ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cleft lip: ಪಾಲಕರನ್ನು ಭಯಕ್ಕೀಡು ಮಾಡುವ ಸೀಳುತುಟಿ: ಇದಕ್ಕೂ ಇದೆ ಪರಿಹಾರ!

ಮನೆಯಲ್ಲಿ ಮಕ್ಕಳು ಹುಟ್ಟಿದ್ದಾರೆನ್ನುವ ಸುದ್ದಿಯೇ ಕುಟುಂಬಸ್ಥರಿಗೆಲ್ಲರಿಗೂ ಸಂತೋಷವನ್ನುಂಟು ಮಾಡುತ್ತದೆ. ಕೆಲವೊಮ್ಮೆ ಹುಟ್ಟುವ ಮಕ್ಕಳಿಗೆ ಆರೋಗ್ಯ ಸಮಸ್ಯೆಯೂ ಎದುರಾಗುತ್ತದೆ. ಅದರಲ್ಲಿ ಸೀಳುತುಟಿ ಸಮಸ್ಯೆಯೂ ಒಂದು. ಒಂಬತ್ತು ತಿಂಗಳುಗಳ ಕಾಲ ಪಾಲನೆ ಮಾಡಿದ ಮಗುವಿನ ಮುಖದಲ್ಲಿ ಸೀಳುತುಟಿ ಸಮಸ್ಯೆ ಕಾಣಿಸಿಕೊಂಡರೆ ಅದು ಪಾಲಕರಿಗೆ ಮಾನಸಿಕ ಒತ್ತಡ ಮತ್ತು ನೋವನ್ನು ಉಂಟು ಮಾಡುತ್ತದೆ.

ಸೀಳು ತುಟಿಗೂ ಇದೆ ಪರಿಹಾರ; ಏನು ಮಾಡುಬೇಕು?

Profile Vishakha Bhat Jun 17, 2025 4:56 PM

ಡಾ. ನಿರಂಜನ್‌ಕುಮಾರ್‌

ನಿರ್ದೇಶಕರು, ಕ್ರಾನಿಯೋಫೇಶಿಯಲ್‌ ಕೇಂದ್ರ, ಎಸ್‌ಡಿಎಂ ವಿಶ್ವವಿದ್ಯಾಲಯ

ಮಂಗಳೂರು: ಮನೆಯಲ್ಲಿ ಮಕ್ಕಳು ಹುಟ್ಟಿದ್ದಾರೆನ್ನುವ ಸುದ್ದಿಯೇ (Cleft lip) ಕುಟುಂಬಸ್ಥರಿಗೆಲ್ಲರಿಗೂ ಸಂತೋಷವನ್ನುಂಟು ಮಾಡುತ್ತದೆ. ಕೆಲವೊಮ್ಮೆ ಹುಟ್ಟುವ ಮಕ್ಕಳಿಗೆ ಆರೋಗ್ಯ ಸಮಸ್ಯೆಯೂ ಎದುರಾಗುತ್ತದೆ. ಅದರಲ್ಲಿ ಸೀಳುತುಟಿ ಸಮಸ್ಯೆಯೂ ಒಂದು. ಒಂಬತ್ತು ತಿಂಗಳುಗಳ ಕಾಲ ಪಾಲನೆ ಮಾಡಿದ ಮಗುವಿನ ಮುಖದಲ್ಲಿ ಸೀಳುತುಟಿ ಸಮಸ್ಯೆ ಕಾಣಿಸಿಕೊಂಡರೆ ಅದು ಪಾಲಕರಿಗೆ ಮಾನಸಿಕ ಒತ್ತಡ ಮತ್ತು ನೋವನ್ನು ಉಂಟು ಮಾಡುತ್ತದೆ. ಜೊತೆಗೆ ಕೆಲವರು ಹೆಚ್ಚು ಖರ್ಚಾಗುವ ಸಾಧ್ಯತೆಯಿರುತ್ತದೆಯೆಂದು ಭಯಪಡುವವರೂ ಇದ್ದಾರೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ವೈದ್ಯಕೀಯ ಲೋಕದಲ್ಲಾಗುತ್ತಿರುವ ಆವಿಷ್ಕಾರದಿಂದ ಸಮಸ್ಯೆಗಳು ಮಾಯವಾಗುತ್ತಿವೆ. ಅವುಗಳ ಪೈಕಿ ಸೀಳುತುಟಿ ಸಮಸ್ಯೆಯೂ ಒಂದು.

ಸೀಳು ತುಟಿ ಮತ್ತು ಅಂಗಳ ಸಮಸ್ಯೆ ಹುಟ್ಟು ನ್ಯೂನತೆಯಾಗಿದ್ದು 8 ರಿಂದ 12 ವಾರದ ಭ್ರೂಣಾವಸ್ಥೆಯಲ್ಲಿ ತುಟಿ ಹಾಗೂ ಅಂಗಳದ ಅಂಗಾಂಶಗಳ ಜೋಡಣೆಯ ವಿಫಲತೆಯಿಂದ ಉಂಟಾಗುತ್ತದೆ. ಸಂಶೋಧನೆಗಳ ಪ್ರಕಾರ ಭಾರತದಲ್ಲಿ 800 ಮಕ್ಕಳಲ್ಲಿ ಒಬ್ಬರಿಗೆ ಸೀಳುತುಟಿ ಸಮಸ್ಯೆಯಾಗುವ ಸಾಧ್ಯತೆಯಿದೆ. ಅಂದರೆ ಸುಮಾರು ಹದಿನಾಲ್ಕು ಲಕ್ಷ ಮಕ್ಕಳು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಹಲವರು ಈ ಸಮಸ್ಯೆಗೆ ಕಾರಣಗಳನ್ನೂ ಹುಡುಕಿದ್ದಾರೆ. ಆದರೆ ಸೀಳುತುಟಿ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲ. ಕೆಲವೊಮ್ಮೆ ಆನುವಂಶಿಕವಾಗಿ ಕಾಣಿಸಿಕೊಂಡರೆ ಇನ್ನು ಕೆಲವೊಮ್ಮೆ ಭ್ರೂಣದ ಪರಿಸರಕ್ಕೆ ಸಂಬಂಧಿಸಿದ ಕಾರಣಗಳಿಂದ ಉಂಟಾಗುತ್ತದೆ. ಗರ್ಭಿಣಿ ಸ್ತ್ರೀಯರಲ್ಲಿ ಅನಾರೋಗ್ಯ, ಸಾಂಕ್ರಾಮಿಕ ರೋಗಗಳು, ಆಹಾರಾಂಶಗಳ ಕೊರತೆ ಹಾಗೂ ಗರ್ಭಾವಸ್ಥೆಯಲ್ಲಿ ಭ್ರೂಣಕ್ಕೆ ಹಾನಿಕಾರಕವಾದ ಔಷಧಗಳ ಸೇವನೆಯೂ ಇದಕ್ಕೆ ಕಾರಣವಾಗಬಹುದು.

ಇದರಿಂದ ಮಕ್ಕಳ ಬೆಳವಣಿಗೆಯಲ್ಲಿ ಹಲವು ಸಮಸ್ಯೆಗಳು ಉಂಟಾಗುತ್ತದೆ. ಮುಖ್ಯವಾಗಿ ಆಹಾರ ಸೇವನೆಗೆ ಅಡಚಣೆಯಾಗುತ್ತದೆ. ಇದರಿಂದ ಮಕ್ಕಳ ಬೆಳವಣಿಗೆಯಲ್ಲಿಯೂ ಕುಂಠಿತವಾಗುವ ಸಾಧ್ಯತೆಯಿರುತ್ತದೆ. ಸೀಳು ಅಂಗಳದಿಂದ ಮಗುವಿನ ಮಾತು ತಡವಾಗಿ ಬರುವುದಲ್ಲದೇ ಅದು ಅಸ್ಪಷ್ಟವಾಗುವ ಸಾಧ್ಯೆತಗಳಿರುತ್ತದೆ. ಮಗುವಿನ ಹಲ್ಲುಗಳು ತಡವಾಗಿ ಹಾಗೂ ವಕ್ರವಾಗಿ ಬರುವ ಸಾಧ್ಯತೆಳಿದ್ದು ಇದರಿಂದ ಮುಖದ ಸೌಂದರ್ಯವೂ ಹಾಳಾಗುವ ಸಾಧ್ಯತೆಯಿರುತ್ತದೆ.

ಕೇವಲ ಸೌಂದರ್ಯದ ಮೇಲೆ ಮಾತ್ರವೇ ಪರಿಣಾಮ ಬೀರುವುದಲ್ಲದೆಯೆ ಮೇಲಿಂದ ಮೇಲೆ ಶ್ವಾಸಕೋಶ ಹಾಗೂ ಶ್ವಾಸನಾಳದ ರೋಗಗಳು ಉಂಟಾಗುತ್ತವೆ ಜೊತೆಗೆ ಕಿವಿ ಸೋರುವುದರಿಂದ ಕೇಳುವಿಕೆಯ ಶಕ್ತಿ ಕುಂಠಿತವಾಗಬಹುದು., ಈ ನ್ಯೂನತೆಯಿಂದ ಮಗುವಿನ ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ.ಇಂತಹ ಸಮಸ್ಯೆಗಳು ಎದುರಾಗುವ ಕಾರಣ ಮಗುವು ಮಾನಸಿಕವಾಗಿ ಕುಗ್ಗಬಹುದು. ಜತೆಗೆ ಇತರೆ ವಿದ್ಯಾರ್ಥಿಗಳೊಂದಿಗೆ ಬೆರೆಯಲು ಮುಜುಗರವಾಗಿ ಮಗುವಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಸಮಸ್ಯೆ ಉಂಟಾಗಬಹುದು.

ಈ ಸಮಸ್ಯೆಗೆ ಯಾವುದೇ ಪರಿಹಾರ ಇಲ್ಲವೆಂದು ಕೆಲವರು ಭಾವಿಸುತ್ತಾರೆ. ಆದರೆ ಖಂಡಿತವಾಗಿಯೂ ಈ ಸಮಸ್ಯೆಯು ಶಸ್ತ್ರ ಚಿಕಿತ್ಸೆಯಿಂದ ಗುಣಮುಖವಾಗುತ್ತದೆ. ಇದರಿಂದ ಉಳಿದ ಮಕ್ಕಳಂತೆ ಈ ಮಕ್ಕಳೂ ಅರಾಮಾಗಿ ಜೀವನ ಸಾಗಿಸಬಹುದು ಮತ್ತು ಮುಂದಿನ ದಿನಗಳಲ್ಲಿ ಈ ಸಮಸ್ಯೆ ಮರುಕಳಿಸುವುದಿಲ್ಲ. ಹುಟ್ಟಿದಾಗಲೇ ಈ ಸಮಸ್ಯೆ ಎದುರಾಗಿದ್ದರೂ ಶಸ್ತ್ರಚಿಕಿತ್ಸೆಯನ್ನು ಮಾಡಬೇಕಾದರೆ ಮಗುವಿಗೆ ಆರರಿಂದ ಎಂಟು ತಿಂಗಳ ಪ್ರಾಯವಾಗಿರಬೇಕು. ಇದನ್ನೂ ಮಗುವಿನ ಬೆಳವಣಿಗೆ, ಆರೋಗ್ಯ ಹಾಗೂ ನ್ಯೂನತೆಯ ಗಾತ್ರದ ಮೇಲೆ ನಿರ್ಧರಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Manipal Hospitals: ಮಣಿಪಾಲ್‌ ಹಾಸ್ಪಿಟಲ್ಸ್‌ನಲ್ಲಿ AI ಚಾಲಿತ ಡಿಜಿಟಲ್ ಆರೋಗ್ಯ ಸೇವೆ

ಶಸ್ತೃಚಿಕಿತ್ಸೆಯನ್ನು ಮಾಡುವಾಗ ವೈದ್ಯರು ಹೇಗೆ ಜಾಗರೂಕತೆಯಿಂದ ಮಾಡುತ್ತಾರೋ ಶಸ್ತ್ರಚಿಕಿತ್ಸೆಯ ನಂತರ ಪಾಲಕರ ಪಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ. ಸೀಳುತುಟಿಯಿರುವ ಕಾರಣ ಮಗುವಿಗೆ ಎದೆ ಹಾಲನ್ನು ಕುಡಿಸಬೇಕೋ ಬೇಡವೋ ಎನ್ನುವ ಸಮಸ್ಯೆ ಪಾಲಕರನ್ನು ಕಾಡಬಹುದು. ಆದರೆ ಇಂತಹ ಸಂದರ್ಭದಲ್ಲಿ ಖಂಡಿತವಾಗಿಯೂ ಮಗುವಿಗೆ ಎದೆ ಹಾಲಿನ ಅವಶ್ಯಕತೆಯಿರುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ವೈದ್ಯರನ್ನೊಮ್ಮೆ ಭೇಟಿ ಮಾಡಿ ಸರಿಯಾದ ಮಾಹಿತಿಯನ್ನು ಪಡೆದು ಮಗುವಿಗೆ ಎದೆ ಹಾಲನ್ನು ನೀಡಬೇಕು. ಅಮೇರಿಕಾದ ಸ್ಮೈಲ್‌ಟ್ರೇನ್‌ಎನ್ನುವ ಸಂಸ್ಥೆಯು ಇಂತಹ ನ್ಯೂನತೆಯುಳ್ಳ ಸಾವಿರಾರು ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆಯನ್ನು ನೀಡಿದೆ. ಅವರ ಸಯಯೋಗದೊಂದಿಗೆ ಎಸ್‌ಡಿಎಂ ಧಾರವಾಡದಲ್ಲಿಯೂ ಮಕ್ಕಳಿಗೆ ಈ ಚಿಕಿತ್ಸೆಯನ್ನು ಉಚಿತವಾಗಿ ಮಾಡಲಾಗುತ್ತಿದೆ.