ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Ballari News: ಬಿ. ‌ನಾಗೇಂದ್ರಗೆ ಸಚಿವ ಸ್ಥಾನಕ್ಕಾಗಿ ರಥೋತ್ಸವದಲ್ಲಿ ಹರಕೆ ಹೊತ್ತ ಅಭಿಮಾನಿಗಳು

Ballari News: ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಶಾಸಕ ಬಿ. ‌ನಾಗೇಂದ್ರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗಲಿ ಎಂದು ಅಭಿಮಾನಿಗಳು ಹರಕೆ ಹೊತ್ತು ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವಕ್ಕೆ ಬಾಳೆಹಣ್ಣು ಅರ್ಪಿಸಿದ್ದಾರೆ. ಬಾಳೆಹಣ್ಣಿನ ಮೇಲೆ ಬಿ. ನಾಗೇಂದ್ರ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಬರೆದು ಬಾಳೆ ಹಣ್ಣು ಅರ್ಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

ಬಿ. ‌ನಾಗೇಂದ್ರಗೆ ಸಚಿವ ಸ್ಥಾನಕ್ಕಾಗಿ ಹರಕೆ ಹೊತ್ತ ಅಭಿಮಾನಿಗಳು

Profile Siddalinga Swamy Feb 21, 2025 7:27 PM

ಬಳ್ಳಾರಿ: ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಶಾಸಕ ಬಿ. ‌ನಾಗೇಂದ್ರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗಲಿ ಎಂದು ಅಭಿಮಾನಿಗಳು ಹರಕೆ ಹೊತ್ತು ಬಳ್ಳಾರಿ ತಾಲೂಕಿನ (Ballari News) ಮೋಕಾ ಗ್ರಾಮದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವಕ್ಕೆ ಬಾಳೆಹಣ್ಣು ಅರ್ಪಿಸಿದ್ದಾರೆ. ಬಾಳೆಹಣ್ಣಿನ ಮೇಲೆ ಬಿ. ನಾಗೇಂದ್ರ (B Nagendra) ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಬರೆದು ಬಾಳೆ ಹಣ್ಣು ಅರ್ಪಿಸಿದ್ದಾರೆ. ಮೋಕಾ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವಕ್ಕೆ ಹರಕೆ ಹೊತ್ತು, ಅರ್ಪಿಸಿದ ಬಾಳೆಹಣ್ಣಿನಲ್ಲಿ ‌ನಾಗೇಂದ್ರ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಸಿಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.

ಅದ್ಧೂರಿಯಾಗಿ ಜರುಗಿದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವ

ಬಳ್ಳಾರಿ ತಾಲೂಕಿನ ಮೋಕಾ ಗ್ರಾಮದ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವವು ಸಾವಿರಾರು ಭಕ್ತಾಧಿಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಈ ಸುದ್ದಿಯನ್ನೂ ಓದಿ | Honnavar News: ನಾಳೆಯಿಂದ ಹೊನ್ನಾವರದ ಗುಣವಂತೆಯಲ್ಲಿ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ

ಬಳ್ಳಾರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಭಕ್ತಾಧಿಗಳು ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವರ ದರ್ಶನ ಪಡೆದು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಸಂಜೆ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಮಹಾರಥೋತ್ಸವವು ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಿತು.