Leading With Compassion: ಮಣಿಪಾಲ ಆಸ್ಪತ್ರೆಯ ಅಧ್ಯಕ್ಷ ಸುದರ್ಶನ್ ಬಲ್ಲಾಳ ಅವರ ಜೀವನ ಚರಿತ್ರೆ ಅನಾವರಣ
ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಅವರ ಜೀವನ ಚರಿತ್ರೆಯ "ಲೀಡಿಂಗ್ ವಿತ್ ಕಂಪ್ಯಾಷನ್" ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ..ಆರೋಗ್ಯ ರಕ್ಷಣೆಯಲ್ಲಿ ಡಾ. ಬಲ್ಲಾಳ್ ಅವರ ವೃತ್ತಿ ಜೀವನವನ್ನು ರೂಪಿಸಿದ ತತ್ವಗಳು ಮತ್ತು ಮೌಲ್ಯ ಗಳನ್ನು ತಿಳಿಸಲಿದೆ. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಈ ಪುಸ್ತಕ ವನ್ನು ಅನಾವರಣಗೊಳಿಸಿದರು.


ಬೆಂಗಳೂರು:ಮಣಿಪಾಲ್ ಆಸ್ಪತ್ರೆಗಳ (Manipal Hospitals) ಅಧ್ಯಕ್ಷ ಡಾ. ಎಚ್. ಸುದರ್ಶನ್ ಬಲ್ಲಾಳ್ ಅವರ ಜೀವನ ಚರಿತ್ರೆಯ "ಲೀಡಿಂಗ್ ವಿತ್ ಕಂಪ್ಯಾಷನ್" (Leading With Compassion) ಎಂಬ ಪುಸ್ತಕವನ್ನು ಲೋಕಾರ್ಪಣೆ ಮಾಡಲಾಗಿದೆ. ಸ್ಟೀಫನ್ ಡೇವಿಡ್ ಬರೆದ ಈ ಪುಸ್ತಕವು ಡಾ. ಬಲ್ಲಾಳ್ ಅವರ ಐದು ದಶಕಗಳ ಜೀವನ ಪ್ರಯಾಣದ ಅನ್ವೇಷಣೆಯನ್ನು ತಿಳಿಸುತ್ತದೆ. ಈ ಪುಸ್ತಕವು ವೈದ್ಯಕೀಯ ವೃತ್ತಿಪರರಿಗೆ ಪ್ರಮುಖ ಸಂಪನ್ಮೂಲವಾಗಿ ಕಾರ್ಯ ನಿರ್ವಹಿಸಲಿದ್ದು, ಆರೋಗ್ಯ ರಕ್ಷಣೆಯಲ್ಲಿ ಡಾ. ಬಲ್ಲಾಳ್ ಅವರ ವೃತ್ತಿ ಜೀವನವನ್ನು ರೂಪಿಸಿದ ತತ್ವಗಳು ಮತ್ತು ಮೌಲ್ಯ ಗಳನ್ನು ತಿಳಿಸಲಿದೆ. ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರು ಈ ಪುಸ್ತಕವನ್ನು ಅನಾವರಣಗೊಳಿಸಿದರು.
“ಲೀಡಿಂಗ್ ವಿತ್ ಕಂಪ್ಯಾಷನ್" ಪುಸ್ತಕವು ಡಾ.ಬಲ್ಲಾಳರ ಆರಂಭಿಕ ಜೀವನದ ಅನುಭವಗಳನ್ನು ತಿಳಿಸಿದೆ. ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ನ ಎಂ.ಎನ್. ವೆಂಕಟಾಚಲಯ್ಯ ಈ ಮಹತ್ವದ ಕೃತಿಗೆ ಮುನ್ನುಡಿ ಬರೆದಿದ್ದಾರೆ. ಡಾ.ಎಚ್.ಸುದರ್ಶನ್ ಬಲ್ಲಾಳ್ ಭಾರತೀಯ ಮೂತ್ರಪಿಂಡ ಶಾಸ್ತ್ರದ ದಿಗ್ಗಜರಲ್ಲಿ ಒಬ್ಬರು. ಆಂತರಿಕ ಔಷಧ, ಮೂತ್ರಪಿಂಡ ಶಾಸ್ತ್ರ ಮತ್ತು ಕ್ರಿಟಿಕಲ್ ಕೇರ್‌ನಲ್ಲಿ ಟ್ರಿಪಲ್ ಬೋರ್ಡ್ ಪ್ರಮಾಣೀಕರಣವನ್ನು ಅಮೇರಿಕಾದಲ್ಲಿ ಪಡೆದು ಹೆಸರು ವಾಸಿಯಾಗಿದ್ದಾರೆ.
1990 ರ ದಶಕದ ಆರಂಭವು ಭಾರತೀಯ ಆರೋಗ್ಯ ರಕ್ಷಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಒಂದು ಪ್ರಮುಖ ಕ್ಷಣ. ಕಾರಣ, ಅಂದು ಡಾ.ಎಚ್. ಸುದರ್ಶನ್ ಬಲ್ಲಾಳ್ ಭಾರತಕ್ಕೆ ಮರಳಿದ ಕ್ಷಣ ಹಾಗೂ ಅವರು ಮೂತ್ರಪಿಂಡ ಶಾಸ್ತ್ರ ಕಾರ್ಯಕ್ರಮದ ಸ್ಥಾಪನೆಗೆ ನೇತೃತ್ವ ವಹಿಸಿದ್ದರು. ಅವರ ದೂರದೃಷ್ಟಿಯ ಫಲವಾಗಿ ಇಂದು ಕರ್ನಾಟಕವು ತನ್ನ ಮೊದಲ ಮೃತದೇಹ ಮೂತ್ರಪಿಂಡ ಕಸಿ ಮತ್ತು ಅದರ ಮೊದಲ ಡಿಎನ್‌ಬಿ ಮೂತ್ರಪಿಂಡ ಶಾಸ್ತ್ರ ಕಾರ್ಯಕ್ರಮದ ಆರಂಭಕ್ಕೆ ಸಾಕ್ಷಿಯಾಯಿತು. ರಾಜ್ಯೋತ್ಸವ ಪ್ರಶಸ್ತಿ, ಡಾ. ಬಿ.ಸಿ. ರಾಯ್ ಪ್ರಶಸ್ತಿ ಮತ್ತು ಟೈಮ್ಸ್ ಜೀವಮಾನ ಸಾಧನೆ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಡಾ.ಬಲ್ಲಾಳ್ ಅವರಿಗೆ ಸಂದಿವೆ.
ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಎಚ್.ಸುದರ್ಶನ್ ಬಲ್ಲಾಳ್ ಮಾತನಾಡಿ, " ವೈದ್ಯಕೀಯ ಕ್ಷೇತ್ರದಲ್ಲಿ ನಾಯಕತ್ವ ಎಂದರೆ ಕೇವಲ ಬಿರುದು ಅಥವಾ ತಂತ್ರಜ್ಞಾನವಲ್ಲ. ಸಹಾನು ಭೂತಿಯಿಂದ ಜೀವನವನ್ನು ಸ್ಪರ್ಶಿಸುವುದು, ನಮ್ಮ ಮೌಲ್ಯ ಗಳಿಗೆ ಬದ್ಧವಾಗಿರುವುದು, ಮಾದರಿಯಾಗಿ ಮುನ್ನಡೆಯುವುದು. ಕರುಣೆಯು ಕೂಡ ಸಾಮರ್ಥ್ಯದಷ್ಟೇ ಅತ್ಯಗತ್ಯ ಎಂದು ನಂಬಿದ್ದೇನೆ. ಈ ಪುಸ್ತಕ ಕೆಲ ಯುವ ವೈದ್ಯರನ್ನು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಪ್ರೇರೇಪಿಸಿದರೆ , ಈ ಪುಸ್ತಕ ತನ್ನ ಧ್ಯೇಯವನ್ನು ಪೂರೈಸಿದಂತೆ ಎಂದು ಹೇಳಿದರು.
ಇದನ್ನು ಓದಿ: Health Tips: ಅತಿಯಾದ ಒತ್ತಡ, ಶಿಸ್ತಿಲ್ಲದ ಜೀವನಶೈಲಿ... ಇವುಗಳೇ ಪಾರ್ಶ್ವವಾಯುವಿಗೆ ಕಾರಣ
ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಮತ್ತು ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮತ್ತು ಕರ್ನಾಟಕದ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ಕರ್ನಾಟಕ ಸರ್ಕಾ ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಗುಂಪಿನ ಅಧ್ಯಕ್ಷ ಡಾ. ರಂಜನ್ ಆರ್ ಪೈ ,ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಹೃದ್ರೋಗ ತಜ್ಞ ಮತ್ತು ಸಂಸತ್ ಸದಸ್ಯ (ಲೋಕಸಭೆ) ಡಾ. ಸಿ ಎನ್ ಮಂಜುನಾಥ್, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇ ಶನ್‌ನ ಪ್ರೊ ಚಾನ್ಸೆಲರ್ ಡಾ. ಎಚ್.ಎಸ್. ಬಲ್ಲಾಳ, ಮಣಿಪಾಲ ಹೆಲ್ತ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ದಿಲೀಪ್ ಜೋಸ್, ಕರ್ನಾಟಕದ ಮುಖ್ಯಮಂತ್ರಿ ಗಳ ಎಂಎಲ್‌ಸಿ ಮತ್ತು ರಾಜಕೀಯ ಕಾರ್ಯದರ್ಶಿ ಡಾ. ಕೆ. ಗೋವಿಂದರಾಜ್ ಮತ್ತು ನಟಿ ಸಪ್ತಮಿ ಗೌಡ ಸೇರಿದಂತೆ ಗಣ್ಯರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.