ಅನಿಯಂತ್ರಿತ ಮೂರ್ಛೆ ರೋಗ ಹೊಂದಿದ್ದ 21 ವರ್ಷದ ಯುವಕನಿಗೆ ಯಶಸ್ವಿ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಚಿಕಿತ್ಸೆ: ಇದು ರಾಜ್ಯದಲ್ಲೇ ಮೊದಲ ಪ್ರಯತ್ನ
ಸಾಮಾನ್ಯವಾಗಿ ಮೂರ್ಛೆರೋಗಕ್ಕೆ ಚಿಕಿತ್ಸೆ ಇದ್ದರೂ ಕೆಲವರಿಗೆ ನರಮಂಡಲದ ಸಮಸ್ಯೆ ಇರುವವರಿಗೆ ಈ ನೂತನ ಶಸ್ತ್ರಚಿಕಿತ್ಸೆ ಹೆಚ್ಚು ಉಪಯುಕ್ತ. ರಾಜ್ಯದಲ್ಲಿ ಮೊದಲಬಾರಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಯುವಕನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಒಮ್ಮೆಯೂ ಮೂರ್ಛೆರೋಗ ಬಂದಿಲ್ಲ


ಬೆಂಗಳೂರು: ಪದೇಪದೇ ಮೂರ್ಛೆರೋಗಕ್ಕೆ ತುತ್ತಾಗುತ್ತಿದ್ದ 21 ವರ್ಷದ ಯುವಕನಿಗೆ ಫೋರ್ಟಿಸ್ ಆಸ್ಪತ್ರೆಯಲ್ಲಿ ರಾಜ್ಯದಲ್ಲೇ ಮೊದಲ ಉದ್ದೇಶಿತ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ (ಡಿಬಿಎಸ್) ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಹೆಚ್ಚು ವರಿ ನಿರ್ದೇಶಕ ಡಾ.ರಘುರಾಮ್ ಜಿ ಮತ್ತು ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ. ಗುರು ಪ್ರಸಾದ್ ಹೊಸೂರ್ಕರ್ ವೈದ್ಯರ ತಂಡ ಈ ಚಿಕಿತ್ಸೆ ನಡೆಸಿದೆ. ಈ ಕುರಿತು ಮಾತನಾಡಿದ ಡಾ. ರಘುರಾಮ್ ಜಿ, ಯೆಮನ್ ಮೂಲದ 21 ವರ್ಷದ ಮೊಹಮದ್ ಎಂಬ ಯುವಕ ಕಳೆದ 12 ವರ್ಷಗಳಿಂದ ಅನಿಯಂತ್ರಿತ ಮೂರ್ಛೆರೋಗ ದಿಂದ ಬಳಲುತ್ತಿದ್ದನು. ಕೆಲವರಲ್ಲಿ ಮೂರ್ಛೆರೋಗ ಸಾಮಾನ್ಯವಾಗಿದ್ದರೂ, ಈ ಯುವಕ ನಿಗೆ ಅನಿಯಂತ್ರಿತವಾಗಿ ಮೂರ್ಛೆರೋಗ ಕಾಡುತ್ತಿತ್ತು.

ಸಾಕಷ್ಟು ಬಾರಿ ನಡುಕದಿಂದ ತಲೆಸುತ್ತಿ ಬೀಳುವ ಸ್ಥಿತಿಗೆ ತಲುಪಿದ್ದನು. ಈಗಾಗಲೇ ಸಾಕಷ್ಟು ಬಾರಿ ಔಷಧಿ ಪಡೆದುಕೊಂಡು, ಹಲವು ಆಸ್ಪತ್ರೆಗಳಿಗೆ ತೆರಳಿದ್ದರೂ ಆ ಕ್ಷಣಕ್ಕೆ ಮಾತ್ರ ಪರಿಹಾರ ತೊರೆಯುತ್ತಿತ್ತು. ದೀರ್ಘಕಾಲದ ಪರಿಹಾರ ಸಿಗದೇ ಈ ಕಾಯಿಲೆಯಿಂದ ಯುವಕ ಬಳಲುತ್ತಿದ್ದನು. ಈ ಕಾಯಿಲೆಗೆ ಕಾರಣವೂ ಸಹ ತಿಳಿದಿರಲಿಲ್ಲ. ಬಳಿಕ ಫೋರ್ಟಿ ಸ್ ಆಸ್ಪತ್ರೆ ದಾಖಲಾದರು. ಯುವಕನ ಸಂಪೂರ್ಣ ಪರೀಕ್ಷೆಗೆ ಒಳಪಡಿಸಿದ ನಂತರ ಆತನಿಗೆ ನರಮಂಡಲದ ಶಕ್ತಿ ಉತ್ಪಾದನೆ ಯಲ್ಲಿ ಆಗುತ್ತಿರುವ ಬದಲಾವಣೆಯೇ ಇದಕ್ಕೆ ಕಾರಣ ಎಂಬುದು ಪತ್ತೆ ಹಚ್ಚಿದರು.
ಇದನ್ನೂ ಓದಿ: Health Tips: ನಿಂತ ನೀರಿನಿಂದ ಆರೋಗ್ಯ ತೊಂದರೆಗಳು ಬರಬಹುದು..ಜೋಕೆ!
ಹೀಗಾಗಿ ಅಸಹಜ ಮೆದುಳಿನ ಸಂಕೇತಗಳನ್ನು ನಿಯಂತ್ರಿಸಲು ಬಳಸುವ ನರಶಸ್ತ್ರಚಿಕಿತ್ಸಾ ವಿಧಾನ, ಎರಡೂ ಬದಿಗಳಲ್ಲಿ ಥಾಲಮಸ್‌ನ ಮೆದುಳಿನ ಸೆಂಟ್ರೊಮೆಡಿಯನ್ ನ್ಯೂಕ್ಲಿ ಯಸ್ ಅನ್ನು ಗುರಿ ಯಾಗಿಸಿಕೊಂಡು ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸ ಲಾಯಿತು ಎಂದು ವಿವರಿಸಿದರು.
ಡಾ.ಗುರುಪ್ರಸಾದ್ ಹೊಸೂರ್ಕರ್, ಮಾತನಾಡಿ, ಸಾಮಾನ್ಯವಾಗಿ ಮೂರ್ಛೆರೋಗಕ್ಕೆ ಚಿಕಿತ್ಸೆ ಇದ್ದರೂ ಕೆಲವರಿಗೆ ನರಮಂಡಲದ ಸಮಸ್ಯೆ ಇರುವವರಿಗೆ ಈ ನೂತನ ಶಸ್ತ್ರಚಿಕಿತ್ಸೆ ಹೆಚ್ಚು ಉಪಯುಕ್ತ. ರಾಜ್ಯದಲ್ಲಿ ಮೊದಲಬಾರಿಗೆ ಈ ಶಸ್ತ್ರಚಿಕಿತ್ಸೆಯನ್ನು ನಡೆಸಿದ್ದು, ಯುವಕನು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಒಮ್ಮೆಯೂ ಮೂರ್ಛೆರೋಗ ಬಂದಿಲ್ಲ ಎಂದು ಹೇಳಿದರು.