ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Upper Krishna Project: ರೈತರಿಗೆ ಸಿಹಿಸುದ್ದಿ; ನಾಳೆಯಿಂದ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

Upper Krishna Project: ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ 2024-25ನೇ ಸಾಲಿನ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆ ನಡೆದಿದೆ. ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ಸೇರಿ ಪ್ರತಿ ದಿನ 0.8ಂಟಿ.ಎಂ.ಸಿ ದರದಂತೆ ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಾಳೆಯಿಂದ ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ನೀರು ಬಿಡುಗಡೆ

Profile Prabhakara R Mar 14, 2025 9:50 PM

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ (Upper Krishna Project) ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಿಹಿಸುದ್ದಿ ಸಿಕ್ಕಿದ್ದು, ಹಿಂಗಾರು ಹಂಗಾಮಿನ ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಣೆಗೆ ಮಾ.15ರಿಂದ 22ರವರೆಗೆ (8 ದಿನ) ಆಲಮಟ್ಟಿ, ನಾರಾಯಣಪುರ ಡ್ಯಾಂನಿಂದ ಸೇರಿ ಪ್ರತಿ ದಿನ 0.8ಂಟಿ.ಎಂ.ಸಿ ದರದಂತೆ ಹರಿಸಲು ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಶುಕ್ರವಾರ ತೀರ್ಮಾನಿಸಲಾಗಿದೆ. ಅಬಕಾರಿ ಸಚಿವ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್. ಬಿ. ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಲಾಶಯಗಳಿಂದ ನೀರು ಹರಿಸುವ ತೀರ್ಮಾನ ಕೈಗೊಳ್ಳಲಾಗಿದೆ.

16.11.2024ರ ನ.16ರಂದು 2024-25ನೇ ಸಾಲಿನ ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿನ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾ.23ರವರೆಗೆ 14 ದಿನಗಳ ಚಾಲೂ ಹಾಗೂ 10 ದಿನಗಳ ಬಂದ್ ಪದ್ಧತಿಯನ್ನು ಅನುಸರಿಸಿ ಹಿಂಗಾರು ಹಂಗಾಮಿಗೆ ನೀರು ಪೂರೈಸಲು ತಿರ್ಮಾನಿಸಿದಂತೆ ಕ್ರಮ ಜರುಗಿಸಲಾಗುತ್ತಿತ್ತು.

ಮಾ.14ರಂತೆ ಎರಡೂ ಜಲಾಶಯಗಳಲ್ಲಿ ಒಟ್ಟು ಬಳಕೆಗೆ ಜೀವಜಲ ಪರಿಮಾಣ 35.993 ಟಿ.ಎಂ.ಸಿ ಲಭ್ಯವಿದೆ. ಕಳೆದ ಸಾಲಿಗೆ ಹೊಲಿಸಿದಾಗ ವ್ಯತ್ಯಾಸವು (35.893-30.182 ಟಿ.ಎಂ.ಸಿ) 5.71 ಟಿ.ಎಂ.ಸಿ ಹೆಚ್ಚಿಗೆ ಇದೆ. ಆದರೆ, ಮಾ.14ರಿಂದ ಜೂನ್ 30 ರವರೆಗೆ ಅವಶ್ಯ ಬಳಕೆಗಾಗಿ 25.80 ಟಿಎಂಸಿ ನೀರು ಅಗತ್ಯವಿದೆ. ಕಳೆದ ನವೆಂಬರ್‌ನಲ್ಲಿ ಜರುಗಿದ ನೀರಾವರಿ ಸಲಹಾ ಸಮಿತಿ ತಿರ್ಮಾನದಂತೆ ಹಾಗೂ ರೈತರು ಮತ್ತು ಜನಪ್ರತಿನಿಧಿಗಳು ಏ. 20 ರವರೆಗೆ ನೀರು ಹರಿಸಲು ಒತ್ತಾಯಿಸುತ್ತಿರುವುದರಿಂದ ಇದೀಗ ಸಭೆ ನಡೆಸಲಾಗಿದೆ.

ಸಭೆಯಲ್ಲಿ ಚರ್ಚಿಸಿ ಜೂನ್‌ 30ರವರೆಗೆ ಅಗತ್ಯವಿರುವ ಕುಡಿಯುವ ನೀರು, ಕೆರೆ ತುಂಬುವುದು ಹಾಗೂ ಇತ್ಯಾದಿ ಬಳಕೆಗೆ 25.80 ಟಿಎಂಸಿ ಕಾಯ್ದಿರಿಸಿಕೊಂಡು, ಮಾ.15ರಿಂದ 22 ರವರೆಗೆ ಹಿಂಗಾರು ಹಂಗಾಮಿನ ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಮಾತ್ರ ಎರಡೂ ಜಲಾಶಯಗಳು ಸೇರಿ ಪ್ರತಿ ದಿನ 0.8ಂಟಿ.ಎಂ.ಸಿ ದರದಂತೆ ಹರಿಸಲು ತಿರ್ಮಾನಿಸಲಾಯಿತು. ನಂತರ ಮಾ.23 ರಿಂದ 31ವರೆಗೆ ಬಂದ್ ಅನುಸರಿಸಲಾಗುವುದು.

ಈ ಸುದ್ದಿಯನ್ನೂ ಓದಿ | Rudrappa Lamani: ಬೈಕ್‌ ಡಿಕ್ಕಿಯಾಗಿ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ

ಬಳಿಕ ಪರಿಸ್ಥಿತಿಯನ್ನು ಅವಲೋಕಿಸಿ ಬಾಕಿ ಉಳಿದಿರುವ ನೀರಿನ ಪರಿಮಾಣದಲ್ಲಿ ಏ.1ರಿಂದ 6ರವರೆಗೆ ಹಿಂಗಾರು ಹಂಗಾಮಿನ ಬೆಳೆದು ನಿಂತಿರುವ ಬೆಳೆಗಳನ್ನು ಸಂರಕ್ಷಿಸಲು ಮಾತ್ರ ಎರಡು ಜಲಾಶಯಗಳು ಸೇರಿ ಪ್ರತಿ ದಿನ 0.80 ಟಿ.ಎಂ.ಸಿ. ದರದಂತೆ ಹರಿಸಲು ತಿರ್ಮಾನಿಸಲಾಗಿದೆ.