ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Donald Trump: ಟ್ರಂಪ್‌ ಹೊಸ ತೆರಿಗೆ ನೀತಿ...ಭಾರತದ ಮೇಲೆ ಶೇ.26ರಷ್ಟು ಟ್ಯಾಕ್ಸ್‌

Donald Trump: ಭಾರತದ ಸುಂಕಗಳನ್ನು ಅತ್ಯಂತ ಕಠಿಣ ಎಂದು ಬಣ್ಣಿಸಿದ ಡೊನಾಲ್ಡ್‌ ಟ್ರಂಪ್‌, ಭಾರತದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಬಂದು ಹೋದರು. ಅವರು ನನ್ನ ಉತ್ತಮ ಸ್ನೇಹಿತ, ಆದರೆ ನಾನು ಅವರಿಗೆ ನೀವು ನನ್ನ ಸ್ನೇಹಿತ, ಆದರೆ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದೆ. ಭಾರತವು ನಮಗೆ ಶೇ. 52 ರಷ್ಟು ವಿಧಿಸುತ್ತದೆ, ಆದ್ದರಿಂದ ನಾವು ಅವರಿಗೆ ಅದರಲ್ಲಿ ಅರ್ಧದಷ್ಟು ಅಂದರೆ ಶೇ.26 ರಷ್ಟು ವಿಧಿಸುತ್ತೇವೆ ಎಂದರು.

ಪ್ರಧಾನಿ ಮೋದಿ ನನ್ನ ಸ್ನೇಹಿತನೇ, ಆದ್ರೆ... ಟ್ರಂಪ್‌ ಹೀಗಂದಿದ್ದೇಕೆ?

Profile Rakshita Karkera Apr 3, 2025 9:21 AM

ವಾಷಿಂಗ್ಟನ್: ಅಮೆರಿಕ ಮೇಲೆ ಇತರೆ ರಾಷ್ಟ್ರಗಳು ಹೇರುತ್ತಿರುವ ಸುಂಕ ನೀತಿ(Tariff) ಬಗ್ಗೆ ಸಮರ ಸಾರಿರುವ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌(Donald Trump) ಹೊಸ ತೆರಿಗೆ ನೀತಿಯನ್ನು ಘೋಷಿಸಿದ್ದಾರೆ. ಅಮೆರಿಕ ವಿಮೋಚನಾ ದಿನಾಚರಣೆಯಂದೇ ಈ ಹೊಸ ನೀತಿಯನ್ನು ಘೋಷಿಸಿರುವ ಟ್ರಂಪ್‌, ಭಾರತದ ಉತ್ಪನ್ನಗಳ ಮೇಲೆ ಶೇ.26ರಷ್ಟು ಸುಂಕ ವಿಧಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಭಾರತ ಮತ್ತು ಚೀನಾ ನಮ್ಮ ಮೇಲೆ ಗಣನೀಯ ಪ್ರಮಾಣದ ಪರಸ್ಪರ ಸುಂಕಗಳನ್ನು ವಿಧಿಸುತ್ತಿದ್ದರೂ ನಾವು ಅವರ ಮೇಲೆ ದಯೆ ತೋರಿ ಅವರು ವಿಧಿಸುತ್ತಿರುವ ಸುಂಕದ ಪ್ರಮಾಣಕ್ಕಿಂತ ಅರ್ಧದಷ್ಟು ಸುಕ ವಿಧಿಸುತ್ತಿದ್ದೇವೆ ಎಂದರು.

ಭಾರತದ ಬಗ್ಗೆ ಮಾತನಾಡುತ್ತಾ, ದೆಹಲಿಯ ಸುಂಕಗಳನ್ನು ಅತ್ಯಂತ ಕಠಿಣ ಎಂದು ಬಣ್ಣಿಸಿದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಅಮೆರಿಕಕ್ಕೆ ಬಂದು ಹೋದರು. ಅವರು ನನ್ನ ಉತ್ತಮ ಸ್ನೇಹಿತ, ಆದರೆ ನಾನು ಅವರಿಗೆ ನೀವು ನನ್ನ ಸ್ನೇಹಿತ, ಆದರೆ ನೀವು ನಮ್ಮನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಹೇಳಿದ್ದೆ. ಭಾರತವು ನಮಗೆ ಶೇ. 52 ರಷ್ಟು ವಿಧಿಸುತ್ತದೆ, ಆದ್ದರಿಂದ ನಾವು ಅವರಿಗೆ ಅದರಲ್ಲಿ ಅರ್ಧದಷ್ಟು - 26 ರಷ್ಟು ವಿಧಿಸುತ್ತೇವೆ ಎಂದರು.

ಅಮೆರಿಕಕ್ಕೆ ಭಾರತದಿಂದ ರಫ್ತಾಗುವ ಎಲ್ಲಾ ಆಟೋಮೊಬೈಲ್‌ಗಳ ಮೇಲೆ ಶೇಕಡ 25ರಷ್ಟು ತೆರಿಗೆಯನ್ನು ಟ್ರಂಪ್‌ ಸರ್ಕಾರ ಘೋಷಿಸಿದ್ದು, ಈ ಹೊಸ ನೀತಿ ಇಂದಿನಿಂದ ಜಾರಿಗೊಳ್ಳಲಿದೆ. ಈ ಹೊಸ ಸುಂಕವು ಕೆನಡಾ ಮತ್ತು ಮೆಕ್ಸಿಕೊದಲ್ಲಿ ನಿರ್ಮಿಸಲಾದವುಗಳನ್ನು ಒಳಗೊಂಡಂತೆ ಯುಎಸ್ ಹೊರಗೆ ತಯಾರಿಸಿದ ಎಲ್ಲಾ ಕಾರುಗಳಿಗೆ ಅನ್ವಯಿಸುತ್ತದೆ, ಇದು ಗಮನಾರ್ಹ ಬೆಲೆ ಏರಿಕೆಗೆ ಕಾರಣವಾಗಬಹುದು.

ಈ ಸುದ್ದಿಯನ್ನೂ ಓದಿ: Donald Trump's Tariff War: ಟ್ರಂಪ್‌ ತೆರಿಗೆ ಸಮರ; ಭಾರತಕ್ಕೇನು ಎಫೆಕ್ಟ್?

ಅಮೆರಿಕದ ಅತಿ ದೊಡ್ಡ ಮಿತ್ರ ರಾಷ್ಟ್ರಗಳಾಗಿರುವ ಯುರೋಪಿಯನ್ ಒಕ್ಕೂಟದ ಮೇಲೆ ಶೇ. 20 ರಷ್ಟು ಮತ್ತು ಇಂಗ್ಲೆಂಡ್‌ ಮೇಲೆ ಶೇ. 10 ರಷ್ಟು ಸುಂಕ ವಿಧಿಸುವುದಾಗಿ ಘೋಷಿಸಿದ್ದಾರೆ. ಯುರೋಪಿಯನ್ ಒಕ್ಕೂಟದಿಂದ ಆಮದು ಮಾಡಿಕೊಳ್ಳುವ ಎರಡು ಪ್ರಮುಖ ವ್ಯಾಪಾರ ಪಾಲುದಾರರು ಮತ್ತು ಮಿತ್ರ ರಾಷ್ಟ್ರಗಳಾದ ಯುಕೆಯಿಂದ ಶೇ. 20 ರಷ್ಟು ಮತ್ತು ಯುಕೆಯಿಂದ ಶೇ. 10 ರಷ್ಟು ಸುಂಕವನ್ನು ಘೋಷಿಸಿದರು. ಇನ್ನು ಜಪಾನ್ ಮೇಲೂ ಅವರು ಶೇ. 24 ರಷ್ಟು ಸುಂಕವನ್ನು ವಿಧಿಸಿದರು.

ಯಾವ್ಯಾವ ದೇಶಗಳಿಗೆ ಎಷ್ಟೆಷ್ಟು ಸುಂಕ?

  • ಚೀನಾ: 34%
  • ಯುರೋಪಿಯನ್ ಯೂನಿಯನ್: 20%
  • ದಕ್ಷಿಣ ಕೊರಿಯಾ: 25%
  • ಭಾರತ: 26%
  • ವಿಯೆಟ್ನಾಂ: 46%
  • ತೈವಾನ್: 32%
  • ಜಪಾನ್: 24%
  • ಥೈಲ್ಯಾಂಡ್: 36%
  • ಸ್ವಿಟ್ಜರ್ಲೆಂಡ್: 31%
  • ಇಂಡೋನೇಷ್ಯಾ: 32%
  • ಮಲೇಷ್ಯಾ: 24%
  • ಕಾಂಬೋಡಿಯಾ: 49%
  • ಯುನೈಟೆಡ್ ಕಿಂಗ್‌ಡಮ್: 10%
  • ದಕ್ಷಿಣ ಆಫ್ರಿಕಾ: 30%
  • ಬ್ರೆಜಿಲ್: 10%
  • ಬಾಂಗ್ಲಾದೇಶ: 37%
  • ಸಿಂಗಾಪುರ: 10%
  • ಇಸ್ರೇಲ್: 17%
  • ಫಿಲಿಪೈನ್ಸ್: 17%
  • ಚಿಲಿ: 10%
  • ಆಸ್ಟ್ರೇಲಿಯಾ: 10%
  • ಪಾಕಿಸ್ತಾನ: 29%
  • ಟರ್ಕಿ: 10%
  • ಶ್ರೀಲಂಕಾ: 44%
  • ಕೊಲಂಬಿಯಾ: 10%