ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Rain: ದಿಲ್ಲಿಯಲ್ಲಿ ಭಾರೀ ಮಳೆ ಛಾವಣಿ ಕುಸಿತ- ಮಹಿಳೆ ಮತ್ತು ಮೂರು ಮಕ್ಕಳ ದುರ್ಮರಣ

Roof collapses: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಗೆ ಅನಾಹುತ ಸಂಭವಿಸಿದೆ. ಭಾರೀ ಗಾಳಿ ಮಳೆಗೆ ಛಾವಣಿ ಕುಸಿದು ಬಿದ್ದಿದ್ದು ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ದಾರುಣವಾಗಿ ಸಾವನ್ನಪ್ಪಿದ್ದಾರೆ.

ರಣಭೀಕರ ಮಳೆಗೆ ನಾಲ್ಕು ಬಲಿ

Profile Rakshita Karkera May 2, 2025 9:18 AM

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯನಿನ್ನೆ ತಡರಾತ್ರಿ ಸುರಿದ ಭಾರೀ ಭಾರೀ ಗಾಳಿಯಿಂದಾಗಿ ಮರವೊಂದು ಮನೆ ಮೇಲೆ ಬಿದ್ದ ಪರಿಣಾಮವಾಗಿ ಛಾವಣಿ ಕುಸಿದು ಗಾಢ ನಿದ್ದೆಯಲ್ಲಿದ್ದ ಒಂದೇ ಕುಟುಂಬದ ನಾಲ್ವರು ಬಲಿಯಾಗಿದ್ದಾರೆ. ದ್ವಾರಕಾದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಕೋಣೆಯ ಛಾವಣಿ ಮೇಲೆ ಮರ ಬಿದ್ದಿದೆ. ಪರಿಣಾಮವಾಗಿ ಮಹಿಳೆ ಮತ್ತು ಅವರ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ದೆಹಲಿ ಮತ್ತುNCRನಲ್ಲಿ ಭಾರೀ ಗಾಳಿ ಮತ್ತು ಧೂಳಿನ ಬಿರುಗಾಳಿಯ ಸಹಿತ ಭಾರೀ ಮಳೆಯಾಗಿದ್ದು, ನಾನಾ ಅವಾಂತರ ಸಂಭವಿಸಿದೆ.

ವಿಮಾನಗಳು ಡಿವರ್ಟ್‌

ಇನ್ನು ಭಾರೀ ಗಾಳಿ ಮಳೆಯಿಂದಾಗಿ ಹವಾಮಾನ ವೈಪರಿತ್ಯ ಸಂಭವಿಸಿದ್ದು, ವಿಮಾನ ಕಾರ್ಯಾಚರಣೆಗಳ ಮೇಲೂ ಪರಿಣಾಮ ಬೀರಿದೆ. ಮೂರು ವಿಮಾನಗಳನ್ನು ಅಹಮದಾಬಾದ್ ಮತ್ತು ಜೈಪುರಕ್ಕೆ ತಿರುಗಿಸಲಾಗಿದೆ. ಬೆಂಗಳೂರು-ದೆಹಲಿ ಮತ್ತು ಇನ್ನೊಂದು ಪುಣೆ-ದೆಹಲಿ ವಿಮಾನಗಳನ್ನು ಜೈಪುರಕ್ಕೆ ತಿರುಗಿಸಲಾಗಿದೆ. ದೆಹಲಿಯಿಂದ ಹೊರಡುವ 20 ಕ್ಕೂ ಹೆಚ್ಚು ವಿಮಾನಗಳು ತಡವಾಗಿ ಸಂಚಾರ ಆರಂಭಿಸಿದೆ. ಇನ್ನು ಹಲವು ಪ್ರದೇಶಗಳು ಜಲಾವೃತಗೊಂಡಿರುವ ಬಗ್ಗೆ ವರದಿಯಾಗಿದೆ. ದ್ವಾರಕಾ, ಖಾನ್ಪುರ್, ಸೌತ್ ಎಕ್ಸ್ಟೆನ್ಶನ್ ರಿಂಗ್ ರಸ್ತೆ, ಮಿಂಟೋ ರಸ್ತೆ, ಲಜಪತ್ ನಗರ ಮತ್ತು ಮೋತಿ ಬಾಗ್‌ನಂತಹ ಪ್ರದೇಶಗಳಿಗೆ ನೀರು ನುಗ್ಗಿ ಸಂಚಾರ ಅಸ್ತವ್ಯಗೊಂಡಿದೆ. ಮತ್ತೊಂದೆಡೆ ಭಾರೀ ಗಾಳಿ ಮಳೆಗೆ ಹಲವು ಮರಗಳು ಕುಸಿದುಬಿದ್ದಿವೆ. ಮರಗಳ ಕೊಂಬೆ ರೆಂಬೆಗಳು ತುಂಡಾಗಿ ಮನೆಗಳ ಮೇಲೆ ಬಿದ್ದಿವೆ.



ಈ ಸುದ್ದಿಯನ್ನೂ ಓದಿ: Karnataka Weather: ರಾಜ್ಯಾದ್ಯಂತ ಮುಂದಿನ 5 ದಿನ ಅಬ್ಬರಿಸಲಿದೆ ಗುಡುಗು ಸಹಿತ ಮಳೆ

ದೆಹಲಿಯಾದ್ಯಂತ ಭಾರೀ ಮಳೆ, ಬಿರುಗಾಳಿ ಮತ್ತು ಗಂಟೆಗೆ 70-80 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಿಳಿಸಿದೆ. ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಮಧ್ಯಮ ಮಳೆಯಾಗುವ ಮುನ್ಸೂಚನೆ ಇದೆ. ರಾಷ್ಟ್ರ ರಾಜಧಾನಿಯಲ್ಲಿ ಶನಿವಾರದವರೆಗೆ ಹವಾಮಾನ ಇಲಾಖೆ ಎಲ್ಲೋ ಅಲರ್ಟ್‌ ನೀಡಿದೆ. ಭಾರೀ ಮಳೆ, ಗುಡುಗು ಸಹಿತ ಮತ್ತು ಬಿರುಗಾಳಿ ಬೀಸುವ ಮುನ್ಸೂಚನೆ ನೀಡಿದೆ.