Thalapathy Vijay: ʼಜನ ನಾಯಗನ್ʼಗೆ ನಟ ದಳಪತಿ ವಿಜಯ್ ಪಡೆಯುವ ಸಂಭಾವನೆಯಲ್ಲಿ ಹೈ ಬಜೆಟ್ ಚಿತ್ರವನ್ನೇ ನಿರ್ಮಿಸಬಹುದು!
ʼವೆಟ್ರಿʼ, ʼಭದ್ರಿʼ, ʼತಮಿಳನ್ʼ, ʼಗಿಲ್ಲಿʼ, ʼಕತ್ತಿʼ, ʼಪುಲಿʼ, ʼಸರ್ಕಾರ್ʼ, ಮಾಸ್ಟರ್ʼ ತಮಿಳು ಚಿತ್ರಗಳ ಮೂಲಕ ಗಮನ ಸೆಳೆದ ದಳಪತಿ ವಿಜಯ್ ಅವರ ಕೊನೆಯ ಚಿತ್ರ ʼಜನ ನಾಯಗನ್ʼ ರಿಲೀಸ್ ಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ. ವಿಜಯ್ ಈ ಸಿನಿಮಾದಲ್ಲಿ ಅಭಿನಯಿಸಲು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Thalapathy Vijay

ಚೆನ್ನೈ: ನಟ ದಳಪತಿ ವಿಜಯ್ (Thalapathy Vijay) ಸಿನಿಮಾ ಅಲ್ಲದೇ ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಸಿನಿಮಾ ರಂಗಕ್ಕಿಂತಲೂ ರಾಜಕೀಯ ಕ್ಷೇತ್ರದಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದಾರೆ. ತಮಿಳಿನ ಅನೇಕ ಹೋರಾಟದಲ್ಲಿಯೂ ನಟ ವಿಜಯ್ ಕೈ ಜೋಡಿಸಿದ್ದರು. ಅಂತೆಯೇ ಅವರು ಹೊಸ ಪಕ್ಷವನ್ನು ಕಟ್ಟಿ ಮುಂಬರುವ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅವರು ʼಜನ ನಾಯಗನ್ʼ (Jana Nayagan) ಸಿನಿಮಾ ಒಪ್ಪಿಕೊಂಡಿದ್ದಾರೆ. ಇದು ಅವರ ಕೊನೆಯ ಚಿತ್ರ. ಹೀಗಾಗಿ ಈ ಸಿನಿಮಾ ರಿಲೀಸ್ಗೂ ಮುನ್ನವೇ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತಿದೆ. ನಟ ವಿಜಯ್ ಈ ಚಿತ್ರದಲ್ಲಿ ಅಭಿನಯಿಸಲು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ʼವೆಟ್ರಿʼ, ʼಭದ್ರಿʼ, ʼತಮಿಳನ್ʼ, ʼಗಿಲ್ಲಿʼ, ʼಕತ್ತಿʼ, ʼಪುಲಿʼ, ʼಸರ್ಕಾರ್ʼ, ʼಮಾಸ್ಟರ್ʼ ಸಿನಿಮಾಗಳ ಮೂಲಕ ಜನಪ್ರಿಯರಾದ ವಿಜಯ್ ತಮ್ಮ ಮುಂಬರುವ ʼಜನ ನಾಯಗನ್ʼ ಚಿತ್ರದಲ್ಲಿ ಅಭಿನಯಿಸಲು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ವಿಜಯ್ 275 ಕೋಟಿ ರೂಪಾಯಿ ಸಂಭಾವನೆ ಜೇಬಿಗಿಳಿಸಿದ್ದಾರೆ. ಅಡ್ವಾನ್ಸ್ ಮೊತ್ತ ಈಗಾಗಲೇ ಚಿತ್ರತಂಡ ಪಾವತಿಸಿದೆ ಎಂದು ಕೂಡ ಹೇಳಲಾಗುತ್ತಿದೆ.
ಇದನ್ನು ಓದಿ: Jungle Mangal Movie: ಯಶ್ ಶೆಟ್ಟಿ ನಟನೆಯ ʼಜಂಗಲ್ ಮಂಗಲ್ʼ ಚಿತ್ರ ಜುಲೈ 4 ರಂದು ತೆರೆಗೆ
ನಟ ದಳಪತಿ ವಿಜಯ್ ಈ ಹಿಂದೆ ʼದಿ ಗೋಟ್ʼ ಚಿತ್ರಕ್ಕಾಗಿ 200 ಕೋಟಿ ರೂ. ಸಂಭಾವನೆ ಪಡೆದಿದ್ದರು. ಇದೀಗ ತಮ್ಮ ಸಂಭಾವನೆಯನ್ನು ಏರಿಸಿಕೊಂಡಿದ್ದು, ಜನ ನಾಯಗನ್ ಸಿನಿಮಾಕ್ಕೆ 275 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ಭಾರತೀಯ ನಟನೊಬ್ಬನಿಗೆ ದೊರೆತ ಅತ್ಯಧಿಕ ಸಂಭಾವನೆ ಇದು ಎಂದು ಹೇಳಲಾಗುತ್ತಿದೆ. ಆದರೆ ಚಿತ್ರತಂಡ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ನಟ ವಿಜಯ್ ಅಭಿನಯದ ʼಜನ ನಾಯಗನ್ʼ ಸಿನಿಮಾವು ರಾಜಕೀಯ ಕಥಾ ಹಂದರವನ್ನು ಒಳಗೊಂಡಿದೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ನರೈನ್ ಮತ್ತು ಪ್ರಿಯಾಮಣಿ, ಮಮಿತಾ ಬೈಜು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು 2026ರ ಜನವರಿ 9ರಂದು ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ʼಜನ ನಾಯಗನ್ʼ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದ ಬಳಿಕ ಮುಂದಿನ ವರ್ಷ ತಮಿಳುನಾಡು ವಿಧಾನಸಭೆ ಚುನಾವಣೆಗೆ ತಮ್ಮ ಪಕ್ಷವನ್ನು ಅಭಿವೃದ್ಧಿ ಪಡಿಸುವತ್ತ ನಟ ವಿಜಯ್ ಹೆಚ್ಚು ಗಮನ ಹರಿಸಲಿದ್ದಾರೆ.