Aamir Khan: ಮೊದಲ ಪತ್ನಿ ರೀನಾಗೆ ಡಿವೋರ್ಸ್ ನೀಡಿದ್ದ ಬಳಿಕ ಖಿನ್ನತೆಗೆ ಒಳಗಾಗಿದ್ರಾ ನಟ ಆಮೀರ್ ಖಾನ್?
ನಟ ಆಮೀರ್ ಖಾನ್ ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದ ವಿಚಾರದಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇವರು ಎರಡು ಬಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದು, ಇದೀಗ ಮೂರನೇ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬರುತ್ತಿದೆ. ಈ ನಡುವೆ ಮೊದಲ ಮದುವೆ ಮುರಿದು ಬಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬ ಬಗ್ಗೆ ಸ್ವತಃ ನಟ ಆಮೀರ್ ಖಾನ್ ಅವರೇ ಇತ್ತೀಚಿನ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.

Aamir Khan

ಮುಂಬೈ: ಬಾಲಿವುಡ್ ನಟ ಆಮಿರ್ ಖಾನ್ (Aamir Khan) ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ಜೀವನದ ವಿಚಾರದಲ್ಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇವರು ಎರಡು ಭಾರಿ ಮದುವೆಯಾಗಿ ವಿಚ್ಛೇದನ ಪಡೆದಿದ್ದು ಇದೀಗ ಮೂರನೇ ಮದುವೆ ವಿಚಾರ ಮತ್ತೆ ಮುನ್ನಲೆಗೆ ಬರುತ್ತಿದೆ. ಬೆಂಗಳೂರು ಮೂಲದ ಗೌರಿ ಎನ್ನುವವರ ಜತೆ ನಟ ಆಮೀರ್ ಖಾನ್ ಲಿವ್ ಇನ್ ರಿಲೇಶನ್ ಶಿಪ್ ಸಂಬಂಧ ಹೊಂದಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆ ಅವರ ಮೊದಲ ಮದುವೆ ಮುರಿದು ಬಿದ್ದ ಸಂದರ್ಭದಲ್ಲಿ ಪರಿಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಸ್ವತಃ ನಟ ಆಮೀರ್ ಖಾನ್ ಇತ್ತೀಚಿನ ಸಂದರ್ಶನ ಒಂದರಲ್ಲಿ ಬಹಿರಂಗಪಡಿಸಿದ್ದಾರೆ.
ಅದು ಆಮೀರ್ ಖಾನ್ ಅಭಿನಯದ 'ಲಗಾನ್' ಸಿನಿಮಾ ತೆರೆಕಂಡ ಸಮಯ. ಚಿತ್ರ ಸೂಪರ್ ಹಿಟ್ ಆಗಿತ್ತು. ಆದರೆ ಈ ಸಿನಿಮಾ ಯಶಸ್ಸು ಅವರಿಗೆ ಅಷ್ಟಾಗಿ ಖುಷಿ ನೀಡಲೇ ಇಲ್ಲವಂತೆ. ಯಾಕೆಂದರೆ ಅದೇ ಸಮಯದಲ್ಲಿ ಅಂದರೆ 2002ರಲ್ಲಿ ತಮ್ಮ ಮೊದಲ ಪತ್ನಿ ರೀನಾ ಅವರಿಂದ ವಿಚ್ಛೇದನ ಪಡೆದಿದ್ದ ಕಾರಣ ಅವರಿಗೆ ಸಿನಿಮಾ ಯಶಸ್ಸು ದೊಡ್ಡ ಮಟ್ಟದ ಖುಷಿ ನೀಡಿರಲಿಲ್ಲವಂತೆ. ಡಿವೋರ್ಸ್ ಆದ ಬಳಿಕ ಖಿನ್ನತೆಗೆ ಒಳಗಾಗಿದ್ದಾಗಿ ಅವರೇ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.
ʼʼರೀನಾ ಜತೆಗೆ ವಿಚ್ಛೇದನ ಪಡೆದ ಸಂದರ್ಭದಲ್ಲಿ ನನಗೆ ಖಿನ್ನತೆ ಸಮಸ್ಯೆ ಎದುರಾಯಿತು. ವಿಚ್ಚೇದನದ ದಿನವೇ ಮದ್ಯ ಸೇವಿಸಿದ್ದೆ. ಬಳಿಕ ಸುಮಾರು ಒಂದು ವರ್ಷಗಳ ಕಾಲ ಪ್ರತಿದಿನ ಕುಡಿ ಯುವ ಅಭ್ಯಾಸ ಮಾಡಿಕೊಂಡಿದ್ದೆ. ಈ ಸಂದರ್ಭದಲ್ಲಿ ನಾನು ಯಾವುದೇ ಕೆಲಸ ಒಪ್ಪಿ ಕೊಳ್ಳುತ್ತಿರಲಿಲ್ಲ. ಯಾರನ್ನೂ ಭೇಟಿಯಾಗಲು ಮನಸ್ಸು ಕೇಳುತ್ತಿರಲಿಲ್ಲ. ಅದೇ ವರ್ಷ ʼಲಗಾನ್ʼ ಚಿತ್ರದ ಅಭಿನಯಕ್ಕೆ ನನಗೆ ಮ್ಯಾನ್ ಆಫ್ ದ ಇಯರ್ ಪುರಸ್ಕಾರ ಲಭಿಸಿದ್ದರೂ ಆ ಖುಷಿ ನನಗೆ ಇರಲೇ ಇಲ್ಲ. ಬದಲಾಗಿ ವಿಚ್ಛೇದನದ ನೋವು ಬಹಳ ಕಾಡಿತ್ತು. ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದೆʼʼ ಎಂದು ಆಮೀರ್ ಖಾನ್ ಹೇಳಿದ್ದಾರೆ.
ಇದನ್ನು ಓದಿ:Capital City Movie: ರಾಜೀವ್ ರೆಡ್ಡಿ ಅಭಿನಯದ ‘ಕ್ಯಾಪಿಟಲ್ ಸಿಟಿ’ ಚಿತ್ರ ಜು.4ಕ್ಕೆ ರಿಲೀಸ್
ಆಮೀರ್ ಮತ್ತು ರೀನಾ ನೆರೆಹೊರೆಯವರಾಗಿದ್ದು, ಮೊದಲಿನಿಂದಲೂ ಇಬ್ಬರ ನಡುವೆ ಸ್ನೇಹ ಸಂಬಂಧ ಇತ್ತು. ರೀನಾ ಅವರನ್ನು ತುಂಬಾ ಪ್ರೀತಿಸುತ್ತಿದ್ದ ಆಮೀರ್ ಖಾನ್ ಅವರನ್ನು ಮೆಚ್ಚಿ ಸಲು ತನ್ನ ರಕ್ತದಲ್ಲಿ ಪತ್ರವನ್ನೂ ಕೂಡ ಬರೆದಿದ್ದರು. ರೀನಾ ಮೊದಲಿಗೆ ಒಪ್ಪರಲಿಲ್ಲ. ಬಳಿಕ ಇಬ್ಬರು ಪ್ರೀತಿಸಿ ರಹಸ್ಯವಾಗಿ ಮದುವೆಯಾದರು.
ನಟ ಆಮಿರ್ ಖಾನ್ ಮತ್ತು ರೀನಾ ವಿವಾಹ 1986ರಲ್ಲಿ ನಡೆಯಿತು. ಅವರಿಬ್ಬರು 16 ವರ್ಷಗಳ ಕಾಲ ಜತೆಗೆ ದಾಂಪತ್ಯ ಜೀವನ ನಡೆಸಿದ್ದರು. ಇವರಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರ ಮದುವೆಯಾಗುವಾಗ ಆಮೀರ್ ಖಾನ್ ಅವರಿಗೆ ಬರೀ 21 ಹಾಗೂ ರೀನಾ ಅವರಿಗೆ 19 ವರ್ಷವಷ್ಟೇ. ಹೀಗಾಗಿ ಚಿಕ್ಕ ವಯಸ್ಸಿನಲ್ಲಿಯೇ ಮದುವೆಯಾದ ಕಾರಣ ಪದೇ ಪದೆ ಅನೇಕ ವಿಚಾರಗಳಿಗೆ ಇಬ್ಬರ ನಡುವೆ ವೈಮನಸ್ಸು ಮೂಡುತ್ತಿತ್ತು. ಹೀಗೆ 2002ರಲ್ಲಿ ಇಬ್ಬರು ಸಮ್ಮತಿಯ ಮೇರೆಗೆ ವಿಚ್ಛೇದನ ಪಡೆದರು. ಡಿವೋರ್ಸ್ ನಂತರ ರೀನಾ ಜತೆಗೆ ಗೌರವಯುತ ಸಂಬಂಧ ಹೊಂದಿರುವುದಾಗಿ ಆಮೀರ್ ಖಾನ್ ತಿಳಿಸಿದ್ದರು.