ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಅಕ್ಕಿ ಚೀಲ ವೇಸ್ಟ್‌ ಅಂತಾ ಎಸೆದಿರಿ ಜೋಕೆ! ಯಾಕೆ ಅಂತೀರಾ? ಈ ವಿಡಿಯೊ ನೋಡಿ

ಅಮೆರಿಕದಲ್ಲಿ ಫೇಮಸ್‍ ಅಂಗಡಿಯೊಂದರಲ್ಲಿ ಡ್ರೆಸ್ ಹುಡುಕುತ್ತಿದ್ದಾಗ ಟಿಕ್‌ಟಾಕರ್‌ ಸಚಿ ರಾಜ್‌ಗುರೂ ಬಾಸ್ಮತಿ ಅಕ್ಕಿ ಚೀಲದಿಂದ ತಯಾರಿಸಿದ ಉತ್ತಮ ಗುಣಮಟ್ಟದ ಡಿಸೈನರ್ ಜಾಕೆಟ್ ಅನ್ನು ನೋಡಿದ್ದಾಳೆ. ಅದರ ವಿಡಿಯೊವನ್ನು ಆಕೆ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.

ಅಕ್ಕಿ ಚೀಲ ವೇಸ್ಟ್‌ ಅಂತಾ ಎಸೆದಿರಿ ಜೋಕೆ! ಯಾಕೆ ಅಂತೀರಾ?

Profile pavithra May 29, 2025 4:18 PM

ವಾಷಿಂಗ್ಟನ್‌: ಸಾಮಾನ್ಯವಾಗಿ ನಾವು ಮನೆಗೆ ಅಡುಗೆಗೆ ತಂದ ಬಾಸ್ಮತಿ ಅಕ್ಕಿ ಖಾಲಿಯಾದ ಮೇಲೆ ಅದರ ಚೀಲವನ್ನು ಬೇಡವೆಂದು ಎಸೆದು ಬಿಡುತ್ತವೆ ಅಲ್ವಾ....? ಆದರೆ ಇಲ್ಲೊಂದು ಕಡೆ ಈ ಚೀಲದಿಂದ ಜಾಕೆಟ್ ತಯಾರಿಸಿ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡುತ್ತಾರಂತೆ. ಇದೇನು ನಿಜನಾ....? ಎಂದು ಆಶ್ಚರ್ಯಪಡ್ತಿದ್ದಿರಾ...? ಹೌದು ಇತ್ತೀಚೆಗೆ ಯುವತಿಯೊಬ್ಬಳು ಬಾಸ್ಮತಿ ಅಕ್ಕಿ ಚೀಲದಿಂದ ತಯಾರಿಸಿದ ಉತ್ತಮ ಗುಣಮಟ್ಟದ ಡಿಸೈನರ್ ಜಾಕೆಟ್ ಅನ್ನು ನೋಡಿದ್ದಾಳಂತೆ. ಅದರ ವಿಡಿಯೊವನ್ನು ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ಎಲ್ಲರ ಗಮನಸೆಳೆದು ವೈರಲ್(Viral Video) ಆಗಿದೆ.

ಈ ವೈರಲ್ ವಿಡಿಯೊವನ್ನು ಟಿಕ್‌ಟಾಕರ್‌ ಸಚಿ ರಾಜ್‌ಗುರೂ ಹಂಚಿಕೊಂಡಿದ್ದಾಳೆ. ಅವಳು ಅಮೆರಿಕದ ಅಂಗಡಿಯೊಂದರಲ್ಲಿ ಡ್ರೆಸ್ ಹುಡುಕುತ್ತಿದ್ದಾಗ ಈ ವಿಚಿತ್ರವಾದ ಜಾಕೆಟ್‌ ನೋಡಿ ಶಾಕ್‌ ಆಗಿದ್ದಾಳಂತೆ. ರಾಯಲ್ ಬಾಸ್ಮತಿ ಅಕ್ಕಿ ಚೀಲದಿಂದ ಹೊಲಿದ ಉದ್ದನೆಯ ಜಾಕೆಟ್‌ ಒಂದನ್ನು ನೋಡಿದ್ದಾಳಂತೆ. ಅದರ ಬೆಲೆ $1,950 (ರೂ1.6 ಲಕ್ಷಕ್ಕೂ ಹೆಚ್ಚು).

ವಿಡಿಯೊ ಇಲ್ಲಿದೆ ನೋಡಿ...

ಅಂಗಡಿಯವರು ತಿಳಿಸಿದ ಪ್ರಕಾರ, ಈ ಜಾಕೆಟ್ "ಐಡೆಂಟಿಟಿ ಮತ್ತು ಗ್ಲೋಬಲೈಸೆಷನ್‍" ಅನ್ನು ಪ್ರತಿನಿಧಿಸುವ ಉದ್ದೇಶವನ್ನು ಹೊಂದಿದ್ದು, ಹಿಂಭಾಗದಲ್ಲಿ ಅಕ್ಕಿಯ ಬ್ರ್ಯಾಂಡಿಂಗ್ ಮತ್ತು ತೂಕವನ್ನು ದಪ್ಪವಾಗಿ ಮುದ್ರಿಸಲಾಗಿದೆಯಂತೆ.

ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೊವನ್ನು ಕಂಡು ಕೆಲವರು ಇದನ್ನು ಫ್ಯಾಷನ್ ಎಂದು ಕರೆದರೆ, ಇತರರು ಶಾಕ್‌ ಆಗಿದ್ದಾರೆ. ದಿನಸಿಗಳನ್ನು ಪ್ಯಾಕ್ ಮಾಡುವ ಗೋಣಿಚೀಲಕ್ಕೆ ಸಾವಿರಾರು ರೂಪಾಯಿ ನೀಡಬೇಕಾಗಿರುವುದನ್ನು ಕಂಡು ಕೆಲವರು ನಕ್ಕಿದ್ದಾರೆ. ಹಾಗಾಗಿ ಅವರು ಈ ವಿಡಿಯೊಗೆ ನಗುವ ಎಮೋಜಿಗಳೊಂದಿಗೆ ಕಾಮೆಂಟ್‌ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪತ್ನಿಯನ್ನು ಉಳಿಸಿಕೊಳ್ಳಲು ಪತಿ ಮಾಡಿದ್ದೇನು ಗೊತ್ತಾ? ಕಣ್ಣಂಚು ಒದ್ದೆಯಾಗುತ್ತೆ ಇವರಿಬ್ಬರ ಪ್ರೀತಿ ನೋಡಿದ್ರೆ!

ಇದಕ್ಕೂ ಮೊದಲು, ನೆಟ್ಟಿಗರೊಬ್ಬರು ಅಮೆರಿಕದ ಐಷಾರಾಮಿ ಅಂಗಡಿಯಾದ ನಾರ್‌ಸ್ಟ್ರೋಮ್‌ನಲ್ಲಿ ಜೋಳ ಚೀಲಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ನೋಡಿ ಶಾಕ್‌ ಆಗಿದ್ದಾರಂತೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಅದು ಕೂಡ ವೈರಲ್ ಆಗಿತ್ತು. ಸಾಮಾನ್ಯವಾಗಿ ಭಾರತದ ಸ್ಥಳೀಯ ಅಂಗಡಿಗಳಲ್ಲಿ ಈ ಚೀಲಗಳನ್ನು ಸುಮಾರು 40ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು, ಆದರೆ ಆನ್‌ಲೈನ್‌ನಲ್ಲಿ 4,000ರೂಪಾಯಿಕ್ಕಿಂತ ಹೆಚ್ಚು ಬೆಲೆಗೆ ಮಾರಾಟವಾಗುತ್ತಿತ್ತು. ಈ ಚೀಲಗಳನ್ನು ಜಪಾನಿನ ಕಂಪನಿಯಾದ ಪ್ಯೂಬ್ಕೊ ಮಾರಾಟ ಮಾಡುತ್ತಿದೆಯಂತೆ. ಭಾರತೀಯ ಸಂಸ್ಕೃತಿಯನ್ನು ಇಷ್ಟಪಡುವವರಿಗೆ ಇದು ಒಂದು ಟ್ರೆಂಡಿ, ಅತ್ಯಗತ್ಯ ವಸ್ತು ಎಂದು ವಿವರಿಸಲಾಗಿದೆ.ಮೇ 20 ರಂದು ಪೋಸ್ಟ್ ಮಾಡಲಾದ ಈ ವಿಡಿಯೊ 500,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.