ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಟಾಟಾ ಕ್ಯಾಪಿಟಲ್‌ ಐಪಿಒಗೆ ಸಿದ್ಧತೆ

Share Market: ಟಾಟಾ ಸಮೂಹದ ಕಂಪನಿಯಾಗಿರುವ ಟಾಟಾ ಕ್ಯಾಪಿಟಲ್‌ನ ಐಪಿಒ ಕರಡು ಪ್ರಸ್ತಾಪಕ್ಕೆ ಮಾರುಕಟ್ಟೆ ನಿಯಂತ್ರಕ ಸೆಬಿ ಅನುಮೋದಿಸಿದೆ. 17,200 ಕೋಟಿ ರುಪಾಯಿಗಳ ಐಪಿಒ ಇದಾಗಿದೆ. ಹಣಕಾಸು ಕ್ಷೇತ್ರದ ಮತ್ತೊಂದು ದೊಡ್ಡ ಐಪಿಒ ಇದಾಗುವ ನಿರೀಕ್ಷೆ ಇದೆ.

ಟಾಟಾ ಕ್ಯಾಪಿಟಲ್‌ ಐಪಿಒಗೆ ಸಿದ್ಧತೆ

ಸಾಂದರ್ಭಿಕ ಚಿತ್ರ.

Profile Siddalinga Swamy Jun 22, 2025 7:00 AM

ಕೇಶವ ಪ್ರಸಾದ್‌ ಬಿ.

ಮುಂಬೈ: 2025 ಜೂನ್‌ ಕೊನೆಯ ವಾರ ಹಲವಾರು ಕಾರ್ಪೊರೇಟ್‌ ಬೆಳವಣಿಗೆಗಳು ನಡೆಯಲಿವೆ (Stock Market). ಡಿವಿಡೆಂಡ್‌ ವಿತರಣೆ, ಬೋನಸ್‌ ಇಶ್ಯೂ ನಡೆಯಲಿವೆ. ಸಿಪ್ಲಾ, ವೇದಾಂತ, ಬಜಾಜ್‌, ಎಚ್‌ಡಿಎಫ್‌ಸಿ ಬ್ಯಾಂಕ್‌ ಮತ್ತು ಕನ್ಸಾಯ್‌ ನೆರೊಲಾಕ್‌ ಪೇಂಟ್ಸ್ ಈ ಲಿಸ್ಟ್‌ನಲ್ಲಿ ಇವೆ. ಷೇರುದಾರರು ಎಕ್ಸ್-ಡೇಟ್‌ಗಿಂತ ಒಂದು ದಿನ ಮೊದಲು ಷೇರು ಖರೀದಿಸಿದರೆ ಅವರಿಗೆ ಕೂಡ ಡಿವಿಡೆಂಡ್‌ ಲಾಭ ಪಡೆಯಲು ಅರ್ಹತೆ ಸಿಗುತ್ತದೆ.‌ ಮತ್ತೊಂದು ಬೆಳವಣಿಗೆಯಲ್ಲಿ ಟಾಟಾ ಸಮೂಹದ ಸಂಸ್ಥೆಯಾದ ಟಾಟಾ ಕ್ಯಾಪಿಟಲ್‌ ಕಂಪನಿಯ ಐಪಿಒದ ಕರಡು ಪ್ರಸ್ತಾಪಕ್ಕೆ ಸೆಬಿ ಅನುಮೋದಿಸಿದೆ.



ಜೂನ್‌ 23, ಸೋಮವಾರ, ಡಿವಿಡೆಂಡ್‌:

ದಾಲ್ಮಿಯಾ ಭಾರತ್-‌ ಪ್ರತಿ ಷೇರಿಗೆ 5 ರುಪಾಯಿಗಳ ಅಂತಿಮ ಡಿವಿಡೆಂಡ್‌

ಡೈನಾಮಿಕ್‌ ಕೇಬಲ್ಸ್-‌ ಪ್ರತಿ ಷೇರಿಗೆ 50 ಪೈಸೆ ಅಂತಿಮ ಡಿವಿಡೆಂಡ್‌

ಹಿಂದೂಸ್ಥಾನ್‌ ಯುನಿಲಿವರ್-‌ ಪ್ರತಿ ಷೇರಿಗೆ 24 ರುಪಾಯಿ ಅಂತಿಮ ಡಿವಿಡೆಂಡ್‌

ಕಲ್ಪತರು ಪ್ರಾಜೆಕ್ಟ್ಸ್‌ ಇಂಟರ್‌ ನ್ಯಾಶನಲ್‌ - ಪ್ರತಿ ಷೇರಿಗೆ 9 ರುಪಾಯಿ ಅಂತಿಮ ಡಿವಿಡೆಂಡ್‌

ಕನ್ಸಾಯ್‌ ನೆರೊಲ್ಯಾಕ್‌ ಪೇಂಟ್ಸ್- ಪ್ರತಿ ಷೇರಿಗೆ 1 ರುಪಾಯಿ 25 ಪೈಸೆ ಅಂತಿಮ ಡಿವಿಡೆಂಡ್‌

ಮದರ್ಸನ್‌ ಸುಮಿ ವೈರಿಂಗ್‌ ಇಂಡಿಯಾ- ಪ್ರತಿ ಷೇರಿಗೆ 35 ಪೈಸೆ ಅಂತಿಮ ಡಿವಿಡೆಂಡ್‌

ಪಿಲಾನಿ ಇನ್ವೆಸ್ಟ್‌ಮೆಂಟ್‌ ಆಂಡ್‌ ಇಂಡಸ್ಟ್ರೀಸ್‌ ಕಾರ್ಪೊರೇಷನ್:‌ ಪ್ರತಿ ಷೇರಿಗೆ 15 ರುಪಾಯಿ ಅಂತಿಮ ಡಿವಿಡೆಂಡ್‌

ಸಂವರ್ಧನ ಮದರ್ಸನ್‌ ಇಂಟರ್‌ ನ್ಯಾಶನಲ್ : ಪ್ರತಿ ಷೇರಿಗೆ 35 ಪೈಸೆ ಅಂತಿಮ ಡಿವಿಡೆಂಡ್‌

ಬೋನಸ್‌ ಷೇರು: ವಿ-ಮಾರ್ಟ್‌ ರಿಟೇಲ್-‌ ಬೋನಸ್‌ ಷೇರು ಅನುಪಾತ: 3:1

ಜೂನ್‌ 24 ಮಂಗಳವಾರ, ಡಿವಿಡೆಂಡ್‌ ನೀಡುವ ಕಂಪನಿಗಳು:

ಅಲ್ಕ್ಯಾಲ್‌ ಅಮೈನ್ಸ್‌ ಕೆಮಿಕಲ್ಸ್-‌ ಪ್ರತಿ ಷೇರಿಗೆ 10 ರುಪಾಯಿ ಡಿವಿಡೆಂಡ್‌

ಪಾಲಿಕ್ಯಾಬ್‌ ಇಂಡಿಯಾ- ಪ್ರತಿ ಷೇರಿಗೆ 35 ರುಪಾಯಿ ಅಂತಿಮ ಡಿವಿಡೆಂಡ್‌

ವೇದಾಂತ- ಪ್ರತಿ ಷೇರಿಗೆ 7 ರುಪಾಯಿ ಅಂತಿಮ ಡಿವಿಡೆಂಡ್.‌

ಸ್ಟಾಕ್‌ ಸ್ಪ್ಲಿಟ್: ಲಡ್ಡು ಗೋಪಾಲ್‌ ಆನ್‌ಲೈನ್‌ ಸರ್ವೀಸ್-‌ 10 ರುಪಾಯಿಯಿಂದ 2 ರುಪಾಯಿ ಮುಖಬೆಲೆಗೆ ವಿಭಜನೆಯಾಗಲಿದೆ. ಅಂದರೆ ಪ್ರತಿ ಒಂದು ಷೇರು 5 ಷೇರುಗಳಾಗಲಿದೆ.

ಜೂನ್‌ 25, ಬುಧವಾರ, ಡಿವಿಡೆಂಡ್ಸ್‌:

ಈಜಸ್‌ ಲಾಜಿಸ್ಟಿಕ್ಸ್:‌ ಪ್ರತಿ ಷೇರಿಗೆ 2 ರುಪಾಯಿ ಮಧ್ಯಂತರ ಡಿವಿಡೆಂಡ್‌

ಆಟೊಮೊಬೈಲ್‌ ಕಾರ್ಪೊರೇಷನ್‌ ಆಫ್‌ ಗೋವಾ: ಪ್ರತಿ ಷೇರಿಗೆ 20 ರುಪಾಯಿಗಳ ಅಂತಿಮ ಡಿವಿಡೆಂಡ್.‌

ಆಟೊಮೊಬೈಲ್‌ ಕಾರ್ಪೊರೇಷನ್‌ ಆಫ್‌ ಗೋವಾ: ಪ್ರತಿ ಷೇರಿಗೆ 20 ರುಪಾಯಿ

ಕ್ವೆಸ್ಟ್‌ ಕ್ಯಾಪಿಟಲ್‌ ಮಾರ್ಕೆಟ್ಸ್-‌ ಪ್ರತಿ ಷೇರಿಗೆ 2.5 ರುಪಾಯಿ

ಸ್ಟಾಕ್‌ ಸ್ಪ್ಲಿಟ್: ಎಲೈಟ್‌ಕಾನ್‌ ಇಂಟರ್‌ ನ್ಯಾಶನಲ್-‌ 10ರಿಂದ 1 ರುಪಾಯಿ ಮುಖಬೆಲೆಗೆ ವಿಭಜನೆಯಾಗಲಿದೆ.

ಜೂನ್‌ 26, ಗುರುವಾರ, ಡಿವಿಡೆಂಡ್‌:

ಪ್ರೈಮ್‌ ಸೆಕ್ಯುರಿಟೀಸ್-‌ ಪ್ರತಿ ಷೇರಿಗೆ 1.50 ರುಪಾಯಿ ಅಂತಿಮ ಡಿವಿಡೆಂಡ್.‌

ಜೂನ್‌ 27, ಶುಕ್ರವಾರ, ಡಿವಿಡೆಂಡ್‌:

ಅಲೈಡ್‌ ಬ್ಲೆಂಡರ್ಸ್‌ ಆಂಡ್‌ ಡಿಸ್ಟಿಲರೀಸ್-‌ ಪ್ರತಿ ಷೇರಿಗೆ 3 ರುಪಾಯಿ 60 ಪೈಸೆ.

ಅಲುಫ್ಲೋರೈಡ್-‌ ಪ್ರತಿ ಷೇರಿಗೆ 3 ರುಪಾಯಿ ಡಿವಿಡೆಂಡ್.‌

ಬಜಾಜ್‌ ಫಿನ್‌ ಸರ್ವ್-‌ ಪ್ರತಿ ಷೇರಿಗೆ 1 ರುಪಾಯಿ ಡಿವಿಡೆಂಡ್‌

ಬಜಾಜ್‌ ಹೋಲ್ಡಿಂಗ್ಸ್‌ ಆಂಡ್‌ ಇನ್ವೆಸ್ಟ್‌ ಮೆಂಟ್-‌ ಪ್ರತಿ ಷೇರಿಗೆ 28 ರುಪಾಯಿ ಡಿವಿಡೆಂಡ್‌

ಭಾರತ್‌ ಭೂಷಣ್‌ ಫೈನಾನ್ಸ್‌ ಆಂಡ್‌ ಕಮಾಡಿಟಿ ಬ್ರೋಕರ್ಸ್-‌ ಪ್ರತಿ ಷೇರಿಗೆ 60 ಪೈಸೆ ಡಿವಿಡೆಂಡ್‌

ಕೇರ್‌ ರೇಟಿಂಗ್ಸ್-‌ ಪ್ರತಿ ಷೇರಿಗೆ 11 ರುಪಾಯಿ ಡಿವಿಡೆಂಡ್‌

ಸಿಪ್ಲಾ- ಪ್ರತಿ ಷೇರಿಗೆ 3 ರುಪಾಯಿ ಡಿವಿಡೆಂಡ್‌ ಹಾಗೂ 13 ರುಪಾಯಿ ಅಂತಿಮ ಡಿವಿಡೆಂಡ್

ಎಚ್‌ಡಿಎಫ್‌ಸಿ ಬ್ಯಾಂಕ್-‌ ಪ್ರತಿ ಷೇರಿಗೆ 22 ರುಪಾಯಿ ಅಂತಿಮ ಡಿವಿಡೆಂಡ್‌

ಜಯಂತ್‌ ಅಗ್ರೊ ಆರ್ಗಾನಿಕ್ಸ್-‌ ಪ್ರತಿ ಷೇರಿಗೆ 2.50 ರುಪಾಯಿ ಅಂತಿಮ ಡಿವಿಡೆಂಡ್‌

ಮಹಾರಾಷ್ಟ್ರ ಸ್ಕೂಟರ್ಸ್-‌ ಪ್ರತಿ ಷೇರಿಗೆ 30 ರುಪಾಯಿ ಡಿವಿಡೆಂಡ್‌

ಆರ್‌ಪಿಜಿ ಲೈಫ್‌ ಸೈನ್ಸ್-‌ ಪ್ರತಿ ಷೇರಿಗೆ 20 ರುಪಾಯಿ ಅಂತಿಮ ಡಿವಿಡೆಂಡ್‌

ಸ್ವರಾಜ್‌ ಎಂಜಿನ್ಸ್-‌ ಪ್ರತಿ ಷೇರಿಗೆ 104 ರುಪಾಯಿ ಡಿವಿಡೆಂಡ್‌

ಸಿಂಜಿನ್‌ ಇಂಟರ್‌ ನ್ಯಾಶನಲ್- ಪ್ರತಿ ಷೇರಿಗೆ 1 ರುಪಾಯಿ 25 ಪೈಸೆ ಡಿವಿಡೆಂಡ್‌

ವೆಲ್‌ ಸ್ಪನ್‌ ಲಿವಿಂಗ್-‌ ಪ್ರತಿ ಷೇರಿಗೆ 1 ರುಪಾಯಿ 70 ಪೈಸೆ ಡಿವಿಡೆಂಡ್.‌

ಟಾಟಾ ಸಮೂಹದ ಕಂಪನಿಯಾಗಿರುವ ಟಾಟಾ ಕ್ಯಾಪಿಟಲ್‌ನ ಐಪಿಒ ಕರಡು ಪ್ರಸ್ತಾಪಕ್ಕೆ ಮಾರುಕಟ್ಟೆ ನಿಯಂತ್ರಕ ಸೆಬಿ ಅನುಮೋದಿಸಿದೆ. 17,200 ಕೋಟಿ ರುಪಾಯಿಗಳ ಐಪಿಒ ಇದಾಗಿದೆ. ಹಣಕಾಸು ಕ್ಷೇತ್ರದ ಮತ್ತೊಂದು ದೊಡ್ಡ ಐಪಿಒ ಇದಾಗುವ ನಿರೀಕ್ಷೆ ಇದೆ. ಟಾಟಾ ಕ್ಯಾಪಿಟಲ್‌ ಎನ್‌ಬಿಎಫ್‌ಸಿ ಸಂಸ್ಥೆಯಾಗಿದ್ದು, ಆರ್‌ಬಿಐ ರೆಗ್ಯುಲೇಶನ್ಸ್‌ ಪ್ರಕಾರ ಈ ವರ್ಷ ಸೆಪ್ಟೆಂಬರ್‌ ಒಳಗೆ ಐಪಿಒ ಮಾಡಬೇಕಾಗಿದೆ. ಪ್ರಸ್ತುತ ಟಾಟಾ ಕ್ಯಾಪಿಟಲ್‌ನಲ್ಲಿ 93% ಷೇರುಗಳನ್ನು ಟಾಟಾ ಸಮೂಹದ ಪ್ರವರ್ತಕ ಸಂಸ್ಥೆಯಾದ ಟಾಟಾ ಸನ್ಸ್‌ ಒಳಗೊಂಡಿದೆ. ಟಾಟಾ ಕ್ಯಾಪಿಟಲ್‌ನ ಅನ್‌ ಲಿಸ್ಟೆಡ್‌ ಷೇರುಗಳ ದರ ಕಳೆದ 6 ತಿಂಗಳುಗಳಲ್ಲಿ 13.5% ಏರಿಕೆಯಾಗಿತ್ತು. ಈಗ 1050 ರುಪಾಯಿ ಆಸುಪಾಸಿನಲ್ಲಿದೆ.

ಭಾರ್ತಿ ಏರ್‌ ಟೆಲ್‌ ಷೇರು ಕಳೆದ ಒಂದು ವರ್ಷದಲ್ಲಿ 36% ರಿಟರ್ನ್‌ ಅನ್ನು ಹೂಡಿಕೆದಾರರಿಕೆ ಕೊಟ್ಟಿದೆ. 2024ರ ಜೂನ್‌ 21ಕ್ಕೆ ಭಾರ್ತಿ ಏರ್‌ ಟೆಲ್‌ ಷೇರಿನ ದರ 1416/- ಇತ್ತು. ಈಗ 1934/-ಕ್ಕೆ ಏರಿಕೆಯಾಗಿದೆ. ಟೆಲಿಕಾಂ ದಿಗ್ಗಜ ಏರ್‌ ಟೆಲ್‌ ಬ್ಲೂ ಚಿಪ್‌ ಷೇರಾಗಿದ್ದು 11 ಲಕ್ಷದ 61 ಸಾವಿರ ಕೋಟಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಭಾರತೀಯರಿಗೆ ಮೊದಲೇ ಬಂಗಾರದ ಮಹತ್ವ ಗೊತ್ತಿತ್ತು. ಆಪದ್ಧನ ಅಂತ ಕರೆಯುತ್ತಿದ್ದರು. ಅದು ನಿಜ ಎಂಬುದು ಈಗ ಸಾಬೀತಾಗುತ್ತಿದೆ. ರಾಬರ್ಟ್ ಕಿಯೊಸಾಕಿ ಕೂಡ ಬಂಗಾರವೇ ನಿಜವಾದ ಹಣ ಎನ್ನುತ್ತಾರೆ. ಭಾರತೀಯ ಕುಟುಂಬಗಳು ಹೊಂದಿರುವ ಚಿನ್ನ 25000 ಟನ್. ಇದರ ಮೌಲ್ಯ 2.4 ಲಕ್ಷ ಕೋಟಿ ಡಾಲರ್. ಪಾಕಿಸ್ತಾನದ ಜಿಡಿಪಿಗಿಂತ ಸುಮಾರು 6 ಪಟ್ಟು ಹೆಚ್ಚು. ಇಟಲಿಯ ಆರ್ಥಿಕತೆಗಿಂತ ದೊಡ್ಡದು.

ಈ ಸುದ್ದಿಯನ್ನೂ ಓದಿ | Daily Work Hours: ರಾಜ್ಯದಲ್ಲಿ ಕೆಲಸದ ಅವಧಿ ಹೆಚ್ಚಳವಾಗುತ್ತಾ?; ಸರ್ಕಾರದ ಸ್ಪಷ್ಟನೆ ಇಲ್ಲಿದೆ