ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಮೊದಲ ಅಗ್ನಿ ಪರೀಕ್ಷೆಯಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಪಾಸ್‌; ವಿಧಾನ ಪರಿಷತ್‌ನ 5 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿದ್ದೇಗೆ?

ಕಾಂಗ್ರೆಸ್‌ ವಿಧಾನ ಪರಿಷತ್‌ನ 5 ಸ್ಥಾನಗಳನ್ನು ಗೆದ್ದಿದ್ದೇಗೆ?

Karnataka MLC Polls: ರಾಜ್ಯದ ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಅಚ್ಚರಿ ಎಂಬಂತೆ ಆಡಳಿತಾರೂಢ ಕಾಂಗ್ರೆಸ್‌ ಐದು ಸ್ಥಾನಗಳನ್ನು ಗೆದ್ದುಕೊಂಡಿದೆ. ಆ ಮೂಲಕ ಮುಖ್ಯಮಂತ್ರಿಯಾದ ಬಳಿಕ ಎದುರಾದ ಮೊದಲ ಅಗ್ನಿ ಪರೀಕ್ಷೆಯಲ್ಲೇ ಡಿ.ಕೆ. ಶಿವಕುಮಾರ್‌ ಕಮಾಲ್‌ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಡಿಕೆಸಿ ರಣತಂತ್ರ ಹೆಣೆದ ರೀತಿ ಹೇಗಿತ್ತು ಎನ್ನುವ ವಿವರ ಇಲ್ಲಿದೆ.

ಮಾವು ಬೆಳೆಗಾರರಿಗೆ ನೆರವು ನೀಡಿ: ಕೃಷಿ ಸಚಿವರಿಗೆ ಪ್ರಲ್ಹಾದ್‌ ಜೋಶಿ ಪತ್ರ

ಮಾವು ಬೆಳೆಗಾರರಿಗೆ ನೆರವು ಕಲ್ಪಿಸಿ: ಕೃಷಿ ಸಚಿವರಿಗೆ ಜೋಶಿ ಪತ್ರ

Pralhad Joshi: ರಾಜ್ಯದ ಮಾವು ಬೆಳೆಗಾರರ ಬವಣೆ, ಸಂಕಷ್ಟ ಕುರಿತು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಗುರುವಾರ (ಜೂ.18) ಪತ್ರ ಬರೆದಿರುವ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ರಾಜ್ಯದ ಮಾವು ಬೆಳೆಗಾರರ ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸುವಂತೆ ಮನವಿ ಮಾಡಿದ್ದಾರೆ.

ಮೇಕೆದಾಟು ಯೋಜನೆ; ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸಲ್ಲ ಎಂದ ಸಿಎಂ ಡಿ.ಕೆ. ಶಿವಕುಮಾರ್

ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸಲ್ಲ: ಡಿ.ಕೆ. ಶಿವಕುಮಾರ್

CM DK Shivakumar: ಮೇಕೆದಾಟು ಕೇವಲ ನನ್ನ ಹೃದಯಕ್ಕೆ ಮಾತ್ರ ಹತ್ತಿರವಾಗಿಲ್ಲ. ಮೇಕೆದಾಟು ಯೋಜನೆ ಕರ್ನಾಟಕ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ ನೀಡಲಿದೆ. ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಬಿಡಲು ನಾವು ಸಿದ್ಧವಾಗಿದ್ದೇವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶವೂ ಇದೆ. ಈ ಯೋಜನೆ ತೀರ್ಮಾನವನ್ನು ಕೇಂದ್ರ ಜಲ ಆಯೋಗ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಆಹಾರದ ಜಾಗೃತಿಗಾಗಿ 'ಅನ್ನಬ್ರಹ್ಮ ಚಾತುರ್ಮಾಸ್ಯ': ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ

ಆಹಾರದ ಜಾಗೃತಿಗಾಗಿ ಅನ್ನಬ್ರಹ್ಮ ಚಾತುರ್ಮಾಸ್ಯ: ರಾಮಚಂದ್ರಾಪುರ ಶ್ರೀ

Sri Raghaveshwara Bharathi Swamiji: ಚಾತುರ್ಮಾಸ್ಯ ವ್ರತ ಗುರುಗಳಿಗಾದರೆ, ಶಿಷ್ಯಭಕ್ತರಿಗೆ ಇದು ಹಬ್ಬ. ಈ ಹಿನ್ನೆಲೆಯಲ್ಲಿ ಜ್ಞಾನೋದ್ದೀಪನದ ಜತೆಗೆ ಆಹಾರದ ಕುರಿತಾದ ಋಷಿದರ್ಶನದ ಪ್ರಸ್ತುತಿಗೆ ಈ ಚಾತುರ್ಮಾಸ್ಯವನ್ನು ಬಳಸಿಕೊಳ್ಳಲಾಗುತ್ತಿದೆ. ಅನ್ನವನ್ನು ವ್ಯರ್ಥ ಮಾಡಬಾರದು. ಇಂದು ಶ್ರೀಮಂತಿಕೆ ಹೆಚ್ಚಾದಷ್ಟು ಅನ್ನವನ್ನು ವ್ಯರ್ಥಮಾಡುವ ದುರಾಚಾರ ಹೆಚ್ಚಾಗುತ್ತಿದೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಆಹಾರದ ಕುರಿತಾದ ಜನಜಾಗೃತಿ ಮೂಡಿಸುವ ಕಾರ್ಯ ಇಲ್ಲಿ ನಡೆಯಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನ ಹಣಕಾಸಿನ ಬಗ್ಗೆ ಪ್ರಶ್ನಿಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆಗೆ ಕಾಂಗ್ರೆಸ್ ಹಿರಿಯ ನಾಯಕ ಬೆಂಬಲ

ಆರ್‌ಎಸ್‌ಎಸ್‌ನ ಹಣಕಾಸಿನ ಬಗ್ಗೆ ಪ್ರಶ್ನಿಸಿದ ಕಾಂಗ್ರೆಸ್

Husain Dalwai: ಆರ್‌ಎಸ್‌ಎಸ್‌ನ ಕಾರ್ಯವೈಖರಿ ಮತ್ತು ಹಣಕಾಸಿನ ಬಗ್ಗೆ ಕಾಂಗ್ರೆಸ್ ಪದೇ ಪದೇ ಕಳವಳ ವ್ಯಕ್ತಪಡಿಸಿದೆ. ಈ ಪ್ರಶ್ನೆಗಳನ್ನು ಬಹಳ ಮೊದಲೇ ಎತ್ತಬೇಕಿತ್ತು. ಆದರೆ ಪ್ರಿಯಾಂಕ್ ಖರ್ಗೆ ಅವರು ಅವುಗಳನ್ನು ಸಾರ್ವಜನಿಕ ಚರ್ಚೆಗೆ ತರುವಲ್ಲಿ ಧೈರ್ಯವನ್ನು ತೋರಿಸಿದ್ದಾರೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಹುಸೇನ್ ದಲ್‌ವಾಯಿ ಹೇಳಿದರು.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಜೆಡಿಎಸ್‌ಗೆ ಭಾರಿ ಮುಖಭಂಗ; ಡಿ.ಕೆ. ಶಿವಕುಮಾರ್‌ ರಣತಂತ್ರದಿಂದ 5 ಸ್ಥಾನ ಗೆದ್ದ ಕಾಂಗ್ರೆಸ್‌

ವಿಧಾನ ಪರಿಷತ್‌ ಚುನಾವಣೆ: 5 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್‌

Karnataka MLC Election Results 2026: ವಿಧಾನ ಪರಿಷತ್‌ ಚುನಾವಣೆಯ ಫಲಿತಾಂಶ ಹೊರ ಬಂದಿದ್ದು, ಕಾಂಗ್ರೆಸ್‌ 5 ಮತ್ತು ಬಿಜೆಪಿ 2 ಸ್ಥಾನಗಳಲ್ಲಿ ಜಯ ಗಳಿಸಿದೆ. ಕಾಂಗ್ರೆಸ್‌ನಿಂದ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್‌, ತಿಪ್ಪಣ್ಣಪ್ಪ ಕಮಕನೂರ, ಬಿ.ಎಸ್‌. ಶಿವಣ್ಣ, ಪಿ.ವಿ. ಮೋಹನ್, ವಿನಯ್ ಕಾರ್ತಿಕ್ ಹಾಗೂ ಬಿಜೆಪಿಯ ಲಿಂಗರಾಜ್‌ ಪಾಟೀಲ್‌ ಹಾಗೂ ಮೈಸೂರಿನ ರಘು ಕೌಟಿಲ್ಯ ವಿಜಯದ ನಗೆ ಬೀರಿದ್ದಾರೆ.

ವಿಧಾನ ಪರಿಷತ್‌ ಚುನಾವಣೆ; ಬಸನಗೌಡ ಪಾಟೀಲ್ ಯತ್ನಾಳ್ ಮತ ಅಸಿಂಧುವಾಗುತ್ತ? ಕಾಂಗ್ರೆಸ್‌ ವಾದವೇನು?

ವಿಧಾನ ಪರಿಷತ್‌ ಚುನಾವಣೆ; ಬಸನಗೌಡ ಪಾಟೀಲ್ ಯತ್ನಾಳ್ ಮತ ಅಸಿಂಧು?

Basanagouda Patil Yatnal: ರಾಜ್ಯದ ಕುತೂಹಲ ಕೆರಳಿಸಿದ ವಿಧಾನ ಪರಿಷತ್‌ ಚುನಾವಣೆಯ ಮತದಾನ ಮುಕ್ತಾಯಗೊಂಡಿದ್ದು, ಶೇಕಡಾ 100ರಷ್ಟು ಹಕ್ಕು ಚಲಾವಣೆಗೊಂಡಿದೆ. ಈ ಮಧ್ಯೆ ಮತ ಚಲಾಯಿಸಲು ಬಂದ ಬಿಜಾಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರಿಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ.

ದ್ವಿಚಕ್ರ ವಾಹನ ಸವಾರರಿಗೆ ಗುಡ್ ನ್ಯೂಸ್: ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ

ಭಾರತದಲ್ಲೇ ಶುರುವಾಗಲಿದೆ 'ಬೈಕ್ ಎಬಿಎಸ್‌' ಉತ್ಪಾದನೆ

ಭಾರತೀಯ ಮಾರುಕಟ್ಟೆಗೆಂದೇ ವಿಶೇಷವಾಗಿ ಮೋಟಾರ್‌ಸೈಕಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಮ್) ಗಳನ್ನು ಉತ್ಪಾದಿಸಲು ಜಾಗತಿಕ ಬ್ರೇಕಿಂಗ್ ತಂತ್ರಜ್ಞಾನದ ದೈತ್ಯ ಕಂಪನಿ 'ಬ್ರೆಂಬೊ' ಮತ್ತು ಚೀನಾದ ಖ್ಯಾತ ಕಂಪನಿ 'ನಿಂಗ್ಬೊ ಸೇಫ್ ಬ್ರೇಕ್ಸ್ ಸಿಸ್ಟಮ್ಸ್' ಈ ಎರಡೂ ಕಂಪನಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದು, 'BRSF ಆಕ್ಟೀವ್ ಸೇಫ್ಟಿ ಸೊಲ್ಯೂಷನ್ಸ್' ಎಂಬ ಹೊಸ ಕಂಪನಿಯನ್ನು ಸ್ಥಾಪಿಸಿವೆ.

Bengaluru News: ಗೇಟ್ ಸಮೇತ ಕಾಂಪೌಂಡ್ ಗೋಡೆ ಕುಸಿದುಬಿದ್ದು 5 ವರ್ಷದ ಮಗು ಸಾವು

ಗೇಟ್ ಸಮೇತ ಕಾಂಪೌಂಡ್ ಗೋಡೆ ಕುಸಿದುಬಿದ್ದು 5 ವರ್ಷದ ಮಗು ಸಾವು

ಬೆಂಗಳೂರಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಗೇಟ್ ಮೈಮೇಲೆ ಬಿದ್ದು ಆಟವಾಡುತ್ತಿದ್ದ ಬಾಲಕ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ. ಮೃತ ಬಾಲಕನನ್ನು ಯಾದಗಿರಿ ಮೂಲದ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಎಂದು ಗುರುತಿಸಲಾಗಿದೆ.

ದಂತ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿ; ಕೈಗೆಟುಕುವ ದರದ ಅತ್ಯಾಧುನಿಕ ಚಿಕಿತ್ಸೆಗೆ ಫಿದಾ

ಹಲ್ಲಿನ ಚಿಕಿತ್ಸೆಗಾಗಿ ಲಂಡನ್‌ನಿಂದ ಬೆಂಗಳೂರಿಗೆ ಬಂದ ವ್ಯಕ್ತಿ

Bengaluru News: ಹಲ್ಲಿನ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಲಂಡನ್‌ನ 42 ವರ್ಷದ ಜಾನ್ ಮಿಲ್ಲರ್ ಎಂಬುವವರು ಬರೋಬ್ಬರಿ 8,000 ಕಿಲೋ ಮೀಟರ್ ಪ್ರಯಾಣಿಸಿ ಬೆಂಗಳೂರಿಗೆ ಬಂದು ಯಶಸ್ವಿ ಚಿಕಿತ್ಸೆ ಪಡೆದು ಮರಳಿದ್ದಾರೆ. ಜತೆಗೆ ಬೆಂಗಳೂರಿನ ಚಿಕಿತ್ಸಾ ರೀತಿಗೆ ಫಿದಾ ಆಗಿದ್ದಾರೆ.

ತಾತಗಳಿಸಿದ್ದ ಆಸ್ತಿ ತಂದೆಯ ವೈಯಕ್ತಿಕ, ಪಿತ್ರಾರ್ಜಿತ ಅಲ್ಲ! ಮೊಮ್ಮಕ್ಕಳಿಗೆ ಹಕ್ಕಿಲ್ಲ

ತಾತಗಳಿಸಿದ್ದ ಆಸ್ತಿ ತಂದೆಯ ವೈಯಕ್ತಿಕ, ಪಿತ್ರಾರ್ಜಿತ ಅಲ್ಲ! ಹೈ ಕೋರ್ಟ್‌

ತಾತನು ತನ್ನ ಜೀವಿತಾವಧಿಯಲ್ಲಿ ಸಂಪಾದಿಸಿದ ಆಸ್ತಿಯು ವಿಭಜನೆಯ ನಂತರ ಅಪ್ಪನ ಕೈಸೇರಿದಾಗ ಅದು ತಂದೆಯ ವೈಯಕ್ತಿಕ ಆಸ್ತಿಯಾಗುತ್ತದೆಯೇ ವಿನಃ ಹಿಂದೂ ಅವಿಭಕ್ತ ಕುಟುಂಬದ ಆಸ್ತಿಯಾಗುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಈ ರೀತಿ ವಿಭಜನೆಯಾದ ಆಸ್ತಿಯಲ್ಲಿ ಮೊಮ್ಮಗಳು ಪಾಲು ಕೇಳುವುದಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.

ವಿಧಾನ ಪರಿಷತ್ ಚುನಾವಣೆ; ಅಡ್ಡ ಮತದಾನ ಮಾಡಿದ್ರಾ ಜಿ. ಟಿ ದೇವೇಗೌಡ?

ವಿಧಾನ ಪರಿಷತ್ ಚುನಾವಣೆ; ಅಡ್ಡ ಮತದಾನ ಮಾಡಿದ್ರಾ ಜಿ. ಟಿ ದೇವೇಗೌಡ?

ರಾಜ್ಯದಲ್ಲಿ ವಿಧಾನಪರಿಷತ್‌ನ 7 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು, ಈಗಾಗಲೇ ಮತದಾನ ಪ್ರಕ್ರಿಯೆ ಆರಂಭಗೊಂಡಿದೆ. 8 ಅಭ್ಯರ್ಥಿಗಳು ಕಣದಲ್ಲಿದ್ದಾರೆ. . ಈ ಮಧ್ಯೆ ಜೆಡಿಎಸ್‌ ಶಾಸಕ ಜಿ.ಟಿ ದೇವೇಗೌಡ ಅವರು ಪಕ್ಷಕ್ಕೆ ಶಾಕ್‌ ಕೊಟ್ಟಿದ್ದಾರೆ. ಜೆಡಿಎಸ್​ನ ಬಹುತೇಕ ಶಾಸಕರು ರೆಸಾರ್ಟ್​ಗೆ ಶಿಫ್ಟ್​ ಆಗಿದ್ದಾರೆ. ಆದರೆ ಜಿಟಿ ದೇವೇಗೌಡರು ಮಾತ್ರ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎಂದು ಹೇಳಲಾಗಿತ್ತು.

ರಂಗೇರಿದ ವಿಧಾನ ಪರಿಷತ್ ಚುನಾವಣೆ; ಅಡ್ಡ ಮತದಾನದ ಭೀತಿ! 7ನೇ ಸ್ಥಾನಕ್ಕೆ ಭಾರೀ ಪೈಪೋಟಿ

ರಂಗೇರಿದ ವಿಧಾನ ಪರಿಷತ್ ಚುನಾವಣೆ; ಅಡ್ಡ ಮತದಾನದ ಭೀತಿ!

ವಿಧಾನ ಪರಿಷತ್‌ನಲ್ಲಿ ಇದೇ 30ರಂದು ತೆರವಾಗಲಿರುವ 7 ಸ್ಥಾನಗಳಿಗೆ ಗುರುವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಕಾಂಗ್ರೆಸ್‌ 4 ಹಾಗೂ ಬಿಜೆಪಿ 2 ಸ್ಥಾನ ಗೆಲ್ಲಲಿದ್ದು, ಬಾಕಿ 1 ಸ್ಥಾನಕ್ಕೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಸ್ಪರ್ಧೆಯಿದೆ.

ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಕೆಲವೆಡೆ ಭಾರಿ ಮಳೆ: ಯೆಲ್ಲೋ ಅಲರ್ಟ್

ಕರ್ನಾಟಕದ ಕೆಲವೆಡೆ ಭಾರಿ ಮಳೆ ಸಾಧ್ಯತೆ: ಯೆಲ್ಲೋ ಅಲರ್ಟ್

Heavy Rain: ಈ ಬಾರಿ ಮುಂಗಾರು ತಡವಾಗಿ ಆಗಮಿಸಿದ್ದು, ಒಂದೆರಡು ದಿನ ಮಳೆ ಬಂದದ್ದು ಬಿಟ್ಟರೆ ಬಳಿಕ ಮಾಯವಾಗಿದೆ. ಎರಡ್ಮೂರು ದಿನಗಳಲ್ಲಿ ರಾಜ್ಯದ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯ ಸಾಧ್ಯತೆ ಇದೆ.

ಡಿಕೆಶಿ ಸಿಎಂ ಆಗಿರುವುದನ್ನು ಸಹಿಸಲಾಗದೇ ಬಿಡದಿ ಟೌನ್‌ಶಿಪ್‌ಗೆ ಜೆಡಿಎಸ್, ಬಿಜೆಪಿ ನಾಯಕರ ವಿರೋಧ: ಶಾಸಕ ಬಾಲಕೃಷ್ಣ ಕಿಡಿ

ಡಿಕೆಶಿ ಸಿಎಂ ಆಗಿರುವುದನ್ನು ಬಿಜೆಪಿ, ಜೆಡಿಎಸ್ ನಾಯಕರಿಗೆ ಸಹಿಸಲಾಗುತ್ತಿಲ್ಲ

ಬಿಜೆಪಿ ನಾಯಕರ ನಿಯೋಗ ಬಿಡದಿಗೆ ಭೇಟಿ ನೀಡಿ ಬಿಡದಿ ಟೌನ್ ಶಿಪ್ ವಿರುದ್ಧ ಹೋರಾಟ ಮಾಡಿರುವ ಬಗ್ಗೆ ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಟೌನ್ ಶಿಪ್ ಯೋಜನೆಯನ್ನು ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ಕೈಗೊಂಡ ಯೋಜನೆಯಲ್ಲ. ಈ ವಿಚಾರವಾಗಿ ವಿಜಯೇಂದ್ರ ಅವರ ಜೊತೆಗೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

American Red Globe grapes: ಅಮೆರಿಕನ್ ರೆಡ್ ಗ್ಲೋಬ್ ದ್ರಾಕ್ಷಿ ಬೆಳೆದು ಗಮನ ಸೆಳೆದ ಚಿಕ್ಕಬಳ್ಳಾಪುರ ರೈತ

ಸಾಂಪ್ರದಾಯಿಕ ಬೆಳೆಗಳ ನಡುವೆ ರೆಡ್ ಗ್ಲೋಬ್ ಸಂಚಲನ

ಕೆ.ಆರ್.ರೆಡ್ಡಿ ಅವರು ಆಧುನಿಕ ಕೃಷಿ ತಂತ್ರಜ್ಞಾನ, ಹನಿ ನೀರಾವರಿ ವ್ಯವಸ್ಥೆ, ಸಮರ್ಪಕ ಗೊಬ್ಬರ ನಿರ್ವಹಣೆ ಹಾಗೂ ವೈಜ್ಞಾನಿಕ ಕಟಾವು ಪದ್ಧತಿಗಳನ್ನು ಅಳವಡಿಸಿಕೊಂಡು ಗುಣಮಟ್ಟದ ದ್ರಾಕ್ಷಿ ಉತ್ಪಾದನೆಗೆ ಒತ್ತು ನೀಡಿದ್ದಾರೆ. ಇದರ ಫಲವಾಗಿ ತೋಟದಲ್ಲಿ ಬೆಳೆದಿರುವ ದ್ರಾಕ್ಷಿ ಗೊಂಚಲುಗಳು ಉತ್ತಮ ಗಾತ್ರ ಮತ್ತು ಗುಣಮಟ್ಟದಿಂದ ಗಮನ ಸೆಳೆಯುತ್ತಿವೆ

ಪಂಚ ದ್ರಾವಿಡ ಕವಿ ಸಂಗಮವು ಸಾಹಿತ್ಯ, ಭಾಷಾ ಸೌಹಾರ್ದತೆಗೆ ಹೊಸ ದಿಕ್ಕು ನೀಡುವ ವೇದಿಕೆ: ಎಚ್. ಡುಂಡಿರಾಜ್

ಪಂಚ ದ್ರಾವಿಡ ಕವಿ ಸಂಗಮ, ತೊದಲ್ನುಡಿ ವಾರ್ಷಿಕ ಸಂಚಿಕೆ ಬಿಡುಗಡೆ

Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ಬುಧವಾರ ಪಂಚ ದ್ರಾವಿಡ ಕವಿ ಸಂಗಮ ಹಾಗೂ ತೊದಲ್ನುಡಿಯ 13ನೇ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ದ್ರಾವಿಡ ಭಾಷಾ ಟ್ರಾನ್ಸ್‌ಲೇಟರ್ಸ್ ಅಸೋಸಿಯೇಷನ್ (DBTA) ಹಾಗೂ ತೊದಲ್ನುಡಿ ಕನ್ನಡ ಮಕ್ಕಳ ಸಾಹಿತ್ಯ ಮಾಸಪತ್ರಿಕೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Scholarship Scheme: ಪ್ರತಿ ವಿದ್ಯಾರ್ಥಿಗೆ 5000 ; ಜೂ.27ರಂದು ವಿದ್ಯಾರ್ಥಿವೇತನ ವಿತರಣೆ : ಡಾ.ಕೆ.ಸುಧಾಕರ್

ಡಾ.ಕೆ.ಸುಧಾಕರ್ ಫೌಂಡೇಶನ್‌ನಿಂದ ಜ್ಞಾನಸುಧಾ ವಿದ್ಯಾರ್ಥಿವೇತನ ಯೋಜನೆ

ಡಾ.ಕೆ.ಸುಧಾಕರ್ ಫೌಂಡೇಶನ್ ಮತ್ತು ಶ್ರೀ ಸಾಯಿಕೃಷ್ಣ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಜೂ.27 ರಂದು ನಾಡಪ್ರಭು ಕೆಂಪೇಗೌಡ ಜಯಂತಿಯ ದಿನದಂದು ಸಂಜೆ 4 ಗಂಟೆಗೆ ಹೂ ಮಾರುಕಟ್ಟೆಯ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿದ್ಯಾರ್ಥಿಗಳಿಗೆ 'ಜ್ಞಾನಸುಧಾ' ಹೆಸರಿನಲ್ಲಿ ವಿದ್ಯಾರ್ಥಿವೇತನ ವಿತರಿಸಲಾಗುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ʼಹಸಿರು ಹೈಡ್ರೋಜನ್ ಪ್ರಮಾಣೀಕರಣ ಪೋರ್ಟಲ್ʼ ಆರಂಭ; ದೆಹಲಿಯಲ್ಲಿ ಸಚಿವ ಪ್ರಲ್ಹಾದ್‌ ಜೋಶಿ ಚಾಲನೆ

ʼಹಸಿರು ಹೈಡ್ರೋಜನ್ ಪ್ರಮಾಣೀಕರಣ ಪೋರ್ಟಲ್ʼ ಆರಂಭ

Pralhad Joshi: MNRE ಅಭಿವೃದ್ಧಿಪಡಿಸಿದ ʼಹಸಿರು ಹೈಡ್ರೋಜನ್ ಪ್ರಮಾಣೀಕರಣ ಪೋರ್ಟಲ್ʼ ಭಾರತದ ಹಸಿರು ಹೈಡ್ರೋಜನ್ ಪ್ರಮಾಣೀಕರಣ ಯೋಜನೆಯಡಿ ಪಾರದರ್ಶಕ, ಪ್ರಮಾಣೀಕರಣ ಮತ್ತು ನಿಯಂತ್ರಣವನ್ನು ಸುಗಮಗೊಳಿಸುತ್ತದೆ. ಇದಕ್ಕೆ ಅನುಗುಣವಾಗಿ ಈಗಾಗಲೇ 6 ರಾಜ್ಯಗಳು ಹಸಿರು ಹೈಡ್ರೋಜನ್ ನೀತಿಗಳನ್ನು ಪ್ರಕಟಿಸಿವೆ.

MP Dr K Sudhakar: ಚಿಕ್ಕಬಳ್ಳಾಪುರದಲ್ಲಿ ನಬಾರ್ಡ್ ಬ್ಯಾಂಕ್ ಶಾಖೆ ಉದ್ಘಾಟಿಸಿದ ಸಂಸದ ಡಾ.ಕೆ.ಸುಧಾಕರ್

ನಬಾರ್ಡ್ ಬ್ಯಾಂಕ್ ಶಾಖೆ ಉದ್ಘಾಟಿಸಿದ ಸಂಸದ ಡಾ.ಕೆ.ಸುಧಾಕರ್

ಮಹಿಳೆಯರ ಸಬಲೀಕರಣ, ಸ್ತ್ರೀ ಶಕ್ತಿ ಸಂಘಗಳು, ಸಣ್ಣ ಮಧ್ಯಮ ರೈತರು, ಬೀದಿ ಬದಿ ವ್ಯಾಪಾರಿ ಗಳು ಹಾಗೂ ಆಹಾರ ಸಂಸ್ಕರಣಾ ಘಟಕಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯ ರೈತರು ನಬಾರ್ಡ್ ಬ್ಯಾಂಕ್ ನ ಪ್ರಯೋಜನ ಪಡೆಯಬೇಕು. ನಬಾರ್ಡ್ ನಿಂದ ಕೃಷಿ ಮತ್ತಿತರ ಚಟುವಟಿಕೆಗಳಿಗೆ ಅತಿಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ ದೊರೆಯಲಿದೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ ಬೀದಿ ನಾಟಕದ ಮೂಲಕ ನೀರು ನೈರ್ಮಲ್ಯದ ಬಗ್ಗೆ ಜಾನ ಜಾಗೃತಿ

ಬೀದಿ ನಾಟಕದ ಮೂಲಕ ನೀರು ನೈರ್ಮಲ್ಯದ ಬಗ್ಗೆ ಜಾನ ಜಾಗೃತಿ

ತಾಲೂಕಿನ ತೊಂಡೆಬಾವಿ ಹೋಬಳಿಯ ಅಲ್ಲಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಬೀದಿ ನಾಟಕ ಕಾರ್ಯಕ್ರಮವನ್ನು ನೆರವೇರಿಸ ಲಾಯಿತು. ಬೀದಿ ನಾಟಕವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ನಾಗರತ್ನಮ್ಮ ಹಾಗೂ ವೈದ್ಯರಾದ ಡಾ.ಮಮತಾ ಅವರುಗಳು ತಮಟೆ ಬಾರಿಸುವ ಮೂಲಕ ಬೀದಿ ನಾಟಕಕ್ಕೆ ಚಾಲನೆ ನೀಡಿದರು.

KIADB: ಜಿಲ್ಲೆಯಲ್ಲಿ ಬಂಧನ ಖಂಡಿಸಿ ಬೀದಿಗಿಳಿದ ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು

ಕೆಐಎಡಿಬಿ ಭೂ-ಸ್ವಾಧೀನ ಚರ್ಚೆಗೆ ತೆರಳಿದ್ದ ರೈತ ಸಂಘದ ಮುಖಂಡರ ಬಂಧನ

ನಮ್ಮ ರಾಜ್ಯ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್ ಹಾಗೂ ಭಕ್ತರಹಳ್ಳಿ ಬೈರೇಗೌಡರನ್ನು ಕೂಡಲೇ ಬಿಡುಗಡೆ ಮಾಡಬೇಕು. ನಮ್ಮ ನಾಯಕರನ್ನು ಬಿಡುಗಡೆ ಮಾಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ. ರೈತರ ಹಕ್ಕುಗಳಿ ಗಾಗಿ ನಡೆಸುತ್ತಿರುವ ಹೋರಾಟವನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕಲು ಸಾಧ್ಯವಿಲ್ಲ

Shidlaghatta News: ದೇವಾಲಯಗಳ ಅಭಿವೃದ್ಧಿಗೆ ಆದ್ಯತೆ: ಅರ್ಚಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ: ತಹಶೀಲ್ದಾರ್ ಗಗನ ಸಿಂಧು

ಅರ್ಚಕರ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ

ನಗರದ ಕೋಟೆ ವೃತ್ತದಲ್ಲಿರುವ ಶ್ರೀ ಸೋಮೇಶ್ವರಸ್ವಾಮಿ ದೇವಾಲಯದಲ್ಲಿ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ–ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟದ ಶಿಡ್ಲಘಟ್ಟ ತಾಲ್ಲೂಕು ಶಾಖೆ ವತಿಯಿಂದ ಆಯೋಜಿಸಿದ್ದ ಮುಜರಾಯಿ ಇಲಾಖೆಯ ದೇವಾಲಯಗಳ ಅರ್ಚಕರು ಹಾಗೂ ಪುರೋಹಿತರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು

ತಾತಯ್ಯನವರು ತಪಸ್ಸನ್ನು ಆಚರಿಸಿ ಪಡೆದ ಜ್ಞಾನವನ್ನು ಮಾನವರಿಗೆ ತತ್ವಬೋಧನೆಯ ರೂಪದಲ್ಲಿ ಧಾರೆಯೆರೆದಿದ್ದಾರೆ : ಡಾ.ಎಂ.ಆರ್.ಜಯರಾಮ್

ಕೈವಾರದಲ್ಲಿ ತಾತಯ್ಯನವರ 191ನೇ ಆರಾಧನಾ ಮಹೋತ್ಸವ

ವಿಶ್ವವು ಇಂದು ಭಯಂಕರವಾದ ಅನೇಕ ಗಂಡಾಂತರಗಳನ್ನು ಎದುರಿಸುತ್ತಿದೆ. ರಾಷ್ಟ್ರಗಳ ನಡುವೆ ವೈಷಮ್ಯ, ಭಯಂಕರ ಯುದ್ಧಗಳು ಸಂಭವಿಸುತ್ತಿದೆ. ನೈತಿಕ ಪತನದಿಂದಾಗಿ ಮಾನವರಲ್ಲಿ ಕ್ರೌರ್ಯ, ನಿರ್ದಯೆ ತಾಂಡವವಾಡುತ್ತಿದೆ. ವಿನಾಶದ ಅಂಚಿನಲ್ಲಿರುವ ಈ ವಿಶ್ವವು ಮಾನವ ರೂಪಿನಲ್ಲಿರುವ ದೈತ್ಯದ ದುರ್ಬುದ್ಧಿಯಿಂದ ನಿರ್ಣಾಮವಾಗಿ ಬಿಡುವುದೋ ಎಂಬ ಭೀತಿಯಿಂದ ಇಡೀ ವಿಶ್ವದ ಪ್ರಜೆಗಳು ತಲ್ಲಣಿಸುತ್ತಿದ್ದಾರೆ

Loading...