Viral Video: ಸಂಗೀತ ಪ್ರದರ್ಶನದ ವೇಳೆ ಸರ್ಕಸ್ ಮಾಡಲು ಹೋಗಿ ಜೀವಕ್ಕೆ ಕುತ್ತು ತಂದುಕೊಂಡ ಗಾಯಕಿ; ವಿಡಿಯೊ ನೋಡಿ
ಅಮೆರಿಕದ ಹೂಸ್ಟನ್‌ನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಹಾರುವ ಕಾರಿನ ಪ್ರಾಪ್‌ನಲ್ಲಿ ಕುಳಿತು ಪ್ರದರ್ಶನ ನೀಡುತ್ತಿದ್ದ ಬಿಯಾನ್ಸ್ ಮಧ್ಯದಲ್ಲಿ ಸಿಲುಕಿಕೊಂಡಿದ್ದಾಳೆ. ಆದರೆ ಆ ವೇಳೆ ಆಕೆ ಹೆದರದೆ ಶಾಂತವಾಗಿದ್ದಳು. ಕೊನೆಗೆ ಸಿಬ್ಬಂದಿ ಅವಳನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ವಾಷಿಂಗ್ಟನ್: ಹೂಸ್ಟನ್‌ನಲ್ಲಿ( Houston) ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಗಾಯಕಿ ಬಿಯಾನ್ಸ್ (Beyonce) ಹಾರುವ ಕಾರಿನ ಮೇಲೆ ತನ್ನ ಪ್ರದರ್ಶನ ನೀಡುತ್ತಿದ್ದಾಗ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾಳೆ. ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗಿದೆ. ನಂತರ ಸಿಬ್ಬಂದಿ ಅವಳನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಈ ಘಟನೆಯ ವೇಳೆ ಆಕೆ ಹೆದರದೆ ಕೂಲ್ ಆಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾಳೆ. ಇದನ್ನು ಕಂಡ ಆಕೆಯ ಅಭಿಮಾನಿಗಳು ಅವಳ ವೃತ್ತಿ ಪರತೆಯನ್ನು ಹೊಗಳಿದ್ದಾರೆ.
ಗಾಯಕಿ ಹಾರುವ ಕಾರಿನ ಮೇಲೆ ಕುಳಿತು 16 ಕ್ಯಾರೇಜಸ್ ಅನ್ನು ಪ್ರದರ್ಶಿಸುತ್ತಿದ್ದಳು. ಆಗ ಅದು ಇದ್ದಕ್ಕಿದ್ದಂತೆ ಒಂದು ಕಡೆ ವಾಲಿ ಬಿಟ್ಟಿತು. ಕಾರು ತೂಗಾಡುತ್ತಿದ್ದಂತೆ ಅಭಿಮಾನಿಗಳು ಶಾಕ್ ಆಗಿದ್ದಾರೆ. ಆದರೆ ಅವಳು ಮಾತ್ರ ನಗುತ್ತಾ ಕೂಲ್ ಆಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದಾಳೆ. ನಂತರ ಸಿಬ್ಬಂದಿ ಅವಳನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಅಂತಹ ಪರಿಸ್ಥಿತಿಯಲ್ಲಿಯೂ ಬಿಯಾನ್ಸ್ ತನ್ನನ್ನು ತಾನು ನಿಯಂತ್ರಿಸಿಕೊಂಡು ವಾಲಿದ ಕಾರಿನ ಅಂಚನ್ನು ಹಿಡಿದುಕೊಂಡು ಅವಳು ಆತಂಕದಿಂದ ನಗುತ್ತಿರುವುದು ಕಂಡುಬಂದಿದೆ.
ವಿಡಿಯೊ ಇಲ್ಲಿದೆ ನೋಡಿ...
Beyoncé was up there fighting for her life and they all screaming in her face 😭😭😭 pic.twitter.com/JCQIeouoUg
— Yoncé Vocals (@YonceVocals) June 29, 2025
ಅದೃಷ್ಟವಶಾತ್, ಯಾವುದೇ ಅವಘಡ ಸಂಭವಿಸಿಲ್ಲ. ಘಟನೆಯ ನಂತರ ಬಿಯಾನ್ಸ್ ಕೆಳಗಿಳಿದು ಪ್ರದರ್ಶನವನ್ನು ಮುಂದುವರಿಸಿದ್ದಾಳೆ. ಹಾಗೇ ಗಾಯಕಿ ತಾನು ಆಯತಪ್ಪಿ ಬಿದ್ದರೆ, ನೀವೆಲ್ಲರೂ ತನ್ನನ್ನು ಹಿಡಿಯುತ್ತೀರಿ ಎಂದು ತನಗೆ ಭರವಸೆ ಇದೆ ಎಂದು ಅಭಿಮಾನಿಗಳ ಮೇಲಿನ ನಂಬಿಕೆಯನ್ನು ವ್ಯಕ್ತಪಡಿಸಿದ್ದಾಳೆ.ಈ ವಿಡಿಯೊ ವೈರಲ್ ಆಗಿ ಸೋಶಿಯಲ್ ಮೀಡಿಯಾದ ನೆಟ್ಟಿಗರು ಆಕೆಯನ್ನು ಹೊಗಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಚಲಿಸುತ್ತಿರುವ ಬೈಕ್‌ನಲ್ಲಿ ಫುಲ್ ಮೂಡ್‌ನಲ್ಲಿ ಜೋಡಿಯ ರೊಮ್ಯಾನ್ಸ್! ವಿಡಿಯೊ ವೈರಲ್
ಇತ್ತೀಚೆಗೆ ಗ್ರೀನ್ ಡೇನ ಬಿಲ್ಲಿ ಜೋ ಆರ್ಮ್‌ಸ್ಟ್ರಾಂಗ್ ಸಂಗೀತ ಕಛೇರಿಯ ಸಮಯದಲ್ಲಿ, ವೇದಿಕೆಯ ಮೇಲೆ ಕೋಪಗೊಂಡು ಜಗಳವಾಡಿದ್ದು ಅಲ್ಲದೇ ತನ್ನ ಗಿಟಾರ್ ಮುರಿದು ಹಾಕಿ ವೇದಿಕೆಯಿಂದ ಹೊರ ನಡೆದಿದ್ದನು. ಈ ರೀತಿ ವೇದಿಕೆಯ ಮೇಲೆ ಅವಘಢ ಸಂಭವಿಸಿದ್ದು, ಸಂಗೀತಗಾರರಿಗೆ ಮಾತ್ರ ಸೀಮಿತವಲ್ಲ. ರಂಗಭೂಮಿ ನಟರಿಗೂ ಕೂಡ ಇಂತಹ ಅನುಭವಗಳಾಗಿವೆ. ಅನೇಕ ಪ್ರದರ್ಶಕರು ನೇರ ಪ್ರದರ್ಶನಗಳ ಸಮಯದಲ್ಲಿ ಸಾಲುಗಳನ್ನು ಮರೆತುಬಿಟ್ಟು ಕಂಗಾಲಾಗಿದ್ದ ಪ್ರಸಂಗಗಳು ನಡೆದಿತ್ತು.