ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Celebrity Fashion: ಕುರ್ತಾ ಸ್ಟೈಲ್ ಕಾಟನ್ ಗೌನ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಸಿಂಪಲ್ ಲುಕ್

Celebrity Fashion: ಕುರ್ತಾ ಸ್ಟೈಲ್‌ನಲ್ಲಿರುವ ಕಾಟನ್ ಫ್ರಾಕ್ ಗೌನ್‌ನಲ್ಲಿ ಡಿ ಬಾಸ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಕಾಣಿಸಿಕೊಂಡಿದ್ದಾರೆ. ಈ ಸೀಸನ್ ಟ್ರೆಂಡ್‌ನಲ್ಲಿರುವ ಸಿಂಪಲ್ ಹಾಗೂ ಎಲಿಗೆಂಟ್ ನೀಡಿರುವ ಈ ಡ್ರೆಸ್ ವಿಶೇಷತೆಯೇನು? ಇಲ್ಲಿದೆ ಡಿಟೇಲ್ಸ್.

ಕುರ್ತಾ ಸ್ಟೈಲ್ ಕಾಟನ್ ಗೌನ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ಸಿಂಪಲ್ ಲುಕ್

ಚಿತ್ರಗಳು: ವಿಜಯಲಕ್ಷ್ಮಿ ದರ್ಶನ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಕುರ್ತಾ ಸ್ಟೈಲ್‌ನಲ್ಲಿರುವ ಕಾಟನ್ ಫ್ರಾಕ್ ಶೈಲಿಯ ಗೌನ್ ಧರಿಸಿ ಡಿ ಬಾಸ್ ಪತ್ನಿ ವಿಜಯಲಕ್ಷ್ಮಿ (Celebrity Fashion) ಅವರು ಸಿಂಪಲ್ ಹಾಗೂ ಎಲಿಗೆಂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಲಿಡೇ ಅಥವಾ ವಕೇಷನ್ ಸಮಯದಲ್ಲಿ ತೆಗೆದ ಈ ಚಿತ್ರಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆಗಾಗ್ಗೆ ತಮ್ಮ ಫ್ಯಾಷನ್ & ಸ್ಟೈಲ್ ಸ್ಟೇಟ್‌ಮೆಂಟ್‌ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ಅವರು ಸಖತ್ ಫ್ಯಾಷೆನಬಲ್ ಲೇಡಿ ಎನ್ನಬಹುದು. ವೆಸ್ಟೆರ್ನ್ ಔಟ್‌ಫಿಟ್‌ಗಳಲ್ಲಿ ಮಾತ್ರವಲ್ಲ, ಎಥ್ನಿಕ್, ಫಾರ್ಮಲ್ಸ್ ಉಡುಪಿನಲ್ಲೂ ಅಷ್ಟೇ, ಕರಾರುವಕ್ಕಾಗಿ ಪರ್ಫೆಕ್ಟ್ ಸ್ಟೈಲಿಂಗ್‌ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.

Celebrity Fashion 1

ವಿಜಯಲಕ್ಷ್ಮಿ ದರ್ಶನ್ ಪರ್ಫೆಕ್ಟ್ ಸ್ಟೈಲಿಂಗ್

ಅಂದಹಾಗೆ, ವಿಜಯಲಕ್ಷ್ಮಿಯವರು ದರ್ಶನ್ ಅವರ ಸಂಕಷ್ಟದ ದಿನಗಳಲ್ಲಿ ಮಾತ್ರ, ಸೋಶಿಯಲ್ ಮೀಡಿಯಾದಿಂದ ಕೊಂಚ ದೂರ ಉಳಿದಿದ್ದರು. ಯಾವುದೇ ಫ್ಯಾಷೆನಬಲ್ ಫೋಟೋಗಳನ್ನು ಹಂಚಿಕೊಳ್ಳುತ್ತಿರಲಿಲ್ಲ. ಪತಿಗೆ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಮತ್ತೊಮ್ಮೆ ಇಂತಹ ಫೋಟೋಗಳನ್ನು ಸಂತೋಷದ ಕ್ಷಣಗಳನ್ನು ಶೇರ್ ಮಾಡುತ್ತಿದ್ದಾರೆ. ಅಲ್ಲದೇ, ಮೊದಲಿನಂತೆ ತಾವು ಆಕರ್ಷಕವಾಗಿ ಕಾಣಿಸುವಂತಹ ಡಿಸೈನರ್‌ವೇರ್‌ಗಳಲ್ಲಿರುವ ಫೋಟೋಗಳನ್ನು ಕೂಡ ಅಪ್ಡೇಟ್ ಮಾಡುತ್ತಿದ್ದಾರೆ. ಇದು ಅವರ ಸಂದರ್ಭಕ್ಕೆ ತಕ್ಕಂತೆ ಬದಲಾಗುವ ಫ್ಯಾಷನ್ ಸೆನ್ಸ್ ತೋರ್ಪಡಿಸುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ವಿಜಯಲಕ್ಷ್ಮಿಯವರ ಕುರ್ತಾ ಸ್ಟೈಲ್ ಕಾಟನ್ ಗೌನ್

ಅಂದಹಾಗೆ, ವಿಜಯಲಕ್ಷ್ಮಿಯವರು ಧರಿಸಿರುವುದು ಕುರ್ತಾ ಸ್ಟೈಲ್‌ನಲ್ಲಿರುವ ಕಾಟನ್ ಫ್ರಾಕ್ ಗೌನ್, ಸಮ್ಮರ್ ಸೀಸನ್‌ನಲ್ಲಿ ಅತಿ ಹೆಚ್ಚು ಟ್ರೆಂಡಿಯಾಗಿದ್ದ ಡ್ರೆಸ್ ಲಿಸ್ಟ್‌ನಲ್ಲಿದೆ. ಸಿಂಪಲ್ ಲುಕ್ ನೀಡುವ ಈ ಕಾಟನ್ ಫ್ಲೋರ್ ಲೆಂತ್ ಡ್ರೆಸ್ ಕ್ರೀಮ್ ಬಣ್ಣದಾಗಿದ್ದು, ಟೊಮೇಟೊ ರೆಡ್ ಹಾಗೂ ಗ್ರೀನ್ ಹ್ಯಾಂಡ್ ವರ್ಕ್ ಹೊಂದಿದೆ. ನೋಡಲು ಫ್ರಾಕ್‌ನಂತೆಯೂ ಕಾಣಿಸುವ ಈ ಡ್ರೆಸ್ ಫ್ರಿಲ್ ಒಳಗೊಂಡಿದೆ. ಬ್ರಿಥೆಬಲ್ ಡ್ರೆಸ್ ಎಂದರೂ ತಪ್ಪಿಲ್ಲ! ಈ ಸೀಸನ್ ಅದರಲ್ಲೂ ಹಾಲಿಡೇಗಳಿಗೆ ಹೇಳಿ ಮಾಡಿಸಿದ ಉಡುಗೆಯಿದು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Celebrity Fashion 3

ಸಿಂಪಲ್ ಎಲಿಗೆಂಟ್ ಲುಕ್

ಫ್ಯಾಬ್ರಿಕ್ ಮಾತ್ರವಲ್ಲ, ಈ ಕಲರ್‌ನ ಡ್ರೆಸ್ ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ಕಲ್ಪಿಸಿದೆ. ಜತೆಗೆ ಹಿಡಿದಿರುವ ಪಿಂಕ್ ಹ್ಯಾಂಡ್ ಬ್ಯಾಗ್ ಅವರ ಬಬ್ಲಿ ಲುಕ್‌ಗೆ ಸಾಕ್ಷಿಯಾಗಿದೆ. ಒಟ್ಟಿನಲ್ಲಿ, ಅವರ ಈ ಸ್ಟೈಲಿಂಗ್ ಸೀಸನ್‌ಗೆ ಹೇಳಿ ಮಾಡಿಸಿದಂತಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Summer Season End Sale: ಸೀಸನ್‌ಗೂ ಮುನ್ನವೇ ಆರಂಭವಾಯ್ತು ಸಮ್ಮರ್‌ ಎಂಡ್‌ ಸೇಲ್‌