ಚೊಚ್ಚಲ ಬಿಡಬ್ಲ್ಯೂಎಫ್ ಪ್ರಶಸ್ತಿ ಗೆದ್ದ ಆಯುಷ್ ಶೆಟ್ಟಿ; ತನ್ವಿ ರನ್ನರ್ ಅಪ್
us open 2025 badminton: 20 ವರ್ಷದ ಉದಯೋನ್ಮುಖ ಶಟ್ಲರ್ ಆಯುಷ್ ಶೆಟ್ಟಿ ಯುಎಸ್ ಓಪನ್ ಸೂಪರ್ 300 ರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸುವ ಮೂಲಕ ತಮ್ಮ ಮೊದಲ ಬಿಡಬ್ಲ್ಯೂಎಫ್ ವಿಶ್ವ ಪ್ರವಾಸ ಪ್ರಶಸ್ತಿಯನ್ನು ಗೆದ್ದರು, ಈ ಋತುವಿನ ಭಾರತದ ಪ್ರಶಸ್ತಿ ಬರವನ್ನು ಕೊನೆಗೊಳಿಸಿದರು. 2023 ರ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಯುಷ್ ಕಂಚಿನ ಪದಕ ಗೆದ್ದಿದ್ದರು.


ಲೋವಾ (ಯುಎಸ್‌ಎ): ಭಾರತದ ಭರವಸೆಯ ಶಟ್ಲರ್, ಉಡುಪಿಯ ಆಯುಷ್ ಶೆಟ್ಟಿ(Ayush Shetty) ಯುಎಸ್ ಓಪನ್ ಬ್ಯಾಡ್ಮಿಂಟನ್(us open 2025 badminton) ಪಂದ್ಯಾವಳಿಯಲ್ಲಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಭಾರತೀಯ ಕಾಲಮಾನದಂತೆ ಸೋಮವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಆಯುಷ್ ಶೆಟ್ಟಿ 3ನೇ ಶ್ರೇಯಾಂಕದ ಕೆನಡಾದ ಬ್ರಿಯಾನ್ ಯಂಗ್ ವಿರುದ್ಧ 21-18, 21-13 ನೇರ ಗೇಮ್‌ಗಳ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಆದರೆ ಮಹಿಳಾ ಸಿಂಗಲ್ಸ್‌ನಲ್ಲಿ ತನ್ವಿ ಶರ್ಮಾ(Tanvi Sharma) ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟರು.
ವೃತ್ತಿ ಜೀವನದ ಮೊದಲ ಸೂಪರ್-300 ಟೂರ್ನಿಯ ಫೈನಲ್ ಆಡಿದ್ದ ಆಯುಷ್ ಶೆಟ್ಟಿ, ತಮ್ಮ ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದು ಬೀಗಿದರು. ಜತೆಗೆ ಈ ಋತುವಿನ ಭಾರತದ ಪ್ರಶಸ್ತಿ ಬರವನ್ನು ಕೊನೆಗೊಳಿಸಿದರು. ಸೆಮಿಫೈನಲ್ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಚೀನಾ ತೈಪೆಯ ಚೊವು ಟಿಯೆನ್ ಚೆನ್‌ಗೆ 21-23, 21-15, 21-14 ಗೇಮ್‌ಗಳಿಂದ ಆಘಾತ ನೀಡಿದ್ದ ವೇಳೆಯೇ ಆಯುಷ್ ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದ್ದರು. ಅದರಂತೆ ಫೈನಲ್ ಪಂದ್ಯದಲ್ಲಿಯೂ ಅಮೋಘ ಆಟವಾಡಿ ನೇರ ಗೇಮ್ ಅಂತರದಿಂದ ಗೆದ್ದರು. ಫೈನಲ್ ಪಂದ್ಯ ಕೇವಲ 47 ನಿಮಿಷದಲ್ಲಿ ಅಂತ್ಯ ಕಂಡಿತು.
20 ವರ್ಷದ ಉದಯೋನ್ಮುಖ ಶಟ್ಲರ್ ಆಯುಷ್ ಶೆಟ್ಟಿ ಯುಎಸ್ ಓಪನ್ ಸೂಪರ್ 300 ರ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಕೆನಡಾದ ಬ್ರಿಯಾನ್ ಯಾಂಗ್ ವಿರುದ್ಧ ನೇರ ಗೇಮ್‌ಗಳ ಜಯ ಸಾಧಿಸುವ ಮೂಲಕ ತಮ್ಮ ಮೊದಲ ಬಿಡಬ್ಲ್ಯೂಎಫ್ ವಿಶ್ವ ಪ್ರವಾಸ ಪ್ರಶಸ್ತಿಯನ್ನು ಗೆದ್ದರು, ಈ ಋತುವಿನ ಭಾರತದ ಪ್ರಶಸ್ತಿ ಬರವನ್ನು ಕೊನೆಗೊಳಿಸಿದರು. 2023 ರ ಜೂನಿಯರ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಯುಷ್ ಕಂಚಿನ ಪದಕ ಗೆದ್ದಿದ್ದರು.
ಫೈನಲ್‌ನಲ್ಲಿ ಎಡವಿದ ತನ್ವಿ
ಪಿವಿ ಸಿಂಧು, ಸೈನಾ ನೆಹ್ವಾಲ್ ಹಾಗೂ ಮಾಳವಿಕಾ ಬನ್ಸೂಡ್ ಬಳಿಕ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದ 4ನೇ ಮಹಿಳಾ ಶಟ್ಲರ್ ಎನಿಸಿಕೊಂಡಿದ್ದ 16 ವರ್ಷದ ತನ್ವಿ ಶರ್ಮಾ ಫೈನಲ್‌ನಲ್ಲಿ ಸೋಲು ಕಂಡರು. ಫೈನಲ್‌ನಲ್ಲಿ ಅಗ್ರಶ್ರೇಯಾಂಕಿತೆ ಆತಿಥೇಯ ತಾರೆ ಬಿವೆನ್ ಝಾಂಗ್ ವಿರುದ್ಧ ತೀವ್ರ ಫೈಪೋಟಿ ನಡೆಸಿ 21-11, 16-21, 21-10 ಅಂತರದಿಂದ ಶರಣಾದರು. ಮೊದಲ ಗೇಮ್‌ನಲ್ಲಿ ಸೋಲು ಕಂಡರೂ, ದ್ವಿತೀಯ ಗೇಮ್‌ನಲ್ಲಿ ಗೆದ್ದು ಪಂದ್ಯವನ್ನು ಸಮಬಲಕ್ಕೆ ತಂದರು. ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಆಕ್ರಮಣಕಾರಿಯಾಗಿ ಆಡಿದ ಝಾಂಗ್ ಗೆಲುವು ಸಾಧಿಸಿ ಮೆರೆದಾಡಿದರು.