇಗೌಡ ಅವರ ಮಾತಿಗೆ ಕೌಂಟರ್ ಕೊಡಲು ಆಗುವುದಿಲ್ಲ. ಆದರೆ, ಸಮ್ಮಿಶ್ರ ಸರ್ಕಾರ ಪತನಕ್ಕೆ ಮೂಲಕಾರಣ ಡಿಕೆ.ಶಿವಕುಮಾರ್ ಎಂದು ತಿಳಿಸಿದ್ದಾರೆ.

Loading...