Star Fashion 2025: ಸಿಲ್ಸಿಲಾ ಸೀರೆ ಲುಕ್ನಲ್ಲಿ ಕಾಣಿಸಿಕೊಂಡು ಮರು ಟ್ರೆಂಡ್ಗೆ ನಾಂದಿ ಹಾಡಿದ ನಟಿ ಆಲಿಯಾ ಭಟ್!
Star Fashion 2025: ಹಿರಿಯ ನಟಿ ರೇಖಾ ಅವರ ಸೂಪರ್ ಹಿಟ್ ಸಿನಿಮಾ ಸಿಲ್ಸಿಲಾ ಸಿನಿಮಾದ ಸೀರೆ ಲುಕ್ನಲ್ಲಿ, ನಟಿ ಆಲಿಯಾ ಭಟ್ ಕಾಣಿಸಿಕೊಂಡಿದ್ದು, ಎಲ್ಲರ ಗಮನ ಸೆಳೆದಿದೆ. ಮರು ಟ್ರೆಂಡ್ಗೆ ನಾಂದಿ ಹಾಡಿದೆ. ಏನಿದು ಸಿಲ್ಸಿಲಾ ಸೀರೆ ಲುಕ್? ಈ ಎಲ್ಲದರ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವಿವರ.

ಚಿತ್ರಗಳು: ಆಲಿಯಾ ಭಟ್, ಬಾಲಿವುಡ್ ನಟಿ., ಚಿತ್ರಕೃಪೆ: ರಿಯಾ ಕಪೂರ್ & ಸಾನ್ಯಾ ಕಪೂರ್ ಇನ್ಸ್ಟಾಗ್ರಾಮ್


ಬಾಲಿವುಡ್ ನಟಿ ಆಲಿಯಾ ಭಟ್ ಸಿಲ್ಸಿಲಾ ಸೀರೆ ಲುಕ್ನಲ್ಲಿ ಕಾಣಿಸಿಕೊಂಡು, ಈ ಸೀರೆಯ ಮರು ಟ್ರೆಂಡ್ಗೆ ನಾಂದಿ ಹಾಡಿದ್ದಾರೆ. ಹೌದು, ಹಿರಿಯ ನಟಿ ರೇಖಾ ಅವರು ನಟಿಸಿ ಸೂಪರ್ ಹಿಟ್ ಆಗಿದ್ದ, ಸಿಲ್ಸಿಲಾ ಸಿನಿಮಾದ ಲುಕ್ನಲ್ಲಿ ನಟಿ ಆಲಿಯಾ ಭಟ್ ಅವರು ಕಾಣಿಸಿಕೊಂಡು ಎಲ್ಲರಲ್ಲೂ ಅಚ್ಚರಿ ಮೂಡಿಸಿದರು. ಜತೆಗೆ ರೇಖಾ ಅಭಿಮಾನಿಗಳನ್ನು ಮಾತ್ರವಲ್ಲ, ಸೀರೆ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾದರು.

ಆಲಿಯಾ ಭಟ್ ಉಟ್ಟಿದ್ದ ಪಿಂಕ್ ಸಿಲ್ಸಿಲಾ ಸೀರೆ
ನಿನ್ನೆ ನಡೆದ ಹಿರಿಯ ನಟಿ ರೇಖಾ ಅಭಿನಯಿಸಿದ್ದ ಉಮ್ರಾವ್ ಜಾನ್ ಸಿನಿಮಾ ರೀ ರೀಲಿಸ್ ಇವೆಂಟ್ನಲ್ಲಿ ಪಾಲ್ಗೊಂಡಿದ್ದ ನಟಿ ಆಲಿಯಾ ಭಟ್, ರೇಖಾ ಅವರ ಈ ಸಿನಿಮಾವಾದ ಸಿಲ್ಸಿಲಾದ ಸೀರೆಯುಟ್ಟು, ಅದೇ ಸ್ಟೈಲಿಂಗ್ನಲ್ಲಿ ಕಾಣಿಸಿಕೊಂಡು ರೇಖಾ ಅವರಿಗೆ ಸರ್ಪ್ರೈಸ್ ನೀಡಿದರು. ಥೇಟ್ ರೇಖಾ ಅವರ ಸೀರೆಯ ಲುಕ್ ಅನ್ನು ರಿಪ್ಲಿಕಾ ಮಾಡಿ ಸೀರೆ ಪ್ರಿಯರನ್ನು ಸೆಳೆದರು.

ಏನಿದು ಸಿಲ್ಸಿಲಾ ಸೀರೆ ಲುಕ್?
ರೇಖಾ ಅಭಿನಯದ ಹಳೆಯ ಸಿನಿಮಾವಾದ ಸಿಲ್ಸಿಲಾ ಚಲನಚಿತ್ರದಲ್ಲಿ ರೇಖಾ ಅಭಿನಯ ಮಾತ್ರವಲ್ಲ, ಅವರು ಉಟ್ಟಿದ್ದ ಸಾದಾ ಸೀರೆಗಳು ಹಾಗೂ ಅದಕ್ಕೆ ಧರಿಸಿದ್ದ ಹೈ ಕ್ಲೊಸ್ಡ್ ನೆಕ್ ಬ್ಲೌಸ್ಗಳು ಅಂದಿನ ದಿನಗಳಲ್ಲೆ ಟ್ರೆಂಡ್ ಉಟ್ಟು ಹಾಕಿದ್ದವು. ಮಾನಿನಿಯರ ಸೀರೆ ಟ್ರೆಂಡ್ನಲ್ಲಿ ಸೇರಿಕೊಂಡಿದ್ದವು. ಸಿಲ್ಸಿಲಾ ಸೀರೆಗಳೆಂದೇ ಅನರ್ಥ ನಾಮ ಪಡೆದುಕೊಂಡಿದ್ದವು. ಆ ಮಟ್ಟಿಗೆ ರೇಖಾ ಉಟ್ಟಿದ್ದ ಸೀರೆಗಳ ರಿಪ್ಲಿಕಾ ಸೀರೆ ಲೋಕದಲ್ಲಿ ಹಂಗಾಮ ಎಬ್ಬಿಸಿದ್ದವು. ಅಂದಿನ ಜನರೇಷನ್ನ ಮಹಿಳೆಯರ ಬಳಿ ಒಂದಾದರೂ ಈ ಶೈಲಿಯ ಸೀರೆ ಹಾಗೂ ಬ್ಲೌಸ್ ವಾರ್ಡ್ರೋಬ್ನಲ್ಲಿರುತ್ತಿದ್ದವು. ಅಷ್ಟರ ಮಟ್ಟಿಗೆ ಈ ಸೀರೆ ಸ್ಟೈಲಿಂಗ್ ಫೇಮಸ್ ಆಗಿತ್ತು ಎಂದು ವಿವರಿಸುತ್ತಾರೆ ಫ್ಯಾಷನ್ ವಿಮರ್ಶಕರಾದ ವಿದ್ಯಾ ವಿವೇಕ್.

ಆಲಿಯಾ ಭಟ್ ಸಿಲ್ಸಿಲಾ ಸೀರೆ ರಿಕ್ರಿಯೇಟ್ ಆಗಿದ್ದು ಹೇಗೆ?
ಸೆಲೆಬ್ರೆಟಿ ಡಿಸೈನರ್ ತರುಣ್ ತೆಹ್ಲಿಯಾನಿ ಡಿಸೈನ್ನಲ್ಲಿ ಮೂಡಿಬಂದ ಈ ಸೀರೆ ಹಾಗೂ ಬ್ಲೌಸ್ ಆಲಿಯಾ ಭಟ್ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿತ್ತು. ಸ್ಟೈಲಿಸ್ಟ್ ರಿಯಾ ಹಾಗೂ ಸಾನಿಯಾ ಕಪೂರ್ ಸ್ಟೈಲಿಂಗ್ ಅವರ ಲುಕ್ಗೆ ಸಾಥ್ ನೀಡಿತ್ತು.

ಒಟ್ಟಿನಲ್ಲಿ, ಆಲಿಯಾ ಭಟ್ರ ಈ ಸಿಲ್ಸಿಲಾ ಸೀರೆಯ ಟ್ರೆಂಡ್ ಮತ್ತೊಮ್ಮೆ ಟ್ರೆಂಡಿಯಾಗುವ ಎಲ್ಲಾ ಮುನ್ಸೂಚನೆಯನ್ನು ನೀಡಿದೆ ಎನ್ನಬಹುದು.