ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್ 452 ಅಂಕ ಇಳಿಕೆ, ಕಾರಣವೇನು?

Share Market: ಸೆನ್ಸೆಕ್ಸ್‌ ಮತ್ತು ನಿಫ್ಟಿ ಇಂದು ಇಳಿಕೆ ದಾಖಲಿಸಿವೆ. ಸೆನ್ಸೆಕ್ಸ್‌ 452 ಅಂಕ ಕಳೆದುಕೊಂಡು 83,606ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 120 ಅಂಕ ಕಳೆದುಕೊಂಡು 25,517ಕ್ಕೆ ಸ್ಥಿರವಾಯಿತು. ಇದಕ್ಕೇನು ಕಾರಣ ಎನ್ನುವ ವಿವರ ಇಲ್ಲಿದೆ.

ಸೆನ್ಸೆಕ್ಸ್ 452 ಅಂಕ ಇಳಿಕೆ, ಕಾರಣವೇನು?

ಸಾಂದರ್ಭಿಕ ಚಿತ್ರ.

Profile Siddalinga Swamy Jun 30, 2025 8:55 PM

ಕೇಶವ ಪ್ರಸಾದ್‌ ಬಿ.

ಮುಂಬೈ: ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಇಳಿಕೆ ದಾಖಲಿಸಿವೆ. ಸೆನ್ಸೆಕ್ಸ್‌ 452 ಅಂಕ ಕಳೆದುಕೊಂಡು 83,606ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಿಫ್ಟಿ 120 ಅಂಕ ಕಳೆದುಕೊಂಡು 25,517ಕ್ಕೆ ಸ್ಥಿರವಾಯಿತು. ಇಂದು ಜಿಯೊ ಫೈನಾನ್ಸ್‌ 2% ಏರಿಕೆ ದಾಖಲಿಸಿತು. ಹೀರೊ ಮೊಟೊ ಕಾರ್ಪ್‌ 2% ಇಳಿಯಿತು. ಇಂದು ಹಣಕಾಸು ಮತ್ತು ಆಟೊಮೊಬೈಲ್‌ ಷೇರುಗಳು (Stock Market) ಇಳಿಕೆಯಾಯಿತು. ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ತಲ್ಲಣಗಳು ನಕಾರಾತ್ಮಕ ಪ್ರಭಾವ ಬೀರಿತು. ಹೀಗಿದ್ದರೂ, ಮಧ್ಯಪ್ರಾಚ್ಯದಲ್ಲಿ ಬಿಕ್ಕಟ್ಟು ಉಪಶಮನವಾಗುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಸ್ಟಾಕ್‌ ಮಾರ್ಕೆಟ್‌ ಇಂಡೆಕ್ಸ್‌ಗಳು ಚೇತರಿಸುವ ನಿರೀಕ್ಷೆಯೂ ಇದೆ. ಟಾಟಾ ಕನ್‌ ಸ್ಯೂಮರ್‌, ಎಕ್ಸಿಸ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರಾ ಬ್ಯಾಂಕ್‌, ಮಾರುತಿ ಸುಜುಕಿ ಷೇರುಗಳ ದರ ಇಂದು ಇಳಿಕೆ ಆಯಿತು. ಪಿಎಸ್‌ಯು ಬ್ಯಾಂಕ್‌ ಇಂಡೆಕ್ಸ್‌ ಮಾತ್ರ 2.6% ಏರಿಕೆ ದಾಖಲಿಸಿತು.

  • ಇಂದು ಟೊರೆಂಟ್‌ ಫಾರ್ಮಾ ಷೇರು ದರದಲ್ಲಿ 4% ಏರಿಕೆಯಾಯಿತು. ಕಂಪನಿಯು ಜೆಬಿ ಕೆಮಿಕಲ್ಸ್‌ ಅನ್ನು 11,900 ಕೋಟಿ ರುಪಾಯಿಗೆ ಖರೀದಿಸಲು ಒಪ್ಪಿರುವುದು ಇದಕ್ಕೆ ಕಾರಣ.
  • ವಾರಿ ಎನರ್ಜೀಸ್‌ ಷೇರು ದರದಲ್ಲಿ 3% ಏರಿಕೆ ಆಯಿತು. ಕಂಪನಿಯ ಅಮೆರಿಕದ ಗಟಕವು 540 ಮೆಗಾವಾಟಗ ಸೋಲಾರ್‌ ಮಾಡ್ಯುಲ್‌ ಉತ್ಪಾದನೆಯ ಗುತ್ತಿಗೆಯನ್ನು ಪಡೆದಿರುವುದು ಇದಕ್ಕೆ ಕಾರಣ.
  • SBI ಮತ್ತು ಇತರ ಪಿಎಸ್‌ಯು ಬ್ಯಾಂಕ್‌ಗಳ ಷೇರು ದರದಲ್ಲಿ ಇವತ್ತು 3% ತನಕ ಏರಿಕೆ ಉಂಟಾಯಿತು. ಇವುಗಳ ಸಬ್ಸಿಡರೀಸ್‌ಗಳ ಐಪಿಇ ನಡೆಸಲು ಹಣಕಾಸು ಸಚಿವಾಲಯ ಸೂಚಿಸಿದ ಬಳಿಕ ಈ ಬೆಳವಣಿಗೆ ನಡೆಯಿತು.
  • BHEL ಷೇರಿನ ದರದಲ್ಲಿ 3% ಏರಿಕೆ ಆಯಿತು. ಕಂಪನಿಯು ಅದಾನಿ ಪವರ್‌ನಿಂದ 6,500 ಕೋಟಿ ರುಪಾಯಿ ಮೌಲ್ಯದ ಗುತ್ತಿಗೆಯನ್ನು ಪಡೆದಿರುವುದು ಇದಕ್ಕೆ ಕಾರಣ.
  • ITD ಸೆಮೆಂಟೇಶನ್‌ ಷೇರು 4% ಹೆಚ್ಚಳವಾಯಿತು. 580 ಕೋಟಿ ರುಪಾಯಿ ಮೌಲ್ಯದ ಗುತ್ತಿಗೆಯನ್ನು ಪಡೆದಿರುವುದು ಇದಕ್ಕೆ ಕಾರಣ.
  • ರೇಮಂಡ್‌ ಸೇರಿನ ದರದಲ್ಲಿ 13% ಏರಿಕೆ ಆಯಿತು. ಕಂಪನಿಯ ರಿಯಾಲ್ಟಿ ಸಂಸ್ಥೆ ನಾಳೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್‌ ಆಗಲಿರುವುದು ಇದಕ್ಕೆ ಕಾರಣ.

ಸಾರ್ವಜನಿಕ ವಲಯದ ಹಲವಾರು ಸಂಸ್ಥೆಗಳು ಮುಂಬರುವ ತಿಂಗಳಲ್ಲಿ ಐಪಿಒಗೆ ಸಜ್ಜಾಗುವ ನಿರೀಕ್ಷೆ ಇದೆ. ಹಣಕಾಸು ಸಚಿವಾಲಯುವು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ, ಅವುಗಳ ಸಬ್ಸಿಡಿರೀಸ್‌ಗಳನ್ನು ಅಥವಾ ಅಧೀನ ಸಂಸ್ಥೆಗಳನ್ನು ಷೇರು ವಿನಿಮಯ ಕೇಂದ್ರಗಳಲ್ಲಿ ನೋಂದಣಿ ಮಾಡಲು, ಅಂದರೆ ಅವುಗಳ ಐಪಿಒ ನಡೆಸಲು ಸಿದ್ಧತೆ ನಡೆಸುವಂತೆ ತಿಳಿಸಿದೆ. ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಅಂಥ ಸುಮಾರು 15 ಅಧೀನ ಸಂಸ್ಥೆಗಳನ್ನು ಹೊಂದಿವೆ. ಉದಾಹರಣೆಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ , ತನ್ನ ಅಧೀನ ಸಂಸ್ಥೆಯಾಗಿರುವ ಎಸ್‌ಬಿಐ ಜನರಲ್‌ ಇನ್ಷೂರೆನ್ಸ್‌ ಮತ್ತು ಎಸ್‌ಬಿಐ ಪೇಮೆಂಟ್‌ ಸರ್ವೀಸ್‌ ಸಂಸ್ಥೆಯ ಐಪಿಒ ನಡೆಸುವ ನಿರೀಕ್ಷೆ ಇದೆ.

ಕೆನರಾ ಬ್ಯಾಂಕ್‌ ಈಗಾಗಲೇ ತನ್ನ ಅಸೆಟ್‌ ಮ್ಯಾನೇಜ್‌ಮೆಂಟ್‌ ಜಾಯಿಂಟ್‌ ವೆಂಚರ್‌ ಆಗಿರುವ ಕೆನರಾ ರೊಬೆಲೊ ಎಎಂಸಿಯ ಐಪಿಒಗೆ ಸಿದ್ಧತೆ ನಡೆಸುತ್ತಿದೆ. ಇದು ಕೆನರಾ ಎಚ್‌ಎಸ್‌ಬಿಸಿ ಲೈಫ್‌ ಇನ್ಷೂರೆನ್ಸ್‌ ಕಂಪನಿಯ ಐಪಿಒಗೂ ಮುಂದಾಗುವ ನಿರೀಕ್ಷೆ ಇದೆ.

ಉದ್ಯಮಿ ಗೌತಮ್‌ ಪೈ ಕುಟುಂಬದ ಒಡೆತನದ ಮಣಿಪಾಲ್‌ ಕಾರ್ಡ್ಸ್‌ ಕಂಪನಿಯು ಐಪಿಒ ನಡೆಸಲು ಸಜ್ಜಾಗಿದೆ. ಇದು ಭಾರತದ ಅತಿ ದೊಡ್ಡ ಪೇಮೆಂಟ್‌ ಮತ್ತು ಐಡೆಂಟಿಟಿ ಕಾರ್ಡ್‌ ಉತ್ಪಾದಕ ಕಂಪನಿಯಾಗಿದೆ. ಗೌತಮ್‌ ಪೈ ಕುಟುಂಬವು ಮಣಿಪಾಲ್‌ ಕಾರ್ಡ್ಸ್‌ನಲ್ಲಿ 60% ಷೇರು ಪಾಲನ್ನು ಹೊಂದಿದೆ. ಉಳಿದ ಷೇರುಗಳು ಸಾಂಸ್ಥಿಕ ಹೂಡಿಕೆದಾರರು ಮತ್ತು ಸಾರ್ವಜನಿಕ ಷೇರುದಾರರ ಬಳಿ ಇದೆ. ಮಣಿಪಾಲ್‌ ಕಾರ್ಡ್ಸ್‌ 1,200 ಕೋಟಿ ರುಪಾಯಿ ಗಾತ್ರದ ಐಪಿಒ ನಡೆಸುವ ನಿರೀಕ್ಷೆ ಇದ್ದು, ಸೆಬಿಗೆ ಅರ್ಜಿ ಸಲ್ಲಿಸಿದೆ.

ಸೆನ್ಸೆಕ್ಸ್‌ ಮತ್ತು ನಿಫ್ಟಿ ಈ ವರ್ಷ ಮೊದಲ 6 ತಿಂಗಳಲ್ಲಿ ಉತ್ತಮ ಪರ್ಫಾಮೆನ್ಸ್‌ ಕೊಟ್ಟಿವೆ. ಸೆನ್ಸೆಕ್ಸ್‌ 6,000 ಅಂಕಗಳ ಗಳಿಕೆಯನ್ನು ದಾಖಲಿಸಿದೆ. ಸುಮಾರು 8% ಏರಿಕೆಯಾಗಿದೆ. ಲಾರ್ಜ್‌ ಕ್ಯಾಪ್‌ ಷೇರುಗಳು ಇಂಡೆಕ್ಸ್‌ ಅನ್ನು ಎತ್ತರಕ್ಕೆ ಕೊಂಡೊಯ್ದಿದೆ. ಎರಡನೇ ದ್ವಿತೀಯಾರ್ಧದಲ್ಲೂ ಉತ್ತಮ ಪರ್ಫಾಮೆನ್ಸ್‌ ನಿರೀಕ್ಷೆ ಇದೆ ಎನ್ನುತ್ತಾರೆ ತಜ್ಞರು.

ಭಾರತೀಯ ಷೇರು ಮಾರುಕಟ್ಟೆಯನ್ನು ಇತರ ಪ್ರಗತಿಪರ ಮಾರುಕಟ್ಟೆಗೆ ಹೋಲಿಸಿದರೆ ಭರವಸೆದಾಯಕವಾಗಿದೆ. ಜಾಗತಿಕ ಮಟ್ಟದಲ್ಲಿ ಏರಿಳಿತಗಳ ನಡುವೆಯೂ ದೇಶೀಯ ಮಾರುಕಟ್ಟೆ ಉತ್ತಮ ಪರ್ಫಾಮೆನ್ಸ್‌ ನೀಡುತ್ತಿದೆ. ತಾತ್ಕಾಲಿಕವಾಗಿ ವೊಲಟಾಲಿಟಿ ಇರಬಹುದು. ಆದರೆ ಲಾಂಗ್‌ ಟರ್ಮ್‌ ದೃಷ್ಟಿಯಿಂದ ಹೂಡಿಕೆ ಮಾಡುವವರು ನಿಶ್ಚಿಂತೆಯಿಂದ ಇರಬಹುದು ಎಂದು ಕೋಟಕ್‌ ಎಂಎಸಿಯ ವ್ಯವಸ್ಥಾಪಕ ನಿರ್ದೇಶಕ ನಿಲೇಶ್‌ ಷಾ ಹೇಳಿದ್ದಾರೆ.

ಈಗ ಚಿನ್ನ, ಬೆಳ್ಳಿ, ಅಮೆರಿಕ, ಭಾರತದ ಈಕ್ವಿಟಿ ಮಾರುಕಟ್ಟೆ ಎಲ್ಲವೂ ಉನ್ನತ ಮಟ್ಟದಲ್ಲಿವೆ. ಇದಕ್ಕೆ ಕಾರಣ ಸೆಂಟ್ರಲ್‌ ಬ್ಯಾಂಕ್‌ಗಳು ನೋಟುಗಳನ್ನು ಹೆಚ್ಚುವರಿ ಮುದ್ರಿಸುತ್ತಿರುವುದು. ಹೀಗಾಗಿ ಅಲ್ಲ ಅಸೆಟ್‌ ಕ್ಲಾಸ್‌ಗಳ ದರಗಳು ಆಲ್‌ ಟೈಮ್‌ ಹೈ ಮಟ್ಟಕ್ಕೆ ಏರಿಕೆಯಾಗಿವೆ. ಹೀಗಾಗಿ ಇವುಗಳ ದರದಲ್ಲಿ ಒಂದು ಮಟ್ಟಿಗೆ ಕರೆಕ್ಷನ್‌ ಆಗುವ ಸಾಧ್ಯತೆಯೂ ಇದೆ. ಆದರೆ ಜಿಯೊಪೊಲಿಟಿಕಲ್‌ ಪರಿಸ್ಥಿತಿಗಳನ್ನು ಗ್ರಹಿಸುವುದು ಕಷ್ಟ ಎನ್ನುತ್ತಾರೆ ನಿಲೇಶ್‌ ಷಾ.

ಈ ಸುದ್ದಿಯನ್ನೂ ಓದಿ | Pravasi Prapancha: ಕೆ.ಮೋಹನ್ ಸುಂದರ್ ಎಂಬ ಕನಸುಗಾರನ ಅಚ್ಚರಿಯ ಸಾಧನೆ! ಜಗತ್ತು ಸುತ್ತುವ ಕನಸಿಗೆ ರೆಕ್ಕೆ ಕಟ್ಟುವ ಟ್ರಾವೆಲ್ ಮಾರ್ಟ್