2nd PUC Results 2025: ಲಾರಿ ಚಾಲಕನ ಮಗಳು ರಾಜ್ಯಕ್ಕೇ ಟಾಪರ್; ವಿಜಯನಗರ ಜಿಲ್ಲೆ ವಿದ್ಯಾರ್ಥಿನಿಯರಿಗೆ ಮೊದಲೆರಡು ಸ್ಥಾನ
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಗುಂಡಾ ಗ್ರಾಮದ ಲಾರಿ ಚಾಲಕ ರಾಮಾನಾಯ್ಕ್ ಹಾಗೂ ಕಾವೇರಿ ಬಾಯಿ ದಂಪತಿ ಪುತ್ರಿ ಸಂಜನಾ ಬಾಯಿ, ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ.

ಸಂಜನಾ ಬಾಯಿ ಮತ್ತು ಕೆ.ನಿರ್ಮಲಾ

ಹೊಸಪೇಟೆ: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd PUC Results 2025) ಮಂಗಳವಾರ ಪ್ರಕಟವಾಗಿದ್ದು, ಕಲಾ ವಿಭಾಗದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ವಿಜಯನಗರ ಜಿಲ್ಲೆಯ ಕೊಟ್ಟೂರು ಇಂದು ಕಾಲೇಜು ರಾಜ್ಯಕ್ಕೆ ಪ್ರಥಮ ಹಾಗೂ ಇಟಗಿ ಗ್ರಾಮದ ಪಂಚಮಸಾಲಿ ಕಾಲೇಜಿ ದ್ವಿತೀಯ ಸ್ಥಾನವನ್ನು ಕಾಪಾಡಿಕೊಂಡಿದ್ದು, ಸಂಜನಾ ಬಾಯಿ, ನಿರ್ಮಲಾ ಕ್ರಮವಾಗಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ, ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮಂಗಳವಾರ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶದಲ್ಲಿ ನಿರೀಕ್ಷೆಯಂತೆ ಕೊಟ್ಟೂರಿನ ಇಂದು ಪಿಯು ಕಾಲೇಜು ತನ್ನ ಘನತೆಯನ್ನು ಎತ್ತಿಹಿಡಿದಿದೆ.
ಜಿಲ್ಲೆಯ ಹೊಸಪೇಟೆ ತಾಲೂಕು ಗುಂಡಾ ಗ್ರಾಮದ ಲಾರಿ ಚಾಲಕ ರಾಮಾನಾಯ್ಕ್ ಹಾಗೂ ಕಾವೇರಿ ಬಾಯಿ ದಂಪತಿ ಪುತ್ರಿ ಹಾಗೂ ಕೊಟ್ಟೂರಿನ ಇಂದು ಪಿಯು ಕಾಲೇಜಿನ ವಿದ್ಯಾರ್ಥಿನಿ ಸಂಜನಾಬಾಯಿ, ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾಳೆ.
ದ್ವಿತಿಯ ಸ್ಥಾನ ಪಡೆದ ಕೆ. ನಿರ್ಮಲಾ
ವಿಜಯನಗರ ಜಿಲ್ಲೆಯ ಇಟಗಿಯ ಪಂಚಮಸಾಲಿ ಪಿಯು ಕಾಲೇಜಿನ ವಿದ್ಯಾರ್ಥಿನಿ 600ಕ್ಕೆ 596 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದು, ವಿಜಯನಗರ ಜಿಲ್ಲೆ ಹಾಗೂ ಕಾಲೇಜಿಗೆ ಕೀರ್ತಿ ತಂದಿದ್ದಾಳೆ.
ಪೂರ್ವಿ ಜಿ.ಎನ್. ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಸ್ಥಾನ

ಹೊಸಪೇಟೆ: ವಾಣಿಜ್ಯ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಟಿಎಂಎಇಎಸ್ ಅಕಾಡೆಮಿ ಆಪ್ ಸೈನ್ಸ್ ಆ್ಯಂಡ್ ಕಾಮರ್ಸ್ ಕಾಲೇಜಿನ ಪೂರ್ವಿ ಜಿ.ಎನ್. ರಾಜ್ಯಕ್ಕೆ 6ನೇ ಸ್ಥಾನ ಪಡೆಯುವ ಮೂಲಕ ಹೊಸ ಇತಿಹಾಸಕ್ಕೆ ಮುನ್ನುಡಿ ಬರೆದಿದ್ದಾಳೆ. ಕಳೆದ ಮೂರು ವರ್ಷದ ಹಿಂದೆಯಷ್ಟೇ ಆರಂಭವಾದ ಕಾಲೇಜು ಈ ಬಾರಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.
ಈಗಾಗಲೇ ಕೊಟ್ಟೂರು ಇಂದು ಕಾಲೇಜು ಪ್ರಥಮ ಹಾಗೂ ಇಟಗಿ ಗ್ರಾಮದ ಪಂಚಮಸಾಲಿ ಕಾಲೇಜಿನ ವಿದ್ಯಾರ್ಥಿನಿಯರು ದ್ವಿತೀಯ ಸ್ಥಾನವನ್ನು ಕಾಪಾಡಿಕೊಂಡಿದ್ದು ಇದೀಗ ಈ ಸಾಲಿಗೆ ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಸೇರಿದಂತಾಗಿದೆ. ಒಟ್ಟಾರೆ ವಿಜಯನಗರ ಜಿಲ್ಲೆಯ ಮೂವರು ವಿದ್ಯಾರ್ಥಿನಿಯರು ತಮ್ಮ ಸಾಧನೆಯಿಂದ ರಾಜ್ಯದ ಗಮನ ಸೆಳೆದಿದ್ದಾರೆ.
ಪೂರ್ವಿ ಜಿ.ಎನ್. 600ಕ್ಕೆ 594 ಅಂಕ ಅಂಕ ಪಡೆಯುವ ಮೂಲಕ ಸಂಸ್ಕೃತ, ವ್ಯವಹಾರ ಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾರೆ.
ಈ ಸುದ್ದಿಯನ್ನೂ ಓದಿ 2nd PUC Result 2025: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ; ಪಾಸ್ ಆಗದವರಿಗೆ ಇನ್ನೂ ಎರಡು ಅವಕಾಶ
ಇನ್ನು ಕಲಾ ವಿಭಾಗದಲ್ಲಿ 600ಕ್ಕೆ 597 ಅಂಕ ಪಡೆಯುವ ಮೂಲಕ ಸಂಜನಾಬಾಯಿ, ರಾಜ್ಯಕ್ಕೆ ಮೊದಲ ಸ್ಥಾನ ಹಾಗೂ ದ್ವಿತಿಯ ಸ್ಥಾನ ಪಡೆದ ಕೆ ನಿರ್ಮಲಾ 600ಕ್ಕೆ 596 ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆಸಿದ್ದಾರೆ. ಒಟ್ಟಾರೆ ವಿಜಯನಗರ ಜಿಲ್ಲೆ ಈ ಬಾರಿ ಈ ಮೂವರು ವಿದ್ಯಾರ್ಥಿಗಳ ಸಾಧನೆಯಿಂದ ರಾಜ್ಯದ ಗಮನ ಸೆಳೆದಿದ್ದಾರೆ.