ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

US Strikes: ಪರಮಾಣು ಶಸ್ತ್ರಾಸ್ತ್ರ ಹೊಂದಲು ಇರಾನ್‌ಗೆ ಇನ್ನು ಹಲವು ವರ್ಷಗಳೇ ಬೇಕಾಗಬಹುದು ಎಂದ ಅಮೆರಿಕ

ಇಸ್ರೇಲ್‌ನಲ್ಲಿರುವ ಅಮೆರಿಕನ್ ಸೇನೆಯು ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮಾಣು ಕೇಂದ್ರಗಳು ಬಹುತೇಕ ನಾಶವಾಗಿವೆ. ಇದನ್ನು ಪುನರ್ ನಿರ್ಮಿಸಲು ಇರಾನ್‌ಗೆ ಹಲವಾರು ವರ್ಷಗಳೇ ಬೇಕಾಗಬಹುದು ಎಂದು ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ ನಿರ್ದೇಶಕ ಜಾನ್ ರಾಟ್‌ಕ್ಲಿಫ್ ತಿಳಿಸಿದ್ದಾರೆ.

ಇರಾನ್‌ನ ಪರಮಾಣು ಕೇಂದ್ರಗಳು ಸಂಪೂರ್ಣ ನಾಶ: ಅಮೆರಿಕ

ವಾಷಿಂಗ್ಟನ್: ಇಸ್ರೇಲ್‌ನಲ್ಲಿರುವ (Israel) ಅಮೆರಿಕನ್ ಸೇನೆಯು (US army) ಇತ್ತೀಚೆಗೆ ನಡೆಸಿದ ದಾಳಿಯಲ್ಲಿ ಇರಾನ್‌ನ ಪರಮಾಣು ಕೇಂದ್ರಗಳು (Iran Nuclear Sites) ಬಹುತೇಕ ನಾಶವಾಗಿವೆ. ಇದನ್ನು ಪುನರ್ ನಿರ್ಮಿಸಲು ಇರಾನ್‌ಗೆ ಹಲವು ವರ್ಷಗಳೇ ಬೇಕಾಗಬಹುದು. ಅಮೆರಿಕ ಸೇನೆಯ ದಾಳಿಯಿಂದ ಇರಾನ್‌ನ ಪರಮಾಣು ಕೇಂದ್ರಗಳಲ್ಲಿರುವ ಪ್ರಮುಖ ಸೌಲಭ್ಯಗಳು ಸಂಪೂರ್ಣ ನಾಶವಾಗಿವೆ ಎಂದು ಗುಪ್ತಚರ ಇಲಾಖೆ ಮಾಹಿತಿ ಮೇರೆಗೆ ಅಮೆರಿಕದ ಕೇಂದ್ರ ಗುಪ್ತಚರ ಸಂಸ್ಥೆಯ (Central Intelligence Agency) ನಿರ್ದೇಶಕ ಜಾನ್ ರಾಟ್‌ಕ್ಲಿಫ್ ಬುಧವಾರ ತಿಳಿಸಿದ್ದಾರೆ.

ಇರಾನ್‌ನ ಪರಮಾಣು ತಯಾರಿ ಘಟಕಗಳ ಮೇಲೆ ಅಮೆರಿಕ ಸೈನ್ಯ ನಡೆಸಿದ ದಾಳಿಯಿಂದ ಅಪಾರ ನಷ್ಟವಾಗಿದೆ. ಪರಮಾಣು ಕೇಂದ್ರಗಳು ತೀವ್ರ ಹಾನಿಗೊಳಗಾಗಿವೆ ಎಂದು ವಿಶ್ವಾಸಾರ್ಹ ಗುಪ್ತಚರ ಇಲಾಖೆ ತಿಳಿಸಿರುವುದಾಗಿ ಜಾನ್ ರಾಟ್‌ಕ್ಲಿಫ್ ಹೇಳಿದ್ದಾರೆ. ಇದನ್ನು ಮರು ನಿರ್ಮಿಸಲು ಅನೇಕ ವರ್ಷಗಳೇ ಬೇಕಾಗುತ್ತದೆ ಎಂದು ಅವರು ಹೇಳಿದರು.

ಅಮೆರಿಕ ಸೇನೆ ನಡೆಸಿದ ದಾಳಿಯಲ್ಲಿ ಇರಾನಿನ ಪ್ರಮುಖ ಪರಮಾಣು ನೆಲೆಗಳು ನಾಶವಾಗಿವೆ ಎಂದು ನಿಖರವಾದ ಮೂಲಗಳು ತಿಳಿಸಿವೆ ಎಂದು ರಾಟ್‌ಕ್ಲಿಫ್ ಮಾಹಿತಿ ನೀಡಿದ್ದಾರೆ. ಟೆಹರಾನ್‌ನ ಮೂರು ಪ್ರಮುಖ ಪರಮಾಣು ನೆಲೆಗಳ ಮೇಲೆ ಅಮೆರಿಕ ನಡೆಸಿದ ದಾಳಿಯ ಅನಂತರ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮಾತನಾಡಿ, ʼʼಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಿಕೊಳ್ಳಲು ಇನ್ನೂ ಹಲವು ವರ್ಷಗಳೇ ಬೇಕಾಗಬಹುದುʼʼ ಎಂದು ಹೇಳಿದ್ದರು.

ಇರಾನಿನ ಪರಮಾಣು ಸೌಲಭ್ಯಗಳ ಮೇಲಿನ ಅಮೆರಿಕದ ದಾಳಿಯಿಂದ ಟೆಹರಾನ್‌ನ ಚಟುವಟಿಕೆಗಳು ಕೆಲವು ತಿಂಗಳುಗಳ ಕಾಲ ಸ್ಥಗಿತಗೊಳ್ಳಲಿದೆ ಎನ್ನುವ ಹಲವಾರು ಮಾಧ್ಯಮಗಳ ವರದಿ ಬಳಿಕ ರೂಬಿಯೊ ಇದನ್ನು ಹೇಳಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದ ಖಾತೆ ಟ್ರುತ್‌ನಲ್ಲಿ ಇರಾನಿನ ಪರಮಾಣು ತಾಣಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ಹೇಳಿದ್ದರು. ಇದಕ್ಕೂ ಮುನ್ನವೇ ರುಬಿಯೊ ನ್ಯಾಟೋ ಶೃಂಗಸಭೆಯ ವೇಳೆ ಮಾಧ್ಯಮಕ್ಕೆ ಈ ವಿಷಯವನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ: Joe Root: ವಿಶ್ವ ದಾಖಲೆ ಸನಿಹ ಜೋ ರೂಟ್‌

ಈ ನಡುವೆ ಟ್ರಂಪ್, ಮುಂದಿನ ವಾರದ ಮಾತುಕತೆಯಲ್ಲಿ ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರ ಹೊಂದುವ ಮಹತ್ವಾಕಾಂಕ್ಷೆಗಳನ್ನು ತ್ಯಜಿಸಲು ಕೋರಲಾಗುವುದು ಎಂದಿದ್ದಾರೆ. ಅಲ್ಲದೇ ಇಸ್ರೇಲ್ ಮತ್ತು ಟೆಹರಾನ್‌ ನಡುವಿನ ಯುದ್ಧವನ್ನು ತ್ವರಿತವಾಗಿ ಕೊನೆಗೊಳಿಸಿದ್ದಕ್ಕಾಗಿ ಅಮೆರಿಕ ಸೈನ್ಯವನ್ನು ಶ್ಲಾಘಿಸಿದ್ದಾರೆ. ಮಂಗಳವಾರದಿಂದ ಕದನ ವಿರಾಮ ಜಾರಿಯಲ್ಲಿದ್ದು, ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.