ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ ವತಿಯಿಂದ 'ಐಐಎಸ್ ಸಿಖಾಯೇಗ' ಆರಂಭ!

ಡಿಜಿಟಲ್ ಕಲಿಕಾ ವೇದಿಕೆಯಿಂದ 'ಐಐಎಸ್ ಸಿಖಾಯೇಗ' ಆರಂಭ!

ಮುಂಬರುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಚಾಂಪಿಯನ್ನರನ್ನು ಬೆಳೆಸುವ ಉದ್ದೇಶದಿಂದ ನಿರ್ಮಿಸಲಾದ ವಿಶ್ವಮಟ್ಟದ ಹೈ-ಪರ್ಫಾರ್ಮೆನ್ಸ್ ಕೇಂದ್ರವಾದ ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS) ಇಂದು ತನ್ನ ಹೊಸ ಡಿಜಿಟಲ್ ಕಲಿಕಾ ವೇದಿಕೆಯನ್ನು ‘IIS Sikhaega’ ಎಂಬ ಹೆಸರಿನಲ್ಲಿ ಪ್ರಾರಂಭಿಸಿದೆ.

GST Reforms: ʼಗಬ್ಬರ್ ಸಿಂಗ್ ತೆರಿಗೆʼಯಿಂದ ಸಣ್ಣ ವ್ಯಾಪಾರಿಗಳು ಸರ್ವನಾಶ ಎಂದ ಸಿದ್ದರಾಮಯ್ಯ

ವಿಪಕ್ಷಗಳ ಒತ್ತಡದಿಂದಲೇ ಜಿಎಸ್‌ಟಿ ಕಡಿತವಾಗಿದೆ ಎಂದ ಸಿಎಂ

CM Siddaramaiah: ಈಗಿನ ಜಿಎಸ್‌ಟಿ ಸುಧಾರಣೆಯಿಂದಾಗಿ ಕರ್ನಾಟಕ ಸರ್ಕಾರ ವಾರ್ಷಿಕ ₹15,000 ದಿಂದ ₹20,000 ಕೋಟಿಯಷ್ಟು ವರಮಾನವನ್ನು ಕಳೆದುಕೊಳ್ಳಲಿದೆ. ಹೀಗಿದ್ದರೂ ರಾಜ್ಯದ ಜನರ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಸರ್ಕಾರ ಜಿಎಸ್‌ಟಿ ವ್ಯವಸ್ಥೆಯಲ್ಲಿ ಸುಧಾರಣೆ ತರುವ ಈ ನಿರ್ಧಾರವನ್ನು ಸ್ವಾಗತಿಸುತ್ತದೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈಗಲೂ ಸಂಗ್ರಹಿಸುತ್ತಿರುವ ಜಿಎಸ್‌ಟಿ ಪರಿಹಾರ ಸುಂಕದಲ್ಲಿ ನ್ಯಾಯಬದ್ಧ ಪಾಲನ್ನು ರಾಜ್ಯಕ್ಕೆ ನೀಡಬೇಕೆಂದು ಆಗ್ರಹಿಸುತ್ತಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Haveri News: ಚಕ್ಕಡಿ ಸಮೇತ ತುಂಗಾ ಕಾಲುವೆಗೆ ಬಿದ್ದು ಜೋಡೆತ್ತು ದುರ್ಮರಣ‌

ಚಕ್ಕಡಿ ಸಮೇತ ತುಂಗಾ ಕಾಲುವೆಗೆ ಬಿದ್ದು ಜೋಡೆತ್ತು ದುರ್ಮರಣ‌

Tunga canal: ಹಾವೇರಿ ತಾಲೂಕಿನ ಕುರಗುಂದ ಗ್ರಾಮದಲ್ಲಿ ಘಟನೆ ನಡೆದಿದೆ. ತುಂಗಾ ಮೇಲ್ದಂಡೆ ಕಾಲುವೆ ದಂಡೆಗಳ‌ ಮೇಲೆ ಹೊಲಗಳಿಗೆ ಹೋಗಲು ರೈತರಿಗೆ ರಸ್ತೆ ಕಲ್ಪಿಸಿದ್ದು, ಕಾಲುವೆ ಏರಿಗಳಿಗೆ ತಡೆ ಬೇಲಿ ನಿರ್ಮಿಸದಿರುವುದೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

Corruption case: ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಲಂಚ ಕೇಳಿದ ಲ್ಯಾಬ್ ಟೆಕ್ನಿಷಿಯನ್; ವಿಡಿಯೋ ವೈರಲ್‌

ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಲಂಚ ಕೇಳಿದ ಲ್ಯಾಬ್ ಟೆಕ್ನಿಷಿಯನ್

Kalaburagi News: ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೇಪೇಟೆಯಲ್ಲಿ ನಡೆದಿದೆ. ಬಡ ಗರ್ಭಿಣಿಯರ ಆರೋಗ್ಯ ತಪಾಸಣೆಗೆ ಆರೋಗ್ಯ ಇಲಾಖೆ ಸಿಬ್ಬಂದಿ‌ ಲಂಚ ಕೇಳಿದ್ದಾನೆ. ಪ್ರತಿ ಗರ್ಭಿಣಿ ತಪಾಸಣೆಗೆ 100 ರೂ. ನೀಡಬೇಕು ಎಂದು ಆಶಾ ಕಾರ್ಯಕರ್ತೆಯರ ಬಳಿ ಬೇಡಿಕೆ ಇಟ್ಟಿದ್ದು, ಹಣ ಕೊಡದಿದ್ದರೇ ಕೆಲಸ ಮಾಡಲ್ಲ ಎಂದು ಸರ್ಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ತಿಳಿಸಿದ್ದಾನೆ.

Abhiman studio: ಅಭಿಮಾನ್‌ ಸ್ಟುಡಿಯೋ ಜಾಗ ವಶಕ್ಕೆ ಪಡೆಯುವ ಹಕ್ಕು ಸರ್ಕಾರಕ್ಕಿಲ್ಲ: ನಟ ಬಾಲಕೃಷ್ಣ ಪುತ್ರಿ ಆಕ್ರೋಶ

ಅಭಿಮಾನ್‌ ಸ್ಟುಡಿಯೋ ಜಾಗ ವಶಕ್ಕೆ ಪಡೆಯುವ ಹಕ್ಕು ಸರ್ಕಾರಕ್ಕಿಲ್ಲ

Abhiman studio: ಸರ್ಕಾರವು ಅರಣ್ಯ ಇಲಾಖೆಗೆ 10 ಎಕರೆ ವಿಸ್ತೀರ್ಣದ ಅಭಿಮಾನ್‌ ಸ್ಟುಡಿಯೋ ಭೂಮಿಯನ್ನು ಮರಳಿ ಸ್ವಾಧೀನಪಡಿಸಿಕೊಳ್ಳಲು ನಿರ್ದೇಶಿಸಿದೆ ಎಂಬ ಸುದ್ದಿಯೂ ಪ್ರಚಾರದಲ್ಲಿದೆ. ಆದರೆ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರವು ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿಲ್ಲ ಎಂದು ಟಿ.ಎನ್‌.ಬಾಲಕೃಷ್ಣ ಅವರ ಪುತ್ರಿ ಗೀತಾ ಬಾಲಿ ತಿಳಿಸಿದ್ದಾರೆ.

DK Shivakumar: ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಈಗಿನಿಂದಲೇ ಗಮನ ಹರಿಸಿ- ಡಿ.ಕೆ.ಶಿವಕುಮಾರ್

ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲೆ ಈಗಿನಿಂದಲೇ ಗಮನ ಹರಿಸಿ- ಡಿಕೆಶಿ

DK Shivakumar: ಶಿಕ್ಷಣ ಕ್ಷೇತ್ರದ ಪರಿಷತ್ ಚುನಾವಣೆ ಮುಂದಿನ ವರ್ಷ ನಡೆಯಲಿದ್ದು, ಈ ತಿಂಗಳ ಒಳಗಾಗಿ ಅರ್ಜಿ ಕರೆಯಲಾಗುವುದು. ನಂತರ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಜಿ.ಸಿ. ಚಂದ್ರಶೇಖರ್ ‌ಅವರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಇದರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Bhovi Corporation Scam: ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್ ರಾಜೀನಾಮೆ ಸಲ್ಲಿಕೆ

ಭೋವಿ ನಿಗಮದ ಅಧ್ಯಕ್ಷ ಸ್ಥಾನಕ್ಕೆ ಎಸ್.ರವಿಕುಮಾರ್ ರಾಜೀನಾಮೆ ಸಲ್ಲಿಕೆ

S Ravikumar: ಭೂಮಿ ಮಂಜೂರಾದವರಿಗೆ 25 ಲಕ್ಷ ರೂ. ಸಹಾಯಧನ ಬಿಡುಗಡೆ ಮಾಡಲು ಭೋವಿ ನಿಗಮದ ಅಧ್ಯಕ್ಷ ರವಿಕುಮಾರ್ 5 ಲಕ್ಷ ರೂ. ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ರವಿಕುಮಾರ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.

CM Siddaramaiah: ಶಿಕ್ಷಣ ನಮ್ಮ‌ ಸರ್ಕಾರದ ಆದ್ಯತಾ ಕಾರ್ಯಕ್ರಮ- ಸಿದ್ದರಾಮಯ್ಯ

ಶಿಕ್ಷಣ ನಮ್ಮ‌ ಸರ್ಕಾರದ ಆದ್ಯತಾ ಕಾರ್ಯಕ್ರಮ- ಸಿದ್ದರಾಮಯ್ಯ

Karnataka CM Siddaramaiah: ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಡಾ. ಸರ್ವೆಪಲ್ಲಿ ರಾಧಾಕೃಷ್ಣ ಅವರು ಅತ್ಯಂತ ನೈತಿಕ ಮೌಲ್ಯಗಳುಳ್ಳ ಶಿಕ್ಷಕರೂ, ರಾಷ್ಟ್ರಪತಿಗಳೂ ಆಗಿದ್ದರು. ಇವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವ ಎಂದು ಹೇಳಿದ್ದಾರೆ.

CM Siddaramaiah: ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ನಮ್ಮ ಉದ್ದೇಶ- ಸಿಎಂ ಸಿದ್ದರಾಮಯ್ಯ

ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ನಮ್ಮ ಉದ್ದೇಶ: ಸಿಎಂ

CM Siddaramaiah: ಇವಿಎಂ ಬದಲಿಗೆ ಬ್ಯಾಲೆಟ್ ಮೂಲಕ ಚುನಾವಣೆ ಮಾಡಬೇಕೆನ್ನುವುದು ನಮ್ಮ ಉದ್ದೇಶವಾಗಿದ್ದು, ನಮ್ಮಅನುಭವದ ಮೇಲೆ ನಾವು ಈ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Yedamuri Falls: ಎಡಮುರಿ ಫಾಲ್ಸ್‌ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಎಡಮುರಿ ಫಾಲ್ಸ್‌ನಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

Mandya News: ಮಂಡ್ಯದ ಪ್ರವಾಸಿ ತಾಣವಾಗಿರುವ ಎಡಮುರಿ ಫಾಲ್ಸ್‌ ನೋಡಲು ಬೆಂಗಳೂರಿನ ಡಾನ್ ಬಾಸ್ಕೋ ಪದವಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ತೆರಳಿದ್ದರು. ಕಾಲೇಜಿಗೆ ರಜೆ ಇದ್ದ ಕಾರಣ ಸ್ನೇಹಿತರೊಂದಿಗೆ ಕಾವೇರಿ ನದಿಯಲ್ಲಿ ಈಜಲು ಹೋದಾಗ ದುರ್ಘಟನೆ ನಡೆದಿದೆ.

AI city at Bidadi: ಬಿಡದಿಯಲ್ಲಿ ಭಾರತದ ಪ್ರಪ್ರಥಮ ಎಐ ಸಿಟಿ ನಿರ್ಮಾಣ; ಇಲ್ಲಿ ಏನೆಲ್ಲಾ ಇರಲಿದೆ?

ಬಿಡದಿಯಲ್ಲಿ ಭಾರತದ ಪ್ರಪ್ರಥಮ ಎಐ ಸಿಟಿ ನಿರ್ಮಾಣ; ಇಲ್ಲಿ ಏನೆಲ್ಲಾ ಇರಲಿದೆ?

Greater Bengaluru Integrated Township: ಎಐ ಸಿಟಿ ಈ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಮಾಹಿತಿ ಹಂಚಿಕೊಂಡಿದ್ದು, ಮಹತ್ವಾಕಾಂಕ್ಷೆಯ ಎಐ ಸಿಟಿಯನ್ನು ಸುಮಾರು 9,000 ಎಕರೆಗಳಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇಲ್ಲಿ ಎಐ ಉದ್ಯಮಗಳಿಗೆ 2000 ಎಕರೆ ಮೀಸಲಿಡಲಾಗುತ್ತದೆ.

Miss Firing: ಏರ್‌ಗನ್‌ನಿಂದ ಆಕಸ್ಮಿಕವಾಗಿ ಶೂಟ್‌; 9 ವರ್ಷದ ಬಾಲಕ ಸಾವು

ಏರ್‌ಗನ್‌ನಿಂದ ಆಕಸ್ಮಿಕವಾಗಿ ಶೂಟ್‌; ಬಾಲಕ ಸಾವು

ಆಟವಾಡುತ್ತಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಏರ್‌ಗನ್‌ ಟ್ರಿಗರ್‌ (Air Gun) ಅದುಮಿದ ಪರಿಣಾಮ ಮತ್ತೋರ್ವ ಬಾಲಕನಿಗೆ ಗುಂಡು ತಗಲಿ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಬಾಲಕನಿಗೆ ಗುಂಡು ತಗಲಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Dharmasthala Case: ಕೊಂದವರು ಯಾರು?; ಧರ್ಮಸ್ಥಳ ಕೇಸ್‌ ಕುರಿತು ಮಹಿಳಾ ಸಂಘಟನೆಗಳಿಂದ ಸೋನಿಯಾ ಗಾಂಧಿಗೆ ಪತ್ರ

ಧರ್ಮಸ್ಥಳ ಪ್ರಕರಣ; ಸೋನಿಯಾ ಗಾಂಧಿಗೆ ಮಹಿಳಾ ಸಂಘಟನೆಗಳ ಪತ್ರ

Sonia Gandhi: ಸುಮಾರು 10 ಮಹಿಳಾ ಸಂಘಟನೆಗಳು ಹಾಗೂ 40 ಸಾಮಾಜಿಕ ಹೋರಾಟಗಾರ್ತಿಯರು ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಎಸ್‌ಐಟಿ ತನಿಖೆ, ಚಿನ್ನಯ್ಯನ ಬಂಧನ, ಸುಜಾತ ಭಟ್ ಪ್ರಕರಣ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿಕೆ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗಿದೆ.

Shimoga News: ಜಾಹೀರಾತು ಜಗತ್ತಿನಲ್ಲಿ ಟಿ.ಎ.ನರೇಶ್‌ ಮಿನುಗುತಾರೆ

Shimoga News: ಜಾಹೀರಾತು ಜಗತ್ತಿನಲ್ಲಿ ಟಿ.ಎ.ನರೇಶ್‌ ಮಿನುಗುತಾರೆ

ಜಾಹೀರಾತು ಪ್ರಚಾರದ ಸಾಧನವಲ್ಲ. ಬರೀ ಮಾಹಿತಿ ನೀಡುವುದಲ್ಲ. ಉತ್ಪನ್ನಗಳ ಆತ್ಮವನ್ನು ತುಂಬಿ ಗ್ರಾಹಕರ ಭಾವನೆಗಳಿಗೆ ಜೋಡಿಸುವುದೇ ಜಾಹೀರಾತು. ಆ ಕೆಲಸವನ್ನು ಝೇಂಕಾರ್ ಅಡ್ವರ್ಟೈಸಿಂಗ್ ಮೂಲಕ ನರೇಶ್ ಮಾಡುತ್ತಿದ್ದಾರೆ. ಈ ಕಾರ್ಯಕ್ರಮ ಬೆಂಗಳೂರಲ್ಲಿ ಆಗಿದ್ದರೆ ಅಷ್ಟೊಂದು ಯಶಸ್ಸು ಆಗುತ್ತಿರಲಿಲ್ಲ. ಹುಟ್ಟೂರಲ್ಲಿ ಆಗುವ ಸನ್ಮಾನವೇ ನಿಜವಾದ ಸಾರ್ಥಕ ಆಗುತ್ತದೆ

Illicit relationship: ಮೂರು ಮಕ್ಕಳು, ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಪರಾರಿ!

ಮೂರು ಮಕ್ಕಳು, ಗಂಡನನ್ನು ಬಿಟ್ಟು ಪ್ರಿಯಕರನ ಜೊತೆ ಪರಾರಿ!

Anekal: ಆನೇಕಲ್ ಬಸವನಪುರ ಗ್ರಾಮದಲ್ಲಿ ಲೀಲಾವತಿ ಎಂಬಾಕೆ ಹೀಗೆ ಮಾಡಿದ್ದಾಳೆ. ಮದುವೆಯಾಗಿ 11 ವರ್ಷಗಳ ಬಳಿಕ ಗಂಡ, ಸಂಸಾರ, ಮೂರು ಮಕ್ಕಳನ್ನು ಬಿಟ್ಟು ಈಕೆ ಲವರ್ ಜೊತೆ ಪರಾರಿಯಾಗಿದ್ದಾಳೆ. ಮಂಜುನಾಥ್ ಎಂಬವರ ಪತ್ನಿ ಲೀಲಾವತಿ ಗಂಡ, ಮಕ್ಕಳು ಬೇಡ ಅಂತ ಪ್ರಿಯಕರನ ಹಿಂದೆ ಬಿದ್ದಿದ್ದಾಳೆ.

Dharmasthala Case: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಕೇರಳದ ಯುಟ್ಯೂಬರ್‌ಗೆ ಎಸ್‌ಐಟಿ ನೋಟಿಸ್‌

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಕೇರಳದ ಯುಟ್ಯೂಬರ್‌ಗೆ ಎಸ್‌ಐಟಿ ನೋಟಿಸ್‌

Youtuber: ಕೇರಳ ಮೂಲದ ಯೂಟ್ಯೂಬರ್ ಮನಾಫ್​, ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಿಂದಲೂ ತನ್ನ ಯೂಟ್ಯೂಬ್​ನಲ್ಲಿ ಸುಳ್ಳು ಕಥೆ ಕಟ್ಟಿ ಹರಿಯಬಿಟ್ಟಿದ್ದ. ಜಯಂತ್ ಟಿ. ಮೂಲಕ ಬುರುಡೆ ಕಥೆಯನ್ನು ಕೇರಳಕ್ಕೂ ಹಬ್ಬಿಸಿದ್ದ. ಧರ್ಮಸ್ಥಳದಲ್ಲಿ ನೂರಾರು ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ಮಾಡಿ ಹೂಳಲಾಗಿದೆ ಎಂದು ಪ್ರಚಾರ ಮಾಡಿದ್ದ.

Gold Rate Today: ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

ಚಿನ್ನದ ದರದಲ್ಲಿ ಮತ್ತೆ ಏರಿಕೆ; ಇಂದಿನ ರೇಟ್‌ ಚೆಕ್‌ ಮಾಡಿ

Gold price today on 5th Sep 2025: ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 70ರೂ. ಏರಿಕೆ ಕಂಡಿದ್ದು, 9,865 ರೂ. ಇದೆ. ಇನ್ನು 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 76ರೂ. ಏರಿಕೆಯಾಗಿ 10,762 ರೂ.ಗೆ ತಲುಪಿದೆ.

Eid Milad: ಇಂದು ಈದ್‌ ಮಿಲಾದ್‌, ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಇಂದು ಈದ್‌ ಮಿಲಾದ್‌, ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿರ್ಬಂಧ

Bengaluru: ಈದ್-ಎ-ಮಿಲಾದ್ ಹಬ್ಬದ ಪ್ರಯುಕ್ತ ಮುಸ್ಲಿಂ ಬಾಂಧವರು ಸ್ತಬ್ದ ಚಿತ್ರಗಳು, ವಾದ್ಯಗಳ ಮುಖಾಂತರ ಶಿವಾಜಿನಗರ ಕಂಬಲ್ ಪೋಷ್ ದರ್ಗಾಕ್ಕೆ ಮೆರವಣಿಗೆ ಮೂಲಕ ಸಾಗುವುದರಿಂದ ವಾಹನಗಳ ಸುಗಮ ಸಂಚಾರದ ಹಿತದೃಷ್ಟಿಯಿಂದ ಈ ಕೆಳಕಂಡಂತೆ ಸಂಚಾರ ವ್ಯವಸ್ಥೆಯನ್ನು ಬದಲಿಸಲಾಗಿದೆ.

Bengaluru Crime: ಬೆಂಗಳೂರಿನ ರಸ್ತೆಯಲ್ಲಿ ಮಾರಕಾಸ್ತ್ರ ಝಳಪಿಸಿ ರೌಡಿಯ ದಾಂಧಲೆ, ಸ್ಥಳೀಯರ ಆತಂಕ

ಬೆಂಗಳೂರಿನ ರಸ್ತೆಯಲ್ಲಿ ಮಾರಕಾಸ್ತ್ರ ಝಳಪಿಸಿ ರೌಡಿಯ ದಾಂಧಲೆ, ಸ್ಥಳೀಯರ ಆತಂಕ

Crime news: ಗೂಡ್ಸ್ ಆಟೋ ಚಾಲಕನ ಮೇಲೆ ಕಿಡಿಗೇಡಿಯೊಬ್ಬ ಕತ್ತಿಯಂತಹ ಉದ್ದನೆಯ ಮಾರಕಾಸ್ತ್ರವನ್ನು ಹಿಡಿದು ಆತನ ಮೇಲೆ ದಾಳಿಗೆ ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ತಡೆಯಲು ಯತ್ನಿಸಿದಾಗ ಗೂಡ್ಸ್ ಆಟೋದ ಗಾಜುಗಳನ್ನು ಜಖಂಗೊಳಿಸಿದ್ದಾನೆ. ನಂತರ ಬೈಕ್​ ಹತ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

Drowned: ಎಮ್ಮೆ ತೊಳೆಯಲು ಹೋಗಿ ಬಾವಿಯಲ್ಲಿ ಮುಳುಗಿ ದಂಪತಿ ಸಾವು

ಎಮ್ಮೆ ತೊಳೆಯಲು ಹೋಗಿ ಬಾವಿಯಲ್ಲಿ ಮುಳುಗಿ ದಂಪತಿ ಸಾವು

Mandya news: ವಸಂತಮ್ಮ(65) ಹಾಗು ಕಾಳೇಗೌಡ (70) ಎಂಬ ದಂಪತಿ ಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಎಮ್ಮೆ ತೊಳೆಯಲು ಹೋಗಿದ್ದ ವೇಳೆ ತೆರೆದ ಬಾವಿಗೆ ಬಿದ್ದ ಪತ್ನಿಯನ್ನು ರಕ್ಷಿಸಲು ಹೋದ ಪತಿ ಕೂಡ ಸಾವನ್ನಪ್ಪಿದ್ದಾರೆ. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Cabinet meeting: ರಾಜ್ಯದ 1-10ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ವಾರದಲ್ಲಿ 5 ದಿನ ರಾಗಿ ಮಾಲ್ಟ್ ವಿತರಣೆ

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ವಾರದಲ್ಲಿ 5 ದಿನ ರಾಗಿ ಮಾಲ್ಟ್ ವಿತರಣೆ

Ragi Malt: ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತರಗತಿ 1ರಿಂದ 10 ವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಾಗಿ ಮಿಕ್ಸ್‌ ಅನ್ನು ಬಿಸಿ ಹಾಲಿನೊಂದಿಗೆ ಮಿಶ್ರಣ ಮಾಡಿ ವಿತರಿಸಲಾಗುತ್ತಿರುವ ಕಾರ್ಯಕ್ರಮವನ್ನು ವಾರದ ಮೂರು ದಿನಗಳ ಬದಲಾಗಿ ಐದು ದಿನಗಳಿಗೆ ವಿಸ್ತರಿಸಲಾಗುತ್ತಿದೆ.

ಮನುವಿಕಾಸ ಸಂಸ್ಥೆಗೆ ಇಂಡಿಯಾ ಸಿಎಸ್ಆರ್ ಮತ್ತು ಸಸ್ಟೇನೆಬಿಲಿಟಿ ಅವಾರ್ಡ್ 2025 ರಾಷ್ಟ್ರೀಯ ಪ್ರಶಸ್ತಿ

ಮನುವಿಕಾಸ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ

ಮನುವಿಕಾಸ ಸಂಸ್ಥೆಯು ಕಳೆದ 20 ವರ್ಷಗಳಿಂದ ಕೆರೆ ಅಭಿವೃದ್ಧಿ, ಕೃಷಿ ಹೊಂಡ ಗಳ ನಿರ್ಮಾಣ ಮತ್ತು ಬೆಟ್ಟ ಸಂರಕ್ಷಣೆಯ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವುದನ್ನು ಗಮನಿಸಿದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು ಈ ಪ್ರಶಸ್ತಿಯನ್ನು ನೀಡಿದೆ. ಮನು ವಿಕಾಸ ಸಂಸ್ಥೆಯ ನಿರ್ದೇಶಕ ಗಣಪತಿ ಭಟ್ ಮತ್ತು ಗುರುದಾಸ್ ಪ್ರಭು ಈ ಪ್ರಶಸ್ತಿಯನ್ನು ಪಡೆದರು

DK Shivakumar: ಡಿಸಿಎಂ ಡಿಕೆ ಶಿವಕುಮಾರ್ ದೇಶದ 2ನೇ ಶ್ರೀಮಂತ ಸಚಿವ, 1413 ಕೋಟಿ ಆಸ್ತಿ ಒಡೆಯ

ಡಿಸಿಎಂ ಡಿಕೆ ಶಿವಕುಮಾರ್ ದೇಶದ 2ನೇ ಶ್ರೀಮಂತ ಸಚಿವ, 1413 ಕೋಟಿ ಆಸ್ತಿ ಒಡೆಯ

ADR report: 27 ವಿಧಾನಸಭೆಗಳು, 3 ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರದ 652 ಸಚಿವರ ಪೈಕಿ 643 ಸಚಿವರ ಅಫಿಡವಿಟ್‌ಗಳನ್ನು ವಿಶ್ಲೇಷಿಸಲಾಗಿದೆ. ಕರ್ನಾಟಕದಲ್ಲಿ ನೂರು ಕೋಟಿಗಿಂತ ಹೆಚ್ಚು ಆಸ್ತಿ ಇರುವ ಎಂಟು ಸಚಿವರು ಇದ್ದಾರೆ. ಆಂಧ್ರ ಪ್ರದೇಶವು ನಂತರದ ಸ್ಥಾನದಲ್ಲಿದೆ.

Dharmasthala Case: ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದ ಮರು ತನಿಖೆ ಇಲ್ಲ: ಗೃಹ ಸಚಿವ ಜಿ.ಪರಮೇಶ್ವರ್

ಧರ್ಮಸ್ಥಳದಲ್ಲಿ ಸೌಜನ್ಯ ಪ್ರಕರಣದ ಮರು ತನಿಖೆ ಇಲ್ಲ: ಗೃಹ ಸಚಿವ ಪರಮೇಶ್ವರ್

G Parameshwara: ಸೌಜನ್ಯ ಪ್ರಕರಣದಲ್ಲಿ ಆರೋಪ ಮುಕ್ತರಾಗಿರುವ ಉದಯ ಕುಮಾ‌ರ್ ಜೈನ್‌ ಅವರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ಇದು ಸೌಜನ್ಯ ಪ್ರಕರಣದ ಮರು ತನಿಖೆ ಅಂತ ನಾನು ಹೇಳುವುದಿಲ್ಲ. ಯಾವ ಲಿಂಕ್, ಯಾವ ಉದ್ದೇಶದಿಂದ ತನಿಖೆ ಮಾಡುತ್ತಿದ್ದಾರೆ ಎಂದು ಆ ನಂತರ ಗೊತ್ತಾಗಲಿದೆ ಎಂದರು.

Loading...