Viral News: ಸ್ಟಾರ್‌ಬಕ್ಸ್‌ಗೆ ಡಾಲಿ ಚಾಯ್‌ವಾಲಾ ಬ್ರ್ಯಾಂಡ್ ಅಂಬಾಸಿಡರ್? ಏನಿದರ ಅಸಲಿಯತ್ತು?
ಟಾಟಾದ ಪ್ರಸಿದ್ಧ ಕಾಫಿ ಹೌಸ್ ಸ್ಟಾರ್‌ಬಕ್ಸ್ ಕಂಪನಿಯು ತನ್ನ ಬ್ರಾಂಡ್ ಅಂಬಾಸಿಡರ್ ಆಗಿ ನಾಗ್ಪುರದ ಚಾಯ್ ವಾಲಾ ಡಾಲಿಯನ್ನು ನೇಮಿಸಿಕೊಂಡಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿತ್ತು. ಆದರೆ ಇದೀಗ ಕಂಪನಿ ತನ್ನ ಅಧಿಕೃತ ಸೋಶಿಯಲ್ ಮಿಡಿಯಾದಲ್ಲಿ ಈ ಸುದ್ದಿ ಸುಳ್ಳು ಎಂದು ಹೇಳಿದೆ.


ಮುಂಬೈ: ತನ್ನ ಅದ್ಭುತ ಕೈ ಚಳಕದ ಮೂಲಕ ವಿಶೇಷವಾಗಿ ಚಹಾ ಮಾಡುವ ಮೂಲಕ ಫೇಮಸ್ ಆಗಿದ್ದ ನಾಗ್ಪುರದ ಚಾಯ್ ವಾಲಾ ಡಾಲಿ(Dolly Chaiwala) ಇದೀಗ ಟಾಟಾದ ಪ್ರಸಿದ್ಧ ಕಾಫಿ ಹೌಸ್ ಸ್ಟಾರ್‌ಬಕ್ಸ್‌ನ(Starbucks) ಬ್ರಾಂಡ್ ಅಂಬಾಸಿಡರ್ ಆಗಿದ್ದಾನೆ ಎನ್ನಲಾಗಿದೆ. ಈ ಕಂಪನಿಯು ಡಾಲಿ ಚಾಯ್‌ವಾಲಾನನ್ನು ಬ್ರಾಂಡ್ ಅಂಬಾಸಿಡರನ್ನಾಗಿ ನೇಮಿಸಿಕೊಂಡಿದೆ ಎಂಬ ಹೇಳಿಕೆಗಳು ಸೋಶಿಯಲ್ ಮೀಡಿಯಾಗಳಲ್ಲಿ ಇತ್ತೀಚೆಗೆ ಹರಿದಾಡಿ ವೈರಲ್(Viral News) ಆಗಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲೆಲ್ಲಾ ಡಾಲಿ ಚಾಯ್‌ವಾಲಾ ಹಾಗೂ ಸ್ಟಾರ್‌ಬಕ್ಸ್‌ಗೆ ಸಂಬಂಧಿಸಿದ ಪೋಸ್ಟ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಆದರೆ ಇದೀಗ ಕಂಪನಿ ತನ್ನ ಅಧಿಕೃತ ಸೋಶಿಯಲ್ ಮಿಡಿಯಾದಲ್ಲಿ ಈ ಸುದ್ದಿ ಸುಳ್ಳು ಎಂದು ಹೇಳಿದೆ.
ಚಹಾ ಫಿಲ್ಟರ್ ಮಾಡುವ ಅದ್ಭುತ ಕೈ ಚಳಕದಿಂದ ಫೇಮಸ್ ಆದ ನಾಗ್ಪುರದ ಚಾಯ್ ವಾಲಾ ಡಾಲಿ(Dolly Chaiwala) ಇದೀಗ ಟಾಟಾದ ಪ್ರಸಿದ್ಧ ಕಾಫಿ ಹೌಸ್ ಸ್ಟಾರ್‌ಬಕ್ಸ್‌ನ(Starbucks) ಬ್ರಾಂಡ್ ಅಂಬಾಸಿಡರ್ ಆಗಿದ್ದಾನೆ ಎನ್ನಲಾಗಿದೆ. ಈ ಕಂಪನಿಯು ಡಾಲಿ ಚಾಯ್‌ವಾಲಾನನ್ನು ಬ್ರಾಂಡ್ ಅಂಬಾಸಿಡರನ್ನಾಗಿ ನೇಮಿಸಿಕೊಂಡಿದೆ ಎಂಬ ಹೇಳಿಕೆಗಳು ಸೋಶಿಯಲ್ ಮೀಡಿಯಾಗಳಲ್ಲಿ ಇತ್ತೀಚೆಗೆ ಹರಿದಾಡಿ ವೈರಲ್(Viral News) ಆಗಿದೆ. ಹಾಗಾಗಿ ಸೋಶಿಯಲ್ ಮೀಡಿಯಾದಲ್ಲೆಲ್ಲಾ ಡಾಲಿ ಚಾಯ್‌ವಾಲಾ ಹಾಗೂ ಸ್ಟಾರ್‌ಬಕ್ಸ್‌ಗೆ ಸಂಬಂಧಿಸಿದ ಪೋಸ್ಟ್‌ಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ. ಆದರೆ ಇದೀಗ ಕಂಪನಿ ತನ್ನ ಅಧಿಕೃತ ಸೋಶಿಯಲ್ ಮಿಡಿಯಾದಲ್ಲಿ ಈ ಸುದ್ದಿ ಸುಳ್ಳು ಎಂದು ಹೇಳಿದೆ.
ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಜೊತೆಗಿನ ಜಂಟಿ ಉದ್ಯಮದ ಮೂಲಕ ಸ್ಟಾರ್‌ಬಕ್ಸ್ ಭಾರತದಲ್ಲಿ ತನ್ನ ಮೊದಲ ಶಾಪ್ ಅನ್ನು ಅಕ್ಟೋಬರ್ 2012 ರಲ್ಲಿ ಪ್ರಾರಂಭಿಸಿತು. ಈ ಮೊದಲ ಅಂಗಡಿಯು ಮುಂಬೈನಲ್ಲಿತ್ತು. ಮತ್ತು ಬ್ರ್ಯಾಂಡ್ ಈಗ ಭಾರತದಾದ್ಯಂತ 400 ಕ್ಕೂ ಹೆಚ್ಚು ಅಂಗಡಿಗಳನ್ನು ಹೊಂದಿದೆ.
ಈ ಸುದ್ದಿಯನ್ನೂ ಓದಿ:Viral Video: ವೃದ್ಧ ದಂಪತಿಯ ಪ್ರೀತಿಗೆ ಮನಸೋತು ಮಂಗಳಸೂತ್ರ ಉಡುಗೊರೆ ನೀಡಿದ ಆಭರಣ ಅಂಗಡಿ ಮಾಲೀಕ; ಹೃದಯಸ್ಪರ್ಶಿ ವಿಡಿಯೊ ವೈರಲ್
ಡಾಲಿ ಚಾಯ್‌ವಾಲಾ ಯಾರು?
ಡಾಲಿ ಚಾಯ್‌ವಾಲಾ ನಾಗ್ಪುರದ ಇಂಟರ್ನೆಟ್ ಸೆನ್ಸೇಷನ್ ಮತ್ತು ಚಹಾ ಮಾರಾಟಗಾರ ಈತ ತನ್ನ ಚಹಾ ಫಿಲ್ಟರ್ ಮಾಡುವ ಸ್ಟೈಲ್ ಮೂಲಕ ಸೋಶಿಯಲ್ ಮೀಡಿಯಾದಾದ್ಯಂತ ಫೇಮಸ್ ಆಗಿದ್ದನು. ಮಾಜಿ ಮೈಕ್ರೋಸಾಫ್ಟ್ ಸಿಇಒ ಬಿಲ್ ಗೇಟ್ಸ್ ಕೂಡ ಡಾಲಿ ಚಾಯ್‌ವಾಲಾ ಬಳಿ ಒಂದು ಕಪ್ ಚಾಯ್ ಸವಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.