Aishwarya Gowda Case: ಐಶ್ವರ್ಯಾಗೌಡ ಪ್ರಕರಣ; ವಿಚಾರಣೆಗೆ ಬರುವಂತೆ ಡಿ.ಕೆ.ಸುರೇಶ್ಗೆ ಇಡಿ ನೋಟಿಸ್
Aishwarya Gowda Case: ಐಶ್ವರ್ಯಗೌಡ ನಮ್ಮ ಕ್ಷೇತ್ರದವರು ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಅಂತ ಹೇಳಿಕೊಂಡು ಓಡಾಡುವುದರ ಬಗ್ಗೆ ನಾನೇ ದೂರು ಕೊಟ್ಟಿದ್ದೇನೆ. ಇದೀಗ ಗುರುವಾರ ವಿಚಾರಣೆಗೆ ಬನ್ನಿ ಎಂದು ಇಡಿ ನೋಟಿಸ್ ನೀಡಿರುವುದರ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಪ್ರತಿಕ್ರಿಯಿಸಿದ್ದಾರೆ.


ಬೆಂಗಳೂರು: ಐಶ್ವರ್ಯಾಗೌಡ ಪ್ರಕರಣದಲ್ಲಿ (Aishwarya Gowda Case) ಮಾಜಿ ಸಂಸದ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿದೆ. ಪ್ರಕರಣದಲ್ಲಿ ಈಗಾಗಲೇ ಶಾಸಕ ವಿನಯ್ ಕುಲಕರ್ಣಿ ಸಂಕಷ್ಟ ಎದುರಿಸುತ್ತಿದ್ದಾರೆ. ಅವರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ಗೆ ಇಡಿ ಶಾಕ್ ಕೊಟ್ಟಿದೆ. ಮಂಗಳವಾರ ಬೆಂಗಳೂರಿನ ನಿವಾಸದಲ್ಲಿ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ಮಧ್ಯಾಹ್ನ 12-30 ಗಂಟೆಗೆ ಇ.ಡಿಯವರು ಬಂದು ಸಮನ್ಸ್ ನೀಡಿದ್ದಾರೆ. ನಾನು ಹೊರಗೆ ಹೋಗಿದ್ದೆ ಇಡಿಯವರು ಬಂದಿದ್ದಾರೆ ಎಂದು ಗೊತ್ತಾದ ಮೇಲೆ ಬಂದೆ. ಅವರು ಸಮನ್ಸ್ ಕೊಟ್ಟಿದ್ದಾರೆ. ಸಮನ್ಸ್ನಲ್ಲಿ ಯಾವ ಪ್ರಕರಣ ಅಂತ ಇಲ್ಲ. ಆದರೆ, ದಾಖಲಾತಿ ನೋಡಿದಾಗ ಈ ಪ್ರಕರಣ (ಐಶ್ವರ್ಯಗೌಡ ಕೇಸ್) ಅಂತ ಗೊತ್ತಾಯ್ತು ಎಂದು ತಿಳಿಸಿದ್ದಾರೆ.
ಗುರುವಾರ ಬನ್ನಿ ಅಂದಿದ್ದಾರೆ. ಆದರೆ ಪೂರ್ವ ನಿಯೋಜಿತ ಕಾರ್ಯಕ್ರಮ ಇದೆ. ಅದಕ್ಕೆ ಸೋಮವಾರ ಬರುತ್ತೇನೆ ಎಂದು ಮೌಕಿಕವಾಗಿ ತಿಳಿಸಿದ್ದೇನೆ. ಈಗ ಇ-ಮೇಲ್ ಮೂಲಕ ಅಧಿಕೃತವಾಗಿ ತಿಳಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದ್ದಾರೆ.
ನಾನು ಯಾವುದೇ ವ್ಯವಹಾರ ನಡೆಸಿಲ್ಲ. ಅವರು (ಐಶ್ವರ್ಯಗೌಡ) ನಮ್ಮ ಕ್ಷೇತ್ರದವರು ಒಂದೆರಡು ಕಾರ್ಯಕ್ರಮಕ್ಕೆ ಹೋಗಿದ್ದೆ. ನನ್ನ ತಂಗಿ ಅಂತ ಹೇಳಿಕೊಂಡು ಓಡಾಡುವುದರ ಬಗ್ಗೆ ನಾನೇ ದೂರು ಕೊಟ್ಟಿದ್ದೇನೆ. ಇಡಿಯವರು 7-8 ದಾಖಲೆಗಳನ್ನು ಕೇಳಿದ್ದಾರೆ. ನನ್ನ ಬಳಿ ದಾಖಲೆ ಕೇಳಿದ್ದು ಅಸಂಬದ್ಧ. ಇ.ಡಿ ವಿಚಾರಣೆಗೆ ಹೋದಾಗ ಅಲ್ಲಿ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | MLA Vinay Kulkarni: ಯೋಗೀಶ್ ಗೌಡ ಹತ್ಯೆ ಪ್ರಕರಣ; ಶಾಸಕ ವಿನಯ್ ಕುಲಕರ್ಣಿ ಮತ್ತೆ ಜೈಲಿಗೆ!
ಕಮಲ್ಗೆ ಬಿಗ್ ರಿಲೀಫ್; ಕರ್ನಾಟದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ಗೆ ಸುಪ್ರೀಂಕೋರ್ಟ್ ಸೂಚನೆ
ನವದೆಹಲಿ: ಕಮಲ್ ಹಾಸನ್ (Kamal Haasan) ಅವರ ತಮಿಳು ಚಿತ್ರ 'ಥಗ್ ಲೈಫ್' (Thug Life) ಬಿಡುಗಡೆಯನ್ನು ಕರ್ನಾಟಕದಲ್ಲಿ ನಿಷೇಧಿಸುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ವಿವಾದಾತ್ಮಕ ಹೇಳಿಕೆಗಳ ಕುರಿತು ಚಿತ್ರದ ಬಿಡುಗಡೆಯನ್ನು ತಡೆಯುವುದಾಗಿ ಬೆದರಿಕೆ ಹಾಕಿರುವ ಗುಂಪುಗಳನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ. ಥಗ್ ಲೈಫ್ ಪ್ರದರ್ಶನವನ್ನು ವಿರೋಧಿಸುವ ಗುಂಪುಗಳಿಂದ ಬರುವ ಬೆದರಿಕೆಗಳಿಂದ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ರಿಲೀಸ್ ಗೆ ಒಪ್ಪಿಗೆ ನೀಡಿದೆ.
ಯಾವುದೇ ಬೆದರಿಕೆಗಳಿಗೆ ಅವಕಾಶವಿಲ್ಲ. ಇಷ್ಟವಿದ್ದವರು ಸಿನಿಮಾ ನೋಡಬಹುದು, ಇಲ್ಲದಿದ್ದರೆ ಬಿಡಬಹುದು ಎಂದು ಕೋರ್ಟ್ ಹೇಳಿದೆ. 'ಥಗ್ ಲೈಫ್' ಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ನಿರ್ದೇಶನಗಳನ್ನು ಕೋರಿ ಮಹೇಶ್ ರೆಡ್ಡಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಮತ್ತು ನ್ಯಾಯಮೂರ್ತಿ ಮನಮೋಹನ್ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತು.
ಏನಿದು ಘಟನೆ?
ಇತ್ತೀಚೆಗೆ ಥಗ್ ಲೈಫ್ ಸಿನಿಮಾ ಈವೆಂಟ್ನಲ್ಲಿ ಭಾಗವಹಿಸಿದ್ದ ನಟ ಕಮಲ್ ಹಾಸನ್ ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿಗೆ ಎಂದು ಹೇಳಿದ್ದರು. ಈ ಹೇಳಿಕೆಯಿಂದ ಭಾರೀ ವಿವಾದ ಸೃಷ್ಟಿಯಾಗಿದೆ. ನಂತರ ಕನ್ನಡ ಪರ ಸಂಘಟನೆಗಳು ಈ ಕುರಿತು ಪ್ರತಿಭಟನೆ ನಡೆಸಿದ್ದರು. ಕರ್ನಾಟಕದಲ್ಲಿ ಕಮಲ್ ಚಿತ್ರ ಬಿಡುಗಡೆಗೆ ತಡೆ ಒಡ್ಡಲಾಗಿತ್ತು. ನಂತರ ಕಮಲ್ ಹಾಸನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಕಮಲ್ ಹಾಸನ್ಗೆ ಕನ್ನಡಿಗರ ಬಳಿ ಕ್ಷಮೆ ಕೇಳುವಂತೆ ಸೂಚನೆ ನೀಡಿತ್ತು. ಆದರೆ ಕಮಲ್ ಹೈ ಕೋರ್ಟ್ ಮಾತಿಗೂ ಬೆಲೆ ಕೊಟ್ಟಿರಲಿಲ್ಲ.
ಹೀಗಾಗಿ ಥಗ್ ಲೈಫ್ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗಿಲ್ಲ. ನಂತರ ನಟ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೋರ್ಟ್ ಕಮಲ್ ಪರವಾಗಿ ತೀರ್ಪು ನೀಡಿದೆ.
ಈ ಸುದ್ದಿಯನ್ನೂ ಓದಿ: Kamal Haasan: ಸಾರ್ವಜನಿಕ ಸಭೆಯಲ್ಲಿ ಅಭಿಮಾನಿ ಕೊಟ್ಟ ಗಿಫ್ಟ್ ನೋಡಿ ಸಿಟ್ಟಾದ ಕಮಲ್ ಹಾಸನ್; ಏನಿದು ಘಟನೆ?
ಮಕಾಡೆ ಮಲಗಿದ ಚಿತ್ರ:
200 ಕೋಟಿ ಬಜೆಟ್ ನ ಈ ಸಿನಿಮಾ 75 ಕೋಟಿ ಸಹ ಗಳಿಸಲು ಆಗಿಲ್ಲ. ಚಿತ್ರ ಸಂಪೂರ್ಣವಾಗಿ ಫ್ಲಾಪ್ ಆಗಿದೆ. ಒಟಿಟಿಯಲ್ಲಿಯೂ ಕೂಡ ಫ್ಲಾಪ್ ಆಗಿದೆ.