Abhishek Bachchan: ವಿಚ್ಛೇದನದ ವದಂತಿ ಬಗ್ಗೆ ಕೊನೆಗೂ ಮೌನ ಮುರಿದ ನಟ ಅಭಿಷೇಕ್ ಬಚ್ಚನ್
ಇತ್ತೀಚೆಗಷ್ಟೇ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ. ವೈಮನಸ್ಸು ಮೂಡಿದೆ ಅವರಿಬ್ಬರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇವರಿಬ್ಬರ ವಿಚ್ಛೇದನದ ವಿಚಾರ ಇಂದು ನಿನ್ನೆಯದ್ದಲ್ಲ. ಅನೇಕ ವರ್ಷದಿಂದಲೂ ಈ ಸುದ್ದಿ ಹರಿದಾಡುತ್ತಲೇ ಇದೆ. ಹಾಗಿದ್ದರೂ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಈ ಬಗ್ಗೆ ಯಾವ ಸ್ಪಷ್ಟನೆ ನೀಡದೇ ಮೌನವಹಿಸಿದ್ದರು. ಇದೀಗ ಅನೇಕ ಸಮಯದ ಬಳಿಕ ನಟ ಅಭಿಷೇಕ್ ವಿಚ್ಛೇದನ ವದಂತಿ ಬಗ್ಗೆ ಮಾತನಾಡಿದ್ದಾರೆ.

Abhishek Bachchan and Aishwarya Rai

ನವದೆಹಲಿ: ಬಾಲಿವುಡ್ ಖ್ಯಾತ ನಟ ಅಭಿಷೇಕ್ ಬಚ್ಚನ್ (Abhishek Bachchan) ಸಿನಿಮಾ ಹೊರತಾಗಿ ವೈಯಕ್ತಿಕ ಜೀವನದ ವಿಚಾರದಲ್ಲೂ ಸಾಕಷ್ಟು ಸುದ್ದಿಯಲ್ಲಿರುತ್ತಾರೆ. ಸ್ಟಾರ್ ಫ್ಯಾಮಿಲಿ ಹಿನ್ನೆಲೆಯ ಕಾರಣ ಇವರ ವೈಯಕ್ತಿಕ ವಿಚಾರಗಳು ಆಗಾಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ನಟಿ ಐಶ್ವರ್ಯಾ ರೈ ಮತ್ತು ನಟ ಅಭಿಷೇಕ್ ಬಚ್ಚನ್ ನಡುವಿನ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆ. ಇಬ್ಬರ ನಡುವೆ ವೈಮನಸ್ಸು ಮೂಡಿದೆ, ಅವರಿಬ್ಬರು ಡಿವೋರ್ಸ್ ಪಡೆಯುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು. ಹಾಗೆ ನೋಡಿದರೆ ಇವರಿಬ್ಬರ ವಿಚ್ಛೇದನದ ವಿಚಾರ ಇಂದು ನಿನ್ನೆಯದ್ದಲ್ಲ. ಅನೇಕ ವರ್ಷದಿಂದಲೂ ಈ ಸುದ್ದಿ ಹರಿದಾಡುತ್ತಲೇ ಇದೆ. ಹಾಗಿದ್ದರೂ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಈ ಬಗ್ಗೆ ಯಾವ ಸ್ಪಷ್ಟನೆ ನೀಡದೇ ಮೌನವಹಿಸಿದ್ದರು. ಇದೀಗ ಅನೇಕ ಸಮಯದ ಬಳಿಕ ನಟ ಅಭಿಷೇಕ್ ತಮ್ಮ ವಿಚ್ಛೇದನ ವದಂತಿಗಳ ಬಗ್ಗೆ ಮಾತನಾಡಿದ್ದಾರೆ.
ಅಭಿಷೇಕ್ ಬಚ್ಚನ್ ಸಂದರ್ಶನವೊಂದರಲ್ಲಿ ಡಿವೊರ್ಸ್ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ʼʼನನ್ನ ಬಗ್ಗೆ ಗಾಸಿಪ್ ಮಾಡುವವರ ವಿರುದ್ದ ನಾನು ತಲೆಯನ್ನು ಕೆಡಿಸಿಕೊಳ್ಳಲಾರೆ. ಆದರೆ ನನ್ನ ಕುಟುಂಬದ ಬಗ್ಗೆ ನೆಗೆಟಿವ್ ಕ್ರಿಯೆಟ್ ಮಾಡುವುದರ ಬಗ್ಗೆ ನನಗೆ ಬೇಸರವಿದೆ. ನಾನು ಈ ಬಗ್ಗೆ ಏನೇ ಮಾತನಾಡಿ ಸ್ಪಷ್ಟೀಕರಣ ನೀಡಿದರೂ ಜನರು ಅದನ್ನು ಬೇರೆ ರೀತಿಯೆ ಕ್ರಿಯೇಟ್ ಮಾಡಿ ಮಾತ ನಾಡುತ್ತಾರೆʼʼ ಎಂದಿದ್ದಾರೆ.
ಮುಂದುವರಿದು, ʼʼಜನರಿಗೆ ಪಾಸಿಟಿವ್ ಆಗಿರುವ ವಿಚಾರಗಳು ಬೇಗನೇ ತಲುಪುವುದಿಲ್ಲ. ನೆಗೆಟಿವ್ ಸುದ್ದಿ ಬೇಗನೇ ಇಷ್ಟವಾಗುತ್ತದೆ. ಸತ್ಯಕ್ಕಿಂತಲೂ ಸುಳ್ಳು ಸುದ್ದಿಗಳು ಹಿತವಾಗಿರುತ್ತದೆ. ಹಾಗಂತ ನಮ್ಮ ಜೀವನ ನಾವೇ ನಡೆಸಬೇಕು. ನಾನು ನನ್ನವರಿಗೆ ಮಾತ್ರ ಜವಾಬ್ದಾರನಾಗಿರುತ್ತೇನೆʼʼ ಎಂದು ಹೇಳಿದ್ದಾರೆ.
ʼʼಇತ್ತೀಚೆಗೆ ಜನಪ್ರಿಯತೆಯ ಗೀಳಿಗೆ ಬಿದ್ದು ಸುಳ್ಳು ಸುದ್ದಿ ಹಬ್ಬಿಸುವವರು ಅನೇಕರು ಇದ್ದಾರೆ. ಅಂತವರು ತಮ್ಮ ಆತ್ಮ ಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಅದರಲ್ಲೂ ಇತ್ತೀಚಿನ ಕೆಲವು ಟ್ರೋಲರ್ಸ್ ಎಲ್ಲೋ ಕುಳಿತು ಮನಸ್ಸಿಗೆ ಬಂದ ಹಾಗೆ ಮಾತನಾಡಿ, ಅವರದ್ದೇ ಧೋರಣೆ ಯನ್ನೇ ಸರಿ ಎಂದು ಬಿಂಬಿಸಿ ಕೀಳಾಗಿ ಮಾತನಾಡುತ್ತಾರೆ. ಆದರೆ ಇದರಿಂದ ಬೇರೆಯವರಿಗೂ ನೋವಾಗಬಹುದು ಎಂಬ ಪರಿಜ್ಞಾನ ಇರಬೇಕುʼʼ ಎಂದು ಟ್ರೋಲರ್ಸ್ ವಿರುದ್ಧ ಅಭಿಷೇಕ್ ಬಚ್ಚನ್ ಕಿಡಿಕಾರಿದ್ದಾರೆ.
ಅಭಿಷೇಕ್ ಮತ್ತು ಐಶ್ವರ್ಯಾ ಜತೆಯಾಗಿ ʼಕುಚ್ ನಾ ಕಹೋʼ, ʼದಾಯಿ ಅಕ್ಷರ್ ಪ್ರೇಮ್ ಕೇʼ, ʼಧೂಮ್ 2ʼ, ʼಗುರುʼ ಮುಂತದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಬಾಲಿವುಡ್‌ನ ಜನಪ್ರಿಯ ಜೋಡಿ ಎನಿಸಿಕೊಂಡಿದೆ. ಅಭಿಷೇಕ್ ಅಭಿನಯದ ʼಹೌಸ್‌ಫುಲ್ 5ʼ ಸಿನಿಮಾ ಇತ್ತೀಚೆಗಷ್ಟೇ ದೊಡ್ಡ ಮಟ್ಟಿನ ಯಶಸ್ಸು ಕಂಡಿತ್ತು. ಸದ್ಯ ಅವರು ʼಕಾಳಿಧರ್ ಲಾಪಟಾʼದಲ್ಲಿ ಅಭಿನಯಿಸುತ್ತಿದ್ದು, ಮಧುಮಿತಾ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ದೈವಿಕ್ ಭಾಗೇಲಾ ಮತ್ತು ಜೀಶನ್ ಅಯ್ಯೂಬ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಜುಲೈ 4ರಂದು ಜೀ 5 ಓಟಿಟಿಯಲ್ಲಿ ರಿಲೀಸ್ ಆಗಲಿದೆ.